GST day: ಜಿಎಸ್​ಟಿ ದಿನ, ಈ ತೆರಿಗೆ ಪದ್ಧತಿ ಹೇಗೆ, ಇತಿಹಾಸ ಏನು, ಇತ್ಯಾದಿ ವಿವರ

GST day in July 1st: ಗೂಡ್ಸ್ ಅಂಡ್ ಸರ್ವಿಸ್ ಟ್ಯಾಕ್ಸ್ ಭಾರತದಲ್ಲಿ ಜಾರಿಗೆ ಬಂದದ್ದು 2017ರ ಜುಲೈ 1ರಂದು. ಇವತ್ತಿಗೆ ಏಳು ವರ್ಷ ಮುಗಿದಿದೆ. 2018ರಿಂದ ಜುಲೈ 1ನೇ ತಾರೀಖನ್ನು ಜಿಎಸ್​ಟಿ ದಿನ ಎಂದು ಆಚರಿಸಲಾಗುತ್ತಿದೆ. ಜಿಎಸ್​ಟಿ ರುವ ಮುನ್ನ ವ್ಯಾಟ್ ಸೇರಿದಂತೆ ಹಲವು ರೀತಿಯ ತೆರಿಗೆಗಳು ಭಾರತದಲ್ಲಿ ಇದ್ದವು. ಅವೆಲ್ಲವನ್ನೂ ರದ್ದುಗೊಳಿಸಿ ಏಕ ರೀತಿಯ ಜಿಎಸ್​ಟಿ ತೆರಿಗೆ ಪದ್ಧತಿಯನ್ನು ತರಲಾಗಿದೆ.

GST day: ಜಿಎಸ್​ಟಿ ದಿನ, ಈ ತೆರಿಗೆ ಪದ್ಧತಿ ಹೇಗೆ, ಇತಿಹಾಸ ಏನು, ಇತ್ಯಾದಿ ವಿವರ
ಜಿಎಸ್​ಟಿ
Follow us
|

Updated on: Jul 01, 2024 | 11:13 AM

ಇಂದು ಜುಲೈ 1 ಜಿಎಸ್​ಟಿ ದಿನ. ಭಾರತದಲ್ಲಿ ಕಳೆದ ಆರು ವರ್ಷದಿಂದ ಇದನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಜಿಎಸ್​ಟಿ ಎಂದರೆ ಗೂಡ್ಸ್ ಅಂಡ್ ಸರ್ವಿಸಸ್ ಟ್ಯಾಕ್ಸ್. ಅಂದರೆ ಸರಕು ಮತ್ತು ಸೇವಾ ತೆರಿಗೆ. ಪರೋಕ್ಷ ತೆರಿಗೆ ವಿಧಾನಕ್ಕೆ (Indirect tax system) ಇದು ಸೇರುತ್ತದೆ. ಹಿಂದೆ ಅಸ್ತಿತ್ವದಲ್ಲಿದ್ದ ವಿವಿಧ ರೀತಿಯ ತೆರಿಗೆಗಳ ಬದಲು ಏಕ ರೀತಿಯ ಸರಳ ತೆರಿಗೆ ತೆರಿಗೆ ಪದ್ಧತಿಯಾಗಿದೆ ಜಿಎಸ್​ಟಿ. ವಿಶ್ವಾದ್ಯಂತ ಭಾರತವೂ ಸೇರಿದಂತೆ 150ಕ್ಕೂ ಹೆಚ್ಚು ದೇಶಗಳು ಜಿಎಸ್​ಟಿ ಹೊಂದಿವೆ. ಕೆಲ ದೇಶಗಳಲ್ಲಿ ಜಿಎಸ್​ಟಿ ಬದಲು ಬೇರೆ ಹೆಸರಿನಲ್ಲಿ ಆ ತೆರಿಗೆ ಇದೆ. ಉದಾಹರಣೆಗೆ, ಐರೋಪ್ಯ ಒಕ್ಕೂಟದ ದೇಶಗಳು, ಬ್ರೆಜಿಲ್, ಚೀನಾ, ಅರ್ಜೆಂಟೀನಾ ಮೊದಲಾದ ದೇಶಗಳಲ್ಲಿ ವ್ಯಾಟ್ ಹೆಸರಿದೆ. ವ್ಯಾಟ್ ಆಗಲೀ ಜಿಎಸ್​ಟಿ ಆಗಲೀ ಇನ್​ಡೈರೆಕ್ಟ್ ಟ್ಯಾಕ್ಸ್ ಸಿಸ್ಟಂ.

ಭಾರತದಲ್ಲಿ ಜಿಎಸ್​ಟಿ ಬಂದಿದ್ದು ಹೇಗೆ?

ಭಾರತದಲ್ಲಿ ವಿವಿಧ ರೀತಿಯ ತೆರಿಗೆಗಳು ಸೇರಿ ಸಂಕೀರ್ಣತೆ ಸೃಷ್ಟಿಯಾಗಿತ್ತು. ಇದರಿಂದ ಸುಧಾರಣೆಗಳಿಗೆ ಮತ್ತು ಆರ್ಥಿಕ ಪ್ರಗತಿಗೆ ತುಸು ಹಿನ್ನಡೆಯಾಗುತ್ತಿತ್ತು. ಈ ತೆರಿಗೆ ಸಂಕೀರ್ಣತೆಯನ್ನು ನೀಗಿಸಿ ಸರಳಗೊಳಿಸುವ ನಿಟ್ಟಿನಲ್ಲಿ 2000ರಲ್ಲಿ ಜಿಎಸ್​ಟಿ ಬಗ್ಗೆ ಆಲೋಚನೆ ಶುರುವಾಯಿತು. ಕೇಳ್ಕರ್ ಟ್ಯಾಸ್ಕ್ ಫೋರ್ಸ್ ಒಂದು ಸಮಗ್ರ ಪರೋಕ್ಷ ತೆರಿಗೆ ವ್ಯವಸ್ಥೆಗೆ ಶಿಫಾರಸು ಮಾಡಿತು.

ಇದನ್ನೂ ಓದಿ: ಜುಲೈ 1ಕ್ಕೆ ಚಾರ್ಟರ್ಡ್ ಅಕೌಂಟೆಂಟ್ ದಿನ; ಇದರ ಇತಿಹಾಸ, ಮಹತ್ವದ ಇತ್ಯಾದಿ ವಿಶೇಷತೆಗಳ ವಿವರ

ಹಲವು ವರ್ಷಗಳ ಬಳಿಕ 2016ರ ಆಗಸ್ಟ್ ತಿಂಗಳಲ್ಲಿ ಜಿಎಸ್​ಟಿ ಸಂಗ್ರಹಕ್ಕೆ ಕೇಂದ್ರ ಸರ್ಕಾರಕ್ಕೆ ಅಧಿಕಾರ ಕೊಡುವಂತೆ ಸಂವಿಧಾನಕ್ಕೆ 101ನೇ ತಿದ್ದುಪಡಿ ಕಾಯ್ದೆ ತರಲಾಯಿತು. ಕೇಂದ್ರ ಹಾಗೂ ಎಲ್ಲಾ ರಾಜ್ಯ ಸರ್ಕಾರಗಳ ಹಣಕಾಸು ಸಚಿವರನ್ನು ಒಳಗೊಂಡ ಜಿಎಸ್​ಟಿ ಕೌನ್ಸಿಲ್ ಅನ್ನು ಸ್ಥಾಪಿಸಲಾಯಿತು. ಬಳಿಕ ಜಿಎಸ್​ಟಿ ದರಗಳು ಹೇಗಿರಬೇಕೆಂದು ಹಲವು ಸಭೆಗಳನ್ನು ನಡೆಸಿ ಒಂದು ತೀರ್ಮಾನಕ್ಕೆ ಬರಲಾಯಿತು. 2017ರ ಜುಲೈ 1ರಂದು ಜಿಎಸ್​ಟಿ ಜಾರಿಗೆ ಬಂದಿತು.

ಜಿಎಸ್​ಟಿಯಿಂದ ಆಗಿರುವ ಬಹುದೊಡ್ಡ ಸುಧಾರಣೆ ಅಂತರರಾಜ್ಯ ವಹಿವಾಟಿನ ವಿಚಾರದ್ದು. ಈ ಮುಂಚೆ ಎರಡು ರಾಜ್ಯಗಳ ಮಧ್ಯೆ ನಡೆಯುತ್ತಿದ್ದ ವ್ಯವಹಾರದಲ್ಲಿ ತೆರಿಗೆ ಪಡೆಯುವ ವಿಚಾರದಲ್ಲಿ ಗೊಂದಲ ಮತ್ತು ಸಂಕೀರ್ಣತೆ ಇತ್ತು. ಜಿಎಸ್​ಟಿ ಇದನ್ನು ಸರಳಗೊಳಿಸಿತು.

ಜಿಎಸ್​ಟಿಯಲ್ಲಿ ನಾಲ್ಕು ಭಾಗ ಇರುತ್ತದೆ. ಸಿಜಿಎಸ್​ಟಿ, ಎಸ್​ಜಿಎಸ್​ಟಿ, ಐಜಿಎಸ್​ಟಿ ಮತ್ತು ಯುಟಿಜಿಎಸ್​ಟಿ. ಇಲ್ಲಿ ಸಿಜಿಎಸ್​ಟಿ ಎಂದರೆ ಕೇಂದ್ರ ಸರ್ಕಾರಕ್ಕೆ ಸಲ್ಲುವ ಪಾಲು. ಎಸ್​ಜಿಎಸ್​ಟಿಯು ರಾಜ್ಯ ಸರ್ಕಾರಕ್ಕೆ ಹೋಗುತ್ತದೆ. ಐಜಿಎಸ್​ಟಿ ಎಂಬುದು ಕೇಂದ್ರ ಮತ್ತು ಆಯಾ ರಾಜ್ಯಗಳ ಮಧ್ಯೆ ಹಂಚಿಕೆ ಆಗುತ್ತದೆ. ಯುಟಿಜಿಎಸ್​ಟಿ ಎಂಬುದು ಕೇಂದ್ರಾಡಳಿತ ಪ್ರದೇಶಕ್ಕೆ ನೀಡಲಾಗುವ ತೆರಿಗೆ ಪಾಲು.

ಇದನ್ನೂ ಓದಿ: ಸಿಮ್ ಬದಲಾಯಿಸಲು, ನಂಬರ್ ಪೋರ್ಟ್ ಮಾಡಲು ಜುಲೈ 1ರಿಂದ ಹೊಸ ನಿಯಮ

ಕುತೂಹಲದ ಸಂಗತಿ ಎಂದರೆ ಭಾರತದ ಜಿಎಸ್​ಟಿ ಸಿಸ್ಟಂ ಹೆಚ್ಚೂಕಡಿಮೆ ಕೆನಡಾದ ತೆರಿಗೆ ವ್ಯವಸ್ಥೆಯನ್ನು ಆಧರಿಸಿದೆ. ಭಾರತದಲ್ಲಿ ಸದ್ಯ ಐದು ಸ್ಲ್ಯಾಬ್ ಜಿಎಸ್​ಟಿ ತೆರಿಗೆಗಳಿಗೆ. 0%, 5%, 12%, 18% ಮತ್ತು 28%. ಇದರಲ್ಲಿ ಬಹಳ ಅಗತ್ಯವಾದ ಸರಕು ಮತ್ತು ಸೇವೆಗಳಿಗೆ ಕಡಿಮೆ ಜಿಎಸ್​ಟಿ ಇರುತ್ತದೆ. ಮಾರಾಟವಾಗುವ ಹೆಚ್ಚಿನ ಸರಕು ಮತ್ತು ಸೇವೆಗಳು 12% ಮತ್ತು 18% ಸ್ಲ್ಯಾಬ್​ಗಳಿಗೆ ಸೇರುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಸೋನಲ್​-ತರುಣ್​ ಸುಧೀರ್​ ಮದುವೆ? ಮೊದಲ ಬಾರಿ ಮಾತನಾಡಿದ ಮಾಲತಿ ಸುಧೀರ್​
ಸೋನಲ್​-ತರುಣ್​ ಸುಧೀರ್​ ಮದುವೆ? ಮೊದಲ ಬಾರಿ ಮಾತನಾಡಿದ ಮಾಲತಿ ಸುಧೀರ್​
ಒಂದು ಕುಟುಂಬದ ಮೇಲಿನ ದ್ವೇಷಕ್ಕಾಗಿ ಹಾಸನದ ಮಾನ ಹರಾಜಾಯಿತು: ದೇವರಾಜೇಗೌಡ 
ಒಂದು ಕುಟುಂಬದ ಮೇಲಿನ ದ್ವೇಷಕ್ಕಾಗಿ ಹಾಸನದ ಮಾನ ಹರಾಜಾಯಿತು: ದೇವರಾಜೇಗೌಡ 
‘ರೇಣುಕಾ ಸ್ವಾಮಿ ಮಾಡಿದ್ದು ದೊಡ್ಡ ತಪ್ಪು, ಅದನ್ನು ಯಾರೂ ಗಮನಿಸ್ತಿಲ್ಲ’
‘ರೇಣುಕಾ ಸ್ವಾಮಿ ಮಾಡಿದ್ದು ದೊಡ್ಡ ತಪ್ಪು, ಅದನ್ನು ಯಾರೂ ಗಮನಿಸ್ತಿಲ್ಲ’
ಸಿದ್ದರಾಮಯ್ಯರೆಡೆ ವಿಜಯಾನಂದ ಕಾಶಪ್ಪನವರ್ ಧೋರಣೆ ಬದಲಾಗಿದೆಯೇ?
ಸಿದ್ದರಾಮಯ್ಯರೆಡೆ ವಿಜಯಾನಂದ ಕಾಶಪ್ಪನವರ್ ಧೋರಣೆ ಬದಲಾಗಿದೆಯೇ?
ನಮಗಿರುವ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದರೆ ಸಾಕು: ಕೃಷ್ಣ ಭೈರೇಗೌಡ
ನಮಗಿರುವ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದರೆ ಸಾಕು: ಕೃಷ್ಣ ಭೈರೇಗೌಡ
ಪವಿತ್ರಾ ಗೌಡ ಗೆಳತಿ ಸಮತಾ ದರ್ಶನ್​ರನ್ನು ಭೇಟಿಯಾಗಬೇಕೆಂದಾಗ ನಟ ಒಪ್ಪಿದರು
ಪವಿತ್ರಾ ಗೌಡ ಗೆಳತಿ ಸಮತಾ ದರ್ಶನ್​ರನ್ನು ಭೇಟಿಯಾಗಬೇಕೆಂದಾಗ ನಟ ಒಪ್ಪಿದರು
ಚಿತ್ರೀಕರಣದ ಸಮಯದಲ್ಲಿ ಪವಿತ್ರಾ ಗೌಡರ ವರ್ತನೆ ಹೇಗಿರುತ್ತಿತ್ತು: ನಿರ್ದೇಶಕಿ
ಚಿತ್ರೀಕರಣದ ಸಮಯದಲ್ಲಿ ಪವಿತ್ರಾ ಗೌಡರ ವರ್ತನೆ ಹೇಗಿರುತ್ತಿತ್ತು: ನಿರ್ದೇಶಕಿ
ಸಿದ್ದರಾಮಯ್ಯ ಸರ್ಕಾರ ಹಗರಣ, ಭ್ರಷ್ಟಾಚಾರಗಳಲ್ಲಿ ಮುಳುಗಿದೆ: ಸುನೀಲ ಕುಮಾರ್
ಸಿದ್ದರಾಮಯ್ಯ ಸರ್ಕಾರ ಹಗರಣ, ಭ್ರಷ್ಟಾಚಾರಗಳಲ್ಲಿ ಮುಳುಗಿದೆ: ಸುನೀಲ ಕುಮಾರ್
ಸಿಎಂ ಪತ್ನಿಯವರ ಜಮೀನು ಸ್ವಾಧೀನ ಆಗಿದ್ದು ಬಿಜೆಪಿ ಅಧಿಕಾರದಲ್ಲಿ: ಶಿವಕುಮಾರ್
ಸಿಎಂ ಪತ್ನಿಯವರ ಜಮೀನು ಸ್ವಾಧೀನ ಆಗಿದ್ದು ಬಿಜೆಪಿ ಅಧಿಕಾರದಲ್ಲಿ: ಶಿವಕುಮಾರ್
ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಉದ್ದೇಶಿಸಿ ಮೋದಿ ಮಾತು
ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಉದ್ದೇಶಿಸಿ ಮೋದಿ ಮಾತು