15,000 ಕೋಟಿ ರೂ ಮೊತ್ತದ ಸಾಲವನ್ನೇ ಮಾರಿಬಿಟ್ಟ ಎಚ್​​ಡಿಎಫ್​ಸಿ ಬ್ಯಾಂಕ್; ಏನು ಕಾರಣ?

|

Updated on: Sep 27, 2024 | 1:02 PM

HDFC bank sells loans of Rs 15,000 crore: ಎಚ್​ಡಿಎಫ್​ಸಿ ಬ್ಯಾಂಕ್ ತನ್ನ ಕೆಲ ಗೃಹ ಸಾಲ ಮತ್ತು ವಾಹನ ಸಾಲಗಳನ್ನು ಮಾರಿದೆ. ಕ್ರೆಡಿಟ್ ಡೆಪಾಸಿಟ್ ರೇಶಿಯೋ ಕಡಿಮೆ ಮಾಡುವ ಸಲುವಾಗಿ ದೇಶದ ಅತಿದೊಡ್ಡ ಬ್ಯಾಂಕ್ ಈ ಕ್ರಮ ಕೈಗೊಂಡಿದೆ. ವರದಿಗಳ ಪ್ರಕಾರ ಎಚ್​ಡಿಎಫ್​ಸಿ ಬ್ಯಾಂಕ್ 6,000 ಕೋಟಿ ರೂ ಮೊತ್ತದ ಗೃಹಸಾಲ, 9,000 ಕೋಟಿ ರೂ ಮೊತ್ತದ ಕಾರ್ ಸಾಲವನ್ನು ಮಾರಿದೆ.

15,000 ಕೋಟಿ ರೂ ಮೊತ್ತದ ಸಾಲವನ್ನೇ ಮಾರಿಬಿಟ್ಟ ಎಚ್​​ಡಿಎಫ್​ಸಿ ಬ್ಯಾಂಕ್; ಏನು ಕಾರಣ?
ಎಚ್​ಡಿಎಫ್​ಸಿ
Follow us on

ಮುಂಬೈ, ಸೆಪ್ಟೆಂಬರ್ 27: ದೇಶದ ಅತಿದೊಡ್ಡ ಬ್ಯಾಂಕ್ ಎನಿಸಿದ ಎಚ್​ಡಿಎಫ್​ಸಿ ಸುಮಾರು 15,000 ಕೋಟಿ ರೂ ಮೊತ್ತದ ಗೃಹ ಸಾಲ ಮತ್ತು ಕಾರು ಸಾಲಗಳನ್ನು ಮಾರಿರುವುದು ತಿಳಿದುಬಂದಿದೆ. ಇದರಲ್ಲಿ 6,000 ಕೋಟಿ ರೂ ಮೊತ್ತದ ಗೃಹ ಸಾಲ, ಹಾಗೂ 9,000 ಕೋಟಿ ರೂ ಮೊತ್ತದ ಕಾರ್ ಲೋನ್​ಗಳು ಸೇರಿವೆ. ಆರು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಎಚ್​ಡಿಎಫ್​ಸಿಯ ಗೃಹ ಸಾಲಗಳನ್ನು ಖರೀದಿಸಿವೆ. ಖಾಸಗಿ ಡೀಲ್​ಗಳ ಮೂಲಕ ಈ ವ್ಯವಹಾರ ನಡೆದಿದೆ. ಎಚ್​ಡಿಎಫ್​ಸಿಯ ಕಾರ್ ಲೋನ್​ಗಳನ್ನು ಮುಂಬೈನ ಹಲವು ಸ್ಥಳೀಯ ಅಸೆಟ್ ಮ್ಯಾನೇಜ್ಮೆಮೆಂಟ್ ಕಂಪನಿಗಳು ಪಡೆದುಕೊಂಡಿವೆ.

ಎಚ್​ಡಿಎಫ್​ಸಿ ತನ್ನ ಸಾಲಗಳನ್ನು ಮಾರಿದ್ದು ಯಾಕೆ?

ಬ್ಯಾಂಕುಗಳು ಠೇವಣಿ ಮತ್ತು ಸಾಲ ಮಧ್ಯೆ ಸಮತೋಲನ ಹೊಂದಿರುವುದು ಅಗತ್ಯ. ಎಚ್​ಡಿಎಫ್​ಸಿ ಸೇರಿದಂತೆ ಬಹಳಷ್ಟು ಬ್ಯಾಂಕುಗಳು ಠೇವಣಿಗಳ ಕೊರತೆ ಎದುರಿಸುತ್ತಿವೆ. ಅದರಲ್ಲೂ ಎಚ್​ಡಿಎಫ್​ಸಿ ಬ್ಯಾಂಕ್​ಗೆ ಇದರ ಹೊರೆ ತೀರಾ ಹೆಚ್ಚಿತ್ತು. ಎಚ್​ಡಿಎಫ್​ಸಿ ವಿಲೀನದ ಬಳಿಕ ಎಚ್​ಡಿಎಫ್​ಸಿ ಬ್ಯಾಂಕ್​ಗೆ ಸಾಲದ ಪ್ರಮಾಣ ವಿಪರೀತ ಆಗಿದೆ. ಎಚ್​ಡಿಎಫ್​ಸಿ ಗೃಹ ಸಾಲಗಳನ್ನು ನೀಡುತ್ತಿದ್ದ ಸಂಸ್ಥೆ. ಆ ಸಾಲವೆಲ್ಲವೂ ಎಚ್​ಡಿಎಫ್​ಸಿ ಬ್ಯಾಂಕ್​ಗೆ ವರ್ಗವಾಗಿತ್ತು.

ಬ್ಯಾಂಕುಗಳು ಠೇವಣಿ ಮತ್ತು ಸಾಲದ ಅನುಪಾತ ಸರಿಯಾಗಿ ಪಾಲಿಸಬೇಕು ಎಂದು ಆರ್​ಬಿಐ ನಿರ್ದೇಶನ ಇದೆ. ಈ ಕಾರಣಕ್ಕೆ ಎಚ್​ಡಿಎಫ್​ಸಿ ತನ್ನ ಸಾಲಗಳನ್ನು ಮಾರಿ ಕೈತೊಳೆದುಕೊಳ್ಳುವುದು ಅಗತ್ಯ ಇತ್ತು.

ಇದನ್ನೂ ಓದಿ: Asia Power Index: ಏಷ್ಯಾದಲ್ಲಿ ಅತಿಪ್ರಭಾವಶಾಲಿ ದೇಶಗಳು: ಅಮೆರಿಕ, ಚೀನಾ ನಂತರದ ಸ್ಥಾನ ಭಾರತಕ್ಕೆ

ಮಾರ್ಚ್ ವೇಳೆ ಎಚ್​ಡಿಎಫ್​ಸಿ ಬ್ಯಾಂಕ್​ನ ಕ್ರೆಡಿಟ್ ಮತ್ತು ಡೆಪಾಸಿಟ್ ರೇಶಿಯೋ ಶೇ. 104ರಷ್ಟಿತ್ತು. ಅಂದರೆ ಡೆಪಾಸಿಟ್​ಗಿಂತ ಸಾಲದ ಪ್ರಮಾಣ ಎರಡು ಪಟ್ಟು ಹೆಚ್ಚಿತ್ತು. ಹಿಂದಿನ ಮೂರು ವರ್ಷಗಳಲ್ಲಿ ಅದರ ಅನುಪಾತ ಶೇ. 85ರಿಂದ ಶೇ. 88ರ ಶ್ರೇಣಿಯಲ್ಲಿ ಇತ್ತು. ಜೂನ್ ತಿಂಗಳಲ್ಲಿ ಎಚ್​ಡಿಎಫ್​ಸಿ ಬ್ಯಾಂಕ್ 5,000 ಕೋಟಿ ರೂ ಸಾಲವನ್ನು ಮಾರಿತ್ತು. ಈಗ 15,000 ಕೋಟಿ ರೂ ಮೊತ್ತದ ಸಾಲವನ್ನು ಮಾರಿದರೆ. ಅಲ್ಲಿಗೆ ಕಳೆದ ಮೂರು ತಿಂಗಳಲ್ಲಿ ಒಟ್ಟು 20,000 ಕೋಟಿ ರೂ ಸಾಲವನ್ನು ಎಚ್​ಡಿಎಫ್​ಸಿ ಮಾರಿ, ಹೊರೆ ತಗ್ಗಿಸಿಕೊಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ