Hindenburg case: ಹಿಂಡೆನ್‌ಬರ್ಗ್ ಪ್ರಕರಣದಲ್ಲಿ ಗೌತಮ್ ಅದಾನಿಗೆ ಕ್ಲೀನ್ ಚಿಟ್
ಹಿಂಡೆನ್‌ಬರ್ಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅದಾನಿ ಗ್ರೂಪ್‌ಗೆ ಸೆಬಿ ಕ್ಲೀನ್ ಚಿಟ್ ನೀಡಿದೆ. ಇಂದು (ಸೆಪ್ಟೆಂಬರ್ 18) ತನ್ನ ಅಂತಿಮ ಆದೇಶದಲ್ಲಿ ಸೆಬಿ (ಬಂಡವಾಳ ಮಾರುಕಟ್ಟೆ ನಿಯಂತ್ರಕ) ಹಿಂಡೆನ್‌ಬರ್ಗ್ ಮಾಡಿದ ಆರೋಪಗಳಿಗೆ ಸಂಬಂಧಿಸಿದಂತೆ ಅದಾನಿ ಗ್ರೂಪ್‌ಗೆ ಯಾವುದೇ ದಂಡ ವಿಧಿಸುವುದಿಲ್ಲ ಎಂದು ಹೇಳಿದೆ. ಇದರಿಂದ ಭಾರತದ ಉದ್ಯಮಿ ಗೌತಮ್ ಅದಾನಿಗೆ ಬಿಗ್ ರಿಲೀಫ್ ಸಿಕ್ಕಿದೆ.

ನವದೆಹಲಿ, ಸೆಪ್ಟೆಂಬರ್ 18: ಇಂದು ನಡೆದ ಪ್ರಮುಖ ಬೆಳವಣಿಗೆಯಲ್ಲಿ ಅಮೆರಿಕ ಮೂಲದ ಶಾರ್ಟ್-ಸೆಲ್ಲಿಂಗ್ ಕಂಪನಿ ಹಿಂಡೆನ್‌ಬರ್ಗ್ (Hindenburg) ಆರೋಪಗಳಿಗೆ ಸಂಬಂಧಿಸಿದಂತೆ ಭಾರತದ ಖ್ಯಾತ ಉದ್ಯಮಿ ಗೌತಮ್ ಅದಾನಿ (Goutam Adani) ಗ್ರೂಪ್‌ಗೆ ಸೆಬಿ (SEBI) ಕ್ಲೀನ್ ಚಿಟ್ ನೀಡಿದೆ. ‘ಹಿಂಡೆನ್‌ಬರ್ಗ್‌ನ ಆರೋಪಗಳಲ್ಲಿ ಹುರುಳಿಲ್ಲ, ಅದಕ್ಕೆ ಪುರಾವೆಗಳ ಕೊರತೆ ಇದೆ’ ಎಂದು ಸೆಬಿ ಹೇಳಿದೆ. ಗೌತಮ್ ಅದಾನಿ ಸಮೂಹ ಸಂಸ್ಥೆಗಳ ವಿರುದ್ಧ ಹಿಂಡೆನ್‌ಬರ್ಗ್ ಹೊರಿಸಲಾದ ಎಲ್ಲಾ ಆರೋಪಗಳು ಆಧಾರರಹಿತವೆಂದು ಮಾರುಕಟ್ಟೆ ನಿಯಂತ್ರಕ ಸೆಬಿ ಖಚಿತಪಡಿಸಿದೆ.
ಸೆಪ್ಟೆಂಬರ್ 18ರಂದು ತನ್ನ ಎರಡು ಪ್ರತ್ಯೇಕ ಆದೇಶಗಳಲ್ಲಿ ಹಿಂಡೆನ್‌ಬರ್ಗ್ ಆರೋಪಗಳಿಗೆ ಸಂಬಂಧಿಸಿದಂತೆ ಅದಾನಿ ಗ್ರೂಪ್‌ಗೆ ಯಾವುದೇ ದಂಡ ವಿಧಿಸಲಾಗುವುದಿಲ್ಲ ಎಂದು ಸೆಬಿ ಹೇಳಿದೆ. ಈ ಹಿಂದೆ ಹಿಂಡೆನ್‌ಬರ್ಗ್ ರಿಸರ್ಚ್ ಅದಾನಿ ಗ್ರೂಪ್ ಷೇರುಗಳನ್ನು ಬದಲಾಯಿಸಿದೆ ಎಂದು ಆರೋಪಿಸಿತ್ತು. ಆದರೆ, ಸೆಬಿ ಆ ಕಂಪನಿಯ ವಿರುದ್ಧ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದೆ. ಹಿಂಡೆನ್‌ಬರ್ಗ್ ಪ್ರಕರಣದಲ್ಲಿ ಅದಾನಿ ಗ್ರೂಪ್ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ ಎಂದು ಅಂತಿಮ ಆದೇಶ ನೀಡಿದೆ.
ಇದನ್ನೂ ಓದಿ: ಭೂತಾನ್‌ನಲ್ಲಿ ಅದಾನಿ ಪವರ್‌ನಿಂದ 570 ಮೆಗಾವ್ಯಾಟ್ ಜಲವಿದ್ಯುತ್ ಯೋಜನೆ: ಡ್ರಕ್ ಗ್ರೀನ್ ಜತೆ ಒಪ್ಪಂದಕ್ಕೆ ಸಹಿ
ಸೆಬಿ ಪ್ರಕಾರ, ಇದುವರೆಗೂ ಯಾವುದೇ ನಿಯಮಗಳ ಉಲ್ಲಂಘನೆಯಾಗಿಲ್ಲ, ಮಾರುಕಟ್ಟೆ ಕುಶಲತೆ ಅಥವಾ ಆಂತರಿಕ ವ್ಯಾಪಾರದ ಪುರಾವೆಗಳಿಲ್ಲ. ಇದು ಗೌತಮ್ ಅದಾನಿ, ಅವರ ಸಹೋದರ ರಾಜೇಶ್ ಅದಾನಿ, ಅದಾನಿ ಪೋರ್ಟ್ಸ್, ಅದಾನಿ ಪವರ್, ಅಡಿಕಾರ್ಪ್ ಎಂಟರ್‌ಪ್ರೈಸಸ್ ಲಿಮಿಟೆಡ್ ಮತ್ತು ಅದಾನಿ ಪೋರ್ಟ್ಸ್ ಮತ್ತು ಸ್ಪೆಷಲ್ ಎಕನಾಮಿಕ್ ಜೋನ್ ಲಿಮಿಟೆಡ್‌ಗೆ ಗಮನಾರ್ಹ ಪರಿಹಾರವನ್ನು ಪ್ರತಿನಿಧಿಸುತ್ತದೆ ಎನ್ನಲಾಗಿದೆ.
On Hindenburg’s allegations against Adani group companies, the Securities and Exchange Board of India (SEBI) concludes that there is no violation of the listing agreement or SEBI (LODR), and the impugned transactions do not qualify as “related party transactions” for the reasons… pic.twitter.com/gmjaDHbnjP
— ANI (@ANI) September 18, 2025
ಸಾಲಗಳನ್ನು ಬಡ್ಡಿಯೊಂದಿಗೆ ಮರುಪಾವತಿಸಲಾಗಿದೆ, ಯಾವುದೇ ಹಣವನ್ನು ಬಾಕಿ ಉಳಿಸಿಕೊಂಡಿಲ್ಲ. ಅದಾನಿ ಪೋರ್ಟ್ಸ್ ಅಡಿಕಾರ್ಪ್ ಎಂಟರ್‌ಪ್ರೈಸಸ್‌ಗೆ ಹಣವನ್ನು ವರ್ಗಾಯಿಸಿದೆ ಎಂದು ಸೆಬಿ ಹೇಳಿದೆ. ಅದು ಅದಾನಿ ಪವರ್‌ಗೆ ಹಣವನ್ನು ಸಾಲವಾಗಿ ಒದಗಿಸಿದೆ. ಆದರೆ, ಅದಾನಿ ಪವರ್ ಅಡಿಕಾರ್ಪ್ ಎಂಟರ್‌ಪ್ರೈಸಸ್‌ಗೆ ಸಾಲಗಳನ್ನು ಮರುಪಾವತಿಸಿತು. ನಂತರ ಅದು ಅದಾನಿ ಪೋರ್ಟ್ಸ್‌ಗೆ ಬಡ್ಡಿಯೊಂದಿಗೆ ಮರುಪಾವತಿಸಿತು. ಅದು ತನಿಖೆ ನಡೆಸುತ್ತಿದ್ದ ಮತ್ತೊಂದು ಪ್ರಕರಣದಲ್ಲಿ, ಅದಾನಿ ಪೋರ್ಟ್ಸ್ ಮೈಲ್‌ಸ್ಟೋನ್ ಟ್ರೇಡ್‌ಲಿಂಕ್‌ಗಳಿಗೆ ಹಣವನ್ನು ಸಾಲವಾಗಿ ವರ್ಗಾಯಿಸಿತು. ನಂತರ ಅದನ್ನು ಅದಾನಿ ಪವರ್‌ಗೆ ವರ್ಗಾಯಿಸಲಾಯಿತು. ಆದರೆ ಅದಾನಿ ಪವರ್ ಕಂಪನಿಯು ಮೈಲ್‌ಸ್ಟೋನ್ ಟ್ರೇಡ್‌ಲಿಂಕ್‌ಗಳಿಗೆ ಸಾಲವನ್ನು ಮರುಪಾವತಿಸಿತು. ನಂತರ ಅದು ಅದಾನಿ ಪೋರ್ಟ್ಸ್‌ಗೆ ಬಡ್ಡಿಯೊಂದಿಗೆ ಮರುಪಾವತಿಸಿತು ಎಂದು ಸೆಬಿ ಹೇಳಿದೆ.
ಇದನ್ನೂ ಓದಿ: Adani Green: ಭಾರತದ ಇತಿಹಾಸದಲ್ಲೇ ಅತಿಹೆಚ್ಚು ನವೀಕರಣ ಇಂಧನ ಉತ್ಪಾದನೆ: ಅದಾನಿ ಕಂಪನಿ ದಾಖಲೆ
ಹಿಂಡನ್ ಬರ್ಗ್ ಆರೋಪಗಳೇನು?:
ಅದಾನಿ ಗ್ರೂಪ್ ಜನವರಿ 2021ರಲ್ಲಿ ಅಡಿಕಾರ್ಪ್ ಎಂಟರ್‌ಪ್ರೈಸಸ್, ಮೈಲ್‌ಸ್ಟೋನ್ ಟ್ರೇಡ್‌ಲಿಂಕ್ಸ್ ಮತ್ತು ರೆಹ್ವರ್ ಇನ್ಫ್ರಾಸ್ಟ್ರಕ್ಚರ್ ಎಂಬ 3 ಕಂಪನಿಗಳನ್ನು ಅದಾನಿ ಗ್ರೂಪ್ ಕಂಪನಿಗಳ ನಡುವೆ ಹಣವನ್ನು ವರ್ಗಾಯಿಸಲು ಮಾರ್ಗಗಳಾಗಿ ಬಳಸಿಕೊಂಡಿದೆ ಎಂದು ಹಿಂಡೆನ್‌ಬರ್ಗ್ ಆರೋಪಿಸಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




