AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಣ್ಣ ಸಂಸ್ಥೆಗಳಿಗೆ ಸರಳೀಕೃತ ಜಿಎಸ್​ಟಿ ನೊಂದಣಿ; ಟ್ರೈನಿಂಗ್ ಪಾರ್ಟರ್ಸ್​ಗೆ ವಿನಾಯಿತಿ ಸೇರಿದಂತೆ ವಿವಿಧ ಕ್ರಮಗಳ ಘೋಷಣೆ

GST council meeting decisions: 55ನೇ ಜಿಎಸ್​ಟಿ ಮಂಡಳಿ ಸಭೆಯಲ್ಲಿ ಸರಳೀಕೃತ ಜಿಎಸ್​ಟಿ ನೊಂದಣಿ ಪ್ರಕ್ರಿಯೆ ಸೇರಿದಂತೆ ಕೆಲ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಸ್ಕಿಲ್ಡ್ ಟ್ರೈನಿಂಗ್ ಪಾರ್ಟ್ನರ್ಸ್​ಗೆ ಜಿಎಸ್​ಟಿಯಿಂದ ವಿನಾಯಿತಿ; ಹೊಸ ಇವಿಗಳಿಗೆ ಜಿಎಸ್​ಟಿ ಶೇ. 5ಕ್ಕೆ ಇಳಿಕೆಯ ಕ್ರಮವೂ ಇದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಭೆ ಬಳಿಕ ಈ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.

ಸಣ್ಣ ಸಂಸ್ಥೆಗಳಿಗೆ ಸರಳೀಕೃತ ಜಿಎಸ್​ಟಿ ನೊಂದಣಿ; ಟ್ರೈನಿಂಗ್ ಪಾರ್ಟರ್ಸ್​ಗೆ ವಿನಾಯಿತಿ ಸೇರಿದಂತೆ ವಿವಿಧ ಕ್ರಮಗಳ ಘೋಷಣೆ
ಜಿಎಸ್​ಟಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 22, 2024 | 12:53 PM

Share

ನವದೆಹಲಿ, ಡಿಸೆಂಬರ್ 22: ಜಿಎಸ್​ಟಿ ಕೌನ್ಸಿಲ್​ನಲ್ಲಿ ಕೆಲ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದ್ದು, ಅವುಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಸಣ್ಣ ಉದ್ದಿಮೆಗಳಿಗೆ ಜಿಎಸ್​ಟಿ ರಿಜಿಸ್ಟ್ರೇಶನ್​ಗೆ ಇದ್ದ ಪ್ರಕ್ರಿಯೆಯನ್ನು ಸರಳಗೊಳಿಸುವುದು, ಟ್ರೈನಿಂಗ್ ಪಾರ್ಟ್ನರ್ಸ್​​ಗೆ ತೆರಿಗೆ ವಿನಾಯಿತಿ, ಇವಿಗಳಿಗೆ ತೆರಿಗೆ ಇಳಿಕೆ ಸೇರಿದಂತೆ ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ಧರಿಸಲಾಗಿದೆ.

ಇತ್ತೀಚೆಗೆ ನಡೆದ 55ನೇ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ಕಾನ್ಸೆಪ್ಟ್ ನೋಟ್​ಗೆ ಅನುಮೋದನೆ ಸಿಕ್ಕಿದೆ. ಜಿಎಸ್​ಟಿ ನೊಂದಣಿ ಪ್ರಕ್ರಿಯೆಯನ್ನು ಸರಳಗೊಳಿಸುವ ನಿಟ್ಟಿನಲ್ಲಿ ಈ ಕಾನ್ಸೆಪ್ಟ್ ನೋಟ್ ಅನುಕೂಲವಾಗಲಿದೆ.

ಮತ್ತೊಂದು ಪ್ರಮುಖ ನಿರ್ಧಾರದಲ್ಲಿ, ಕೌಶಲ್ಯವಂತ ಟ್ರೈನಿಂಗ್ ಪಾರ್ಟ್ನರ್ಸ್​ಗೆ ಜಿಎಸ್​ಟಿಯಿಂದ ವಿನಾಯಿತಿ ನೀಡಲಾಗುತ್ತಿರುವುದನ್ನು ಹಣಕಾಸು ಸಚಿವೆ ತಿಳಿಸಿದ್ದಾರೆ. ಈ ವಿನಾಯಿತಿ ಕ್ರಮವನ್ನು ಅಧಿಕೃತವಾಗಿ ಪ್ರಕಟಿಸಲು ಅಧಿಸೂಚನೆ ಹೊರಡಿಸಲಾಗುವುದು ಎಂದೂ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಇದನ್ನೂ ಓದಿ: ಎಷ್ಟು ಥರದ ಇಟಿಎಫ್​ಗಳಿವೆ? ನಿಮಗೆ ಸೂಕ್ತವೆನಿಸಿವ ಫಂಡ್​ಗಳನ್ನು ಆಯ್ದುಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ

ಕಾಂಪೆನ್ಸೇಶನ್ ಸೆಸ್ ಬಗ್ಗೆ ನಿರ್ಧಾರವಾಗಿಲ್ಲ….

ಜಿಎಸ್​ಟಿ ಸಭೆಯಲ್ಲಿ ಕಾಂಪೆನ್ಸೇಶನ್ ಸೆಸ್ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆ ಇತ್ತು. ಈ ಬಗ್ಗೆ ಮಾತನಾಡಿದ ಸಚಿವರು, ಈ ಸೆಸ್ ವಿಚಾರ ಇತ್ಯರ್ಥಪಡಿಸಲು ಗ್ರೂಪ್ ಆಫ್ ಮಿನಿಸ್ಟರ್ಸ್ ತಂಡಕ್ಕೆ ಯಾವುದೆ ಕಾಲಮಿತಿ ನಿಗದಿ ಮಾಡಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಅಂದರೆ ಕಾಂಪೆನ್ಸೇಶನ್ ಸೆಸ್​ನಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆ ಮಾಡಲಾಗುವುದಿಲ್ಲ.

ಎಸ್​ಯುವಿಗಳಿಗೆ ಹಿಮ್ಮುಖವಾಗಿ ಕಾಂಪೆನ್ಸೇಶನ್ ಸೆಸ್ ಅನ್ನು ಹಾಕಬೇಕೋ ಬೇಡವೋ ಎಂಬ ಗೊಂದಲ ಇದೆ. ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಸುಂಕ ಮಂಡಳಿ (ಸಿಬಿಐಸಿ) ಪ್ರಕಾರ ಹಿಮ್ಮುಖವಾಗಿ ಸೆಸ್ ವಿಧಿಸುವುದರ ಬದಲು ಘೋಷಣೆ ದಿನಾಂಕದಿಂದ ಸೆಸ್ ಜಾರಿಗೆ ಬರಬಹುದು ಎನ್ನಲಾಗಿದೆ.

ಇವಿಗಳಿಗೆ ಶೇ. 5ರಷ್ಟು ಜಿಎಸ್​ಟಿ

ಹೊಸ ಎಲೆಕ್ಟ್ರಿಕ್ ವಾಹನಗಳಿಗೆ ಶೇ. 5ರಷ್ಟು ಜಿಎಸ್​ಟಿ ಹಾಕಲು ನಿರ್ಧರಿಸುತ್ತಿರುವುದಾಗಿ ಸಚಿವೆ ತಿಳಿಸಿದ್ದಾರೆ. ಆದರೆ, ವ್ಯಕ್ತಿಯಿಂದ ವ್ಯಕ್ತಿ ನಡುವೆ ಮಾರಾಟವಾಗುವ ಇವಿಗಳಿಗೆ (ಸೆಕೆಂಡ್ ಹ್ಯಾಡ್ ವಾಹನ) ಯಾವುದೇ ಜಿಎಸ್​ಟಿ ಇರುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: 2024ರಲ್ಲಿ ಅತಿಹೆಚ್ಚು ರೆಮಿಟೆನ್ಸ್ ಪಡೆದ ದೇಶಗಳಲ್ಲಿ ಭಾರತ ಮೊದಲು; 129 ಬಿಲಿಯನ್ ಡಾಲರ್ ರೆಮಿಟೆನ್ಸ್ ಹರಿವು

ಇದೇ ವಿಚಾರದಲ್ಲಿ ಮತ್ತೊಂದು ಸಂಗತಿ ಎಂದರೆ, ಸೆಕೆಂಡ್ ಹ್ಯಾಂಡ್ ಇವಿಗಳನ್ನು ಕಂಪನಿಗಳು ಖರೀದಿಸಿ ನಂತರ ಮಾರಿದರೆ ಅಂಥ ವಾಹನಗಳ ಲಾಭದ ಹಣಕ್ಕೆ ಶೇ. 18ರಷ್ಟು ಜಿಎಸ್​ಟಿ ಇರುತ್ತದೆ. ಅಥವಾ ಹಳೆಯ ಇವಿಗಳನ್ನು ಖರೀದಿಸಿ ಅದನ್ನು ಮಾರ್ಪಡಿಸಿ ಮಾರಿದಾಗಲೂ ಇದೇ ರೀತಿ ಲಾಭದ ಮೇಲೆ ಶೇ. 18ರಷ್ಟು ಜಿಎಸ್​ಟಿ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!