Gold Price Today: ಬೆಂಗಳೂರು ಸೇರಿ ಹಲವೆಡೆ ಚಿನ್ನದ ಬೆಲೆ ಏರಿಕೆ; ಬೆಳ್ಳಿ ದರ 400 ರೂ. ಕುಸಿತ

Silver Price Today: ಬೆಳ್ಳಿ ಬೆಲೆ ಇಂದು ಕೊಂಚ ಇಳಿಕೆಯಾಗಿದೆ. ನಿನ್ನೆ 1 ಕೆಜಿ ಬೆಳ್ಳಿಯ ದರ 56,000 ರೂ. ಇದ್ದುದು ಇಂದು 55,600 ರೂ. ಆಗಿದೆ.

Gold Price Today: ಬೆಂಗಳೂರು ಸೇರಿ ಹಲವೆಡೆ ಚಿನ್ನದ ಬೆಲೆ ಏರಿಕೆ; ಬೆಳ್ಳಿ ದರ 400 ರೂ. ಕುಸಿತ
ಚಿನ್ನದ ಬೆಲೆ
Image Credit source: Financial Express
Edited By:

Updated on: Jul 20, 2022 | 9:14 AM

Gold Price on 20th July 2022 | ಬೆಂಗಳೂರು: ಭಾರತದಲ್ಲಿ 2 ದಿನಗಳಿಂದ ಯಥಾಸ್ಥಿತಿಯಲ್ಲಿದ್ದ ಚಿನ್ನದ ಬೆಲೆ (Gold Rate) ಇಂದು 10 ಗ್ರಾಂಗೆ 120 ರೂ. ಏರಿಕೆಯಾಗಿದೆ. ಬೆಳ್ಳಿಯ ಬೆಲೆ (Silver Price) ನಿನ್ನೆ 100 ರೂ. ಏರಿಕೆಯಾಗಿತ್ತು. ಆದರೆ, ಇಂದು ಬೆಳ್ಳಿ ದರದಲ್ಲಿ ಇಂದು 400 ರೂ. ಕುಸಿತವಾಗಿದೆ. ನೀವು ಕೂಡ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ. 2 ದಿನಗಳಿಂದ ಹಿಂದೆ 22 ಕ್ಯಾರೆಟ್ ಚಿನ್ನದ ಬೆಲೆ 46,190 ರೂ. ಇದ್ದುದು 46,300 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 50,390 ರೂ. ಇದ್ದುದು 50,510 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 46,580 ರೂ. ಮುಂಬೈ- 46,300 ರೂ, ದೆಹಲಿ- 46,300 ರೂ, ಕೊಲ್ಕತ್ತಾ- 46,300 ರೂ, ಬೆಂಗಳೂರು- 46,350 ರೂ, ಹೈದರಾಬಾದ್- 46,300 ರೂ, ಕೇರಳ- 46,300 ರೂ, ಪುಣೆ- 46,380 ರೂ, ಮಂಗಳೂರು- 46,350 ರೂ, ಮೈಸೂರು- 46,350 ರೂ. ಇದೆ.

ಇದನ್ನೂ ಓದಿ: Gold Price Today: 11 ತಿಂಗಳಲ್ಲೇ ಅತಿ ಕಡಿಮೆಯಾದ ಚಿನ್ನದ ಬೆಲೆ; ಬೆಳ್ಳಿ ದರ 1,600 ರೂ. ಏರಿಕೆ

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 50,810 ರೂ, ಮುಂಬೈ- 50,510 ರೂ, ದೆಹಲಿ- 50,510 ರೂ, ಕೊಲ್ಕತ್ತಾ- 50,510 ರೂ, ಬೆಂಗಳೂರು- 50,570 ರೂ, ಹೈದರಾಬಾದ್- 50,510 ರೂ, ಕೇರಳ- 50,510 ರೂ, ಪುಣೆ- 50,600 ರೂ, ಮಂಗಳೂರು- 50,570 ರೂ, ಮೈಸೂರು- 50,570 ರೂ. ಆಗಿದೆ.

ಇಂದಿನ ಬೆಳ್ಳಿಯ ದರ:
ಬೆಳ್ಳಿ ಬೆಲೆ ಇಂದು ಕೊಂಚ ಇಳಿಕೆಯಾಗಿದೆ. ನಿನ್ನೆ 1 ಕೆಜಿ ಬೆಳ್ಳಿಯ ದರ 56,000 ರೂ. ಇದ್ದುದು ಇಂದು 55,600 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 60,700 ರೂ, ಮೈಸೂರು- 60,700 ರೂ., ಮಂಗಳೂರು- 60,700 ರೂ., ಮುಂಬೈ- 55,600 ರೂ, ಚೆನ್ನೈ- 60,700 ರೂ, ದೆಹಲಿ- 55,600 ರೂ, ಹೈದರಾಬಾದ್- 60,700 ರೂ, ಕೊಲ್ಕತ್ತಾ- 55,600 ರೂ. ಆಗಿದೆ.

TV9 Web

TV9 Kannada

Read More
Loading...
Unable to load recommendations.
Follow Us