AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Rates 22 October: ಈ ವಾರ 10 ಗ್ರಾಮ್ ಚಿನ್ನದ ಬೆಲೆ 3,000 ರೂ ಕುಸಿತ

Gold Price 22 October 2026: ಚಿನ್ನದ ಬೆಲೆ ಗುರುವಾರ ಒಂದು ಗ್ರಾಮ್​ಗೆ 155 ರೂ ಕಡಿಮೆ ಆಗಿದೆ. ಬೆಳ್ಳಿ ಬೆಲೆ 5 ರೂ ತಗ್ಗಿದೆ. ಆಭರಣ ಚಿನ್ನದ ಬೆಲೆ 13,390 ರೂನಿಂದ 13,235 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 14,438 ರೂ ಇದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್​ಗೆ 225 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 235 ರೂ ಇದೆ.

Gold Rates 22 October: ಈ ವಾರ 10 ಗ್ರಾಮ್ ಚಿನ್ನದ ಬೆಲೆ 3,000 ರೂ ಕುಸಿತ
ಚಿನ್ನImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 22, 2026 | 11:02 AM

Share

ನವದೆಹಲಿ, ಅಕ್ಟೋಬರ್ 22: ಬಂಗಾರದ ದರ ಸತತವಾಗಿ ಇಳಿಯುತ್ತಿದೆ. ಇಂದು ಗುರುವಾರ ಇದರ ಬೆಲೆ 155 ರೂಗಳಷ್ಟು ಕಡಿಮೆಗೊಂಡಿದೆ. ಕಳೆದ ಮೂರ್ನಾಲ್ಕು ದಿನದಲ್ಲಿ ಹಳದಿ ಲೋಹದ ಬೆಲೆಯಲ್ಲಿ 300 ರೂಗಳಷ್ಟು ತಗ್ಗಿದೆ. ಬೆಳ್ಳಿ ಬೆಲೆಯೂ ಇವತ್ತು ಕುಸಿದಿದೆ. ಡಿಸೆಂಬರ್ 23ರ ಬಳಿಕ ಬೆಳ್ಳಿ ಬೆಲೆ 225 ರೂಗೆ ಇಳಿದಿದೆ. ಅಂತರರಾಷ್ಟ್ರೀಯ ಸ್ಪಾಟ್ ಚಿನ್ನ ಮತ್ತು ಬೆಳ್ಳಿ ಬೆಲೆಗಳೂ ಕಡಿಮೆಗೊಂಡಿವೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,32,350 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,44,380 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 22,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,32,350 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 22,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 23,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಅಕ್ಟೋಬರ್ 22ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,438
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,235
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,829
  • ಬೆಳ್ಳಿ ಬೆಲೆ 1 ಗ್ರಾಂಗೆ: 225 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,235 ರೂ
  • ಚೆನ್ನೈ: 13,235 ರೂ
  • ಮುಂಬೈ: 13,235 ರೂ
  • ದೆಹಲಿ: 13,250
  • ಕೋಲ್ಕತಾ: 13,235 ರೂ
  • ಕೇರಳ: 13,235 ರೂ
  • ಅಹ್ಮದಾಬಾದ್: 13,240 ರೂ
  • ಜೈಪುರ್: 13,250
  • ಲಕ್ನೋ: 13,250
  • ಭುವನೇಶ್ವರ್: 13,235 ರೂ

ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ

  • ಸ್ಪಾಟ್ ಗೋಲ್ಡ್ 1 ಗ್ರಾಮ್​ಗೆ 131.44 ಡಾಲರ್ (12,419 ರುಪಾಯಿ)
  • ಸ್ಪಾಟ್ ಸಿಲ್ವರ್ 1 ಗ್ರಾಮ್​ಗೆ 1.807 ಡಾಲರ್ (171 ರುಪಾಯಿ)

ಇದನ್ನೂ ಓದಿ: ಜನ ವೀಕ್ಷಿಸಲಿ, ಬಿಡಲಿ, ನಿಮ್ಮ ವಿಡಿಯೋ ಪೋಸ್ಟ್​ಗಳಿಗೆ ಸಿಗುತ್ತೆ ಲಕ್ಷಾಂತರ ರೂ ಹಣ: ಎಕ್ಸ್​ನಲ್ಲಿ ಹೊಸ ಇನ್ಸೆಂಟಿವ್ ಪ್ರೋಗ್ರಾಮ್

ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಭಾರತ: 14,438 ರುಪಾಯಿ
  • ಮಲೇಷ್ಯಾ: 554 ರಿಂಗಿಟ್ (12,807 ರುಪಾಯಿ)
  • ದುಬೈ: 497.25 ಡಿರಾಮ್ (12,776 ರುಪಾಯಿ)
  • ಅಮೆರಿಕ: 136 ಡಾಲರ್ (12,834 ರುಪಾಯಿ)
  • ಸಿಂಗಾಪುರ: 180 ಸಿಂಗಾಪುರ್ ಡಾಲರ್ (13,300 ರುಪಾಯಿ)
  • ಕತಾರ್: 498 ಕತಾರಿ ರಿಯಾಲ್ (12,893 ರೂ)
  • ಸೌದಿ ಅರೇಬಿಯಾ: 512 ಸೌದಿ ರಿಯಾಲ್ (12,881 ರುಪಾಯಿ)
  • ಓಮನ್: 52.90 ಒಮಾನಿ ರಿಯಾಲ್ (12,967 ರುಪಾಯಿ)
  • ಕುವೇತ್: 41.65 ಕುವೇತಿ ದಿನಾರ್ (12,761 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 225 ರೂ
  • ಚೆನ್ನೈ: 235 ರೂ
  • ಮುಂಬೈ: 225 ರೂ
  • ದೆಹಲಿ: 225 ರೂ
  • ಕೋಲ್ಕತಾ: 225 ರೂ
  • ಕೇರಳ: 235 ರೂ
  • ಅಹ್ಮದಾಬಾದ್: 225 ರೂ
  • ಜೈಪುರ್: 225 ರೂ
  • ಲಕ್ನೋ: 225 ರೂ
  • ಭುವನೇಶ್ವರ್: 235 ರೂ
  • ಪುಣೆ: 225

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More