Gold Rate Today Bangalore: 100 ಗ್ರಾಮ್ ಬೆಳ್ಳಿ ಬೆಲೆ 1,800 ರೂ ಇಳಿಕೆ; ಚಿನ್ನವೂ ಅಗ್ಗ
Bullion Market 2025 December 30th: ಚಿನ್ನ, ಬೆಳ್ಳಿ ಬೆಲೆ ಇಂದು ಮಂಗಳವಾರ ತಗ್ಗಿದೆ. ಬೆಳ್ಳಿ ಬೆಲೆ ಗ್ರಾಮ್ಗೆ ಬರೋಬ್ಬರಿ 18 ರೂ ಕಡಿಮೆ ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ 12,990 ರೂನಿಂದ 12,485 ರೂಗೆ ಇಳಿದಿದೆ. 24 ಕ್ಯಾರಟ್ ಚಿನ್ನದ ಬೆಲೆ 13,620 ರೂಗೆ ಇಳಿದಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ 258 ರೂನಿಂದ 240 ರೂಗೆ ಇಳಿದಿದೆ. ಚೆನ್ನೈ ಮೊದಲಾದ ಕೆಲವೆಡೆ ಬೆಲೆ 258 ರೂ ಆಗಿದೆ.

ಬೆಂಗಳೂರು, ಡಿಸೆಂಬರ್ 30: ಚಿನ್ನದ ಬೆಲೆ ಸತತ ಎರಡನೇ ಬಾರಿ ಇಳಿಕೆಯಾಗಿದೆ. ಭರ್ಜರಿ ಓಡುತ್ತಿದ್ದ ಬೆಳ್ಳಿ ಬೆಲೆ ಝರ್ರನೆ ಜಾರಿದೆ. 100 ಗ್ರಾಮ್ ಬೆಳ್ಳಿಯ ಬೆಲೆ ಒಮ್ಮೆಗೇ 1,800 ರೂ ಕಡಿಮೆಗೊಂಡು 24,000 ರೂ ಮುಟ್ಟಿದೆ. ಚಿನ್ನದ ಬೆಲೆಯೂ (Gold Rate) ಭರ್ಜರಿ ಇಳಿಕೆ ಕಂಡಿದೆ. ಭಾರತದಲ್ಲಿ ಮಾತ್ರವಲ್ಲ, ಹೆಚ್ಚಿನ ದೇಶಗಳಲ್ಲೂ ಇದರ ಬೆಲೆ ಗಣನೀಯವಾಗಿ ತಗ್ಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,24,850 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,36,200 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 24,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,24,850 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 24,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 25,800 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಡಿಸೆಂಬರ್ 30ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,620 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,485 ರೂ
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 10,193 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 240 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,620 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,485 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 240 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 12,485 ರೂ
- ಚೆನ್ನೈ: 12,600 ರೂ
- ಮುಂಬೈ: 12,485 ರೂ
- ದೆಹಲಿ: 12,500 ರೂ
- ಕೋಲ್ಕತಾ: 12,485 ರೂ
- ಕೇರಳ: 12,485 ರೂ
- ಅಹ್ಮದಾಬಾದ್: 12,490 ರೂ
- ಜೈಪುರ್: 12,500 ರೂ
- ಲಕ್ನೋ: 12,500 ರೂ
- ಭುವನೇಶ್ವರ್: 12,485 ರೂ
ಇದನ್ನೂ ಓದಿ: 27 ವರ್ಷಗಳಲ್ಲಿ ಅಮೆರಿಕದ ಈಕ್ವಿಟಿ ಹಾಗೂ ಚಿನ್ನವನ್ನೂ ಮೀರಿಸಿದ್ಯಾ ಭಾರತದ ನಿಫ್ಟಿ?; ಹೇಗೆ ಹೂಡಿಕೆ ಮಾಡುವುದು ನಿಫ್ಟಿ50ಯಲ್ಲಿ?
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಮಲೇಷ್ಯಾ: 560 ರಿಂಗಿಟ್ (12,423 ರುಪಾಯಿ)
- ದುಬೈ: 482.75 ಡಿರಾಮ್ (11,824 ರುಪಾಯಿ)
- ಅಮೆರಿಕ: 135 ಡಾಲರ್ (12,144 ರುಪಾಯಿ)
- ಸಿಂಗಾಪುರ: 174.90 ಸಿಂಗಾಪುರ್ ಡಾಲರ್ (12,249 ರುಪಾಯಿ)
- ಕತಾರ್: 486.50 ಕತಾರಿ ರಿಯಾಲ್ (12,006 ರೂ)
- ಸೌದಿ ಅರೇಬಿಯಾ: 495 ಸೌದಿ ರಿಯಾಲ್ (11,872 ರುಪಾಯಿ)
- ಓಮನ್: 51.45 ಒಮಾನಿ ರಿಯಾಲ್ (12,022 ರುಪಾಯಿ)
- ಕುವೇತ್: 39.30 ಕುವೇತಿ ದಿನಾರ್ (11,486 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 240 ರೂ
- ಚೆನ್ನೈ: 258 ರೂ
- ಮುಂಬೈ: 240 ರೂ
- ದೆಹಲಿ: 240 ರೂ
- ಕೋಲ್ಕತಾ: 240 ರೂ
- ಕೇರಳ: 258 ರೂ
- ಅಹ್ಮದಾಬಾದ್: 240 ರೂ
- ಜೈಪುರ್: 240 ರೂ
- ಲಕ್ನೋ: 240 ರೂ
- ಭುವನೇಶ್ವರ್: 258 ರೂ
- ಪುಣೆ: 240
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




