Stock Market Live: ಸೆನ್ಸೆಕ್ಸ್, ನಿಫ್ಟಿ ಭರ್ಜರಿ ಏರಿಕೆ; ಬಜಾಜ್ ಫೈನಾನ್ಸ್ ಶೇ 5ರಷ್ಟು ಗಳಿಕೆ

ಭಾರತದ ಷೇರು ಮಾರ್ಕೆಟ್ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಗುರುವಾರ ಭರ್ಜರಿ ಏರಿಕೆ ದಾಖಲಿಸಿವೆ. ನಿಫ್ಟಿಯಲ್ಲಿ ಪ್ರಮುಖವಾಗಿ ಏರಿಕೆ, ಇಳಿಕೆ ದಾಖಲಿಸಿದ ಷೇರುಗಳ ವಿವರ ಇಲ್ಲಿದೆ.

Stock Market Live: ಸೆನ್ಸೆಕ್ಸ್, ನಿಫ್ಟಿ ಭರ್ಜರಿ ಏರಿಕೆ; ಬಜಾಜ್ ಫೈನಾನ್ಸ್ ಶೇ 5ರಷ್ಟು ಗಳಿಕೆ
ಸಾಂದರ್ಭಿಕ ಚಿತ್ರ

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ- 50 ಗುರುವಾರ (ಜುಲೈ 22, 2021) ಭರ್ಜರಿ ಏರಿಕೆ ದಾಖಲಿಸಿವೆ. ಈ ವರದಿ ಆಗುವ ಹೊತ್ತಿಗೆ ಬಿಎಸ್​ಇ ಸೆನ್ಸೆಕ್ಸ್ 623.31 ಪಾಯಿಂಟ್​ಗಳಷ್ಟು ಮೇಲೇರಿ 52,821.82 ಪಾಯಿಂಟ್​ನಲ್ಲಿ ವಹಿವಾಟು ನಡೆಸುತ್ತಿತ್ತು. ಇನ್ನು ನಿಫ್ಟಿ- 50 ಸೂಚ್ಯಂಕವು 180.85 ಪಾಯಿಂಟ್​ಗಳಷ್ಟು ಏರಿಕೆ ಆಗಿ, 15,812.95 ಪಾಯಿಂಟ್​ನಲ್ಲಿ ವ್ಯವಹಾರ ನಡೆಸಿತು. ಸೆನ್ಸೆಕ್ಸ್ ಸೂಚ್ಯಂಕವು ದಿನದ ಆರಂಭ ಶುರು ಮಾಡಿದ್ದು 52,494.56 ಪಾಯಿಂಟ್​ನೊಂದಿಗೆ. ಈ ಹಿಂದಿನ ದಿನಾಂತ್ಯ 52,198.51 ಪಾಯಿಂಟ್​ನೊಂದಿಗೆ ಕಂಡಿತ್ತು. ದಿನದ ಗರಿಷ್ಠ ಮೊತ್ತ 52,864.82 ಪಾಯಿಂಟ್ ಮುಟ್ಟಿತ್ತು. ನಿಫ್ಟಿ- 50 ಸೂಚ್ಯಂಕವು ಹಿಂದಿನ ದಿನ 15,632.10 ಪಾಯಿಂಟ್​​ನೊಂದಿಗೆ ಕೊನೆಯಾಗಿತ್ತು. 15,736.60 ಪಾಯಿಂಟ್​ನೊಂದಿಗೆ ಗುರುವಾರ ದಿನದ ಆರಂಭ ಶುರು ಮಾಡಿತು. ಗರಿಷ್ಠ ಮಟ್ಟ 15,825 ತಲುಪಿತು.

ಭಾರತೀಯ ರೂಪಾಯಿ ಆರಂಭದ ಗಳಿಕೆ ಕಂಡಿತು. ದಿನದ ಗರಿಷ್ಠ ಮಟ್ಟ ಅಮೆರಿಕ ಡಾಲರ್ ವಿರುದ್ಧ 74.34 ತಲುಪಿತು. ಈ ದಿನದ ಆರಂಭ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 18 ಪೈಸೆ ಏರಿಕೆಯೊಂದಿಗೆ ಶುರುವಾಯಿತು. ಬಿಎಸ್​ಇಯಲ್ಲಿ ಪವರ್ ಸೂಚ್ಯಂಕ ಒಂದನ್ನು ಹೊರತುಪಡಿಸಿ ಉಳಿದೆಲ್ಲ ಏರಿಕೆ ಆಗಿದೆ. ನಿಫ್ಟಿಯಲ್ಲಿ ಎಲ್ಲ ವಲಯದ ಸೂಚ್ಯಂಕವೂ ಏರಿಕೆ ದಾಖಲಿಸಿದೆ.ನಮಧ್ಯಾಹ್ನದ ಹೊತ್ತಿಗೆ ನಿಫ್ಟಿಯಲ್ಲಿ ಟಾಪ್​ ಗೇಯ್ನರ್ಸ್ ಮತ್ತು ಇಳಿಕೆ ಕಂಡ ಪ್ರಮುಖ 5 ಷೇರುಗಳ ವಿವರ ಇಲ್ಲಿದೆ.

ನಿಫ್ಟಿಯಲ್ಲಿ ಗಳಿಕೆ ಕಂಡ ಟಾಪ್ 5 ಷೇರುಗಳು ಮತ್ತು ಪರ್ಸೆಂಟ್
ಬಜಾಜ್ ಫೈನಾನ್ಸ್ ಶೇ 4.75
ಟೆಕ್ ಮಹೀಂದ್ರಾ ಶೇ 3.79
ಜೆಎಸ್​ಡಬ್ಲ್ಯು ಸ್ಟೀಲ್ ಶೇ 3.71
ಬಜಾಜ್ ಫಿನ್​ಸರ್ವ್ ಶೇ 3.08
ಹಿಂಡಾಲ್ಕೋ ಶೇ 2.87

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್
ಏಷ್ಯನ್ ಪೇಂಟ್ಸ್ ಶೇ -1.38
ಹೀರೋ ಮೋಟೋಕಾರ್ಪ್ ಶೇ -0.54
ಐಷರ್ ಮೋಟಾರ್ಸ್ ಶೇ -0.51
ಸಿಪ್ಲಾ ಶೇ -0.47
ನೆಸ್ಟ್ಲೆ ಶೇ -0.37

ಇದನ್ನೂ ಓದಿ: Multibagger stock 2021: ಒಂದು ವರ್ಷದಲ್ಲಿ ರೂ.7.82ರ ಸುಬೆಕ್ಸ್ ಷೇರು 72.75ಕ್ಕೆ ಜಿಗಿತ; ವರ್ಷದಲ್ಲಿ ಶೇ 837ರಷ್ಟು ಲಾಭ

(Indian Stock Market Indices Sensex And Nifty Gain Bajaj Finance Top Gainer)