AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Stocks: ಗೂಗಲ್, ಮೈಕ್ರೋಸಾಫ್ಟ್ ನಿರಾಶಾದಾಯಕ ಫಲಿತಾಂಶ; ಐಟಿ ಷೇರುಗಳಲ್ಲಿ ಕುಸಿತ

ಗೂಗಲ್, ಮೈಕ್ರೋಸಾಫ್ಟ್ ಸೇರಿದಂತೆ ಪ್ರಮುಖ ಐಟಿ ಕಂಪನಿಗಳ ತ್ರೈಮಾಸಿಕ ಫಲಿತಾಂಶದಲ್ಲಿ ಕುಸಿತವಾಗಿರುವುದು ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ಐಟಿ ಕ್ಷೇತ್ರದ ಷೇರುಗಳ ಕುಸಿತಕ್ಕೆ ಕಾರಣವಾಗಿದೆ. ಮೈಕ್ರೋಸಾಫ್ಟ್​ನ ತ್ರೈಮಾಸಿಕ ಮಾರಾಟದಲ್ಲಿ ಐದು ವರ್ಷಗಳಲ್ಲೇ ಹೆಚ್ಚಿನ ಕುಸಿತ ದಾಖಲಾಗಿದೆ. ಅಲ್ಫಾಬೆಟ್​ನ ಮಾರಾಟವೂ ಕುಸಿದಿದೆ. ಹಣದುಬ್ಬರದ ಪರಿಣಾಮವಾಗಿ ಡಿಜಿಟಲ್ ಜಾಹಾರಾತಿನ ಬೆಳವಣಿಗೆಯೂ ಕುಂಠಿತವಾಗಿದೆ ಎಂದು ವರದಿ ಹೇಳಿದೆ.

Tech Stocks: ಗೂಗಲ್, ಮೈಕ್ರೋಸಾಫ್ಟ್ ನಿರಾಶಾದಾಯಕ ಫಲಿತಾಂಶ; ಐಟಿ ಷೇರುಗಳಲ್ಲಿ ಕುಸಿತ
ಸಾಂದರ್ಭಿಕ ಚಿತ್ರImage Credit source: PTI
TV9 Web
| Edited By: |

Updated on:Oct 11, 2026 | 11:11 PM

Share

ವಾಷಿಂಗ್ಟನ್: ಗೂಗಲ್ (Google), ಮೈಕ್ರೋಸಾಫ್ಟ್ (Microsoft) ಸೇರಿದಂತೆ ಪ್ರಮುಖ ಐಟಿ ಕಂಪನಿಗಳ (IT Companies) ತ್ರೈಮಾಸಿಕ ಫಲಿತಾಂಶದಲ್ಲಿ ಕುಸಿತವಾಗಿರುವುದು ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ಐಟಿ ಕ್ಷೇತ್ರದ ಷೇರುಗಳ ಕುಸಿತಕ್ಕೆ ಕಾರಣವಾಗಿದೆ. ಗೂಗಲ್ ಮಾತೃಸಂಸ್ಥೆ ಅಲ್ಫಾಬೆಟ್ ಇಂಕ್ ಆದಾಯದಲ್ಲಿ ಮೂರನೇ ತ್ರೈಮಾಸಿಕ ಫಲಿತಾಂಶದಲ್ಲಿ ಶೇಕಡಾ 7.4ರ ಕುಸಿತ ದಾಖಲಾಗಿದೆ. ಇದು ನಿರೀಕ್ಷೆಗಿಂತಲೂ ತುಂಬಾ ಕಡಿಮೆಯಾಗಿದೆ. ಸಾಫ್ಟ್​ವೇರ್ ದೈತ್ಯ ಮೈಕ್ರೋಸಾಫ್ಟ್ ಆದಾಯ ಮುನ್ಸೂಚನೆಯಲ್ಲಿಯೂ ಶೇಕಡಾ 8.1ರ ಕುಸಿತವಾಗಿದೆ. ಸೆಮಿ ಕಂಡಕ್ಟರ್ ಉದ್ಯಮ ಸಂಸ್ಥೆ ಟೆಕ್ಸಾಸ್ ಇನ್​ಸ್ಟ್ರೂಮೆಂಟ್ಸ್ ಇಂಕ್ ಕೂಡ ವಿಶ್ಲೇಷಕರ ಅಂದಾಜನ್ನು ತಲೆಕೆಳಗಾಗಿಸಿ ಶೇಕಡಾ 6.1 ಕುಸಿತ ದಾಖಲಿಸಿದೆ.

ದಕ್ಷಿಣ ಕೊರಿಯಾದ ಚಿಪ್​ ತಯಾರಕ ಎಸ್​ಕೆ ಹೈನಿಕ್ಸ್ ಇಂಕ್ ಲಾಭದಲ್ಲಿ ಶೆಕಡಾ 60ರಷ್ಟು ಕುಸಿತವಾಗಿದೆ. ಹೀಗಾಗಿ ಕಂಪನಿಯು ಬಂಡವಾಳ ವೆಚ್ಚವನ್ನು ಅರ್ಧಕ್ಕಿಂತಲೂ ಹೆಚ್ಚು ಕಡಿತ ಮಾಡುವ ಸಾಧ್ಯತೆ ಇದೆ. ಇದು ಮಾರುಕಟ್ಟೆಯಲ್ಲಿ ಭಾರಿ ಕ್ಷೀಣತೆಯ ಬಗ್ಗೆ ಎಚ್ಚರಿಕೆ ಸಂದೇಶ ನೀಡಿದೆ ಎಂದು ‘ಬ್ಲೂಮ್​ಬರ್ಗ್’ ತಾಣ ವರದಿ ಮಾಡಿದೆ.

ಈ ಎಲ್ಲ ಬೆಳವಣಿಗೆಗಳಿಂದ ಜಾಗತಿಕವಾಗಿ ಐಟಿ ಷೇರುಗಳಲ್ಲಿ ಕುಸಿತವಾಗಿದೆ. Nasdaq 100 Indexನಲ್ಲಿ ಅಮೆರಿಕದ ಐಟಿ ಕಂಪನಿಗಳ ಷೇರುಗಳು ತೀವ್ರ ಕುಸಿತ ಕಂಡಿವೆ. Invesco QQQ ಮಾರುಕಟ್ಟೆಯಲ್ಲಿ ಕೂಡ ಐಟಿ ಷೇರುಗಳು ಶೇಕಡಾ 2.1ರ ಕುಸಿತ ದಾಖಲಿಸಿವೆ. ಅಮೆಜಾನ್ ಡಾಟ್​ ಕಾಮ್ ಇಂಕ್ ಷೇರುಗಳು ಶೇಕಡಾ 4.9ರಷ್ಟು ಕುಸಿತ ಕಂಡಿವೆ ಎಂದು ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ
Image
ನೊಯ್ಡಾದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕುಸಿತ
Image
Gold Price Today: ಚಿನ್ನದ ದರ ತುಸು ಇಳಿಕೆ, ಹೆಚ್ಚಿದ ಬೆಳ್ಳಿ ಬೆಲೆ, ಪ್ರಮುಖ ನಗರಗಳ ದರ ವಿವರ ಇಲ್ಲಿದೆ
Image
CCI Penalty on Google: ಗೂಗಲ್​ಗೆ ಮತ್ತೊಮ್ಮೆ ಭಾರಿ ದಂಡ ವಿಧಿಸಿದ ಸಿಸಿಐ, ಕಾರಣ ಇಲ್ಲಿದೆ
Image
ರಿಷಿ ಸುನಕ್ ಪತ್ನಿ ಅಕ್ಷತಾ ಮೂರ್ತಿ ಇನ್ಫೋಸಿಸ್​ನಿಂದ ಈ ವರ್ಷ ಪಡೆದ ಲಾಭಾಂಶವೆಷ್ಟು?

ಅಲ್ಫಾಬೆಟ್, ಮೆಟಾ ಪ್ಲಾಟ್​ಫಾರ್ಮ್ ಇಂಕ್ ಹಾಗೂ ಪಿಂಟ್​ರೆಸ್ಟ್ ಇಂಕ್​ ಆನ್​ಲೈನ್ ಜಾಹೀರಾತಿನಿಂದ ಪಡೆಯುವ ಆದಾಯದಲ್ಲಿ ಕುಸಿತವಾಗಿದೆ. ಈ ಕಂಪನಿಗಳ ಆನ್​ಲೈನ್ ಜಾಹೀರಾತು ಆದಾಯದಲ್ಲಿ ಶೇಕಡಾ 4ರಷ್ಟು ಕುಸಿತವಾಗಿದೆ ಎಂದು ವರದಿ ಹೇಳಿದೆ.

ಸಾಫ್ಟ್​ವೇರ್ ಕಂಪನಿಗಳ ಪೈಕಿ ಮೈಕ್ರೋಸಾಫ್ಟ್, ಡೇಟಾಡಾಗ್ ಇಂಕ್ ಶೇಕಡಾ 7ರಷ್ಟು, ಸ್ನೋಫ್ಲೇಕ್ ಇಂಕ್ ಶೇಕಡಾ 5ರಷ್ಟು ಹಾಗೂ ಸೇಲ್ಸ್​ಫೋರ್ಸ್ ಇಂಕ್ ಶೇಕಡಾ 3ರಷ್ಟು ಕುಸಿತ ಕಂಡಿವೆ. ಚಿಪ್​ ಮಾರಾಟ ಕ್ಷೇತ್ರದಲ್ಲಿ ಅನಲಾಗ್ ಡಿವೈಸಸ್ ಇಂಕ್, ಆನ್ ಸೆಮಿಕಂಡಕ್ಟರ್ ಕಾರ್ಪೊರೇಷನ್, ಮಾರ್ವೆಲ್ ಟೆಕ್ನಾಲಜೀಸ್ ಇಂಕ್ ಕೂಡ ಕುಸಿತ ದಾಖಲಿಸಿವೆ.

ಇದನ್ನೂ ಓದಿ: CCI Penalty on Google: ಗೂಗಲ್​ಗೆ ಮತ್ತೊಮ್ಮೆ ಭಾರಿ ದಂಡ ವಿಧಿಸಿದ ಸಿಸಿಐ, ಕಾರಣ ಇಲ್ಲಿದೆ

ಮೈಕ್ರೋಸಾಫ್ಟ್​ನ ತ್ರೈಮಾಸಿಕ ಮಾರಾಟದಲ್ಲಿ ಐದು ವರ್ಷಗಳಲ್ಲೇ ಹೆಚ್ಚಿನ ಕುಸಿತ ದಾಖಲಾಗಿದೆ. ಅಲ್ಫಾಬೆಟ್​ನ ಮಾರಾಟವೂ ಕುಸಿದಿದೆ. ಹಣದುಬ್ಬರದ ಪರಿಣಾಮವಾಗಿ ಡಿಜಿಟಲ್ ಜಾಹಾರಾತಿನ ಬೆಳವಣಿಗೆಯೂ ಕುಂಠಿತವಾಗಿದೆ ಎಂದು ವರದಿ ಹೇಳಿದೆ.

ಯುರೋಪ್ ಬಿಕ್ಕಟ್ಟು, ಜಾಗತಿಕ ಆರ್ಥಿಕ ಅನಿಶ್ಚಿತತೆ, ಆದಾಯ ಕುಸಿತ ಹಾಗೂ ಹಣದುಬ್ಬರಗಳು ಪ್ರಮುಖ ಐಟಿ ಕಂಪನಿಗಳ ವಹಿವಾಟಿಗೆ ಹೊಡೆತ ನೀಡಿವೆ. ಆರ್ಥಿಕ ಹಿನ್ನಡೆಯಿಂದಾಗಿ ಮೈಕ್ರೋಸಾಫ್ಟ್ 1,000 ಮಂದಿ ಉದ್ಯೋಗಿಗಳನ್ನು ವಜಾ ಮಾಡಿರುವ ಬಗ್ಗೆ ಇತ್ತೀಚೆಗಷ್ಟೇ ವರದಿಯಾಗಿತ್ತು. ಇಷ್ಟೇ ಅಲ್ಲದೆ, ಅಮೆರಿಕದ ಹಲವು ಟೆಕ್ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸುವ ಮತ್ತು ನೇಮಕಾತಿ ವಿಳಂಬದ ಮೊರೆ ಹೋಗಿವೆ. ಮೆಟಾ ಕೂಡ ಇತ್ತೀಚೆಗೆ 60 ಗುತ್ತಿಗೆದಾರರನ್ನು ವಜಾಗೊಳಿಸಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:05 pm, Wed, 26 October 22

Follow Us
TV9 Web
TV9 Web

TV9 Kannada

Read More
ಅವಧಿಗೂ ಮುನ್ನ SIR ಅಂತ್ಯ: 2.01 ಲಕ್ಷ ಮತದಾರರ ಹೆಸರು ಡಿಲೀಟ್​
ಅವಧಿಗೂ ಮುನ್ನ SIR ಅಂತ್ಯ: 2.01 ಲಕ್ಷ ಮತದಾರರ ಹೆಸರು ಡಿಲೀಟ್​
ಕಾಂಗ್ರೆಸ್​​​ನ 25 ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ
ಕಾಂಗ್ರೆಸ್​​​ನ 25 ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ
ಹಿಂಡಲಗಾ ಜೈಲಿಗೆ ಹೋಗ್ತಿದ್ದ ಪ್ರಜ್ವಲ್ ಇದ್ದ ವಾಹನ ಅರ್ಧಕ್ಕೆ ವಾಪಸ್
ಹಿಂಡಲಗಾ ಜೈಲಿಗೆ ಹೋಗ್ತಿದ್ದ ಪ್ರಜ್ವಲ್ ಇದ್ದ ವಾಹನ ಅರ್ಧಕ್ಕೆ ವಾಪಸ್
ಬೃಹತ್ ಪ್ರತಿಭಟನೆ ಬಳಿಕ ಸುಪ್ರೀಂ ಕೋರ್ಟ್ ತಲುಪಿದ ರಾಹುಲ್ ಗಾಂಧಿ, ಖರ್ಗೆ
ಬೃಹತ್ ಪ್ರತಿಭಟನೆ ಬಳಿಕ ಸುಪ್ರೀಂ ಕೋರ್ಟ್ ತಲುಪಿದ ರಾಹುಲ್ ಗಾಂಧಿ, ಖರ್ಗೆ
ಮಂಜನಿಗೆ ಮುಂದೆ ಒಳ್ಳೆಯ ಭವಿಷ್ಯ ಇದೆ: ಸಂಗೀತಾ ಭಟ್ ಅಚ್ಚರಿಯ ಹೇಳಿಕೆ
ಮಂಜನಿಗೆ ಮುಂದೆ ಒಳ್ಳೆಯ ಭವಿಷ್ಯ ಇದೆ: ಸಂಗೀತಾ ಭಟ್ ಅಚ್ಚರಿಯ ಹೇಳಿಕೆ
ಸಿಎಂ ಡಿಕೆಶಿ​​ ಕುರ್ತಾ ಹಿಡಿದು ತಳ್ಳಿದ ರಾಹುಲ್ ಗಾಂಧಿ! ಕನ್ನಡಿಗರ ಆಕ್ರೋಶ
ಸಿಎಂ ಡಿಕೆಶಿ​​ ಕುರ್ತಾ ಹಿಡಿದು ತಳ್ಳಿದ ರಾಹುಲ್ ಗಾಂಧಿ! ಕನ್ನಡಿಗರ ಆಕ್ರೋಶ
ಕಿತ್ತೂರು ರಾಜಗುರುಗಳ ವಂಶಸ್ಥರಿಂದ ತಲೆಮಾರುಗಳ ಪರಂಪರೆ ಮುಂದುವರಿಕೆ
ಕಿತ್ತೂರು ರಾಜಗುರುಗಳ ವಂಶಸ್ಥರಿಂದ ತಲೆಮಾರುಗಳ ಪರಂಪರೆ ಮುಂದುವರಿಕೆ
ಪ್ರತಿಭಟನೆ ವೇಳೆ ಎಬಿವಿಪಿ ಕಾರ್ಯಕರ್ತನಿಗೆ ಎಸಿಪಿ ಕಪಾಳಮೋಕ್ಷ
ಪ್ರತಿಭಟನೆ ವೇಳೆ ಎಬಿವಿಪಿ ಕಾರ್ಯಕರ್ತನಿಗೆ ಎಸಿಪಿ ಕಪಾಳಮೋಕ್ಷ
ಬಿಗ್ ಬಾಸ್: ಸಂಗೀತಾ ಭಟ್ ಆರೋಗ್ಯ ಕೈಕೊಟ್ಟಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ
ಬಿಗ್ ಬಾಸ್: ಸಂಗೀತಾ ಭಟ್ ಆರೋಗ್ಯ ಕೈಕೊಟ್ಟಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ
ಕಳೆದ 10 ವರ್ಷಗಳಿಂದ ಹದಗೆಟ್ಟಿದ್ದ ಪೀಣ್ಯ ಔಟರ್ ರಿಂಗ್ ರಸ್ತೆಗೆ ಡಾಂಬರ್ ಭಾಗ
ಕಳೆದ 10 ವರ್ಷಗಳಿಂದ ಹದಗೆಟ್ಟಿದ್ದ ಪೀಣ್ಯ ಔಟರ್ ರಿಂಗ್ ರಸ್ತೆಗೆ ಡಾಂಬರ್ ಭಾಗ