ಸಣ್ಣ ಹೊಟೆಲ್​ಗಳಿಗೆ ಜಿಎಸ್​ಟಿ ಬರೆ: ಹೊಟೆಲ್ ಮಾಲೀಕರ ಸಂಘದ ಅಸಮಾಧಾನ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 17, 2022 | 12:57 PM

ಕೇಂದ್ರ ಸರ್ಕಾರದ ಈ ನಿರ್ಣಯವು ಅವೈಜ್ಞಾನಿಕವಾಗಿದೆ. ದವಸ, ಧಾನ್ಯದ ವ್ಯಾಪಾರದ ಮೇಲೆಯೂ ದೊಡ್ಡ ಹೊರೆಯಾಗಲಿದೆ ಎಂದು ಅವರು ಹೇಳಿದರು.

ಸಣ್ಣ ಹೊಟೆಲ್​ಗಳಿಗೆ ಜಿಎಸ್​ಟಿ ಬರೆ: ಹೊಟೆಲ್ ಮಾಲೀಕರ ಸಂಘದ ಅಸಮಾಧಾನ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಜಿಎಸ್​ಟಿ ಮಂಡಳಿಯ ಸಭೆಯಲ್ಲಿ (GST Council Meet) ತೆಗೆದುಕೊಂಡ ನಿರ್ಣಯದಂತೆ ಕಡಿಮೆ ಬೆಲೆಯ ಹೊಟೆಲ್​ ರೂಮ್​ಗೆ ಶೇ 5ರ ಜಿಎಸ್​ಟಿ ವಿಧಿಸುವ ನಿರ್ಧಾರವನ್ನು ಬೃಹತ್ ಬೆಂಗಳೂರು ಹೊಟೆಲ್ ಮಾಲೀಕರ ಸಂಘವು (Hotel Owners Association) ವಿರೋಧಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸಂಘದ ಅಧ್ಯಕ್ಷ ಪಿ.ಸಿ.ರಾವ್, ‘ಕಡಿಮೆ ಬಾಡಿಗೆ ಇರುವ, ₹ 1 ಸಾವಿರಕ್ಕಿಂತಲೂ ಕಡಿಮೆ ದರ ವಿಧಿಸುವ ಹೋಟೆಲ್​ಗಳಿಗೆ ಇದು ದೊಡ್ಡ ಹೊರೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಸರ್ಕಾರದ ಈ ನಿರ್ಣಯವು ಅವೈಜ್ಞಾನಿಕವಾಗಿದೆ. ದವಸ, ಧಾನ್ಯದ ವ್ಯಾಪಾರದ ಮೇಲೆಯೂ ದೊಡ್ಡ ಹೊರೆಯಾಗಲಿದೆ. ಮಧ್ಯಮ ವರ್ಗ, ವಿದ್ಯಾರ್ಥಿಗಳು, ಪ್ರಯಾಣಿಕರಿಗೂ ತೊಂದರೆಯಾಗಲಿದೆ. ಈ ನಿರ್ಧಾರವನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯಬೇಕು. ಇಲ್ಲದಿದ್ದಲ್ಲಿ ಹೋಟೆಲ್ ಉದ್ಯಮಕ್ಕೆ ಭಾರಿ ಹೊಡೆತ ಬೀಳಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ಮೊಸರು, ಮಜ್ಜಿಗೆ, ಲಸ್ಸಿ ಬೆಲೆ ಹೆಚ್ಚಳ

ಇದನ್ನೂ ಓದಿ
ಇಂದಿನಿಂದ ಮೊಸರು, ಮಜ್ಜಿಗೆ, ಲಸ್ಸಿ ಬೆಲೆ ಹೆಚ್ಚಳ
GST: ಹಾಲಿನ ಉತ್ಪನ್ನಗಳು, ಆಹಾರ ಧಾನ್ಯಗಳ ಮೇಲೆ ಜಿಎಸ್​ಟಿ: ನಾಳೆಯಿಂದ ಜನಸಾಮಾನ್ಯನ ಮೇಲೆ ಬೆಲೆಏರಿಕೆಯ ಮತ್ತೊಂದು ಬರೆ
ಕೆಎಂಎಫ್ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ಆರೋಪ? ಕೆಎಂಎಫ್ ಅಧ್ಯಕ್ಷರು ಸೇರಿ ಮೂವರಿಗೆ ಲೀಗಲ್ ನೋಟಿಸ್ ಜಾರಿ
ಬೆಳಗಾವಿ ನಂದಿನಿ ಹಾಲು ಪೊಟ್ಟಣಗಳ ಮೇಲೆ ಹಿಂದಿ ಭಾಷೆಯಲ್ಲಿ ವಿವರಗಳು! ಹಿಂದಿ ಹೇರಿಕೆ ಆರಂಭಗೊಂಡಿತೇ?

ಹಾಲಿನ ಉತ್ಪನ್ನಗಳ ಮೇಲೆ ಕೇಂದ್ರ ಸರ್ಕಾರವು ಶೇ 5ರ ಸರಕು ಸೇವಾ ಸುಂಕ ವಿಧಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳವು (Karnataka Milk Federation – KMF) ಮೊಸರು, ಮಜ್ಜಿಗೆ ಮತ್ತು ಲಸ್ಸಿ ಬೆಲೆಗಳನ್ನು ಹೆಚ್ಚಿಸಲು ತೀರ್ಮಾನಿಸಿದೆ. ಪ್ರತಿ ಉತ್ಪನ್ನದ ಮೇಲೆ ಸರಾಸರಿ ₹ 1ರಂದ ₹ 3ರವರೆಗೆ ಬೆಲೆ ಹೆಚ್ಚಾಗಲಿದೆ. ಈ ಮೊದಲು ಲೀಟರ್​ ಮೊಸರಿಗೆ ₹ 43 ಇತ್ತು. ನಾಳೆಯಿಂದ (ಜುಲೈ 18) ಅದು ₹ 46 ಆಗಲಿದೆ. ಅರ್ಧ ಲೀಟರ್ ಮೊಸರಿನ ಬೆಲೆ ₹ 22 ಇತ್ತು. ನಾಳೆಯಿಂದ ₹ 24 ಆಗಲಿದೆ. ಮಜ್ಜಿಗೆ 200 ಎಂಎಲ್ ಮಜ್ಜಿಗೆ ಹಾಗೂ ಲಸ್ಸಿ ಮೇಲೆ ₹ 1 ಹೆಚ್ಚಿಸಲಾಗಿದೆ. ಪಾಕೆಟ್​ಗಳ ಮೇಲೆ ಹಳೆಯ ದರಗಳೇ ನಮೂದಾಗಿರುತ್ತವೆ. ಆದರೆ ಗ್ರಾಹಕರು ಹೊಸದಾಗಿ ನಿಗದಿಪಡಿಸಿರುವಷ್ಟು ದರ ನೀಡಿ ಖರೀದಿಸಬೇಕು ಎಂದು ಕೆಎಂಎಫ್ ಪ್ರಕಟಣೆಯಲ್ಲಿ ತಿಳಿಸಿದೆ.

Published On - 12:55 pm, Sun, 17 July 22