Gold Silver Price on 10th April: ಯುಗಾದಿ ಬಳಿಕವೂ ನಿಲ್ಲದ ಚಿನ್ನದ ಬೆಲೆ ಏರಿಕೆ; ಇಲ್ಲಿದೆ ಇವತ್ತಿನ ದರಪಟ್ಟಿ
Bullion Market 2024 April 10th: ವಿವಿಧ ಕಾರಣಗಳಿಂದ ಗೊಂದಲಮಯ ವಾತಾವರಣದ ಮಧ್ಯೆ ಚಿನ್ನ ಮತ್ತು ಬೆಳ್ಳಿ ಮೇಲೆ ಹೂಡಿಕೆದಾರರ ಕಣ್ಣು ಹೆಚ್ಚು ನೆಟ್ಟಿದೆ. ಭಾರತದಲ್ಲಿ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 65,750 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 71,730 ರುಪಾಯಿ ಇದೆ. ಬೆಳ್ಳಿ ಬೆಲೆ ಒಂದು ಗ್ರಾಮ್ಗೆ 84.50 ರು ಆಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ನ 10 ಗ್ರಾಮ್ ಚಿನ್ನದ ಬೆಲೆ 65,750 ರೂ, ಬೆಳ್ಳಿ ಬೆಲೆ 100 ಗ್ರಾಮ್ಗೆ 8,375 ರೂ ಇದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ.
ಬೆಂಗಳೂರು, ಏಪ್ರಿಲ್ 10: ಯುಗಾದಿ ಹಬ್ಬ ಕಳೆದ ಬಳಿಕವೂ ಚಿನ್ನದ ಬೆಲೆಯ (Gold and silver Rates) ನಾಗಾಲೋಟ ಮುಂದುವರಿದಿದೆ. ಹಳದಿ ಲೋಹ ಗ್ರಾಮ್ಗೆ 10 ರೂನಷ್ಟು ಏರಿದೆ. ಬೆಳ್ಳಿ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. ಕಿಲೋಗೆ 88,000 ರೂ ಬೆಲೆ ಮುಂದುವರಿದಿದೆ. ಯುಗಾದಿ ದಿನದಂದು ಬೆಳ್ಳಿ ಬೆಲೆ ಗ್ರಾಮ್ಗೆ 1 ರೂನಷ್ಟು ಹೆಚ್ಚಿತ್ತು. ಚಿನ್ನವಂತೂ ಗ್ರಾಮ್ಗೆ 30 ರೂ ಹೆಚ್ಚಾಗಿತ್ತು. ಈ ಬೆಲೆ ಏರಿಕೆಯ ಓಟ ಎಷ್ಟು ದಿನ ಮುಂದುವರಿಯುತ್ತದೆ ಎಂಬುದು ಸ್ಪಷ್ಟ ಇಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 65,750 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 71,730 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,450 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 65,750 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 8,375 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಏಪ್ರಿಲ್ 10ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 65,750 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 71,730 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 845 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 65,750 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 71,730 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 837.50 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 65,750 ರೂ
- ಚೆನ್ನೈ: 66,700 ರೂ
- ಮುಂಬೈ: 65,750 ರೂ
- ದೆಹಲಿ: 65,900 ರೂ
- ಕೋಲ್ಕತಾ: 65,750 ರೂ
- ಕೇರಳ: 65,750 ರೂ
- ಅಹ್ಮದಾಬಾದ್: 64,800 ರೂ
- ಜೈಪುರ್: 65,900 ರೂ
- ಲಕ್ನೋ: 65,900 ರೂ
- ಭುವನೇಶ್ವರ್: 65,750 ರೂ
ಇದನ್ನೂ ಓದಿ: ಯುಗಾದಿ ಹಬ್ಬದ ದಿನದಂದು ಷೇರುಪೇಟೆ ಧಮಾಕ; ದಾಖಲೆ ಮಟ್ಟ ಮುಟ್ಟಿದ ಸೆನ್ಸೆಕ್ಸ್, ನಿಫ್ಟಿ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಮಲೇಷ್ಯಾ: 3,500 ರಿಂಗಿಟ್ (61,354 ರುಪಾಯಿ)
- ದುಬೈ: 2,627.50 ಡಿರಾಮ್ (59,537 ರುಪಾಯಿ)
- ಅಮೆರಿಕ: 710 ಡಾಲರ್ (59,082 ರುಪಾಯಿ)
- ಸಿಂಗಾಪುರ: 988 ಸಿಂಗಾಪುರ್ ಡಾಲರ್ (61,106 ರುಪಾಯಿ)
- ಕತಾರ್: 2,660 ಕತಾರಿ ರಿಯಾಲ್ (60,705 ರೂ)
- ಸೌದಿ ಅರೇಬಿಯಾ: 2,710 ಸೌದಿ ರಿಯಾಲ್ (60,117 ರುಪಾಯಿ)
- ಓಮನ್: 300.50 ಒಮಾನಿ ರಿಯಾಲ್ (64,952 ರುಪಾಯಿ)
- ಕುವೇತ್: 222.50 ಕುವೇತಿ ದಿನಾರ್ (60,231 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 8,375 ರೂ
- ಚೆನ್ನೈ: 8,800 ರೂ
- ಮುಂಬೈ: 8,450 ರೂ
- ದೆಹಲಿ: 8,450 ರೂ
- ಕೋಲ್ಕತಾ: 8,450 ರೂ
- ಕೇರಳ: 8,800 ರೂ
- ಅಹ್ಮದಾಬಾದ್: 8,450 ರೂ
- ಜೈಪುರ್: 8,450 ರೂ
- ಲಕ್ನೋ: 8,450 ರೂ
- ಭುವನೇಶ್ವರ್: 8,800 ರೂ
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ