53ನೇ ಜಿಎಸ್​ಟಿ ಕೌನ್ಸಿಲ್ ಸಭೆ ಮುಖ್ಯಾಂಶಗಳು; ಬದಲಾದ ತೆರಿಗೆಗಳ ಪಟ್ಟಿ

53rd GST Council Meeting highlights: ಜಿಎಸ್​ಟಿ ಕೌನ್ಸಿಲ್ ಸಭೆ ಜೂನ್ 22ರಂದು ನಡೆಯಿತು. ಕೆಲ ಸರಕು ಮತ್ತು ಸೇವೆಗಳಿಗೆ ಜಿಎಸ್​ಟಿ ವಿನಾಯಿತಿ ಘೋಷಿಸಲಾಗಿದೆ. ಸೋಲಾರ್ ಕುಕರ್, ಪೇಪರ್ ಕಾರ್ಟನ್ ಬಾಕ್ಸ್, ಸ್ಪ್ರಿಂಕ್ಲರ್​ಗಳ ಜಿಎಸ್​ಟಿ ದರವನ್ನು ಇಳಿಸಲಾಗಿದೆ. ಜಿಎಸ್​ಟಿ ರಿಜಿಸ್ಟ್ರೇಶನ್​ನಲ್ಲಿ ವಂಚನೆ ತಡೆಯಲು ನೊಂದಣಿ ವೇಳೆ ಬಯೋಮೆಟ್ರಿಕ್ ಆಧಾರ್ ದೃಢೀಕರಣ ಅಗತ್ಯಪಡಿಸಲಾಗಿದೆ.

53ನೇ ಜಿಎಸ್​ಟಿ ಕೌನ್ಸಿಲ್ ಸಭೆ ಮುಖ್ಯಾಂಶಗಳು; ಬದಲಾದ ತೆರಿಗೆಗಳ ಪಟ್ಟಿ
ಜಿಎಸ್​ಟಿ
Follow us
|

Updated on: Jun 24, 2024 | 1:02 PM

ನವದೆಹಲಿ, ಜೂನ್ 24: ಇದೇ ಶುಕ್ರವಾರ ನಡೆದ 53ನೇ ಜಿಎಸ್​ಟಿ ಮಂಡಳಿ ಸಭೆಯಲ್ಲಿ (GST council meeting) ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಜಿಎಸ್​ಟಿ ದರ ಪರಿಷ್ಕರಣೆ, ವಿನಾಯಿತಿ, ರಿಯಾಯಿತಿ ಇತ್ಯಾದಿ ಕ್ರಮಗಳನ್ನು ಈ ಸಭೆಯಲ್ಲಿ ತೆಗೆದುಕೊಳ್ಳಲಾಯಿತು. ಸೋಲಾರ್ ಕುಕರ್, ಕಾರ್ಟನ್ ಬಾಕ್ಸ್, ಮಿಲ್ಕ್ ಕ್ಯಾನ್ ಇತ್ಯಾದಿಗಳಿಗೆ ಜಿಎಸ್​ಟಿ ಪರಿಷ್ಕರಣೆ ಮಾಡಲಾಗಿದೆ. ಕೆಲ ಆಮದುಗಳಿಗೆ ಐಜಿಎಸ್​ಟಿಯಿಂದ ವಿನಾಯಿತಿ ಕೊಡಲಾಗಿದೆ. ಜಿಎಸ್​ಟಿ ಸಭೆಯಲ್ಲಿ ತೆಗೆದುಕೊಳ್ಳಲಾದ ಕೆಲ ಮಹತ್ವದ ನಿರ್ಧಾರಗಳ ಪಟ್ಟಿ ಇಲ್ಲಿದೆ…

ಜಿಎಸ್​ಟಿ ದರ ಪರಿಷ್ಕರಣೆಯಾಗಿರುವವು

  • ವಿಮಾನ ಬಿಡಿಭಾಗಗಳು, ಪರೀಕ್ಷಾ ಉಪಕರಣ, ಟೂಲ್ಸ್ ಇತ್ಯಾದಿಗಳ ಆಮದಿಗೆ ಶೇ. 5ರಷ್ಟು ಸಮಾನ ಐಜಿಎಸ್​ಟಿ ವಿಧಿಸಲಾಗುವುದು
  • ಉಕ್ಕು, ಕಬ್ಬಿಣ ಅಥವಾ ಅಲೂಮಿನಿಯಮ್​ನ ಯಾವುದೇ ಹಾಲಿನ ಕ್ಯಾನ್​ಗಳಿಗೆ ಶೇ. 12ರಷ್ಟು ಜಿಎಸ್​ಟಿ ವಿಧಿಸಲಾಗುವುದು.
  • ಪೇಪರ್ ಕಾರ್ಟನ್ ಬಾಕ್ಸ್ ಮತ್ತು ಕೇಸ್​ಗಳ ಮೇಲಿನ ಜಿಎಸ್​ಟಿ ಶೇ. 18ರಿಂದ ಶೇ. 12ಕ್ಕೆ ಇಳಿಕೆ.
  • ಎಲ್ಲಾ ರೀತಿಯ ಸೋಲಾರ್ ಕುಕರ್​ಗಳಿಗೆ ಶೇ. 12ರಷ್ಟು ಜಿಎಸ್​ಟಿ
  • ಪೌಲ್ಟ್ರಿ ಯಂತ್ರೋಪಕರಣದಂತೆ ಅದರ ಬಿಡಿಭಾಗಗಳಿಗೂ ಶೇ. 12ರಷ್ಟು ಜಿಎಸ್​ಟಿ.
  • ಫೈರ್ ವಾಟರ್ ಸ್ಪ್ರಿಂಕ್ಲರ್ ಸೇರಿದಂತೆ ಎಲ್ಲಾ ರೀತಿಯ ಸ್ಪ್ರಿಂಕ್ಲರ್​ಗಳಿಗೆ ಶೇ. 12ರಷ್ಟು ಜಿಎಸ್​ಟಿ.

ಇದನ್ನೂ ಓದಿ: ಕ್ವಾಂಟ್ ಮ್ಯೂಚುವಲ್ ಫಂಡ್ ಮೇಲೆ ಫ್ರಂಟ್ ರನಿಂಗ್ ಕಪ್ಪು ಚುಕ್ಕೆ; ಸೆಬಿಯಿಂದ ತನಿಖೆ; ಏನಿದು ಪ್ರಕರಣ?

ತೆರಿಗೆ ವಿನಾಯಿತಿ ಇರುವ ಟ್ರೇಡ್ ಮತ್ತು ಸರ್ವಿಸಸ್

  • ರಕ್ಷಣಾ ಕ್ಷೇತ್ರದ ಕೆಲ ನಿರ್ದಿಷ್ಟ ವಸ್ತುಗಳ ಆಮದು ಮೇಲೆ ಐಜಿಎಸ್​ಟಿಯಿಂದ ವಿನಾಯಿತಿ ಇದೆ. ಇದನ್ನು ಇನ್ನೂ ಐದು ವರ್ಷ ವಿಸ್ತರಿಸಲಾಗಿದೆ.
  • RAMA ಯೋಜನೆ ಅಡಿಯಲ್ಲಿ ರೀಸರ್ಚ್ ಉಪಕರಣಗಳ ಆಮದಿಗೆ ಐಜಿಎಸ್​ಟಿ ವಿನಾಯಿತಿ.
  • ಪ್ಲಾಟ್​ಫಾರ್ಮ್​ ಟಿಕೆಟ್ ಮಾರಾಟ, ಬ್ಯಾಟರಿ ಚಾಲಿತ ಕಾರ್ ಸರ್ವಿಸ್ ಸೇರಿದಂತೆ ಸಾರ್ವಜನಿಕರಿಗೆ ರೈಲ್ವೆಯಿಂದ ನೀಡಲಾಗುವ ಸರ್ವಿಸ್​ಗೆ ಜಿಎಸ್​ಟಿಯಿಂದ ವಿನಾಯಿತಿ ನೀಡಲಾಗುವುದು.
  • ಇನ್ಷೂರೆನ್ಸ್ ಕಂಪನಿಗಳ ಮಧ್ಯೆ ನಡೆಯುವ ಕೋ ಇನ್ಷೂರೆನ್ಸ್ ಪ್ರೀಮಿಯಮ್​ಗಳು ಮತ್ತು ರೀ-ಇನ್ಷೂರೆನ್ಸ್ ಕಮಿಷನ್​ನ ವಹಿವಾಟುಗಳಿಗೆ ಜಿಎಸ್​ಟಿ ಇರುವುದಿಲ್ಲ.

ಜಿಎಸ್​ಟಿ ಸಭೆಯಲ್ಲಿ ಇತರ ಕ್ರಮಗಳು

  • ಜಿಎಸ್​ಟಿ ರಿಜಿಸ್ಟ್ರೇಶನ್​ನಲ್ಲಿ ವಂಚನೆ ನಿಯಂತ್ರಿಸಲು ಬಯೋಮೆಟ್ರೆಕ್ ಆಧಾರಿತ ಆಧಾರ್ ದೃಢೀಕರಣ ಅಗತ್ಯ.
  • 2017-18ರಿಂದ 2019-20ರವರೆಗೆ ಇರುವ ಟ್ಯಾಕ್ಸ್ ಡಿಮ್ಯಾಂಡ್ ಮೊತ್ತವನ್ನು 2025ರ ಮಾರ್ಚ್ 31ರೊಳಗೆ ಪಾವತಿಸಿದರೆ ಬಡ್ಡಿ ಮತ್ತು ದಂಡದ ವಿನಾಯಿತಿ ಸಿಗುತ್ತದೆ.
  • ಮದ್ಯ ತಯಾರಿಕೆಯಲ್ಲಿ ಬಳಸಲಾಗುವ ಇಎನ್​ಎ ಆಲ್ಕೋಹಾಲ್ ಅನ್ನು ಜಿಎಸ್​ಟಿ ವ್ಯಾಪ್ತಿಯಿಂದ ಹೊರಗಿಡಲಾಗುವುದು.
  • ಎಲೆಕ್ಟ್ರಾನಿಕ್ ಕಾಮರ್ಸ್ ಆಪರೇಟರ್ಸ್​ಗೆ ವಿಧಿಸಲಾಗುವ ಟಿಸಿಎಸ್ ತೆರಿಗೆಯನ್ನು ಶೇ. 1ರಿಂದ ಶೇ. 0.5ಕ್ಕೆ ಇಳಿಸಲಾಗುವುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
‘ನಿಜ ಜೀವನದಲ್ಲಿ ಆ ರೀತಿ ಪಾತ್ರ ಆಗಬಾರದು’: ದರ್ಶನ್​ ಬಗ್ಗೆ ಹಂಸಲೇಖ ಮಾತು
‘ನಿಜ ಜೀವನದಲ್ಲಿ ಆ ರೀತಿ ಪಾತ್ರ ಆಗಬಾರದು’: ದರ್ಶನ್​ ಬಗ್ಗೆ ಹಂಸಲೇಖ ಮಾತು
‘ದರ್ಶನ್ ನೋಡಿದ್ರೆ ಧರ್ಮಸ್ಥಳ ಮಂಜುನಾಥ ಸ್ವಾಮಿ ನೋಡಿದಂತೆ’: ಅಭಿಮಾನಿ
‘ದರ್ಶನ್ ನೋಡಿದ್ರೆ ಧರ್ಮಸ್ಥಳ ಮಂಜುನಾಥ ಸ್ವಾಮಿ ನೋಡಿದಂತೆ’: ಅಭಿಮಾನಿ
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಆಗಾಗ ಸಿಎಂ ಸಿದ್ದರಾಮಯ್ಯರ ತಲೆ ತಿನ್ನುತ್ತಿರಬೇಕು: ಜಗ್ಗೇಶ್
ಆಗಾಗ ಸಿಎಂ ಸಿದ್ದರಾಮಯ್ಯರ ತಲೆ ತಿನ್ನುತ್ತಿರಬೇಕು: ಜಗ್ಗೇಶ್
ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ
ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್
ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ?
ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ?
ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು
ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು