HDFC-HDFC Bank Merger: ಎಚ್​ಡಿಎಫ್​ಸಿ- ಎಚ್​ಡಿಎಫ್​ಸಿ ಬ್ಯಾಂಕ್ ವಿಲೀನದಿಂದ ಸಿಬ್ಬಂದಿ ಮೇಲೆ ಪರಿಣಾಮ ಇಲ್ಲ

| Updated By: Srinivas Mata

Updated on: Apr 04, 2022 | 2:05 PM

ಎಚ್​ಡಿಎಫ್​ಸಿ- ಎಚ್​ಡಿಎಫ್​ಸಿ ಬ್ಯಾಂಕ್​ ವಿಲೀನ ಆಗುವುದಕ್ಕೆ ಎಲ್ಲ ಸಿದ್ಧತೆ ಆಗಿದೆ. ಇದರಿಂದ ಸಿಬ್ಬಂದಿ ಮೇಲೆ ಏನೂ ಪರಿಣಾಮ ಆಗಲ್ಲ ಎಂದು ಮುಖ್ಯಸ್ಥ ದೀಪಕ್ ಪರೇಖ್ ಹೇಳಿದ್ದಾರೆ.

HDFC-HDFC Bank Merger: ಎಚ್​ಡಿಎಫ್​ಸಿ- ಎಚ್​ಡಿಎಫ್​ಸಿ ಬ್ಯಾಂಕ್ ವಿಲೀನದಿಂದ ಸಿಬ್ಬಂದಿ ಮೇಲೆ ಪರಿಣಾಮ ಇಲ್ಲ
ಸಾಂದರ್ಭಿಕ ಚಿತ್ರ
Follow us on

ಕಾರ್ಪೊರೇಟ್​ ಇತಿಹಾಸದಲ್ಲಿ ಅತಿದೊಡ್ಡ ವಿಲೀನ ಎನಿಸಿಕೊಳ್ಳುವ, ಭಾರತದ ಅತಿ ದೊಡ್ಡ ಹೌಸಿಂಗ್ ಫೈನಾನ್ಸ್ ಕಂಪೆನಿಯಾದ ಎಚ್​ಡಿಎಫ್​ಸಿ ಲಿಮಿಟೆಡ್​ ಹಾಗೂ ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕ್ ಆದ ಎಚ್​ಡಿಎಫ್​ಸಿ ಬ್ಯಾಂಕ್ (HDFC Bank) ವಿಲೀನ ಆಗಲಿದೆ. ಈ ವಿಲೀನದಿಂದ ಸಿಬ್ಬಂದಿ ಮೇಲೆ ಯಾವುದೇ ಪರಿಣಾಮ ಆಗಲ್ಲ ಎಂದು ಎಚ್​ಡಿಎಫ್​ಸಿ ಲಿಮಿಟೆಡ್​ನ ಮುಖ್ಯಸ್ಥ ದೀಪಕ್ ಪರೇಖ್ ಹೇಳಿದ್ದಾರೆ. “ಎಚ್​ಡಿಎಫ್​ಸಿ- ಎಚ್​ಡಿಎಫ್​ಸಿ ಬ್ಯಾಂಕ್ ವಿಲೀನವು ಎಚ್​ಡಿಎಫ್​ಸಿ ಲಿಮಿಟೆಡ್ ಸಿಬ್ಬಂದಿಯ ಮೇಲೆ ಯಾವುದೇ ಪರಿಣಾಮ ಬೀರಲ್ಲ,” ಎಂದು ದೀಪಕ್ ಪರೇಖ್ ಹೇಳಿರುವುದನ್ನು ಉದಾಹರಿಸಿ, ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ವಿಲೀನದ ನಂತರ ಎಚ್​ಡಿಎಫ್​ಸಿಯು ಎಚ್​ಡಿಎಫ್​ಸಿ ಬ್ಯಾಂಕ್​ನಲ್ಲಿ ಶೇ 41ರಷ್ಟು ಪಾಲನ್ನು ಹೊಂದಿರುತ್ತದೆ ಎಂದು ವಿನಿಮಯ ಕೇಂದ್ರದ ಫೈಲಿಂಗ್​ನಲ್ಲಿ ಎಚ್​ಡಿಎಫ್​ಸಿ ಬ್ಯಾಂಕ್ ತಿಳಿಸಿದೆ.

ಈ ವ್ಯವಹಾರದ ಭಾಗವಾಗಿ ಎಚ್​ಡಿಎಫ್​ಸಿ ಲಿಮಿಟೆಡ್​ನ ಷೇರುದಾರರು ಎಚ್​ಡಿಎಫ್​ಸಿ ಬ್ಯಾಂಕ್​ನ (1 ರೂಪಾಯಿ ಮುಖ ಬೆಲೆ) 42 ಷೇರುಗಳನ್ನು ತಮ್ಮ ಬಳಿ ಇರುವ ಎಚ್​ಡಿಎಫ್​ಸಿ ಲಿಮಿಟೆಡ್​ನ 25 ಷೇರುಗಳಿಗೆ (2 ರೂ. ಮುಖಬೆಲೆ) ಪಡೆಯುತ್ತಾರೆ.

ಈ ಪ್ರಸ್ತಾವಿತ ವಿಲೀನವು 2024ರ ಹಣಕಾಸು ವರ್ಷದ ಎರಡನೇ ಅಥವಾ ಮೂರನೇ ತ್ರೈಮಾಸಿಕದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಎಚ್​ಡಿಎಫ್​ಸಿ ಹೇಳಿರುವಂತೆ, ಪ್ರಸ್ತಾವಿತ ವಹಿವಾಟು ಮೂಲಕ ಕೃಷಿಯಂಥ ಪ್ರಾಧಾನ್ಯ ವಲಯಕ್ಕೆ ಹೆಚ್ಚಿನ ಪ್ರಮಾಣದ ಸಾಲ ಒದಗಿಸಲು ಸಹಾಯ ಮಾಡುತ್ತದೆ. ಕಾರ್ಯ ನಿರ್ವಹಣೆ ದಕ್ಷತೆ ಹೆಚ್ಚಿಸುವುದಕ್ಕೆ ಮತ್ತು ಸಾಲ ಹಿಂತಿರುಗಿಸದವರ ಪ್ರಮಾಣ ಕಡಿಮೆ ಆಗಲಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: HDFC Bank: ಡಿಜಿಟಲ್​ ಆರಂಭವೂ ಸೇರಿದಂತೆ ಎಚ್​ಡಿಎಫ್​ಸಿ ಬ್ಯಾಂಕ್​ ಮೇಲಿನ ಎಲ್ಲ ನಿರ್ಬಂಧ ತೆರವುಗೊಳಿಸಿದ ಆರ್​ಬಿಐ