Sensex Today: ಸೆನ್ಸೆಕ್ಸ್ 1500 ಪಾಯಿಂಟ್ಸ್ ಜಿಗಿತ, ನಿಫ್ಟಿ 400ಕ್ಕೂ ಹೆಚ್ಚು ಪಾಯಿಂಟ್ಸ್ ಏರಿಕೆ

Sensex News: ಭಾರತದ ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಏಪ್ರಿಲ್ 4ನೇ ತಾರೀಕಿನ ಸೋಮವಾರದಂದು ಆರಂಭದ ಸೆಷನ್​ನಲ್ಲಿ ಭರ್ಜರಿ ಏರಿಕೆಯನ್ನು ದಾಖಲಿಸಿವೆ. ಏರಿಕೆ, ಇಳಿಕೆ ದಾಖಲಿಸಿದ ಷೇರುಗಳ ವಿವರ ಇಲ್ಲಿದೆ.

Sensex Today: ಸೆನ್ಸೆಕ್ಸ್ 1500 ಪಾಯಿಂಟ್ಸ್ ಜಿಗಿತ, ನಿಫ್ಟಿ 400ಕ್ಕೂ ಹೆಚ್ಚು ಪಾಯಿಂಟ್ಸ್ ಏರಿಕೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Apr 04, 2022 | 10:53 AM

ಷೇರುಪೇಟೆ (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಏಪ್ರಿಲ್ 4ನೇ ತಾರೀಕಿನ ಸೋಮವಾರದ ಬೆಳಗಿನ ಸೆಷನ್​ನಲ್ಲಿ ಭರ್ಜರಿಯಾಗಿ ಏರಿಕೆ ಕಂಡಿವೆ. ಸೆನ್ಸೆಕ್ಸ್ 60 ಸಾವಿರ ಪಾಯಿಂಟ್ಸ್​ ಗಡಿ ದಾಟಿ, ವಹಿವಾಟು ನಡೆಸುತ್ತಿದ್ದರೆ, ನಿಫ್ಟಿ 18 ಸಾವಿರ ಪಾಯಿಂಟ್ಸ್ ದಾಟಿತ್ತು. ಸೆನ್ಸೆಕ್ಸ್ ಸೂಚ್ಯಂಕ ದಿನದ ಗರಿಷ್ಠ ಮಟ್ಟವಾದ 60,845.10 ಪಾಯಿಂಟ್ಸ್ ತಲುಪಿ, 1500ಕ್ಕೂ ಹೆಚ್ಚು ಪಾಯಿಂಟ್ಸ್ ಏರಿಕೆ ದಾಖಲಿಸಿತು. ಈ ಹಿಂದಿನ ಸೆಷನ್​ನಲ್ಲಿ 59,276.69 ಪಾಯಿಂಟ್ಸ್​ಗೆ ಅಂತ್ಯ ಕಂಡಿದ್ದು, ಇಂದಿನ ಆರಂಭವನ್ನು 59,764.13 ಪಾಯಿಂಟ್ಸ್​ನೊಂದಿಗೆ ಮಾಡಿತು. ಇನ್ನು ನಿಫ್ಟಿ ಈ ಹಿಂದಿನ ಸೆಷನ್​ನಲ್ಲಿ 17,670.45 ಪಾಯಿಂಟ್ಸ್​ನಲ್ಲಿ ಅಂತ್ಯ ಕಂಡಿತ್ತು. ದಿನದ ಆರಂಭವನ್ನು 17,809.10 ಪಾಯಿಂಟ್ಸ್​ನಲ್ಲಿ ಶುರು ಮಾಡಿದರೆ, ಗರಿಷ್ಠ ಮಟ್ಟ 18,114.65 ತಲುಪಿ, 430 ಪಾಯಿಂಟ್ಸ್​ಗೂ ಹೆಚ್ಚು ಹೆಚ್ಚಳವನ್ನು ಕಂಡಿತ್ತು.

ವಲಯವಾರು ಗಮನಿಸುವುದಾದರೆ, ಬಿಎಸ್​ಇ ಕ್ಯಾಪಿಟಲ್ ಗೂಡ್ಸ್, ತೈಲ ಮತ್ತು ಅನಿಲ ಸೂಚ್ಯಂಕಗಳು ತಲಾ ಶೇ 1ಕ್ಕಿಂತ ಹೆಚ್ಚು ಏರಿಕೆ ಕಂಡವು. ಬಿಎಸ್​ಇ ಮಿಡ್​ಕ್ಯಾಪ್ ಶೇ 0.87, ಸ್ಮಾಲ್​ಕ್ಯಾಪ್ ಶೇ 1.31ರಷ್ಟು ಹೆಚ್ಚಳ ಆದವು. ಆದರೆ ರಿಯಾಲ್ಟಿ ಸೂಚ್ಯಂಕ ಶೇ 0.04ರಷ್ಟು ಇಳಿಕೆ ದಾಖಲಿಸಿತು. ಈ ಮಧ್ಯೆ ಇಂದ್ರಪ್ರಸ್ಥ ಗ್ಯಾಸ್ (IGL)ನಿಂದ ದೆಹಲಿಯಲ್ಲಿ ಸಿಎನ್​ಜಿ ಬೆಲೆಯನ್ನು ಕೇಜಿ 2.5 ರೂಪಾಯಿ ಏರಿಸಲಾಗಿದೆ. ಹೊಸ ದರವು ಏಪ್ರಿಲ್ 4ರಿಂದ ಜಾರಿಗೆ ಬರಲಿದೆ.

ನಿಫ್ಟಿಯಲ್ಲಿ ಏರಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ ಎಚ್​ಡಿಎಫ್​ಸಿ ಶೇ 15.61 ಎಚ್​ಡಿಎಫ್​ಸಿ ಬ್ಯಾಂಕ್ ಶೇ 12.60 ಎಚ್​ಡಿಎಫ್​ಸಿ ಲೈಫ್ ಶೇ 6.19 ಎನ್​ಟಿಪಿಸಿ ಶೇ 2.06 ಭಾರ್ತಿ ಏರ್​ಟೆಲ್ ಶೇ 1.91

ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ ಒಎನ್​ಜಿಸಿ ಶೇ -1.16 ಇನ್ಫೋಸಿಸ್ ಶೇ -0.97 ಮಹೀಂದ್ರಾ ಅಂಡ್ ಮಹೀಂದ್ರಾ ಶೇ -0.92 ಮಾರುತಿ ಸುಜುಕಿ ಶೇ -0.55 ರಿಲಯನ್ಸ್ ಶೇ-0.36

ಈ ವರದಿ ಸಿದ್ಧ ಆಗುವ ಹೊತ್ತಿಗೆ ಸೆನ್ಸೆಕ್ಸ್ 1467.35 ಪಾಯಿಂಟ್ಸ್ ಮೇಲೇರಿ 60,744.04 ಪಾಯಿಂಟ್ಸ್ ಮೇಲೇರಿ ವಹಿವಾಟು ನಡೆಸಿದರೆ, ನಿಫ್ಟಿ 389.85 ಪಾಯಿಂಟ್ಸ್​ ಹೆಚ್ಚಳವಾಗಿ 18060.30 ಪಾಯಿಂಟ್ಸ್​ನಲ್ಲಿ ವ್ಯವಹಾರ ಮಾಡುತ್ತಿತ್ತು.

ಇದನ್ನೂ ಓದಿ: Multibagger Stocks: ಏನಿದು ಮಲ್ಟಿಬ್ಯಾಗರ್ ಸ್ಟಾಕ್? ಇದನ್ನು ಗುರುತಿಸುವುದು ಹೇಗೆ ತಿಳಿಯಿರಿ

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್