
ಬೆಂಗಳೂರು, ಸೆ.21: ಇಂದು ನಮಗೆ ಯಾವುದೇ ಮಾಹಿತಿ ಬೇಕಿದ್ದರೂ ತಕ್ಷಣವೇ ಗೂಗಲ್ (Google) ಓಪನ್ ಮಾಡಿ ಸರ್ಚ್ ಮಾಡುವುದು ಸರ್ವೇಸಾಮಾನ್ಯ ಅಭ್ಯಾಸವಾಗಿದೆ. ಆದರೆ, ‘ಗೂಗಲ್‌ನಲ್ಲಿ ಎಲ್ಲವೂ ಸಿಗುತ್ತದೆ’ ಎಂದು ಕಣ್ಣು ಮುಚ್ಚಿಕೊಂಡು ಪ್ರತಿಯೊಂದನ್ನೂ ಹುಡುಕುವುದು ನಿಮಗೆ ದೊಡ್ಡ ಅಪಾಯ ತಂದೊಡ್ಡಬಹುದು. ನೀವು ಗೂಗಲ್‌ನಲ್ಲಿ ಮಾಡುವ ಕೆಲವು ಹುಡುಕಾಟಗಳು (Search Queries) ನಿಮ್ಮನ್ನು ಆನ್‌ಲೈನ್ ಸೈಬರ್ ವಂಚನೆಗೆ (Cyber Fraud) ಬಲಿಪಶುವನ್ನಾಗಿ ಮಾಡಬಹುದು ಅಥವಾ ದೇಶದ ಕಾನೂನಿನ ಪ್ರಕಾರ ಜೈಲು ಶಿಕ್ಷೆಗೆ ಗುರಿಪಡಿಸಬಹುದು ಆದ್ದರಿಂದ, ಗೂಗಲ್‌ನಲ್ಲಿ ಅಪ್ಪಿತಪ್ಪಿಯೂ ಸರ್ಚ್ ಮಾಡಬಾರದ ಪ್ರಮುಖ ವಿಷಯಗಳು ಹಾಗೂ ಅವುಗಳ ಹಿಂದಿನ ಅಪಾಯಗಳ ಸಂಪೂರ್ಣ ವಿವರ ಇಲ್ಲಿದೆ.
ಯಾವುದೇ ಬ್ಯಾಂಕ್, ಡಿಜಿಟಲ್ ವ್ಯಾಲೆಟ್ (PhonePe, Google Pay, Paytm) ಅಥವಾ ಇ-ಕಾಮರ್ಸ್ ವೆಬ್‌ಸೈಟ್‌ಗಳ ಕಸ್ಟಮರ್ ಕೇರ್ ನಂಬರ್‌ಗಳನ್ನು ನೇರವಾಗಿ ಗೂಗಲ್‌ನಲ್ಲಿ ಹುಡುಕಬೇಡಿ. ಸೈಬರ್ ವಂಚಕರು ನಕಲಿ ವೆಬ್‌ಸೈಟ್ ಹಾಗೂ ನಕಲಿ ನಂಬರ್‌ಗಳನ್ನು ಗೂಗಲ್‌ನಲ್ಲಿ ಅಪ್‌ಲೋಡ್ ಮಾಡಿರುತ್ತಾರೆ. ನೀವು ಆ ನಂಬರ್‌ಗೆ ಕರೆ ಮಾಡಿದರೆ, ನಿಮ್ಮ ಬ್ಯಾಂಕ್ ಅಕೌಂಟ್, ಒಟಿಪಿ (OTP) ಪಡೆದು ಕ್ಷಣಮಾತ್ರದಲ್ಲಿ ಹಣ ಖಾಲಿ ಮಾಡುತ್ತಾರೆ. ಯಾವಾಗಲೂ ಅಧಿಕೃತ ಬ್ಯಾಂಕ್ ಆಪ್ ಅಥವಾ ನಿಮ್ಮ ಎಟಿಎಂ ಕಾರ್ಡ್‌ನ ಹಿಂಭಾಗದಲ್ಲಿರುವ ಕಸ್ಟಮರ್ ಕೇರ್ ಸಂಖ್ಯೆಗೆ ಮಾತ್ರ ಕರೆ ಮಾಡಿ.
ಬಾಂಬ್ ಮಾಡುವುದು ಹೇಗೆ, ಬಂದೂಕು ಅಥವಾ ಅಕ್ರಮ ಶಸ್ತ್ರಾಸ್ತ್ರಗಳನ್ನು ಎಲ್ಲಿ ಖರೀದಿಸಬೇಕು ಎಂಬಂತಹ ವಿಷಯಗಳನ್ನು ಗೂಗಲ್‌ನಲ್ಲಿ ತಮಾಷೆಗೂ ಸರ್ಚ್ ಮಾಡಬೇಡಿ. ಸೈಬರ್ ಭದ್ರತಾ ಏಜೆನ್ಸಿಗಳು ಹಾಗೂ ಸರ್ಕಾರದ ತನಿಖಾ ಸಂಸ್ಥೆಗಳು ಇಂತಹ ಕೀವರ್ಡ್‌ಗಳ ಮೇಲೆ ಕಣ್ಣಿಟ್ಟಿರುತ್ತವೆ. ನಿಮ್ಮ ಐಪಿ ಟ್ರ್ಯಾಕ್ ಆಗಿ ನೀವು ಅನಗತ್ಯವಾಗಿ ಪೋಲಿಸ್ ಅಥವಾ ತನಿಖಾ ಸಂಸ್ಥೆಗಳ ಕಣ್ಗಾವಲಿಗೆ ಒಳಗಾಗಬೇಕಾಗುತ್ತದೆ.
ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಅಥವಾ ಕಾಯಿಲೆಯ ಲಕ್ಷಣಗಳನ್ನು ಗೂಗಲ್‌ನಲ್ಲಿ ಹುಡುಕಿ ಸ್ವಯಂ ಚಿಕಿತ್ಸೆ ಮಾಡಿಕೊಳ್ಳುವುದು ಅಪಾಯಕಾರಿ. ಗೂಗಲ್‌ನಲ್ಲಿ ಸಿಗುವ ತಪ್ಪು ಮಾಹಿತಿಯನ್ನು ನಂಬಿ ಗೂಗಲ್ ನೋಡಿ ಮಾತ್ರೆಗಳನ್ನು ತೆಗೆದುಕೊಂಡರೆ ಜೀವಕ್ಕೆ ಕಂಟಕವಾಗಬಹುದು. ಆರೋಗ್ಯ ಸಮಸ್ಯೆಯಿದ್ದಾಗ ವೈದ್ಯರನ್ನು ನೇರವಾಗಿ ಸಂಪರ್ಕಿಸುವುದೇ ಸುರಕ್ಷಿತ.
ಪಿಎಂ ಕಿಸಾನ್, ಉಚಿತ ಯೋಜನೆಗಳು, ಸ್ಕಾಲರ್‌ಶಿಪ್ ಅಥವಾ ಸರ್ಕಾರಿ ಕೆಲಸದ ಅರ್ಜಿ ಸಲ್ಲಿಕೆಗಾಗಿ ಗೂಗಲ್‌ನಲ್ಲಿ ಸರ್ಚ್ ಮಾಡುವಾಗ ಎಚ್ಚರದಿಂದಿರಿ. ಸೈಬರ್ ಕ್ರಿಮಿನಲ್‌ಗಳು ಸರ್ಕಾರಿ ವೆಬ್‌ಸೈಟ್‌ಗಳಂತೆಯೇ ಕಾಣುವ ನಕಲಿ ‘ಫಿಶಿಂಗ್’ ಲಿಂಕ್‌ಗಳನ್ನು ಸೃಷ್ಟಿಸಿರುತ್ತಾರೆ. ಇಲ್ಲಿ ನೀವು ನೀಡುವ ಆಧಾರ್, ಪಾನ್‌ಕಾರ್ಡ್ ಹಾಗೂ ವೈಯಕ್ತಿಕ ಮಾಹಿತಿ ದುರುಪಯೋಗವಾಗಬಹುದು.
ಗೂಗಲ್‌ನಲ್ಲಿ ಸಿಗುವ ಪೇಯ್ಡ್ ಆಪ್‌ಗಳನ್ನು ಉಚಿತವಾಗಿ ಪಡೆಯಲು ‘Crack Files’ ಅಥವಾ ‘Mod APK’ ಗಳಿಗಾಗಿ ಹುಡುಕಾಟ ನಡೆಸಬೇಡಿ. ಇಂತಹ ವೆಬ್‌ಸೈಟ್‌ಗಳಿಂದ ಆಪ್ ಡೌನ್‌ಲೋಡ್ ಮಾಡಿದರೆ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ಗೆ ‘ವೈರಸ್/ಮಾಲ್ವೇರ್’ (Malware) ಪ್ರವೇಶಿಸಿ, ನಿಮ್ಮ ಗ್ಯಾಲರಿ ಫೋಟೋಗಳು, ಸಂಪರ್ಕಗಳು ಹಾಗೂ ಬ್ಯಾಂಕಿಂಗ್ ಡೇಟಾವನ್ನು ಕದಿಯಲಾಗುತ್ತದೆ.
ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ