AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರಾವಳಿಯ ಸಾಧಕನಿಗೆ ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್’ ಗರಿ: ಅಗ್ಗದ ಬೆಲೆಯಲ್ಲಿ 20 ಕಿ.ಮೀ ದೂರ ವೀಕ್ಷಿಸುವ ಬೈನಾಕ್ಯುಲರ್ ಆವಿಷ್ಕರಿಸಿದ ಉಡುಪಿಯ ಆರ್. ಮನೋಹರ್

ಉಡುಪಿಯ ಸಂಶೋಧಕ ಆರ್. ಮನೋಹರ್ ಅವರು ಅಗ್ಗದ ವೆಚ್ಚದಲ್ಲಿ 200X ಮತ್ತು 240X ಸಾಮರ್ಥ್ಯದ ಶಕ್ತಿಶಾಲಿ ಬೈನಾಕ್ಯುಲರ್‌ಗಳನ್ನು ಅಭಿವೃದ್ಧಿಪಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 20 ಕಿ.ಮೀ ದೂರದ ವಸ್ತುಗಳನ್ನು ಸ್ಪಷ್ಟವಾಗಿ ವೀಕ್ಷಿಸಬಲ್ಲ ಈ ಉಪಕರಣವು, ದೂರದರ್ಶಕ ತಂತ್ರಜ್ಞಾನವನ್ನು ಸಾಮಾನ್ಯರಿಗೆ ಕೈಗೆಟುಕುವಂತೆ ಮಾಡಿದೆ. ಈ ಅನನ್ಯ ಆವಿಷ್ಕಾರಕ್ಕಾಗಿ ಅವರಿಗೆ 'ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್' ಪ್ರಶಸ್ತಿ ಲಭಿಸಿದೆ.

ಕರಾವಳಿಯ ಸಾಧಕನಿಗೆ 'ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್' ಗರಿ: ಅಗ್ಗದ ಬೆಲೆಯಲ್ಲಿ 20 ಕಿ.ಮೀ ದೂರ ವೀಕ್ಷಿಸುವ ಬೈನಾಕ್ಯುಲರ್ ಆವಿಷ್ಕರಿಸಿದ ಉಡುಪಿಯ ಆರ್. ಮನೋಹರ್
ಉಡುಪಿ ಬೈನಾಕ್ಯುಲರ್
ಪ್ರಜ್ವಲ್ ಅಮೀನ್​, ಉಡುಪಿ
| Edited By: |

Updated on: Sep 21, 2026 | 4:54 PM

Share

ಉಡುಪಿ, ಸೆ.21: ದೂರದಲ್ಲಿರುವ ವಸ್ತುಗಳನ್ನು ಅತ್ಯಂತ ಸ್ಪಷ್ಟವಾಗಿ ವೀಕ್ಷಿಸಲು ನೆರವಾಗುವ ಅತ್ಯಾಧುನಿಕ ಬೈನಾಕ್ಯುಲರ್‌ಗಳನ್ನು (Binoculars) ಅಗ್ಗದ ವೆಚ್ಚದಲ್ಲಿ ತಯಾರಿಸುವ ಮೂಲಕ ಉಡುಪಿಯ ಸಂಶೋಧಕ ಆರ್. ಮನೋಹರ್ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಕನಿಷ್ಠ ವೆಚ್ಚದಲ್ಲಿ ಅತ್ಯಂತ ಶಕ್ತಿಶಾಲಿ ಬೈನಾಕ್ಯುಲರ್‌ಗಳನ್ನು ಆವಿಷ್ಕರಿಸಿದ ಅವರ ಅಪರೂಪದ ಸಾಧನೆಗೆ ಇದೀಗ ಪ್ರತಿಷ್ಠಿತ ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್’ (Golden Book of World Records) ಪ್ರಶಸ್ತಿಯ ಗೌರವ ಲಭಿಸಿದೆ.

ಏನಿದು ಆವಿಷ್ಕಾರ? ಇದರ ವಿಶೇಷತೆಗಳೇನು?:

ಸಾಮಾನ್ಯವಾಗಿ ಅತ್ಯಧಿಕ ಸಾಮರ್ಥ್ಯ ಹೊಂದಿರುವ ದೂರದರ್ಶಕ ಅಥವಾ ಬೈನಾಕ್ಯುಲರ್‌ಗಳು ಅತ್ಯಂತ ದುಬಾರಿಯಾಗಿರುತ್ತವೆ. ಆದರೆ ಈ ವೆಚ್ಚಕ್ಕೆ ಪರ್ಯಾಯವಾಗಿ ಸಾಮಾನ್ಯರಿಗೂ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಸತತ ಪ್ರಯತ್ನ ನಡೆಸಿದ ಆರ್. ಮನೋಹರ್, 200X ಹಾಗೂ 240X ಸಾಮರ್ಥ್ಯದ ಎರಡು ಬೃಹತ್ ಹಾಗೂ ಶಕ್ತಿಶಾಲಿ ಬೈನಾಕ್ಯುಲರ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ.

Udupi Binoculars (1)

ಈ ವಿಶೇಷ ಬೈನಾಕ್ಯುಲರ್‌ಗಳ ಮೂಲಕ ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ವಸ್ತು ಹಾಗೂ ಜಾಗಗಳನ್ನು ಅತ್ಯಂತ ಸ್ಪಷ್ಟವಾಗಿ ಎರಡು ಕಣ್ಣುಗಳಿಂದ ನೋಡಬಹುದಾಗಿದೆ. ಬೈನಾಕ್ಯುಲರ್ ಮಾದರಿಯಲ್ಲೇ ರೂಪಿತಗೊಂಡಿದ್ದರೂ, ಇದು ದೂರದರ್ಶಕದಂತಹ (Telescope) ಸುಧಾರಿತ ತಂತ್ರಜ್ಞಾನ ವ್ಯವಸ್ಥೆಯನ್ನು ಹೊಂದಿದೆ. ಅತ್ಯಂತ ಅಗ್ಗದ ವೆಚ್ಚದಲ್ಲಿ 200X ಹಾಗೂ 240X ತಂತ್ರಜ್ಞಾನದ ಬೈನಾಕ್ಯುಲರ್ ಸಿದ್ಧಪಡಿಸಿರುವುದು ಈ ಆವಿಷ್ಕಾರದ ಮುಖ್ಯ ವೈಶಿಷ್ಟ್ಯವಾಗಿದೆ.

ಇದನ್ನೂ ಓದಿ: ಬ್ರಿಕ್ಸ್‌ ಶೃಂಗಸಭೆಯಲ್ಲಿ ಜಾಗತಿಕ ನಾಯಕರನ್ನು ಸೆಳೆದ ಕರ್ನಾಟಕದ ಬೇಳೆ ಸಾರು!

ಉಡುಪಿಯಲ್ಲಿ ಪ್ರಶಸ್ತಿ ಪ್ರದಾನ:

ಉಡುಪಿಯ ಕಿದಿಯೂರು ಹೋಟೆಲ್‌ನಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ಏಷ್ಯಾ ವಿಭಾಗದ ಮುಖ್ಯಸ್ಥರು ಭಾಗವಹಿಸಿ ಆರ್. ಮನೋಹರ್ ಅವರಿಗೆ ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ಮತ್ತು ಪ್ರಮಾಣಪತ್ರವನ್ನು ಪ್ರದಾನ ಮಾಡಿದರು. ಈ ಆವಿಷ್ಕಾರದ ಅಧಿಕೃತ ಪ್ರಮಾಣಪತ್ರವು ಸೆಪ್ಟೆಂಬರ್ ಅಂತ್ಯದ ವೇಳೆಗೆ ಅಧಿಕೃತವಾಗಿ ಅವರಿಗೆ ಕೈಸೇರಲಿದೆ.

ಉಡುಪಿಯ ಸ್ಥಳೀಯ ನಿವಾಸಿ ಗಣೇಶ್‌ ರಾಜ್‌ ಸೇರಿದಂತೆ ಕರಾವಳಿಯ ಪ್ರಮುಖರು ಹಾಗೂ ಸಾರ್ವಜನಿಕರು ಮನೋಹರ್ ಅವರ ಈ ವಿನೂತನ ಸಂಶೋಧನೆ ಹಾಗೂ ವಿಶ್ವ ದಾಖಲೆಯ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us