ಅಮೆರಿಕದ H-1B ವೀಸಾಗೆ USCISನಿಂದ ಅಪರೂಪಕ್ಕೆ ಎರಡನೇ ಬಾರಿಗೆ ಲಾಟರಿ ಮೂಲಕ ಆಯ್ಕೆ ಆಯೋಜಿಸಲಾಗುತ್ತಿದೆ. ಯಶಸ್ವಿ ಅರ್ಜಿದಾರರ ಆಯ್ಕೆಗಾಗಿ ಹೀಗೆ ಒಂದು ಪದ್ಧತಿ ಅನುಸರಿಸಿಕೊಂಡು ಬರಲಾಗುತ್ತಿದೆ. ಮೊದಲನೇ ಆಯ್ಕೆ ವೇಳೆಯಲ್ಲಿ ವಿಫಲರಾದ ನೂರಾರು ಭಾರತೀಯ ಐ.ಟಿ. ವೃತ್ತಿಪರರಿಗೆ ಇದರಿಂದಾಗಿ ಮತ್ತೊಂದು ಅವಕಾಶ ದೊರೆತಂತಾಗುತ್ತದೆ. H-1B ವೀಸಾ ಎಂಬುದು ನಾನ್- ಇಮೈಗ್ರೆಂಟ್ ವೀಸಾ. ಇದರ ಮೂಲಕ ಅಮೆರಿಕದ ಕಂಪೆನಿಗಳು ವಿದೇಶಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬಹುದು. ಭಾರತೀಯ ಐ.ಟಿ. ವೃತ್ತಿಪರರಲ್ಲಿ ಇದಕ್ಕೆ ಭಾರೀ ಬೇಡಿಕೆ ಇದೆ. ಯುಎಸ್ ಸಿಟಿಜನ್ಶಿಪ್ ಅಂಡ್ ಇಮೈಗ್ರೇಷನ್ ಸರ್ವೀಸಸ್ (USCIS) ಹೇಳಿರುವಂತೆ, ಈ ವರ್ಷದ ಆರಂಭದಲ್ಲಿ H-1B ವೀಸಾಗೆ ನಡೆದ ಮೊದಲ ಸುತ್ತಿನ ಕಂಪ್ಯೂಟರೈಸ್ಡ್ ಡ್ರಾದಲ್ಲಿ ಅಗತ್ಯ ಸಂಖ್ಯೆಯ ವೀಸಾ ನೀಡಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದರಿಂದ ಈಗ ಇನ್ನೊಮ್ಮೆ ಡ್ರಾ ಮಾಡಲಾಗುತ್ತಿದೆ.
USCIS ತಿಳಿಸಿರುವ ಮಾಹಿತಿಯಂತೆ, H-1B cap- subject ಅರ್ಜಿಯನ್ನು ಸರಿಯಾದ ಸೇವಾ ಕೇಂದ್ರದಲ್ಲಿ ಸಲ್ಲಿಸಬೇಕು. H-1Bಗೆ ಆನ್ಲೈನ್ ಅರ್ಜಿ ದೊರೆಯುತ್ತಿಲ್ಲ. H-1Bಗೆ ಅರ್ಜಿ ಸಲ್ಲಿಸುವವರು ಕಾಗದದಲ್ಲಿ ಮಾಡಬೇಕು ಹಾಗೂ ಪ್ರಿಂಟೆಡ್ ಕಾಪಿ (ಮುದ್ರಿತ ನಕಲು) ಒಳಗೊಂಡಿರಬಹುದು. ಅನ್ವಯ ಆಗುವ ನೋಂದಣಿ ಆಯ್ಕೆಯ ನೋಟಿಸ್ FY 2022 H-1B cap- subject petition ಎಂದಿರುವುದಾಗಿ ಅಮೆರಿಕದ ಏಜೆನ್ಸಿ ಮಾಹಿತಿ ನೀಡಿದೆ. H-1B cap- ಅರ್ಜಿದಾರರು ಸಲ್ಲಿಸುವುದಕ್ಕೆ, ಅದರಲ್ಲಿ ಅಡ್ವಾನ್ಸ್ಡ್ ಪದವಿ ವಿನಾಯಿತಿ ಅರ್ಜಿಗೆ ಅರ್ಹವಾಗಿರುವುದು ಒಳಗೊಂಡಿರುತ್ತದೆ. ಆದರೂ ಸದ್ಯಕ್ಕೆ ಚಾಲ್ತಿಯಲ್ಲಿ ಇರುವ ಕಾನೂನು ನಿಯಮಾವಳಿ ಹಾಗೂ ನಿಬಂಧನೆಗಳ ಅಗತ್ಯಕ್ಕೆ ತಕ್ಕಂತೆ ಕಡ್ಡಾಯವಾಗಿ ಸಾಕ್ಷ್ಯವನ್ನು ಸಲ್ಲಿಸಬೇಕು ಮತ್ತು ಅರ್ಜಿ ಮಂಜೂರಿಗೆ ಅರ್ಹತೆಯನ್ನು ಸಾಬೀತು ಮಾಡಬೇಕು ಎಂದು USCIS ತಿಳಿಸಿದೆ.
ನೋಂದಣಿ ದಿನಾಂಕವನ್ನು ಜುಲೈ 28ನೇ ತಾರೀಕಿನಂದು ನಿರ್ಧರಿಸಲಾಗಿದೆ. ಆ ಪ್ರಕಾರ, ಆಗಸ್ಟ್ 2ನೇ ತಾರೀಕಿನಿಂದ ಶುರುವಾಗಿ ನವೆಂಬರ್ 3ನೇ ತಾರೀಕಿಗೆ ಕೊನೆ ಆಗುತ್ತದೆ. ಆಯ್ಕೆಯಾದ ನೋಂದಣಿ ಸಂಖ್ಯೆಯೊಂದಿಗೆ ಇರುವವರ myUSCIS ಖಾತೆಯು ಅಪ್ಡೇಟ್ ಆಗಿರುತ್ತದೆ. ಆಯ್ಕೆಯ ನೋಟಿಸ್, ಅದರ ಜತೆಗೆ ಎಲ್ಲಿ ಹಾಗೂ ಹೇಗೆ ಫೈಲ್ ಮಾಡಬೇಕು ಎಂಬ ಮಾಹಿತಿ ಇರುತ್ತದೆ ಎನ್ನಲಾಗಿದೆ. USCIS ಹೇಳಿರುವಂತೆ, 2021ರ ಮಾರ್ಚ್ನಲ್ಲಿ H-1B capಗೆ ಎಲೆಕ್ಟ್ರಾನಿಕ್ ಮೂಲಕ ಸಲ್ಲಿಸಲಾದ ನೋಂದಣಿಯಿಂದ ಆರಿಸಲಾಗಿತ್ತು. ಅದು 2022ರ ಹಣಕಾಸು ವರ್ಷಕ್ಕೆ ಸಂಬಂಧಿಸಿದ್ದಾಗಿತ್ತು. ಫಲಾನುಭವಿಗಳ ಪೈಕಿ ಅಡ್ವಾನ್ಸ್ಡ್ ಪದವಿ ವಿನಾಯಿತಿ ಇರುವವರು ಸಹ ಇದ್ದರು.
ಇದನ್ನೂ ಓದಿ: ಅಮೆರಿಕದಲ್ಲಿ ವಿದೇಶಿ ವಿದ್ಯಾರ್ಥಿಗಳಿಗಿರುವ ಅತಿಥಿ ಕೆಲಸಗಾರರ ಯೋಜನೆ ಕೊನೆಗೊಳಿಸುವ ಮಸೂದೆ ಮಂಡನೆ
(H- 1B Visa Rare Second Lottery Move By US Will Help Hundreds Of Indian IT Professionals)
Published On - 2:17 pm, Fri, 30 July 21