ದೆಹಲಿ ರಕ್ಷಣೆಗೆ ‘ಸುದರ್ಶನ ಚಕ್ರ’; ಐಎಡಿಎಫ್​ಎಸ್ ಖರೀದಿಗೆ ಸರ್ಕಾರ ಅನುಮೋದನೆ

Govt buying Rs 5,181 crore worth Integrated Air Defence Weapon System: ದೆಹಲಿ ಎನ್​ಸಿಆರ್ ಪ್ರದೇಶವನ್ನು ವಾಯು ದಾಳಿಗಳಿಂದ ರಕ್ಷಿಸಲು ಸರ್ಕಾರ ಇಂಟಿಗ್ರೇಟೆಡ್ ಏರ್ ಡಿಫೆನ್ಸ್ ವೆಪನ್ ಸಿಸ್ಟಂ ಖರೀದಿಸಲಿದೆ. 2035ರ ಮಿಷನ್ ಸುದರ್ಶನ ಚಕ್ರದ ಗುರಿ ಮುಟ್ಟುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆಯಾಗಿದೆ. ಡಿಆರ್​ಡಿಒ ಅಭಿವೃದ್ದಿಪಡಿಸಿರುವ ಐಎಡಿಎಫ್​ಡಬ್ಲ್ಯುಎಸ್ ಅನ್ನು 5,181 ಕೋಟಿ ರೂಗೆ ಸರ್ಕಾರ ಖರೀದಿಸುತ್ತಿದೆ.

ದೆಹಲಿ ರಕ್ಷಣೆಗೆ ‘ಸುದರ್ಶನ ಚಕ್ರ’; ಐಎಡಿಎಫ್​ಎಸ್ ಖರೀದಿಗೆ ಸರ್ಕಾರ ಅನುಮೋದನೆ
ಸಾಂದರ್ಭಿಕ ಚಿತ್ರ

Updated on: Dec 30, 2025 | 3:14 PM

ನವದೆಹಲಿ, ಡಿಸೆಂಬರ್ 30: ಮಿಲಿಟರಿ ನೆಲೆಗಳು, ಸಂಸತ್ ಭವನ, ರಾಷ್ಟ್ರಪತಿ ಭವನ ಇತ್ಯಾದಿ ಬಹಳ ಸೂಕ್ಷ್ಮವೆಂದು ಪರಿಗಣಿಸಲಾದ ಹಾಗೂ ಮೇಲ್ಭಾಗದಲ್ಲಿ ಹಾರಾಟ ನಿಷೇಧ ಮಾಡದ ಸ್ಥಳಗಳ ರಕ್ಷಣೆಗಾಗಿ ಭಾರತ ಸರ್ಕಾರ ‘ಸುದರ್ಶನ ಚಕ್ರ’ವನ್ನು ಅಳವಡಿಸುತ್ತಿದೆ. ಡಿಆರ್​ಡಿಒ ಅಭಿವೃದ್ಧಿಪಡಿಸಿರುವ ಏಕೀಕೃತ ವಾಯು ರಕ್ಷಣಾ ಶಸ್ತ್ರ ವ್ಯವಸ್ಥೆಯನ್ನು (ಐಎಡಿಡಬ್ಲ್ಯುಎಸ್) 5,181 ಕೋಟಿ ರೂ ಖರೀದಿಸಲು ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಈ ಮಲ್ಟಿ ಲೇಯರ್ ವೆಪನ್ ಸಿಸ್ಟಂ ಅನ್ನು ದೆಹಲಿ ಎನ್​ಸಿಆರ್ ಪ್ರದೇಶದಲ್ಲಿರುವ ವಿಐಪಿ-89 ವಲಯದ ಭದ್ರತೆಗೆ ನಿಯೋಜಿಸಲಾಗುತ್ತದೆ ಎಂದು ಖಾಸಗಿ ವಾಹಿನಿಯೊಂದು ವರದಿ ಮಾಡಿದೆ.

ಏಕೀಕೃತ ವಾಯು ರಕ್ಷಣಾ ಶಸ್ತ್ರ ವ್ಯವಸ್ಥೆಯನ್ನು ಡಿಆರ್​ಡಿಒ ಅಭಿವೃದ್ಧಿಪಡಿಸಿದೆ. ಏರ್ ಫೋರ್ಸ್ ಕೇಂದ್ರಿತ ಸಿಸ್ಟಂ ಇದಾಗಿದ್ದು, ಒಂದು ಸ್ಥಳಕ್ಕೆ ಬಹು ಎಳೆಗಳಲ್ಲಿ ರಕ್ಷಣೆ ಕೊಡಬಲ್ಲುದು. ದೆಹಲಿಯ ವಿಐಪಿ-89 ಝೋನ್ ರಕ್ಷಣೆಗೆಂದು ಸದ್ಯ ಒಂದು ಸಿಸ್​ಟಂ ಅನ್ನು ತರಿಸಲಾಗುತ್ತಿದೆ. ಇದು ದೆಹಲಿಯ ಸುತ್ತಮುತ್ತಲ 30 ಕಿಮೀ ಶ್ರೇಣಿವರೆಗಿನ ಪ್ರದೇಶಕ್ಕೆ ರಕ್ಷಣೆ ಕೊಡುತ್ತದೆ. ಆಕಾಶದಿಂದ ಡ್ರೋನ್ ಆಗಲೀ, ಮಿಸೈಲ್ ಆಗಲಿ ಯಾವುದೇ ದಾಳಿಯಾದರೂ ಇದು ತಡೆಯಬಲ್ಲುದು. ಒಂದು ರೀತಿಯಲ್ಲಿ ಸುದರ್ಶನ ಚಕ್ರದ ರೀತಿಯಲ್ಲಿ ರಕ್ಷಣೆ ಕೊಡುತ್ತದೆ.

ಇದನ್ನೂ ಓದಿ: ಬದಲಾಗುತ್ತಿದೆ ಭಾರತ; 2025ರಲ್ಲಿ ಮಹಾಪರಿವರ್ತನೆ; ಜಿಎಸ್​ಟಿಯಿಂದ ಹಿಡಿದು ಜಿ ರಾಮ್ ಜಿವರೆಗೆ ಹಲವು ಆರ್ಥಿಕ ಸುಧಾರಣೆಗಳು

ಈ ವರ್ಷದ ಸ್ವಾತಂತ್ರ್ಯೋತ್ಸವ ಭಾಷಣದ ವೇಳೆ (2025ರ ಆಗಸ್ಟ್ 15) ಪ್ರಧಾನಿ ನರೇಂದ್ರ ಮೋದಿ ಅವರು ಮಿಷನ್ ಸುದರ್ಶನ ಚಕ್ರ ಘೋಷಿಸಿದ್ದರು. 2035ರ ವೇಳೆಗೆ ದೇಶದ ಪ್ರಮುಖ ಸ್ಥಳಗಳು ಮತ್ತು ನಗರಗಳಿಗೆ ಸಮಗ್ರ ಭದ್ರತಾ ವ್ಯವಸ್ಥೆ ನಿರ್ಮಿಸುವುದು ಈ ಮಿಷನ್​ನ ಗುರಿ. ಇದರ ಭಾಗವಾಗಿ ಈಗ ಒಂದು ಇಂಟಿಗ್ರೇಟೆಡ್ ಏರ್ ಡಿಫೆನ್ಸ್ ವೆಪನ್ ಸಿಸ್ಟಂ ಅನ್ನು ಖರೀದಿಸಿ ದೆಹಲಿಯ ರಕ್ಷಣೆಗೆ ನಿಯೋಜಿಸಲಾಗುತ್ತಿದೆ.

ಆಪರೇಷನ್ ಸಿಂದೂರ್ ವೇಳೆ ಪಾಕಿಸ್ತಾನ ಭಾರತದ ಮಿಲಿಟರಿ ನೆಲೆಗಳು ಮತ್ತು ಮಂದಿರ ಸ್ಥಳಗಳನ್ನು ಗುರಿ ಮಾಡಿ ಕ್ಷಿಪಣಿ, ಡ್ರೋನ್​ಗಳಿಂದ ದಾಳಿ ಮಾಡಿತ್ತು. ಆಗ ಈ ಸ್ಥಳಗಳ ರಕ್ಷಣೆಗೆ ನೆರವಾಗಿದ್ದೇ ಭಾರತದ ಏರ್ ಡಿಫೆನ್ಸ್ ಸಿಸ್ಟಂಗಳು.

ಇದನ್ನೂ ಓದಿ: ಭಾರತದ ತಂತ್ರಜ್ಞಾನ 2025: AI, ಸೆಮಿಕಂಡಕ್ಟರ್, ಸ್ವಾವಲಂಬನೆ & ಜಾಗತಿಕ ನಾಯಕತ್ವ

ಪಾಕಿಸ್ತಾನದಿಂದ ಹಾರಿಬಂದ ಹೆಚ್ಚಿನ ಡ್ರೋನ್ ಮತ್ತು ಕ್ಷಿಪಣಿಗಳನ್ನು ಈ ಡಿಫೆನ್ಸ್ ಸಿಸ್ಟಂಗಳ ಯಶಸ್ವಿಯಾಗಿ ಹೊಡೆದುರುಳಿಸಿದ್ದವು. ಈಗ ಭಾರತ ಸಂಪೂರ್ಣ ಸ್ವಂತವಾಗಿ ಬಹು ಎಳೆಗಳ ಡಿಫೆನ್ಸ್ ಸಿಸ್ಟಂ ಅನ್ನು ಅಭಿವೃದ್ಧಿಪಡಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ