Gold Rates: ಚಿನ್ನದ ಬೆಲೆ 3 ವಾರಗಳಿಂದ 500 ರೂನಷ್ಟು ಇಳಿಕೆ

Bullion Market 2026 May 3rd: ಚಿನ್ನದ ಬೆಲೆ ಈ ವಾರಾಂತ್ಯದಲ್ಲಿ 30 ರೂ ಹೆಚ್ಚಿದರೂ ಕಳೆದ ಒಂದು ವಾರದಲ್ಲಿ 285 ರೂನಷ್ಟು ಕಡಿಮೆಗೊಂಡಿದೆ. ಆಭರಣ ಚಿನ್ನದ ಬೆಲೆ 3,835 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 15,093 ರೂ ಇದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ ಗ್ರಾಮ್​ಗೆ 265 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 270 ರೂ ಇದೆ.

Gold Rates: ಚಿನ್ನದ ಬೆಲೆ 3 ವಾರಗಳಿಂದ 500 ರೂನಷ್ಟು ಇಳಿಕೆ
ಚಿನ್ನ

Updated on: May 03, 2026 | 12:24 PM

ಬೆಂಗಳೂರು, ಮೇ 3: ಚಿನ್ನದ ಬೆಲೆ ಸಾಕಷ್ಟು ಏರಿಳಿತಗಳ ನಡುವೆಯೂ ಬಹಳಷ್ಟು ಕುಸಿದಿದೆ. ಈ ವಾರದ ಆರಂಭದಲ್ಲಿ 14,120 ರೂ ಇದ್ದ ಚಿನ್ನದ ಬೆಲೆ (Gold Rates) 13,835 ರೂಗೆ ಇಳಿದಿದೆ. ಕಳೆದ 10 ದಿನದಲ್ಲಿ ಸುಮಾರು 350 ರೂನಷ್ಟು ಬೆಲೆ ಕುಸಿತವಾಗಿದೆ. ಕಳೆದ ಮೂರು ವಾರಗಳಲ್ಲಿ 400 ರೂಗೂ ಮೇಲ್ಪಟ್ಟು ಬೆಲೆ ಇಳಿದಿದೆ. ವಿದೇಶಗಳಲ್ಲೂ ಚಿನ್ನದ ಬೆಲೆ ಇಳಿದಿದೆ. ಇದಕ್ಕೆ ಹೋಲಿಸಿದರೆ ಬೆಳ್ಳಿ ಬೆಲೆ ಹೆಚ್ಚು ಸ್ಥಿರವಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,38,350 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,50,930 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 26,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,38,350 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 26,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 27,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮೇ 3ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,093 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,835 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,320 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 265 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,093 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,835 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 265 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,835 ರೂ
  • ಚೆನ್ನೈ: 14,000 ರೂ
  • ಮುಂಬೈ: 13,835 ರೂ
  • ದೆಹಲಿ: 13,850 ರೂ
  • ಕೋಲ್ಕತಾ: 13,835 ರೂ
  • ಕೇರಳ: 13,835 ರೂ
  • ಅಹ್ಮದಾಬಾದ್: 13,840 ರೂ
  • ಜೈಪುರ್: 13,850 ರೂ
  • ಲಕ್ನೋ: 13,850 ರೂ
  • ಭುವನೇಶ್ವರ್: 13,835 ರೂ

ಇದನ್ನೂ ಓದಿ: Commercial LPG Cylinder Price: ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್ ಬೆಲೆ ಬರೋಬ್ಬರಿ 993 ರೂ. ಏರಿಕೆ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 569 ರಿಂಗಿಟ್ (13,583 ರುಪಾಯಿ)
  • ದುಬೈ: 516.25 ಡಿರಾಮ್ (13,321 ರುಪಾಯಿ)
  • ಅಮೆರಿಕ: 145 ಡಾಲರ್ (13,743 ರುಪಾಯಿ)
  • ಸಿಂಗಾಪುರ: 183.50 ಸಿಂಗಾಪುರ್ ಡಾಲರ್ (13,656 ರುಪಾಯಿ)
  • ಕತಾರ್: 514 ಕತಾರಿ ರಿಯಾಲ್ (13,365 ರೂ)
  • ಸೌದಿ ಅರೇಬಿಯಾ: 528 ಸೌದಿ ರಿಯಾಲ್ (13,344 ರುಪಾಯಿ)
  • ಓಮನ್: 55.15 ಒಮಾನಿ ರಿಯಾಲ್ (13,576 ರುಪಾಯಿ)
  • ಕುವೇತ್: 42.80 ಕುವೇತಿ ದಿನಾರ್ (13,225 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 265 ರೂ
  • ಚೆನ್ನೈ: 270 ರೂ
  • ಮುಂಬೈ: 265 ರೂ
  • ದೆಹಲಿ: 265 ರೂ
  • ಕೋಲ್ಕತಾ: 265 ರೂ
  • ಕೇರಳ: 270 ರೂ
  • ಅಹ್ಮದಾಬಾದ್: 265 ರೂ
  • ಜೈಪುರ್: 265 ರೂ
  • ಲಕ್ನೋ: 265 ರೂ
  • ಭುವನೇಶ್ವರ್: 270 ರೂ
  • ಪುಣೆ: 265

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us