ಸೆಬಿ ಛೇರ್ಮನ್​ಗೆ ಹಿಂಡನ್ಬರ್ಗ್ ಹೊಸ ಚಾಲೆಂಜ್; ಅಮೆರಿಕದ ಶಾರ್ಟ್ ಸೆಲ್ಲರ್ ವಿರುದ್ಧ ಮಂತ್ರಿ ಮಹೋದಯರ ಆಕ್ರೋಶ

Hindenburg challenge to SEBI chairman Madhabi Puri Buch: ಸೆಬಿ ವಿರುದ್ಧ ಹಿಂಡನ್ಬರ್ಗ್ ಆರೋಪ ಮುಂದುವರಿದಿದೆ. ಸೆಬಿ ಮುಖ್ಯಸ್ಥೆ ಮಾಧವಿ ಪುರಿ ಬುಚ್ ಅವರು ತಮ್ಮೆಲ್ಲಾ ಸಾಗರೋತ್ತರ ಫಂಡ್​ಗಳ ಕ್ಲೈಂಟ್ ಲಿಸ್ಟ್ ಬಹಿರಂಗಪಡಿಸಬೇಕು ಎಂದು ಹಿಂಡನ್ಬರ್ಗ್ ಸವಾಲು ಹಾಕಿದೆ. ಹಿಂಡನ್ಬರ್ಗ್ ವರದಿಯಲ್ಲಿ ಬಂದ ಪ್ರತಿಯೊಂದು ಆರೋಪಗಳಿಗೂ ಮಾಧವಿ ಉತ್ತರ ಕೊಟ್ಟಿದ್ದಾರೆ. ಈ ಮಧ್ಯೆ, ಹಿಂಡನ್ಬರ್ಗ್ ವರದಿಯು ದೇಶದಲ್ಲಿ ಅಸ್ಥಿರತೆ ನಿರ್ಮಿಸುವ ಉದ್ದೇಶದ್ದಾಗಿದೆ ಎಂದು ಬಿಜೆಪಿ ನಾಯಕರು ಕಿಡಿಕಾರುತ್ತಿದ್ದಾರೆ.

ಸೆಬಿ ಛೇರ್ಮನ್​ಗೆ ಹಿಂಡನ್ಬರ್ಗ್ ಹೊಸ ಚಾಲೆಂಜ್; ಅಮೆರಿಕದ ಶಾರ್ಟ್ ಸೆಲ್ಲರ್ ವಿರುದ್ಧ ಮಂತ್ರಿ ಮಹೋದಯರ ಆಕ್ರೋಶ
ಸೆಬಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 12, 2024 | 3:02 PM

ನವದೆಹಲಿ, ಆಗಸ್ಟ್ 12: ಅದಾನಿ ಗ್ರೂಪ್ ವಿರುದ್ಧ ಒಂದೂವರೆ ವರ್ಷದ ಹಿಂದೆ ಸ್ಫೋಟಕ ವರದಿ ಬಿಡುಗಡೆ ಮಾಡಿದ್ದ ಹಿಂಡನ್ಬರ್ಗ್ ಮೊನ್ನೆ ಸೆಬಿ ಮುಖ್ಯಸ್ಥೆ ವಿರುದ್ಧವೇ ಆರೋಪಗಳನ್ನು ಮಾಡುವ ವರದಿ ಬಿಡುಗಡೆ ಮಾಡಿತು. ಇದರ ಬೆನ್ನಲ್ಲೇ ಸೆಬಿ ಮತ್ತು ಅದರ ಮುಖ್ಯಸ್ಥೆ ಮಾಧಬಿ ಪುರಿ ಬುಚ್ ಅವರು ಈ ಆರೋಪಗಳಿಗೆ ಒಂದೊಂದಾಗಿ ಉತ್ತರ ಕೊಟ್ಟರು. ಅದರ ಬೆನ್ನಲ್ಲೇ ಹಿಂಡನ್ಬರ್ಗ್ ಸಂಸ್ಥೆ ಸೆಬಿ ಮುಖ್ಯಸ್ಥೆಗೆ ಹೊಸ ಸವಾಲು ಹಾಕಿದೆ. ಈ ಬೆಳವಣಿಗೆಗಳ ಮಧ್ಯೆ ಷೇರು ಮಾರುಕಟ್ಟೆ ಏನೂ ಆಗಲ್ಲದಿರುವಂತೆ ಎಂದಿನಂತೆ ನಿರುಮ್ಮಳವಾಗಿದೆ. ಹಿಂಡನ್ಬರ್ಗ್ ವರದಿಯು ಸಂಸತ್ತಿನಲ್ಲಿ ಮಾತ್ರವೇ ಕೋಲಾಹಲ ಸೃಷ್ಟಿಸಿದಂತಿದೆ. ಆಡಳಿತ ಪಕ್ಷಗಳು ಮತ್ತು ವಿಪಕ್ಷಗಳ ಮಧ್ಯೆ ಆರೋಪ ಪ್ರತ್ಯಾರೋಪಗಳಿಗೆ ಈ ಹಿಂಡನ್ಬರ್ಗ್ ವರದಿ ಎಡೆ ಮಾಡಿಕೊಟ್ಟಿದೆ.

ಸೆಬಿ ಮುಖ್ಯಸ್ಥೆಗೆ ಹಿಂಡನ್ಬರ್ಗ್ ಹೊಸ ಸವಾಲು

ಸೆಬಿ ಮುಖ್ಯಸ್ಥೆ ಮಾಧವಿ ಪುರಿ ಬುಚ್ ಅವರು ಕೆಲ ಸಾಗರೋತ್ತರ ಫಂಡ್​ಗಳ ಮೂಲಕ ಅದಾನಿ ಗ್ರೂಪ್ ಜೊತೆ ಶಾಮೀಲಾಗಿದ್ದಾರೆ ಎನ್ನುವಂತಹ ಆರೋಪವನ್ನು ಹಿಂಡನ್ಬರ್ಗ್ ಮೊನ್ನೆಯ ವರದಿಯಲ್ಲಿ ಮಾಡಿತ್ತು. ತಮ್ಮ ಹಿಂದಿನ ಮತ್ತು ಈಗಿನ ಎಲ್ಲಾ ವ್ಯವಹಾರಗಳನ್ನು ಕಾಲ ಕಾಲಕ್ಕೆ ಸೆಬಿ ಬಳಿ ಸಲ್ಲಿಸಿದ್ದೇವೆ ಎಂದು ಹೇಳಿ ಮಾಧವಿ ಬುಚ್ ಮತ್ತು ಅವರ ಪತಿ ಧವಳ್ ಬುಚ್ ಅವರು ಹೇಳಿದ್ದಾರೆ. ಸೆಬಿ ಕೂಡ ಹೌದೆಂದು ಹೇಳಿದೆ. ಇವರ ವ್ಯವಹಾರ ನಂಟು ಇದ್ದ ಪ್ರಕರಣಗಳಿಂದ ಮಾಧಬಿ ಹೇಗೆ ಹಿಂದಕ್ಕೆ ಸರಿಯುತ್ತಾರೆ ಎಂಬುದನ್ನೂ ಸೆಬಿ ತಿಳಿಸಿದೆ.

ಇದನ್ನೂ ಓದಿ: National Herald Case: ನ್ಯಾಷನಲ್​ ಹೆರಾಲ್ಡ್​ ಪ್ರಕರಣ, ರಾಹುಲ್​ ಗಾಂಧಿಗೆ ಸಮನ್ಸ್​ ಕಳುಹಿಸಲು ಇಡಿ ಸಿದ್ಧತೆ

ಇದೇ ಹೊತ್ತಿನಲ್ಲಿ ಹಿಂಡನ್ಬರ್ಗ್ ಮತ್ತೊಮ್ಮೆ ಕುಟುಕಿದೆ. ಮಾಧವಿ ಅವರು ಸಂಬಂಧ ಹೊಂದಿದ್ದ ಸಾಗರೋತ್ತರ ಫಂಡ್ ಅನ್ನು ಅವರ ಪತಿ ಧವಲ್ ಬುಚ್ ಅವರ ಬಾಲ್ಯ ಸ್ನೇಹಿತರೊಬ್ಬರು ನಿರ್ವಹಿಸುತ್ತಿದ್ದರು. ಈ ವ್ಯಕ್ತಿ ಅದಾನಿ ಗ್ರೂಪ್​ನಲ್ಲಿ ನಿರ್ದೇಶಕರಾಗಿದ್ದಾರೆ. ಇದು ಸೆಬಿ ಮುಖ್ಯಸ್ಥೆಯ ಹಿತಾಸಕ್ತಿ ಘರ್ಷಣೆಗೆ ಕಾರಣವಾಗಿದೆ ಎನ್ನುವ ಸಂಗತಿಯನ್ನು ಹಿಂಡನ್ಬರ್ಗ್ ಎತ್ತಿ ತೋರಿಸಿದೆ.

ಹಾಗೆಯೇ, ಮಾಧವಿ ಅವರು ಸಂಬಂಧ ಹೊಂದಿದ ಅಥವಾ ಹೂಡಿಕೆ ಮಾಡಿದ ಎಲ್ಲಾ ಸಾಗರೋತ್ತರ ಸಂಸ್ಥೆಗಳ ಕ್ಲೈಂಟ್​​ಗಳ ಪಟ್ಟಿಯನ್ನು ಬಹಿರಂಗಪಡಿಸಬೇಕು ಎಂದು ಹಿಂಡನ್ಬರ್ಗ್ ಸಂಸ್ಥೆ ಸವಾಲು ಹಾಕಿ ನಿನ್ನೆ ರಾತ್ರಿ ಸರಣಿ ಪೋಸ್ಟ್​ಗಳನ್ನು ಎಕ್ಸ್​ನಲ್ಲಿ ಹಾಕಿದೆ.

ಆಡಳಿತ ಪಕ್ಷಗಳ ನಾಯಕರು ಗರಂ

ಸೆಬಿ ವಿರುದ್ಧ ಹಿಂಡನ್ಬರ್ಗ್ ಮಾಡಿರುವ ಆರೋಪಗಳು ಆಡಳಿತಾರೂಢ ಬಿಜೆಪಿ ಪಕ್ಷದ ನಾಯಕರನ್ನು ಕೆರಳಿಸಿವೆ. ಹಿಂಡನ್ಬರ್ಗ್ ಪ್ರಕರಣವು ದೇಶದ ವಿರುದ್ಧ ನಡೆದಿರುವ ಸಂಚಾಗಿದ್ದು, ಕಾಂಗ್ರೆಸ್ ಪಕ್ಷ ಈ ಟೂಲ್​ಕಿಟ್​ನ ಭಾಗವಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

ಇದನ್ನೂ ಓದಿ: ಹಿಂಡನ್ಬರ್ಗ್ ಎಫೆಕ್ಟ್; ಅದಾನಿ ಕಂಪನಿಗಳನ್ನು ಹೊರತುಪಡಿಸಿ ಷೇರುಪೇಟೆ ಮೇಲೇನೂ ಇಲ್ಲ ದೊಡ್ಡ ಪರಿಣಾಮ

ದೇಶದಲ್ಲಿ ಆರ್ಥಿಕವಾಗಿ ಮತ್ತು ರಾಜಕೀಯಯವಾಗಿ ಅಸ್ಥಿರತೆ ಮತ್ತು ಅರಾಜಕತೆ ಸೃಷ್ಟಿಸುವ ಪ್ರಯತ್ನ ನಡೆದಿವೆ. ಹಿಂಡನ್ಬರ್ಗ್ ವರದಿ ಮೂಲಕ ದೇಶದ ಮಾರುಕಟ್ಟೆಯನ್ನು ಅಸ್ಥಿರಗೊಳಿಸಲು ಯತ್ನಿಸಲಾಗಿದೆ. ಹಿಂಡನ್ಬರ್ಗ್ ಮಾಡಿರುವ ಆರೋಪ ಆಧಾರರಹಿತವಾಗಿದೆ. ದೇಶದ ಜನರು ಇಂಥದ್ದನ್ನು ಸಹಿಸುವುದಿಲ್ಲ ಎಂದು ಬಿಜೆಪಿ ನಾಯಕರಾದ ರವಿಶಂಕರ್ ಪ್ರಸಾದ್, ಗಿರಿರಾಜ್ ಸಿಂಗ್ ಮೊದಲಾದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಷೇರು ಮಾರುಕಟ್ಟೆ ಚೇತರಿಕೆ

ಹಿಂಡನ್ಬರ್ಗ್ ವರದಿಯಿಂದ ಅದಾನಿ ಗ್ರೂಪ್​ನ ಷೇರುಗಳು ಸೋಮವಾರ ಬೆಳಗ್ಗೆ ಹಿನ್ನಡೆ ಕಂಡವು. ಇನ್ನುಳಿದಂತೆ ಮಾರುಕಟ್ಟೆ ನಕಾರಾತ್ಮಕ ಬದಲು ಸಕಾರಾತ್ಮಕವಾಗಿ ಗರಿಗೆದರಿತ್ತು. ಸೆನ್ಸೆಕ್ಸ್ ಸೇರಿದಂತೆ ಹೆಚ್ಚಿನ ಸೂಚ್ಯಂಕಗಳು ಪಾಸಿಟಿವ್ ಆಗಿವೆ. ಅದಾನಿ ಷೇರುಗಳೂ ಕೂಡ ದಿನದ ಎರಡನೇ ಭಾಗದಲ್ಲಿ ಚೇತರಿಕೆ ಕಂಡಿವೆ. ಇದರೊಂದಿಗೆ, ಹಿಂಡನ್ಬರ್ಗ್ ವರದಿ ಭಾರತದ ಮಾರುಕಟ್ಟೆ ಮೇಲೆ ಬೀರಿದ ಪರಿಣಾಮ ತೀರಾ ನಗಣ್ಯ ಎಂಬಂತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್