HDFC Overdraft: ಸಣ್ಣ ಉದ್ಯಮಿಗಳು, ವರ್ತಕರಿಗೆ ಎಚ್​ಡಿಎಫ್​ಸಿ ಬ್ಯಾಂಕ್​ನಿಂದ ಸಾಲ “ದುಕಾನ್​ದಾರ್ ಓವರ್​ಡ್ರಾಫ್ಟ್ ಸ್ಕೀಮ್”

| Updated By: Srinivas Mata

Updated on: Jul 27, 2021 | 6:19 PM

ದೇಶದ ಪ್ರಮುಖ ಖಾಸಗಿ ಬ್ಯಾಂಕ್​ಗಳ ಪೈಕಿ ಒಂದಾದ ಎಚ್​ಡಿಎಫ್​ಸಿ ಬ್ಯಾಂಕ್​ನಿಂದ ಸಣ್ಣ ಉದ್ಯಮಿಗಳು, ವರ್ತಕರಿಗೆ ದುಕಾನ್​ದಾರ್ ಓವರ್​ಡ್ರಾಫ್ಟ್​ ಯೋಜನೆ ಘೋಷಣೆ ಮಾಡಲಾಗಿದೆ.

HDFC Overdraft: ಸಣ್ಣ ಉದ್ಯಮಿಗಳು, ವರ್ತಕರಿಗೆ ಎಚ್​ಡಿಎಫ್​ಸಿ ಬ್ಯಾಂಕ್​ನಿಂದ ಸಾಲ ದುಕಾನ್​ದಾರ್ ಓವರ್​ಡ್ರಾಫ್ಟ್ ಸ್ಕೀಮ್
ಎಚ್‌ಡಿಎಫ್‌ಸಿ ಬ್ಯಾಂಕ್‌
Follow us on

ಭಾರತದ ಅತಿದೊಡ್ಡ ಖಾಸಗಿ ಬ್ಯಾಂಕ್​ ಆದ ಎಚ್​ಡಿಎಫ್​ಸಿ ಬ್ಯಾಂಕ್​ನಿಂದ (HDFC Bank) ಸೋಮವಾರ ಸಣ್ಣ ರೀಟೇಲರ್​ಗಳಿಗಾಗಿ ಓವರ್​ಡ್ರಾಫ್ಟ್​  (Overdraft) ವ್ಯವಸ್ಥೆಯನ್ನು ಆರಂಭಿಸಲಾಗಿದೆ. ಸರ್ಕಾರದ ಆಡಳಿತ ಸೇವೆ ಡೆಲಿವರಿ ಅಂಗಸಂಸ್ಥೆಯಾದ ಸಿಎಸ್​ಸಿ ಎಸ್​ಪಿವಿ ಸಹಭಾಗಿತ್ವದಲ್ಲಿ, ಸರ್ಕಾರಿ ಯೋಜನೆ ಮತ್ತು ಸೇವೆಗಳನ್ನು ಕಾಮನ್ ಸರ್ವೀಸ್ ಸೆಂಟರ್​ (ಸಿಎಸ್​ಸಿ) ಮೂಲಕ ಸಾಧ್ಯ ಆಗುತ್ತದೆ. ಎಚ್​ಡಿಎಫ್​ಸಿ ಬ್ಯಾಂಕ್​ನಿಂದ “ದುಕಾನ್​ದಾರ್ ಓವರ್​ಡ್ರಾಫ್ಟ್ ಸ್ಕೀಮ್” ಅನ್ನು ತಂದಿದ್ದು, ಅಂಗಡಿ ಮಾಲೀಕರಿಗೆ ಮತ್ತು ವರ್ತಕರಿಗೆ ನಗದು ಕೊರತೆಯನ್ನು ನೀಗಿಸಲು ನೆರವು ನೀಡುತ್ತದೆ. ಬ್ಯಾಂಕ್​ ನೀಡಿದ ಮಾಹಿತಿಯಂತೆ, ಕನಿಷ್ಠ 3 ವರ್ಷಗಳಿಂದ ಕಾರ್ಯ ನಿರ್ವಹಣೆ ಮಾಡಿದ ರೀಟೇಲರ್​ಗಳು ಈ ಯೋಜನೆ ಅರ್ಹರು. ಇದಕ್ಕಾಗಿ ಯಾವುದಾದರೂ ಬ್ಯಾಂಕ್​ನಿಂದ 6 ತಿಂಗಳ ಸ್ಟೇಟ್​ಮಂಟ್ ನೀಡಬೇಕಾಗುತ್ತದೆ. ಎಚ್​ಡಿಎಫ್​ಸಿ ಬ್ಯಾಂಕ್​ನಿಂದ ತಿಳಿಸಿರುವ ಹೇಳಿಕೆಯಲ್ಲಿ, ಕನಿಷ್ಠ 50 ಸಾವಿರ ರೂಪಾಯಿಯಿಂದ ಗರಿಷ್ಠ 10 ಲಕ್ಷ ರೂಪಾಯಿ ತನಕ ನೀಡಲಾಗುತ್ತದೆ.

ಈ ಹೊಸ ಯೋಜನೆಯು ಸಣ್ಣ ವರ್ತಕರನ್ನು ಗಮನದಲ್ಲಿ ಇಟ್ಟುಕೊಂಡು ಸೃಷ್ಟಿಸಲಾಗಿದೆ. ಮಳಿಗೆ ಆರಂಭವಾಗಿ 6 ವರ್ಷಕ್ಕಿಂತ ಕಡಿಮೆ ಇದ್ದಲ್ಲಿ 7.5 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿ ದೊರೆಯುತ್ತದೆ. 6 ವರ್ಷಕ್ಕಿಂತ ಮೇಲ್ಪಟ್ಟು ಉದ್ಯಮ ನಡೆಸುತ್ತಿದ್ದಲ್ಲಿ 10 ಲಕ್ಷ ರೂಪಾಯಿ ಸಾಲ ಸಿಗುತ್ತದೆ. 5 ಲಕ್ಷ ರೂಪಾಯಿ ಮೇಲ್ಪಟ್ಟ ಮೊತ್ತದ ಸಾಲಕ್ಕೆ ಶೇ 0.40ರಿಂದ ಶೇ 0.80 ಕಮಿಷನ್ ಹಳ್ಳಿ ಮಟ್ಟದ ಉದ್ಯಮಿಗಳಿಗೆ ದೊರೆಯುತ್ತದೆ. 600 ಶಾಖೆಗಳು ಮತ್ತು ವರ್ಚುವಲ್ ರಿಲೇಷನ್​ಶಿಪ್ ಮ್ಯಾನೇಜ್​ಮೆಂಟ್ ಸಪೋರ್ಟ್​ನೊಂದಿಗೆ ನೀಡುತ್ತದೆ. ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ECLGS) ಭಾಗವಾಗಿ ಸಾಲ ನೀಡುವ ಸಂಸ್ಥೆಯಾಗಿ ಎಚ್​ಡಿಎಫ್​ಸಿ ಬ್ಯಾಂಕ್​ ಡಿಸೆಂಬರ್ 31, 2020ರ ತನಕ ರೂ. 23,200 ಕೋಟಿ ವಿತರಿಸಿದೆ.

ಪಿಟಿಐ ವರದಿ ಮಾಡಿರುವ ಪ್ರಕಾರ, ಬ್ಯಾಂಕ್​ನಿಂದ ತಿಳಿಸಿರುವಂತೆ, ಮೂರು ಪ್ರಮುಖ ಖಾಸಗಿ ಬ್ಯಾಂಕ್​ಗಳ ಪೈಕಿ 2020- 21ರ ನಿವೃತ್ತಿ ವರ್ಷದಲ್ಲಿ ಅತಿ ಹೆಚ್ಚು ಮೊತ್ತವಾದ 13.82 ಕೋಟಿ ರೂಪಾಯಿ ಪಡೆದ ಬ್ಯಾಂಕರ್ ಎನಿಸಿಕೊಂಡಿದ್ದರು ಆದಿತ್ಯ ಪುರಿ. ದೇಶದ ಪ್ರಮುಖ ಖಾಸಗಿ ಬ್ಯಾಂಕ್​ಗಳ ಪೈಕಿ ಎಚ್​ಡಿಎಫ್​ಸಿ ಬ್ಯಾಂಕ್ ಪ್ರಮುಖ ಎನಿಸಿಕೊಂಡಿದೆ. ಕೊವಿಡ್ 19 ಬಿಕ್ಕಟ್ಟು ಕಾಣಿಸಿಕೊಂಡ ಮೇಲೆ ದೇಶದ ಸಣ್ಣ ಉದ್ಯಮಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಇದರಿಂದಾಗಿ ವರ್ಕಿಂಗ್​ ಕ್ಯಾಪಿಟಲ್​ ಅಗತ್ಯಗಳಿಗೆ ಬ್ಯಾಂಕ್​ಗಳಿಂದ ಸಾಲ ಪಡೆಯುತ್ತಿದ್ದಾರೆ.

ಇದನ್ನೂ ಓದಿ: Covid 19 loan: ಕೆನರಾ ಬ್ಯಾಂಕ್​ನಿಂದ ರೂ. 25 ಸಾವಿರದಿಂದ 2 ಕೋಟಿಯ ತನಕ 3 ಬಗೆಯ ಸಾಲ ಯೋಜನೆ ಘೋಷಣೆ

(HDFC Bank Announced Dukandar Overdraft Scheme For Small Traders For Business Purpose )

Published On - 6:17 pm, Tue, 27 July 21