Gold Silver Price Today | ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರುತ್ತಲೇ ಇತ್ತು. ಇಂದು ( ಜುಲೈ 22, ಗುರುವಾರ) ಚಿನ್ನದ ದರ(Gold Rate) ಕೊಂಚ ಇಳಿಕೆಯ ಹಾದಿ ಹಿಡಿದಿದೆ. ಚಿನ್ನ ಖರೀದಿಸುವಾಗ ದರ ಇಳಿಕೆ ಕಾಣಬೇಕು ಎಂಬುದು ಸಹಜ. ಹಾಗಿರುವಾಗ ಇಂದಿನ ದರದಲ್ಲಿ ಚಿನ್ನ ಖರೀದಿಸಬಹುದು ಎಂದೆನಿಸಿದರೆ ಆಭರಣ ಖರೀದಿಯ ಕುರಿತಾಗಿ ಯೋಚಿಸಬಹುದು. ಅದೇ ರೀತಿ ಬೆಳ್ಳಿ ದರವೂ(Silver Rate) ಸಹ ಇಳಿಕೆಯತ್ತ ಸಾಗಿದೆ. ಕೆಜಿ ಬೆಳ್ಳಿ ಬೆಲೆಯಲ್ಲಿ 99 ರೂಪಾಯಿಯಷ್ಟು ಕಡಿಮೆ ಆಗಿದೆ.
ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 45,300 ರೂಪಾಯಿ ಇದೆ. 100 ಗ್ರಾಂ ಚಿನ್ನಕ್ಕೆ 4,53,000 ರೂಪಾಯಿ ನಿಗದಿಯಾಗಿದೆ. ಸುಮಾರು 3,600 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 49,420 ರೂಪಾಯಿ ಇದೆ. 100 ಗ್ರಾಂ ಚಿನ್ನದ ದರ 4,94,200 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 3,900 ರೂಪಾಯಿ ಇಳಿಕೆ ಕಂಡು ಬಂದಿದೆ. ಬೆಳ್ಳಿ ದರದಲ್ಲಿಯೂ ಇಳಿಕೆ ಕಂಡು ಬಂದಿದ್ದು 800 ರೂಪಾಯಿ ಇಳಿಕೆಯ ಬಳಿಕ ಕೆಜಿ ಬೆಳ್ಳಿಗೆ 71,500 ರೂಪಾಯಿ ನಿಗದಿಯಾಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,900 ರೂಪಾಯಿ ಇದೆ. 100 ಗ್ರಾಂ ಚಿನ್ನದ ದರ 4,49,000 ರೂಪಾಯಿಗೆ ಇಳಿಕೆಯಾಗಿದೆ. ಸರಿಸುಮಾರು 3,500 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 48,980 ರೂಪಾಯಿ ಆಗಿದೆ. 100 ಗ್ರಾಂ ಚಿನ್ನದ ದರ 4,89,800 ರೂಪಾಯಿಗೆ ಇಳಿಕೆ ಆಗಿದೆ. ಸರಿಸುಮಾರು 3,900 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. ಬೆಳ್ಳಿ ದರದಲ್ಲಿ 900 ರೂಪಾಯಿ ಕುಸಿತದ ನಂತರ ಕೆಜಿ ಬೆಳ್ಳಿಗೆ 66,600 ರೂಪಾಯಿಗೆ ಇಳಿಕೆಯಾಗಿದೆ.
ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 47,050 ರೂಪಾಯಿ ಇದೆ. 100 ಗ್ರಾಂ ಚಿನ್ನದ ದರ 4,70,500 ರೂಪಾಯಿಗೆ ಇಳಿಕೆಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 3,500 ರೂಪಾಯಿಗೆ ಇಳಿಕೆಯಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 51,330 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 5,13,300 ರೂಪಾಯಿಗೆ ಇಳಿಕೆಯಾಗಿದೆ. ಸರಿಸುಮಾರು 3,800 ರೂಪಾಯಿಯಷ್ಟು ಬೆಲೆ ಇಳಿಕೆ ಕಂಡಿದೆ. ಇಂದು ಪ್ರಮುಖ ಎಲ್ಲಾ ಮಹಾನಗರಗಳಲ್ಲಿಯೂ ಚಿನ್ನ ಮತ್ತು ಬೆಳ್ಳಿ ದರ ಇಳಿಕೆ ಕಂಡಿದೆ. ಆಭರಣ ಖರೀದಿಸಬೇಕು ಎಂಬ ಪ್ಲಾನ್ ಮಾಡಿದ್ದರೆ, ನೀವು ಕೂಡಿಟ್ಟ ಹಣದಲ್ಲಿ ಚಿನ್ನ ಖರೀದಿಸಬಹುದು ಎಂದೆನಿಸಿದರೆ ಯೋಚಿಸಿ.
ಇದನ್ನೂ ಓದಿ:
Gold Rate Today: ಚಿನ್ನದ ದರ ಏರಿಕೆ, ಬೆಳ್ಳಿ ದರ ಇಳಿಕೆ; ಯಾವ ಯಾವ ನಗರಗಳಲ್ಲಿ ಎಷ್ಟೆಷ್ಟು? ಮಾಹಿತಿ ಇಲ್ಲಿದೆ
Published On - 8:49 am, Thu, 22 July 21