Flexi Benefits Plan: ಫ್ಲೆಕ್ಸಿಬಲ್ ಬೆನಿಫಿಟ್ಸ್ ಪ್ಲಾನ್ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ತಿಳಿದುಕೊಳ್ಳಬೇಕಾದ ಮಾಹಿತಿ
ಫ್ಲೆಕ್ಸಿಬಲ್ ಬೆನಿಫಿಟ್ಸ್ ಪ್ಲಾನ್ ಬಗ್ಗೆ ನಿಮಗೆ ಗೊತ್ತಿರಬೇಕಾದ ಸಂಗತಿಗಳು ಇಲ್ಲಿವೆ. ಇದರ ಲೆಕ್ಕಾಚಾರ ಹೇಗೆ, ಏನು ಎಂಬಿತ್ಯಾದಿ ವಿವರಗಳು ಇಲ್ಲಿವೆ.
ನಿಮಗೆ ಫ್ಲೆಕ್ಸಿಬಲ್ ಬೆನಿಫಿಟ್ಸ್ ಪ್ಲಾನ್ (FBP) ಬಗ್ಗೆ ಎಷ್ಟು ಗೊತ್ತು? ಇದರ ಮೂಲಕ ಊಟದ ಕೂಪನ್‌ಗಳು, ವೈದ್ಯಕೀಯ ವೆಚ್ಚಗಳು ಮತ್ತು ಪ್ರಯಾಣದಂಥದ್ದರ ಪ್ರಯೋಜನಗಳ ಆಧಾರದ ಮೇಲೆ CTC (ಕಾಸ್ಟ್ ಟು ಕಂಪೆನಿ) ಅಂಶಗಳನ್ನು ರಚಿಸಲು ಮತ್ತು ಮಾರ್ಪಡಿಸಲು ಉದ್ಯೋಗ ನೀಡಿದಂಥವರಿಗೆ ಅನುಕೂಲ ಆಗುತ್ತದೆ. ಇದು ಉದ್ಯೋಗಿಯಾದವರ ಕಾಸ್ಟ್ ಟು ಕಂಪೆನಿಯ ಒಂದು ಭಾಗವಾಗಿದೆ ಮತ್ತು ಉದ್ಯೋಗಿಗಳಿಗೆ ಸಂಸ್ಥೆಯಲ್ಲಿ ಮೌಲ್ಯಯುತ ಭಾವನೆ ಮೂಡಿಸಲು ಉತ್ತಮ ಮಾರ್ಗವಾಗಿದೆ. ಈ ಮೂಲಕ, ಕಂಪೆನಿಯು ಸರ್ಕಾರದ ನಿಯಮಾವಳಿಗೆ ಅನುಸಾರ, ಕಂಪೆನಿಯ ನಿಯಮಗಳು ಮತ್ತು ಉದ್ಯೋಗಿಯ (Employee) ಸ್ಥಾನದ ಪ್ರಕಾರ ಪ್ಯಾಕೇಜ್‌ಗಳನ್ನು ಸರಿಪಡಿಸಬಹುದು ಮತ್ತು ನಿಯಂತ್ರಿಸಬಹುದು.
ಇದು ಸಂಬಳದ ಒಂದು ಭಾಗವಾಗಿದ್ದು, ಇದರ ಮೂಲಕ ಉದ್ಯೋಗಿಗಳು ನಿರ್ದಿಷ್ಟ ವೆಚ್ಚಗಳ ವಿರುದ್ಧ ಪ್ರಯೋಜನ ಪಡೆಯಬಹುದು ಮತ್ತು ತೆರಿಗೆ ವಿನಾಯಿತಿಗಳಲ್ಲಿ ಸಹಾಯವನ್ನು ಪಡೆಯಬಹುದು. ಉಲ್ಲೇಖಿಸಲಾದ ಫ್ಲೆಕ್ಸಿ ಪಾವತಿ ಮೊತ್ತಕ್ಕೆ ಆಯಾ ವ್ಯಕ್ತಿ ವೆಚ್ಚಗಳ ಪುರಾವೆಯನ್ನು ಸಲ್ಲಿಸಿದರೆ ಅದು ತೆರಿಗೆ ವೇತನವನ್ನು ಕಡಿಮೆ ಮಾಡುತ್ತದೆ. ಆದರೆ ಉದ್ಯೋಗಿಯು ವೆಚ್ಚಗಳ ರಸೀದಿಗಳನ್ನು ಸಲ್ಲಿಸಲು ವಿಫಲವಾದರೆ ತೆರಿಗೆಯ ಮೊತ್ತವನ್ನು ಅವರ ಸಂಬಳದಿಂದ ಕಡಿತಗೊಳಿಸಲಾಗುತ್ತದೆ. ಈ ಲೇಖನದಲ್ಲಿ ಫ್ಲೆಕ್ಸಿ ಪಾವತಿಯ ಎಲ್ಲ ಅಂಶಗಳನ್ನು ಮತ್ತು ತೆರಿಗೆ ಉಳಿತಾಯದಲ್ಲಿ ಅದು ನಿಮಗೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ವಿವರಿಸಲು ಪ್ರಯತ್ನಿಸುತ್ತೇವೆ.
ಫ್ಲೆಕ್ಸಿ ಪಾವತಿಗೆ ಅರ್ಹರಾಗಲು CTCಗೆ ಯಾವುದೇ ಮೇಲಿನ ಅಥವಾ ಕೆಳಗಿನ ಮಿತಿ ಇದೆಯೇ?
ಅರ್ಲಿ ಸ್ಯಾಲರಿ ಸಿಇಒ ಮತ್ತು ಸಹ-ಸಂಸ್ಥಾಪಕ ಅಕ್ಷಯ್ ಮೆಹ್ರೋತ್ರಾ ಪ್ರಕಾರ, ಫ್ಲೆಕ್ಸಿ ಪೇಗೆ ಯಾವುದೇ ಮೇಲಿನ ಅಥವಾ ಕೆಳಗಿನ ಮಿತಿಯಿಲ್ಲ. “ಸಾಮಾನ್ಯವಾಗಿ ಫ್ಲೆಕ್ಸಿ ವೇತನದ ಅಡಿಯಲ್ಲಿ ವಿಶೇಷ ಭತ್ಯೆಯ ಶೇಕಡಾ 50ರ ವರೆಗೆ ಮಾತ್ರ ಕ್ಲೇಮ್ ಮಾಡಬಹುದು. ಮೊತ್ತವು ಸಂಸ್ಥೆಯಾದ್ಯಂತ ಉದ್ಯೋಗಿ ವೇತನ ಬ್ಯಾಂಡ್‌ಗಳೊಂದಿಗೆ ಬದಲಾಗುತ್ತದೆ. ಇದು ಸ್ಲ್ಯಾಬ್-ವಾರು ಉದ್ಯೋಗಿಗಳ ಸಿಟಿಸಿ ಅನ್ನು ಬಕೆಟ್ ಆಧರಿಸಿದೆ. ಹೆಚ್ಚಿನ ತೆರಿಗೆ ಹೊಣೆಗಾರಿಕೆ, ತೆರಿಗೆ ಹೊರೆಯನ್ನು ವಿನಾಯಿತಿ ನೀಡಲು ನೌಕರರನ್ನು ಬೆಂಬಲಿಸಲು ಸಾಮಾನ್ಯವಾಗಿ ತೆರಿಗೆ ಆದಾಯದ ಶೇ 50ರ ವರೆಗೆ ಗರಿಷ್ಠ ಅರ್ಹತೆಯನ್ನು ಮಿತಿಗೊಳಿಸಲಾಗುತ್ತದೆ,” ಎಂದು ಅರ್ಲಿ ಸ್ಯಾಲರಿ ಸಹ-ಸಂಸ್ಥಾಪಕರು ಹೇಳುತ್ತಾರೆ.
ಫ್ಲೆಕ್ಸಿ ಪಾವತಿಯಲ್ಲಿ ಏನೆಲ್ಲವನ್ನು ಸೇರಿಸಬಹುದು?
ಇದು ಉದ್ಯೋಗಿಗಳಿಗೆ ವೇತನ ರಚನೆ ಸೌಲಭ್ಯವಾಗಿದೆ. ಉದ್ಯೋಗದಾತರು ಉದ್ಯೋಗಿಗಳು ಕ್ಲೇಮ್ ಮಾಡಬಹುದಾದ ವಿವಿಧ ಫ್ಲೆಕ್ಸಿಬಲ್ ಅಂಶಗಳನ್ನು ಒದಗಿಸುತ್ತಾರೆ. ಇದರಲ್ಲಿ ಒಳಗೊಳ್ಳುವ ಅಂಶಗಳು ಹೀಗಿವೆ:
– ಬ್ರಾಡ್‌ಬ್ಯಾಂಡ್ ಮತ್ತು ದೂರವಾಣಿ
– ಚಾಲಕ ಭತ್ಯೆ
– ಪುಸ್ತಕಗಳು/ನಿಯತಕಾಲಿಕಗಳು/ಸ್ವಯಂ-ಕಲಿಕೆ ವೆಚ್ಚಗಳು
– ಊಟದ ಚೀಟಿಗಳು
– ಜಿಮ್ ಮತ್ತು ಆರೋಗ್ಯ ಕ್ಲಬ್ ವೆಚ್ಚಗಳು
– ಮೊಬೈಲ್/ಲ್ಯಾಪ್‌ಟಾಪ್ ಖರೀದಿ
ತೆರಿಗೆಗಳನ್ನು ಉಳಿಸಲು ಫ್ಲೆಕ್ಸಿ ಪೇ ಹೇಗೆ ಸಹಾಯ ಮಾಡುತ್ತದೆ?
ಫ್ಲೆಕ್ಸಿಬಲ್ ಬೆನಿಫಿಟ್ಸ್ ಪ್ಲಾನ್ಗಳು (FBP) ಉದ್ಯೋಗದಾತರು ಈ ಬೆನಿಫಿಟ್ಗಳ ಕಾರ್ಯಕ್ರಮಗಳ ವೆಚ್ಚವನ್ನು ಸರಿದೂಗಿಸಲು ವೇತನದಾರರ ಹೆಚ್ಚುವರಿ ಕಡಿತವನ್ನು ತೋರಿಸಬೇಕಾಗುತ್ತದೆ. ತೆರಿಗೆಯನ್ನು ಲೆಕ್ಕಾಚಾರ ಮಾಡುವ ಮೊದಲು ಈ ಕಡಿತವನ್ನು ಉದ್ಯೋಗಿಯ ಆದಾಯದಿಂದ ತೆಗೆದುಕೊಳ್ಳಲಾಗುತ್ತದೆ. ಉದ್ಯೋಗಿಗಳು ತಮ್ಮ ತೆರಿಗೆ ವಿಧಿಸಬಹುದಾದ ಸಂಬಳವನ್ನು ಖರ್ಚುಗಳನ್ನು ಘೋಷಿಸುವ ಮೂಲಕ ಮತ್ತು ಮನೆ ಬಾಡಿಗೆಗಳಂತಹ ಫ್ಲೆಕ್ಸಿಬಲ್ ಪ್ರಯೋಜನಗಳ ಹೆಡ್ ಅಡಿಯಲ್ಲಿ ರಸೀದಿಗಳನ್ನು ತೋರಿಸಬಹುದು. ಈ ಅಂಶವನ್ನು ಮೂಲ ವೇತನದಿಂದ ಬೇರ್ಪಡಿಸಬಹುದು. ಅದರ ಮೇಲೆ ತೆರಿಗೆಯನ್ನು ಲೆಕ್ಕ ಹಾಕಲಾಗುತ್ತದೆ. ಹೀಗಾಗಿ, ನಿಮ್ಮ ಟೇಕ್-ಹೋಮ್ ಸಂಬಳದ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ ಕೆಲವು ಕಂಪೆನಿಗಳು ಸಂಬಳದ ಈ ಭಾಗವನ್ನು ನಂತರದ ದಿನಾಂಕದಲ್ಲಿ ಪಾವತಿಸುತ್ತವೆ ಎಂಬುದನ್ನು ಗಮನಿಸುವುದು ಮುಖ್ಯ. ಹಾಗಾಗಿ ಅದಕ್ಕೆ ತಕ್ಕಂತೆ ಯೋಜನೆ ರೂಪಿಸಬೇಕು.
ಕೆಲವು ಕಂಪೆನಿಗಳು ಫ್ಲೆಕ್ಸಿ ಪೇ ಸೌಲಭ್ಯಗಳನ್ನು ನೀಡುತ್ತವೆ ಆದರೆ ಇತರವು ನೀಡುವುದಿಲ್ಲ ಏಕೆ?
ಮೆಹ್ರೋತ್ರಾ ಪ್ರಕಾರ, ಬಹುತೇಕ ಎಲ್ಲ ವ್ಯವಹಾರಗಳು ಕೆಲಸದ ಪರಿಸ್ಥಿತಿಗಳನ್ನು ಸುಧಾರಿಸಲು, ಉದ್ಯೋಗಿಗಳ ತೃಪ್ತಿ ಮತ್ತು ಧಾರಣವನ್ನು ಹೆಚ್ಚಿಸಲು, ಆರಾಮದಾಯಕತೆ ಹೆಚ್ಚಿಸಲು, ವೆಚ್ಚದ ಕಾರ್ಯಾಚರಣೆಗಳನ್ನು ಕಡಿಮೆ ಮಾಡಲು ಮತ್ತು ಇನ್ನೂ ಹೆಚ್ಚಿನದನ್ನು ಮಾಡಲು ಫ್ಲೆಕ್ಸಿ ಪೇ ಪ್ರಯೋಜನಗಳನ್ನು ಜಾರಿಗೊಳಿಸುತ್ತವೆ. “ಆದರೆ ಇದು ಸಂಸ್ಥೆಗಳು ಅದನ್ನು ಕಾರ್ಯಗತಗೊಳಿಸಲು ಹೇಗೆ ಆಯ್ಕೆ ಮಾಡಿಕೊಳ್ಳುತ್ತವೆ ಎಂಬುದರ ಮೇಲೆ ಅವಲಂಬಿತವಾಗಿದೆ. ಅದನ್ನು ಸರಿಯಾಗಿ ಯೋಜಿಸದಿದ್ದರೆ ಸಂಸ್ಥೆಯು ಕಡಿಮೆ ಉದ್ಯೋಗಿ ಕಾರ್ಯಕ್ಷಮತೆ ಮತ್ತು ಕಡಿಮೆ ವ್ಯಾಪಾರ ಯಶಸ್ಸನ್ನು ಎದುರಿಸಬಹುದು. ಮ್ಯಾನ್‌ಪವರ್ ಗ್ರೂಪ್ ಸೊಲ್ಯೂಷನ್ಸ್‌ನ ಅಧ್ಯಯನವು ವಿಶ್ವದಾದ್ಯಂತ ಶೇಕಡಾ 40ರಷ್ಟು ಅಭ್ಯರ್ಥಿಗಳು ಫ್ಲೆಕ್ಸಿ ಕಾಂಪೊನೆಂಟ್ ಅನ್ನು ಹೇಳಿದ್ದಾರೆ. ವೃತ್ತಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಮುಖ ಮೂರು ಅಂಶಗಳಲ್ಲಿ ಒಂದಾಗಿದೆ,” ಎಂದು ಅವರು ಹೇಳುತ್ತಾರೆ.
ಉದ್ಯೋಗಿಗಳಿಗೆ ಫ್ಲೆಕ್ಸಿ ಆಯ್ಕೆಗಳನ್ನು ಒದಗಿಸಲು ಕಂಪೆನಿಗಳು ಪೂರೈಸಬೇಕಾದ ಯಾವುದೇ ಮಾನದಂಡಗಳಿವೆಯೇ?
ಅದರ ಮೇಲೆ ನಿಯಂತ್ರಕ ಸಂಸ್ಥೆಗಳು ಯಾವುದೇ ಮಾನದಂಡಗಳನ್ನು ನಿಗದಿಪಡಿಸಿಲ್ಲ. ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ಈ ಪ್ರಯೋಜನವನ್ನು ನೀಡಲು ಬಯಸುತ್ತವೆಯೋ ಇಲ್ಲವೋ ಎಂಬುದನ್ನು ಆಯ್ಕೆ ಮಾಡಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: PF New Rules: ಪಿಎಫ್ ಮೇಲೆ ತೆರಿಗೆ ಹಾಕುವುದಕ್ಕೆ ಏಪ್ರಿಲ್ನಿಂದ ಎರಡು ಖಾತೆ; ಏನಿದು ಲೆಕ್ಕಾಚಾರ?
Published On - 8:45 pm, Thu, 2 June 22