Best investment plan: ಯಾವ ಉಳಿತಾಯ ಅಥವಾ ಹೂಡಿಕೆ ಉತ್ತಮ ಎಂಬುದನ್ನು ನಿರ್ಧರಿಸುವುದಕ್ಕೆ ಇಲ್ಲಿದೆ ಸೂತ್ರ

| Updated By: Srinivas Mata

Updated on: Oct 05, 2021 | 9:30 PM

ಸಣ್ಣ ಹೂಡಿಕೆದಾರರು ವಿವಿಧ ಹೂಡಿಕೆಯಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದಕ್ಕೆ ಸೂತ್ರವೊಂದು ಇಲ್ಲಿದೆ. ಇದರ ಆಧಾರದಲ್ಲಿ ಹೂಡಿಕೆ ಆಯ್ಕೆಯನ್ನು ಮಾಡಿಕೊಳ್ಳಬಹುದು.

Best investment plan: ಯಾವ ಉಳಿತಾಯ ಅಥವಾ ಹೂಡಿಕೆ ಉತ್ತಮ ಎಂಬುದನ್ನು ನಿರ್ಧರಿಸುವುದಕ್ಕೆ ಇಲ್ಲಿದೆ ಸೂತ್ರ
ಪ್ರಾತಿನಿಧಿಕ ಚಿತ್ರ
Follow us on

ಹಣವನ್ನು ಹೂಡಿಕೆ ಅಥವಾ ಉಳಿತಾಯ ಮಾಡಬೇಕು ಅಂತ ನಿರ್ಧರಿಸಿದ ಮೇಲೆ ಕೆಲವು ಅನುಮಾನ ಮೂಡುವುದು ಸಹಜ. ಅದರಲ್ಲಿ ಮುಖ್ಯವಾದದ್ದು ಏನೆಂದರೆ, ಯಾವುದರಲ್ಲಿ ಹೂಡಿಕೆ ಮಾಡಬೇಕು? ಮ್ಯೂಚಯವಲ್ ಫಂಡ್ಸ್, ಸುಕನ್ಯಾ ಸಮೃದ್ಧಿ ಯೋಜನಾ (SSY), ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಹೀಗೆ ಆಯ್ಕೆಗಳೆಲ್ಲ ಕಣ್ಣೆದುರು ಬರುತ್ತವೆ. ಆದರೆ ಇವುಗಳಲ್ಲಿ ಹಣ ಯಾವ ವೇಗದಲ್ಲಿ ಬೆಳೆಯುತ್ತದೆ ಎಂಬುದನ್ನು ಲೆಕ್ಕ ಹಾಕಿಕೊಳ್ಳಬೇಕಾಗುತ್ತದೆ. ಇಲ್ಲೊಂದು ಸರಳ ಲೆಕ್ಕಾಚಾರ ಇದೆ. ರೂಲ್ ಆಫ್ 72 ಎಂಬುದು ಅದರ ಹೆಸರು. ಸರ್ಕಾರವು ಸಣ್ಣ ಉಳಿತಾಯ ಯೋಜನೆಗಳಾದ ಪಿಪಿಎಫ್​, ಎಸ್​ಎಸ್​ವೈ ಮತ್ತು ಇತರ ಪೋಸ್ಟ್ ಆಫೀಸ್​ ಯೋಜನೆಗಳ ಬಡ್ಡಿ ದರಗಳು ಸತತ ಆರನೇ ತ್ರೈಮಾಸಿಕವಾದ ಅಕ್ಟೋಬರ್​ನಿಂದ ಡಿಸೆಂಬರ್ ಮಧ್ಯೆ ಕೂಡ ಬದಲಾವಣೆ ಆಗಿಲ್ಲ.

ಹಣ ಬೆಳೆಯುವುದಕ್ಕೆ ಎಷ್ಟು ಸಮಯ ಬೇಕಾಗುತ್ತದೆ ಎಂದು ತಿಳಿಯುವ ಮೊದಲಿಗೆ ಯಾವ ಉದ್ದೇಶಕ್ಕೆ ಹಣ ಕೂಡಿಡುತ್ತೀರಿ ಎಂಬುದನ್ನು ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಉದ್ದೇಶದ ಆಧಾರದ ಮೇಲೆ ಅವಧಿಯ ನಿರ್ಧಾರ ಆಗುತ್ತದೆ. ಉದ್ದೇಶ ಮತ್ತು ರಿಟರ್ನ್ಸ್ ಆಧಾರದಲ್ಲಿ ಯೋಜನೆಯ ಲೆಕ್ಕಾಚಾರ ಹಾಕಿಕೊಳ್ಳಬಹುದು. ಹೂಡಿಕೆ ಡಬಲ್ ಮಾಡಿಕೊಳ್ಳುವುದಕ್ಕೆ ಎಷ್ಟು ಸಮಯ ಬೇಕಾಗುತ್ತದೆ ಎಂಬ ವಿವರ ಇಲ್ಲಿದೆ. “ನಿಯಮ 72″ರ ಅಡಿಯಲ್ಲಿ ಎಷ್ಟು ವೇಗವಾಗಿ ಹಣ ಬೆಳೆಯುತ್ತದೆ ಎಂಬ ಲೆಕ್ಕಾಚಾರ ಇದು. ನಿಯಮ 72 ಅನ್ನು ಬಳಸಿ, ಯಾವ ಹೂಡಿಕೆಗೆ ಎಷ್ಟು ಬಡ್ಡಿ ಬರುತ್ತದೆ ಎಂಬುದನ್ನು ತಿಳಿದುಕೊಂಡು, ಆ ಯೋಜನೆಯಲ್ಲಿ ಎಷ್ಟು ಬೇಗ ಹಣ ದುಪ್ಪಟ್ಟು ಆಗುತ್ತದೆ ಎಂಬುದು ತಿಳಿಯುವುದು ಸಲೀಸು. ಈ ಲೆಕ್ಕಾಚಾರ ಹಾಕಿಕೊಂಡ ನಂತರ ಆಯ್ಕೆ ಮಾಡಿಕೊಳ್ಳುವುದು ಸಲೀಸು. ಲೆಕ್ಕಾಚಾರದ ಸೂತ್ರ ಏನೆಂದರೆ, 72/ರಿಟರ್ನ್ ದರ. ಈಗ ಉದಾಹರಣೆಗಳನ್ನು ನೋಡಿ.

ಫಿಕ್ಸೆಡ್ ಡೆಪಾಸಿಟ್
ಸದ್ಯಕ್ಕೆ ಬ್ಯಾಂಕ್​ ಎಫ್​ಡಿಗಳ ಬಡ್ಡಿ ದರ ಶೇ 5.5ರ ಬಡ್ಡಿ ದರ ಇದೆ. ಈ ದರದಲ್ಲಿ 72/5.5= 13.09 ವರ್ಷ ಬೇಕಾಗುತ್ತದೆ.

ಪಿಪಿಎಫ್​
ಪಿಪಿಎಫ್​ ಬಡ್ಡಿ ದರ ವಾರ್ಷಿಕ ಶೇ 7.1ರ ಬಡ್ಡಿ ದರ ಇದೆ. ಒಂದು ವೇಳೆ ಇದೇ ದರ ಮುಂದುವರಿದಲ್ಲಿ 72/7.1= 10.14 ವರ್ಷ ಆಗುತ್ತದೆ.

ಸುಕನ್ಯಾ ಸಮೃದ್ಧಿ ಯೋಜನಾ
ಈ ಯೋಜನೆಯಲ್ಲಿ ಸದ್ಯಕ್ಕೆ ಶೇ 7.6ರ ಬಡ್ಡಿ ದರ ಇದೆ. ಭವಿಷ್ಯದಲ್ಲೂ ಈ ದರ ಬದಲಾವಣೆ ಆಗುವುದಿಲ್ಲ ಅಂದುಕೊಳ್ಳುವುದಾದಲ್ಲಿ 72/7.6= 9.47 ವರ್ಷ ಸಮಯ ಬೇಕಾಗುತ್ತದೆ.

ನಿಯಮ 72 ಎಂಬುದು ಹಣಕಾಸು ಅಂದಾಜು ಮಾಡುವುದಕ್ಕೆ ಮತ್ತು ಕಾಂಪೌಂಡ್​ ಬಡ್ಡಿ ದರದ ಲೆಕ್ಕಾಚಾರಕ್ಕೆ ಸಹಾಯ ಆಗುತ್ತದೆ. ​

ಇದನ್ನೂ ಓದಿ: Stock Market: ಬಿಎಸ್​ಇಗೆ 107 ದಿನದಲ್ಲಿ 1 ಕೋಟಿ ಹೂಡಿಕೆದಾರರ ಖಾತೆ ಸೇರ್ಪಡೆ, ಒಟ್ಟಾರೆ ಮೀರಿದ 8 ಕೋಟಿ ಗಡಿ