AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈಲು ಟಿಕೆಟ್ ಬುಕಿಂಗ್ ಮಾಡಬೇಕೆನ್ನುವವರ ಗಮನಕ್ಕೆ: ಅ. 1ರಿಂದ ಹೊಸ ಆಧಾರ್ ನಿಯಮ

Indian Railways online ticket booking rules: ಅಕ್ಟೋಬರ್ 1ರಿಂದ ರೈಲು ಟಿಕೆಟ್ ಬುಕಿಂಗ್​ಗೆ ಆಧಾರ್ ಅಥೆಂಟಿಕೇಶನ್ ನಿಯಮ ಮಾಡಲಾಗುತ್ತಿದೆ. ಎರಡು ತಿಂಗಳ ಬುಕಿಂಗ್ ವಿಂಡೋದಲ್ಲಿ ಮೊದಲ 15 ನಿಮಿಷಗಳಲ್ಲಿ ಟಿಕೆಟ್ ಬುಕಿಂಗ್ ಮಾಡುವವರು ಆಧಾರ್ ದೃಢೀಕರಣ ನೀಡುವುದು ಕಡ್ಡಾಯ. ಬೋಟ್​ಗಳು ಮತ್ತು ಮಧ್ಯವರ್ತಿಗಳು ಬೇಗ ಟಿಕೆಟ್ ಕಾಯ್ದಿರಿಸುವುದನ್ನು ತಪ್ಪಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ.

ರೈಲು ಟಿಕೆಟ್ ಬುಕಿಂಗ್ ಮಾಡಬೇಕೆನ್ನುವವರ ಗಮನಕ್ಕೆ: ಅ. 1ರಿಂದ ಹೊಸ ಆಧಾರ್ ನಿಯಮ
ರೈಲ್ವೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 18, 2025 | 5:30 PM

Share

ನವದೆಹಲಿ, ಸೆಪ್ಟೆಂಬರ್ 18: ಟ್ರೈನ್​ನಲ್ಲಿ ಊರಿಗೆ ಹೋಗಬೇಕೆನ್ನುವವರು ತಿಂಗಳುಗಳ ಹಿಂದೆಯೇ ಟಿಕೆಟ್ ಬುಕಿಂಗ್ ಮಾಡುವುದು ಈಗ ಅನಿವಾರ್ಯ. ಅದರಲ್ಲೂ ಬಹಳ ಸಾಮಾನ್ಯವಾದ ಮಾರ್ಗಗಳ ಟ್ರೈನುಗಳ ಟಿಕೆಟ್ ಸಿಗುವುದು ನಿಜಕ್ಕೂ ದೊಡ್ಡ ಅದೃಷ್ಟದಂತೆ ಭಾಸವಾಗುತ್ತದೆ. ಎರಡು ತಿಂಗಳ ಮುಂಚೆ ಬುಕಿಂಗ್ ವಿಂಡೋ ಆರಂಭವಾಗಿ ಕೆಲವೇ ನಿಮಿಷಗಳಲ್ಲಿ ಟಿಕೆಟ್​ಗಳು ಬುಕ್ ಆಗಿಯೇ ಬಿಡುತ್ತವೆ. ಮಧ್ಯವರ್ತಿಗಳು, ಬೋಟ್​ಗಳೇ ಹೆಚ್ಚಾಗಿ ಟಿಕೆಟ್ ಕಾಯ್ದಿರಿಸಿಬಿಟ್ಟಿರುತ್ತವೆ. ಇದನ್ನು ತಪ್ಪಿಸಲು ಭಾರತೀಯ ರೈಲ್ವೆ ಇಲಾಖೆಯ ಐಆರ್​ಸಿಟಿಸಿ (Indian Railways) ಈಗ ಆಧಾರ್ ದೃಢೀಕರಣ ನಿಯಮವೊಂದನ್ನು ಜಾರಿಗೆ ತರಲು ಹೊರಟಿದೆ.

ಅಕ್ಟೋಬರ್ 1ರಿಂದ ಜಾರಿಗೆ ಬರಲಿರುವ ಈ ಹೊಸ ನಿಯಮದ ಪ್ರಕಾರ ಬುಕಿಂಗ್ ವಿಂಡೋ ಆರಂಭವಾದ ಮೊದಲ 15 ನಿಮಿಷಗಳಲ್ಲಿ ಯಾರು ಟಿಕೆಟ್ ಬುಕಿಂಗ್ ಮಾಡಲು ಮುಂದಾಗುತ್ತಾರೋ ಅವರು ಆಧಾರ್ ದೃಢೀಕರಣ ಮಾಡಬೇಕು ಎಂಬುದು ಕಡ್ಡಾಯ.

ಇದನ್ನೂ ಓದಿ: ಭಾರತದಲ್ಲಿ 7,000 ಕಿಮೀ ಬುಲೆಟ್ ರೈಲು ನೆಟ್ವರ್ಕ್​ನ ಗುರಿ; ದಕ್ಷಿಣ ಭಾರತದ 4 ನಗರಗಳಲ್ಲಿ ಬುಲೆಟ್ ರೈಲಿಗೆ ಸರ್ವೆ

ಈ ಮುಂಚೆ, ತತ್ಕಾಲ್ ಸ್ಕೀಮ್ ಅಡಿ ಟಿಕೆಟ್ ಬುಕಿಂಗ್ ಮಾಡಲು ಆಧಾರ್ ದೃಢೀಕರಣ ಕಡ್ಡಾಯವಾಗಿತ್ತು. ಈಗ ಜನರಲ್ ರಿಸರ್ವೇಶನ್​ಗಳಿಗೂ ಮೊದಲ 15 ನಿಮಿಷ ಆಧಾರ್ ಅಥೆಂಟಿಕೇಶನ್ ನಿಯಮ ತರಲಾಗಿದೆ. ಬುಕಿಂಗ್ ವಿಂಡೋ ಶುರುವಾಗಿ 15 ನಿಮಿಷಗಳ ಬಳಿಕ ಆಧಾರ್ ಅಥೆಂಟಿಕೇಶನ್ ಅವಶ್ಯಕತೆ ಇಲ್ಲದೆಯೇ ಯಾರು ಬೇಕಾದರೂ ಬುಕಿಂಗ್ ಮಾಡಲು ಅವಕಾಶ ಇರುತ್ತದೆ.

ಇಲ್ಲಿ ಮೇಲೆ ತಿಳಿಸಿರುವ ಆಧಾರ್ ಅಥೆಂಟಿಕೇಶನ್ ನಿಯಮವು ಆನ್​ಲೈನ್​ನಲ್ಲಿ ಮೊದಲ 15 ನಿಮಿಷದಲ್ಲಿ ಮಾಡಲಾಗುವ ಬುಕಿಂಗ್​ಗಳಿಗೆ ಮಾತ್ರ. ರೈಲ್ವೆ ಸೆಂಟರ್​ಗಳ ಕೌಂಟರ್​ಗಳಲ್ಲಿ ಯಥಾಪ್ರಕಾರ ಹೋಗಿ ಟಿಕೆಟ್ ಬುಕಿಂಗ್ ಮಾಡಿಸಿಕೊಳ್ಳಬಹುದು. ಅದರಲ್ಲಿ ಯಾವ ಬದಲಾವಣೆಯೂ ಇಲ್ಲ.

ಇನ್ನು, ರೈಲ್ವೆ ಟಿಕೆಟ್ ಬುಕಿಂಗ್ ಮಾಡಿಸಿಕೊಡುವ ಏಜೆಂಟ್​ಗಳಿರುತ್ತಾರೆ. ಅವರಿಗೂ ಕೂಡ ಈಗಿರುವ ನಿಯಮವೇ ಮುಂದುವರಿಯುತ್ತದೆ. ಅಂದರೆ, ಟಿಕೆಟ್ ಬುಕಿಂಗ್ ವಿಂಡೋ ತೆರೆದು ಮೊದಲ 10 ನಿಮಿಷ ಈ ಏಜೆಂಟ್​ಗಳು ಟಿಕೆಟ್ ಬುಕಿಂಗ್ ಮಾಡಲು ಅವಕಾಶ ಇರುವುದಿಲ್ಲ.

ಇದನ್ನೂ ಓದಿ: ಭಾರತದ ಮೇಲೆ ಟ್ಯಾರಿಫ್ ಅನ್ನು ಶೇ. 50ರಿಂದ ಶೇ. 10ಕ್ಕೆ ಇಳಿಸಲಿದೆಯಾ ಅಮೆರಿಕ?

ಐಆರ್​ಸಿಟಿಸಿಯಲ್ಲಿ ಅಕೌಂಟ್ ತೆರೆದು ಆಧಾರ್ ಲಿಂಕ್ ಮಾಡಿರಬೇಕು

ನೀವು ರೆಗ್ಯುಲರ್ ಆಗಿ ರೈಲಿನಲ್ಲಿ ಓಡಾಡುತ್ತೀರಿ ಎಂದಾದರೆ ಮತ್ತು ನೀವೇ ಸ್ವತಃ ಟಿಕೆಟ್ ಬುಕಿಂಗ್ ಮಾಡುತ್ತೀರಿ ಎಂದಾದರೆ, ಐಆರ್​ಸಿಟಿಸಿ ವೆಬ್​ಸೈಟ್​ನಲ್ಲಿ ಅಕೌಂಟ್ ತೆರೆಯುವುದು ಉತ್ತಮ. ಆ ನಿಮ್ಮ ಅಕೌಂಟ್​ಗೆ ಆಧಾರ್ ಲಿಂಕ್ ಮಾಡಿರಬೇಕು. ಆಗ ಟಿಕೆಟ್ ಬುಕಿಂಗ್ ತೆರೆದ ಮೊದಲ 15 ನಿಮಿಷದಲ್ಲಿ ಐಆರ್​ಸಿಟಿಸಿಗೆ ಲಾಗಿನ್ ಆಗಿ ಆಧಾರ್ ದೃಢೀಕರಣದೊಂದಿಗೆ ಟಿಕೆಟ್ ಬುಕಿಂಗ್ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ