ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿರುವ ಭಾರತದ ಎಲ್​ಪಿಜಿ ಟ್ಯಾಂಕರ್​ಗಳಲ್ಲಿ ಗ್ಯಾಸ್ ಎಷ್ಟು ದಿನಕ್ಕಾಗುವಷ್ಟಿದೆ ಗೊತ್ತಾ?

LPG consumption in India per day and month: ಹಾರ್ಮುಜ್ ಜಲಸಂಧಿಯಲ್ಲಿ ನೂರಾರು ಹಡಗುಗಳು ಸಾಗಲಾಗದೆ ಸ್ಥಗಿತಗೊಂಡಿವೆ. ಭಾರತದ ಮೂರು ಎಲ್​ಪಿಜಿ ಟ್ಯಾಂಕರ್​ಗಳು ಮಾತ್ರ ಅಲ್ಲಿಂದ ಹೊರಬಂದಿವೆ. ಇನ್ನೂ 22 ಟ್ಯಾಂಕರ್​ಗಳು ಅಲ್ಲಿವೆ. ಅವುಗಳಲ್ಲಿ ಒಟ್ಟು ಮೂರು ಲಕ್ಷ ಮೆಟ್ರಿಕ್ ಟನ್​ಗು ಅಧಿಕ ಎಲ್​ಪಿಜಿ ಇದೆ ಎನ್ನಲಾಗಿದೆ. ಭಾರತದಲ್ಲಿ ಒಂದು ದಿನಕ್ಕೆ ಸುಮಾರು 80,000 ಟನ್​ಗಳಷ್ಟು ಎಲ್​ಪಿಜಿ ಅಗತ್ಯ ಇದೆ.

ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿರುವ ಭಾರತದ ಎಲ್​ಪಿಜಿ ಟ್ಯಾಂಕರ್​ಗಳಲ್ಲಿ ಗ್ಯಾಸ್ ಎಷ್ಟು ದಿನಕ್ಕಾಗುವಷ್ಟಿದೆ ಗೊತ್ತಾ?
ಎಲ್​ಪಿಜಿ

Updated on: Mar 18, 2026 | 6:47 PM

ನವದೆಹಲಿ, ಮಾರ್ಚ್ 18: ಇರಾನ್ ಯುದ್ಧದಿಂದಾಗಿ ಹಾರ್ಮುಜ್ ಜಲಸಂಧಿಗೆ (Hormuz Strait) ತಡೆ ಬಿದ್ದಿದ್ದು, ಗಲ್ಫ್ ರಾಷ್ಟ್ರಗಳಿಂದ ತೈಲ ಮತ್ತಿತರ ಸರಕುಗಳನ್ನು ಹೊತ್ತ ಹಡಗುಗಳು ಹೊರ ಹೋಗಲಾಗದೆ ಸಮುದ್ರದ ನೀರಿನಲ್ಲೇ ನೆಲೆ ನಿಂತಿವೆ. ಈ ಸಮುದ್ರ ಮಾರ್ಗದಿಂದಲೇ ಭಾರತಕ್ಕೆ ಬೇಕಾದ ಹೆಚ್ಚಿನ ಎಲ್​ಪಿಜಿ ಸರಬರಾಜು (LPG supply) ಆಗುವುದು. ದೇಶದಲ್ಲಿ ಎಲ್​ಪಿಜಿಗೆ ಹಾಹಾಕಾರ ನಡೆಯುತ್ತಿರುವಂತೆಯೇ ಹಾರ್ಮುಜ್ ಜಲಸಂಧಿ ಮೂಲಕ ಮೂರು ಭಾರತೀಯ ಎಲ್​ಪಿಜಿ ಟ್ಯಾಂಕರ್​ಗಳು ಭಾರತವನ್ನು ತಲುಪಿವೆ.

ಈ ಮೂರು ಹೊರತುಪಡಿಸಿ ಇನ್ನೂ 22 ಭಾರತೀಯ ನೌಕೆಗಳು ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿವೆ. ಈ 22 ಹಡಗುಗಳಲ್ಲಿ ಒಂದು ಎಲ್​ಎನ್​ಜಿ ಟ್ಯಾಂಕರ್ ಇದೆ. ನಾಲ್ಕು ಹಡುಗಗಳು ಕಚ್ಚಾ ತೈಲ (crude oil) ತುಂಬಿಕೊಂಡಿವೆ. ಒಂದರಲ್ಲಿ ಕೆಮಿಕಲ್ ಮತ್ತಿತರ ಉತ್ಪನ್ನಗಳಿವೆ. ಮೂರು ಕಂಟೇನರ್ ಶಿಪ್​ಗಳಿವೆ. ಎರಡು ಬಲ್ಕ್ ಕ್ಯಾರಿಯರ್​ಗಳಿವೆ. ಎಲ್​ಪಿಜಿ ಹೊತ್ತಿರುವ ಆರು ಹಡಗುಗಳು ಇವೆ.

ಇದನ್ನೂ ಓದಿ: ಅಗತ್ಯ ಇದ್ದರೆ ಮಾತ್ರ ಎಲ್​ಪಿಜಿ ಸಿಲಿಂಡರ್ ಬುಕ್ ಮಾಡಿ: ಇಂಡಿಯನ್ ಆಯಿಲ್ ಮನವಿ

ಎಲ್​ಪಿಜಿ ಹೊತ್ತಿರುವ ಆರು ಹಡಗುಗಳಲ್ಲಿ ಒಟ್ಟು 3 ಲಕ್ಷ ಟನ್​ಗಳಷ್ಟು ಗ್ಯಾಸ್ ಇದೆ. ಈಗಾಗಲೇ ಶಿವಾಲಿಕ್, ನಂದಾದೇವಿ ಮತ್ತು ಜಗ್ ಲಾಡ್ಕಿ ಹಡಗುಗಳು ಒಟ್ಟು 1.7 ಲಕ್ಷಕ್ಕೂ ಅಧಿಕ ಮೆಟ್ರಿಕ್ ಟನ್​ಗಳಷ್ಟು ಎಲ್​ಪಿಜಿಯನ್ನು ಭಾರತಕ್ಕೆ ಸಾಗಿಸಿವೆ. ಈಗ ಹಾರ್ಮುಲ್​ನಲ್ಲಿರುವ ಆರು ಹಡಗುಗಳಲ್ಲಿ ಇನ್ನೂ 3 ಲಕ್ಷ ಟನ್​ಗಳಷ್ಟು ಎಲ್​ಪಿಜಿ ಇದೆ.

ಭಾರತಕ್ಕೆ ಎಷ್ಟು ಎಲ್​ಪಿಜಿ ಬೇಕು?

ಭಾರತದಲ್ಲಿ ಸದ್ಯ ಒಂದು ದಿನದಲ್ಲಿ ಸರಾಸರಿಯಾಗಿ 80,000ದಿಂದ 85,000 ಟನ್​ಗಳಷ್ಟು ಎಲ್​ಪಿಜಿ ಬಳಕೆ ಆಗುತ್ತಿದೆ. ಇದರಲ್ಲಿ ಗೃಹಬಳಕೆಗೆಯೇ ಹೆಚ್ಚಿನ ಎಲ್​ಪಿಜಿ ಹೋಗುತ್ತಿದೆ. ಒಂದು ದಿನದಲ್ಲಿ 50-60 ಲಕ್ಷ ಎಲ್​ಪಿಜಿ ಸಿಲಿಂಡರ್​ಗಳನ್ನು ಸರಬರಾಜು ಮಾಡಲಾಗುತ್ತಿದೆ.

ಇದನ್ನೂ ಓದಿ: ಎಲ್​ಪಿಜಿ ಇಕೆವೈಸಿ ಎಲ್ಲರಿಗೂ ಕಡ್ಡಾಯವಲ್ಲ; ಈ ಗ್ರಾಹಕರಿಗೆ ಮಾತ್ರ ಅನ್ವಯ, ಗಮನಿಸಿ

ಸರ್ಕಾರ ಮಾಡಿರುವ ಅಂದಾಜು ಪ್ರಕಾರ ಮುಂಬರುವ ಹಣಕಾಸು ವರ್ಷದಲ್ಲಿ (2026-27) ಭಾರತದಲ್ಲಿ ಒಂದು ತಿಂಗಳಲ್ಲಿ 29 ಲಕ್ಷ ಟನ್​ಗಳಷ್ಟು ಎಲ್​ಪಿಜಿ ಬೇಕಾಗುತ್ತದೆ. ಸರ್ಕಾರ ದೇಶದೊಳಗೆ ಅಡಗೆ ಅನಿಲ ಉತ್ಪಾದನೆ ಹೆಚ್ಚಿಸಿದರೂ ಒಂದು ತಿಂಗಳಲ್ಲಿ 29-34 ಎಲ್​ಪಿಜಿ ಟ್ಯಾಂಕರ್​ಗಳು ಬೇಕಾಗಬಹುದು ಎಂದು ಮನಿಕಂಟ್ರೋಲ್​ನ ವರದಿ ಮಾಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us