Cryptocurrencies: ಕ್ರಿಪ್ಟೋವನ್ನು ಕರೆನ್ಸಿ ಎಂಬುದರ ಬದಲಾಗಿ ಚಿನ್ನದಂತೆ ಪರಿಗಣಿಸಲು ಪ್ರಸ್ತಾವ; ಗೊತ್ತಿರಬೇಕಾದ 10 ಅಂಶಗಳು

ಭಾರತದಲ್ಲಿ ಕ್ರಿಪ್ಟೋವನ್ನು ಕರೆನ್ಸಿ ಎಂಬುದರ ಬದಲಾಗಿ ಆಸ್ತಿ ಅಥವಾ ಚಿನ್ನದಂತೆ ಪರಿಗಣಿಸಬೇಕು ಎಂದು ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ಗೊತ್ತಿರಬೇಕಾದ 10 ಅಂಶಗಳು ಇಲ್ಲಿವೆ.

Cryptocurrencies: ಕ್ರಿಪ್ಟೋವನ್ನು ಕರೆನ್ಸಿ ಎಂಬುದರ ಬದಲಾಗಿ ಚಿನ್ನದಂತೆ ಪರಿಗಣಿಸಲು ಪ್ರಸ್ತಾವ; ಗೊತ್ತಿರಬೇಕಾದ 10 ಅಂಶಗಳು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Nov 17, 2021 | 6:47 PM

ಕ್ರಿಪ್ಟೋಕರೆನ್ಸಿಗಳಿಗೆ ನಿಯಮಾವಳಿಗಳನ್ನು ರೂಪಿಸುವ ಬಗ್ಗೆ ವಿವಿಧ ಬಗೆಯ ಚಿಂತನೆಗಳು ನಡೆಯುತ್ತಿವೆ. ಭಾರತದಲ್ಲಿ ಡಿಜಿಟಲ್​ ಕಾಯಿನ್​ಗಳನ್ನು ಅಧಿಕೃತವಾಗಿ ಮಾನ್ಯ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳುವ ಮುನ್ನ ಕೆಲವು ವಿಚಾರಗಳ ಬಗ್ಗೆ ದೀರ್ಘವಾದ ಚರ್ಚೆಗಳು ನಡೆಯುತ್ತಿವೆ. ಉದಾಹರಣೆಗೆ ಕ್ರಿಪ್ಟೋವನ್ನು ವರ್ಚುವಲಿ ಹಣ ಎಂದು ಪರಿಗಣಿಸಬೇಕೆ ಅಥವಾ ಕಮಾಡಿಟಿ ಎಂಂದು ಗಣನೆಗೆ ತೆಗೆದುಕೊಳ್ಳಬೇಕೆ ಅಥವಾ ಆಸ್ತಿ ಎಂದುಕೊಳ್ಳಬೇಕೆ ಎಂಬ ಕುರಿತು ಗಂಭೀರ ಚರ್ಚೆ ನಡೆಯುತ್ತಿದೆ. ಕಳೆದ ವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಕ್ರಿಪ್ಟೋಕರೆನ್ಸಿಗಳ ಭವಿಷ್ಯದ ಬಗ್ಗೆ ಚರ್ಚೆ ನಡೆಯಿತು. ಈಗ ಇರುವಂತೆಯೇ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಗಳು ಅನಿಯಂತ್ರಿತವಾಗಿಯೇ ಮುಂದುವರಿದರೆ ಅಕ್ರಮ ಹಣ ವರ್ಗಾವಣೆಗೆ ಹಾಗೂ ಭಯೋತ್ಪಾದನೆಗೆ ಹಣಕಾಸು ನೆರವು ಸಿಕ್ಕುತ್ತದೆ. ಇದು ಆತಂಕಕ್ಕೆ ಕಾರಣವಾಗಿದೆ. ಭಾರತದಲ್ಲಿ ಕ್ರಿಪ್ಟೋಕರೆನ್ಸಿಗಳನ್ನು ಹೇಗೆ ಗಣನೆಗೆ ತೆಗೆದುಕೊಳ್ಳಬಹುದು ಎಂಬ ಬಗ್ಗೆ 10 ಅಂಶಗಳು ಇಲ್ಲಿವೆ:

1. ಕ್ರಿಪ್ಟೋಕರೆನ್ಸಿಗಳನ್ನು ಬಳಸಿ ವಹಿವಾಟು ಮಾಡುವುದಕ್ಕಾಗಲಿ ಅಥವಾ ಪಾವತಿಗಾಗಲೀ ಕೇಂದ್ರ ಸರ್ಕಾರವು ಅವಕಾಶ ನೀಡುವ ಸಾಧ್ಯತೆಗಳಿಲ್ಲ. ಆದರೆ ಅವುಗಳನ್ನು ಚಿನ್ನ, ಷೇರುಗಳು ಅಥವಾ ಬಾಂಡ್​ಗಳಂತೆ ಪರಿಗಣಿಸುವ ಸಾಧ್ಯತೆ ಇದೆ ಎಂದು ಬುಧವಾರ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

2. ಹೊಸ ಹೂಡಿಕೆದಾರರನ್ನು ಆಕರ್ಷಿಸಲು ಸಕ್ರಿಯವಾಗಿ ಪ್ರಯತ್ನಿಸುತ್ತಿರುವ ವಿನಿಮಯ ಕೇಂದ್ರಗಳು ಮತ್ತು ಪ್ಲಾಟ್​ಫಾರ್ಮ್​ಗಳನ್ನು ಒಳಗೊಂಡಂತೆ ಕ್ರಿಪ್ಟೋ ಕಂಪೆನಿಗಳನ್ನು ನಿಲ್ಲಿಸಲು ಸರ್ಕಾರವು ಉತ್ಸುಕವಾಗಿರುವುದರಿಂದ ಈ ವಿಧಾನವು ಸಂಪೂರ್ಣ ನಿಷೇಧ ಜಾರಿಗೊಳಿಸುವುದನ್ನು ತಪ್ಪಿಸುತ್ತದೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ.

3. ಸೆಕ್ಯೂರಿಟೀಸ್ ಅಂಡ್ ಎಕ್ಸ್​ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ)ವನ್ನು ನಿಯಂತ್ರಕವಾಗಿ ನಿಯೋಜಿಸಬಹುದು. ಇದು ಅಂತಿಮ ಅಂತಲ್ಲದಿದ್ದರೂ ವರದಿಯಲ್ಲಿ ಈ ಬಗ್ಗೆ ಪ್ರಸ್ತಾವ ಮಾಡಲಾಗಿದೆ.

4. ಕ್ರಿಪ್ಟೋವನ್ನು ಕರೆನ್ಸಿ ಎಂದು ಪರಿಗಣಿಸುವ ಬದಲಿಗೆ ಆಸ್ತಿ ಎಂಬಂತೆ ವರ್ಗೀಕರಿಸಬೇಕು ಎಂದು ಹೂಡಿಕೆದಾರರು ಭಾರತೀಯ ಅಧಿಕಾರಿಗಳನ್ನು ಹಲವು ಬಾರಿ ಮನವಿ ಮಾಡಿದ್ದಾರೆ. ಹೀಗೆ ಮಾಡುವುದರಿಂದ ಸ್ವೀಕಾರಾರ್ಹತೆ ಪಡೆಯುತ್ತದೆ ಮತ್ತು ನಿಷೇಧವನ್ನು ತಡೆಯಬಹುದು.

5. ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಡಿಜಿಟಲ್ ಕರೆನ್ಸಿ ಮಿಶ್ರವಾದ ಸಂಬಂಧ ಹೊಂದಿದೆ. 2018ರಲ್ಲಿ ಕ್ರಿಪ್ಟೋ ವಹಿವಾಟುಗಳನ್ನು ನಿಷೇಧಿಸಲಾಯಿತು. ಆದರೆ ಸುಪ್ರೀಂ ಕೋರ್ಟ್​ನಿಂದ 2020ರ ಮಾರ್ಚ್​ನಲ್ಲಿ ಆ ನಿರ್ಬಂಧವನ್ನು ತೆರವುಗೊಳಿಸಲಾಯಿತು.

6. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ (RBI) ಇದುವರೆಗೆ ಕ್ರಿಪ್ಟೋಕರೆನ್ಸಿಗಳನ್ನು ಸ್ವೀಕರಿಸಲು ಇಷ್ಟವಿರಲಿಲ್ಲ. ಸ್ಥೂಲ ಆರ್ಥಿಕ ಮತ್ತು ಆರ್ಥಿಕ ಸ್ಥಿರತೆ ಹಾಗೂ ಬಂಡವಾಳ ನಿಯಂತ್ರಣಗಳಿಗೆ ಸಂಭವನೀಯ ಅಪಾಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಕ್ರಿಪ್ಟೋಕರೆನ್ಸಿಗಳ ವಿಷಯದ ಬಗ್ಗೆ ಭಾರತಕ್ಕೆ ಹೆಚ್ಚು ಆಳವಾದ ಚರ್ಚೆಗಳ ಅಗತ್ಯವಿದೆ ಎಂದು ಹೇಳಿದ್ದಾರೆ. “ಸ್ಥೂಲ ಆರ್ಥಿಕ ಮತ್ತು ಆರ್ಥಿಕ ಸ್ಥಿರತೆಯ ದೃಷ್ಟಿಯಿಂದ ನಾವು ಗಂಭೀರ ಕಾಳಜಿಯನ್ನು ಹೊಂದಿದ್ದೇವೆ ಎಂದು ಕೇಂದ್ರೀಯ ಬ್ಯಾಂಕ್ ಹೇಳಿದಾಗ, ಇದರಲ್ಲಿ ಆಳವಾದ ಸಮಸ್ಯೆಗಳಿವೆ. ಈ ವಿಷಯಗಳ ಬಗ್ಗೆ ಸಾರ್ವಜನಿಕ ವೇದಿಕೆಗಳಲ್ಲಿ ಇನ್ನೂ ಗಂಭೀರವಾದ, ಚೆನ್ನಾಗಿ ತಿಳಿವಳಿಕೆಯುಳ್ಳ ಚರ್ಚೆಗಳನ್ನು ನೋಡಬೇಕಾಗಿದೆ,” ಎಂದು ದಾಸ್ ಹೇಳಿದ್ದಾರೆ.

7. ಆದರೂ ರಿಸರ್ವ್​ ಬ್ಯಾಂಕ್ ಆಫ್​ ಇಂಡಿಯಾ ಡಿಜಿಟಲ್ ಕರೆನ್ಸಿ ಬಗ್ಗೆ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರವು ಕ್ರಿಪ್ಟೋ ಮಸೂದೆಯನ್ನು ತರುವ ಸಾಧ್ಯತೆ ಇದೆ. ನವೆಂಬರ್ 29ನೇ ತಾರೀಕಿನಿಂದ ಆರಂಭ ಆಗಲಿರುವ ಸಂಸತ್​ನ ಚಳಿಗಾಲದ ಅಧಿವೇಶನದಲ್ಲಿ ಹೊಸ ಮಸೂದೆ ಮಂಡಿಸಬಹುದು.

8. ಭಾರತದ ಡಿಜಿಟಲ್ ಕರೆನ್ಸಿ ಮಾರುಕಟ್ಟೆ ಮೌಲ್ಯ 2021ರ ಮೇ ತಿಂಗಳಲ್ಲಿ 660 ಕೋಟಿ ಅಮೆರಿಕನ್ ಡಾಲರ್ ಇತ್ತು. 2020ರ ಏಪ್ರಿಲ್​ನಲ್ಲಿ ಇದು 923 ಮಿಲಿಯನ್ ಡಾಲರ್ ಇತ್ತು ಎಂದು ಬ್ಲಾಕ್​ಚೈನ್ ಡೇಟಾ ಪ್ಲಾಟ್​ಫಾರ್ಮ್ ಚೈನಾಲಿಸಿಸ್ ತಿಳಿಸಿದೆ.

9. ಅನಿಯಂತ್ರಿತ ಪರಿಸರವು ಹೆಚ್ಚು ದೇಶೀಯ ಉಳಿತಾಯವನ್ನು ಆಸ್ತಿ ವರ್ಗದ ಕಡೆಗೆ ಕಳುಹಿಸಬಹುದು ಮತ್ತು ಕುಟುಂಬದ ಉಳಿತಾಯಕ್ಕೆ ಅಪಾಯ ಉಂಟುಮಾಡಬಹುದು ಎಂದು ವರ್ಚುವಲ್ ಕಾಯಿನ್​ಗಳಲ್ಲಿನ ವಹಿವಾಟುಗಳಿಗೆ ಕಠಿಣ ನಿಯಮಗಳನ್ನು ವಿಧಿಸಲು ಭಾರತದಲ್ಲಿ ಕೇಳಲಾಗುತ್ತಿದೆ.

10. ಆರ್​ಬಿಐ ಮತ್ತು ಸೆಬಿ ಕೂಡ ಭಾರತದಲ್ಲಿ ದಿನದಿನಕ್ಕೂ ಕ್ರಿಪ್ಟೋಕರೆನ್ಸಿಗಳು ಅನಿಯಂತ್ರಿತ ಬೆಳವಣಿಗೆಗಳ ಬಗ್ಗೆ ಆತಂಕದ ಧ್ವನಿ ಎತ್ತಿದೆ. ಭಾರತದಲ್ಲಿನ ದುರ್ಬಲ ರೀಟೇಲ್​ ಹೂಡಿಕೆದಾರರನ್ನು ಗಮನದಲ್ಲಿ ಇಟ್ಟುಕೊಂಡು ಈ ಬಗ್ಗೆ ಅಭಿಪ್ರಾಯ ವ್ಯಕ್ತವಾಗಿದೆ.

ಇದನ್ನೂ ಓದಿ: Cryptocurrency: ಕ್ರಿಪ್ಟೋಕರೆನ್ಸಿಯ “ತೀರ ಆಳವಾದ” ಸಮಸ್ಯೆಗಳ ಬಗ್ಗೆ ಎಚ್ಚರಿಕೆ ನೀಡಿದ ಆರ್​ಬಿಐ ಗವರ್ನರ್ ದಾಸ್

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್