Gold Prices: ಚಿನ್ನ, ಬೆಳ್ಳಿ ಇನ್ಮುಂದೆ ಬೆಲೆ ಏರಿಕೆ ಹಬ್ಬ; ಬೆಂಗಳೂರು, ಭಾರತ ಹಾಗೂ ವಿಶ್ವದ ವಿವಿಧೆಡೆ ಚಿನ್ನದ ದರ?
Bullion Market 2023, April 15th: ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 56,650 ರುಪಾಯಿ ಆಗಿದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 61,800 ರುಪಾಯಿ ಆಗಿದೆ. ಬೆಳ್ಳಿ ಬೆಲೆ ಕೂಡ ತುಸು ಏರಿಕೆ ಕಂಡಿದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ.
ಬೆಂಗಳೂರು: ದೇಶ ವಿದೇಶಗಳ ಚಿನಿವಾರ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿ (Gold and Silver Prices) ಬೆಲೆ ಹೆಚ್ಚುತ್ತಿದೆ. ಏಪ್ರಿಲ್ 13ರಂದು ತುಸು ಇಳಿಕೆ ಕಂಡಿದ್ದ ಚಿನ್ನದ ಬೆಲೆ ಮತ್ತೆ ಏರುಗತಿಯಲ್ಲಿದೆ. ಭಾರತದಲ್ಲಿ 10 ಗ್ರಾಮ್ ಚಿನ್ನದ ಬೆಲೆ 500ಕ್ಕೂ ಹೆಚ್ಚು ರುಪಾಯಿಯಷ್ಟು ಏರಿಕೆ ಆಗಿದೆ. ಬೆಳ್ಳಿ ಬೆಲೆಯೂ 10 ಗ್ರಾಮ್ಗೆ 16 ರೂನಷ್ಟು ಹೆಚ್ಚಳಗೊಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 56,650 ರುಪಾಯಿ ಆಗಿದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 61,800 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,960 ರುಪಾಯಿಗೆ ಏರಿದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 56,750 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 8,300 ರುಪಾಯಿಗೆ ಏರಿಕೆ ಕಂಡಿದೆ.
ಚಿನ್ನದ ಬೆಲೆ ಏರಿಕೆಗೆ ಏನು ಕಾರಣ?
ಜಾಗತಿಕವಾಗಿ ಅತಂತ್ರ ಆರ್ಥಿಕ ಸ್ಥಿತಿ ಇರುವುದರಿಂದ ಹೂಡಿಕೆದಾರರಲ್ಲಿ ಗೊಂದಲ ಮನೆಮಾಡಿದೆ. ಇದೇ ಕಾರಣಕ್ಕೆ ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತ ಮಾರ್ಗ ಎನಿಸಿದೆ. ಮುಂದೆಯೂ ಆರ್ಥಿಕ ಗೊಂದಲಮಯ ಸ್ಥಿತಿ ಮುಂದುವರಿಯುವುದರಿಂದ ಚಿನ್ನಕ್ಕೆ ಬೇಡಿಕೆ ಕಡಿಮೆ ಆಗುವ ಸಾಧ್ಯತೆ ಬಹಳ ಕಡಿಮೆ. ಈ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ಹೊಸ ದಾಖಲೆ ಮಟ್ಟಕ್ಕೆ ಏರುವ ಸಾಧ್ಯತೆ ಇದೆ. ಅಮೆರಿಕದಲ್ಲಿ ಅಲ್ಲಿನ ಫೆಡರಲ್ ಬ್ಯಾಂಕು ಈ ಬಾರಿ ಬಡ್ಡಿ ದರ ಏರಿಕೆ ಮಾಡುವ ಸಾಧ್ಯತೆ ಇಲ್ಲದಿರುವುದರಿಂದ ಅಲ್ಲಿನವರು ಷೇರು ಹಾಗೂ ಚಿನ್ನದ ಮೇಲೆ ಹೂಡಿಕೆ ಹೆಚ್ಚುವ ಸಾಧ್ಯತೆ ಇದೆ. ಇದರಿಂದ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ತುಟ್ಟಿಯಾಗುತ್ತಾ ಹೋಗಬಹುದು.
ಭಾರತದಲ್ಲಿ ಚಿನ್ನ, ಬೆಳ್ಳಿ ಬೆಲೆ (ಏಪ್ರಿಲ್ 15ಕ್ಕೆ):
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 56,650 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 61,800 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 796 ರೂ
ಬೆಂಗಳೂರಿನಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 56,700 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 61,850 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 830 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 56,700 ರೂ
- ಚೆನ್ನೈ: 57,300 ರೂ
- ಮುಂಬೈ: 56,650 ರೂ
- ದೆಹಲಿ: 56,800 ರೂ
- ಕೋಲ್ಕತಾ: 56,650 ರೂ
- ಕೇರಳ: 56,650 ರೂ
- ಅಹ್ಮದಾಬಾದ್: 56,150 ರೂ
- ಜೈಪುರ್: 56,700 ರೂ
- ಲಕ್ನೋ: 56,800 ರೂ
- ಭುವನೇಶ್ವರ್: 56,650 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
- ಮಲೇಷ್ಯಾ: 2,870 ರಿಂಗಿಟ್ (53,265 ರುಪಾಯಿ)
- ದುಬೈ: 2282.50 ಡಿರಾಮ್ (50,735 ರುಪಾಯಿ)
- ಅಮೆರಿಕ: 625 ಡಾಲರ್ (51,044 ರುಪಾಯಿ)
- ಸಿಂಗಾಪುರ: 842 ಸಿಂಗಾಪುರ್ ಡಾಲರ್ (51,872 ರುಪಾಯಿ)
- ಕತಾರ್: 2,350 ಕತಾರಿ ರಿಯಾಲ್ (52,738 ರೂ)
- ಓಮನ್: 249 ಒಮಾನಿ ರಿಯಾಲ್ (52,849 ರುಪಾಯಿ)
- ಕುವೇತ್: 194.50 ಕುವೇತಿ ದಿನಾರ್ (51,943 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 8,300 ರೂ
- ಚೆನ್ನೈ: 8,300 ರೂ
- ಮುಂಬೈ: 7,960 ರೂ
- ದೆಹಲಿ: 7,960 ರೂ
- ಕೋಲ್ಕತಾ: 7,960 ರೂ
- ಕೇರಳ: 8,300 ರೂ
- ಅಹ್ಮದಾಬಾದ್: 7,960 ರೂ
- ಜೈಪುರ್: 7,960 ರೂ
- ಲಕ್ನೋ: 7,960 ರೂ
- ಭುವನೇಶ್ವರ್: 8,300 ರೂ