How To Invest In US Stocks: ಅಮೆರಿಕದ ಸ್ಟಾಕ್​ಗಳಲ್ಲಿ ಎನ್​ಎಸ್​ಇ ಐಎಫ್​ಎಸ್​ಸಿ ಮೂಲಕ ಹೂಡಿಕೆ ಮಾಡುವುದು ಹೇಗೆ?

ಎನ್​ಎಸ್​ಇ ಐಎಫ್​ಎಸ್​ಸಿ ಮೂಲಕ ಅಮೆರಿಕದ ಷೇರು ಮಾರುಕಟ್ಟೆಯಲ್ಲಿನ ಸ್ಟಾಕ್​ಗಳಲ್ಲಿ ಹೂಡಿಕೆ ಮಾಡುವುದು ಹೇಗೆ ಎಂಬುದರ ಹಂತಹಂತವಾದ ವಿವರ ಇಲ್ಲಿದೆ.

How To Invest In US Stocks: ಅಮೆರಿಕದ ಸ್ಟಾಕ್​ಗಳಲ್ಲಿ ಎನ್​ಎಸ್​ಇ ಐಎಫ್​ಎಸ್​ಸಿ ಮೂಲಕ ಹೂಡಿಕೆ ಮಾಡುವುದು ಹೇಗೆ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Mar 05, 2022 | 8:09 AM

ಭಾರತದ ರಾಷ್ಟ್ರೀಯ ವಿನಿಮಯ ಕೇಂದ್ರದ (NSE) ಸಂಪೂರ್ಣ ಒಡೆತನ ಇರುವ ಅಂಗಸಂಸ್ಥೆ ಎನ್​ಎಸ್​ಇ ಅಂತಾರಾಷ್ಟ್ರೀಯ ವಿನಿಮಯ ಕೇಂದ್ರ. ಇತ್ತೀಚೆಗೆ ಘೋಷಣೆಯೊಂದನ್ನು ಮಾಡಿತು. ಅದರ ಪ್ರಕಾರ, ಅಮೆರಿಕದ ಆಪಲ್, ಅಮೆಜಾನ್, ಗೂಗಲ್​ನಂಥ 50 ಹೆಸರಾಂತ ಸ್ಟಾಕ್​ಗಳಲ್ಲಿ ಭಾರತದಿಂದಲೇ ವಹಿವಾಟು ನಡೆಸುವುದಕ್ಕೆ ಅವಕಾಶ ಇದೆ. ಈ ಸ್ಟಾಕ್​ಗಳಲ್ಲಿ ಹೂಡಿಕೆ ಮಾಡುವುದಕ್ಕೆ ಸುಲಭವಾದ ದಾರಿ ಇದೆಯಾ ಎಂದು ಎದುರು ನೋಡುತ್ತಿದ್ದವರ ಮಧ್ಯೆ ಈ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು. GIFT ಸಿಟಿಯ ಸ್ಟಾಕ್​ ಎಕ್ಸ್​ಚೇಂಜ್​ ಪ್ರಾಥಮಿಕವಾಗಿ ಭಾರತೀಯ ಸ್ಟಾಕ್​ಗಳು ಮತ್ತು ಡೆರಿವೇಟಿವ್​ಗಳಿಗೆ ಸಂಪರ್ಕ ಸಾಧಿಸಲು ಎನ್​ಆರ್​ಐಗಳು ಮತ್ತು ವಿದೇಶೀಯರಿಗೆ ಸುಲಭ ಅವಕಾಶ ಒದಗಿಸಿತು. ಭಾರತೀಯ ಹೂಡಿಕೆದಾರರಿಗೆ ಮೊದಲ ಬಾರಿಗೆ ದೊರೆತಿರುವ ವಿದೇಶೀ ಉತ್ಪನ್ನ ಇದಾಗಿದೆ. ಈ ಹಿನ್ನೆಲೆಯಲ್ಲಿ ಸ್ಟಾಕ್​ ಬ್ರೋಕಿಂಗ್ ಪ್ಲಾಟ್​ಫಾರ್ಮ್ ಆದ ಝೆರೋದಾ ಬ್ಲಾಗ್​ವೊಂದನ್ನು ಹಂಚಿಕೊಂಡಿದ್ದು, ಅದರೊಳಗೆ ಎನ್​ಎಸ್ಇ ಐಎಫ್​ಎಸ್​ಸಿ ಮೂಲಕ ಅಮೆರಿಕ ಸ್ಟಾಕ್​ಗಳಲ್ಲಿ ಹೂಡಿಕೆ ಮಾಡುವುದು ಹೇಗೆ ಎಂಬುದನ್ನು ಸಾದ್ಯಂತವಾಗಿ ವಿವರಿಸಲಾಗಿದೆ. ಎನ್​ಎಸ್​ಇ ಐಎಫ್​ಎಸ್​ಸಿ ಮೂಲಕ ಅಮೆರಿಕ ಸ್ಟಾಕ್​ಗಳಲ್ಲಿ ಹೂಡಿಕೆ ಮಾಡುವುದು ಹೇಗೆ ಎಂಬುದನ್ನು ತಿಳಿಯುವುದಕ್ಕೆ ಮುಖ್ಯ ಸಂಗತಿಗಳು ಇಲ್ಲಿವೆ:

  1. ಸದ್ಯಕ್ಕೆ ಅಮೆರಿಕದ ಸ್ಟಾಕ್​ಗಳಲ್ಲಿ ಹೂಡಿಕೆ ಮಾಡುವುದು ಎಂಬುದು ನಿಯಂತ್ರಕರು ಪರೀಕ್ಷೆ ನಡೆಸುತ್ತಿದ್ದಾರೆ. ಇದರರ್ಥ ಏನೆಂದರೆ, ಎನ್​ಎಸ್​ಇ ಐಎಫ್​ಎಸ್​ಸಿ ನಿಶ್ಚಿತ ಸಂಖ್ಯೆಯ ಗ್ರಾಹಕರಿಗೆ ಮಾತ್ರ ಅವಕಾಶ ಒದಗಿಸುತ್ತದೆ. ಐಎಫ್​ಎಸ್​ಸಿಎಯಿಂದ ಈ ಉತ್ಪನ್ನದ ಬಗ್ಗೆ ಅಂತಿಮವಾದ ಅನುಮತಿಯನ್ನು ಒಂದು ಸಲಕ್ಕೆ ನೀಡಿದ ಮೇಲಷ್ಟೇ ಹೆಚ್ಚಿನ ಗ್ರಾಹಕರಿಗೆ ಅವಕಾಶ ಒದಗಿಸಲಾಗುತ್ತದೆ.
  2. ವಹಿವಾಟು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಶುರುವಾಗಿ ಮಧ್ಯರಾತ್ರಿ 2.30ರ ತನಕ ಇರುತ್ತದೆ. ಅಂದಹಾಗೆ ಈ ಪೈಕಿ ಕೆಲವು ಸ್ಟಾಕ್​ಗಳು ಒಂದಕ್ಕೆ ನೂರಾರು, ಸಾವಿರಾರು ಡಾಲರ್ ಬೆಲೆ ಇದೆ. ಆದ್ದರಿಂದ ಈ ಷೇರುಗಳಲ್ಲಿ ಸ್ವಲ್ಪ ಪ್ರಮಾಣದ ಹಣ ಹೂಡಿಕೆ, ಅಂದರೆ 10 ಯುಎಸ್​ಡಿಯಿಂದ 20 ಯುಎಸ್​ಡಿ ಲೆಕ್ಕದಲ್ಲಿ ಹೂಡಿಕೆ ಮಾಡಲು ಅವಕಾಶ ನೀಡಲಾಗಿದೆ.
  3. ಅಮೆರಿಕ ಸ್ಟಾಕ್​ಗಳ ಸಂಪೂರ್ಣ ವಹಿವಾಟು, ಕ್ಲಿಯರಿಂಗ್, ವಿಲೇವಾರಿ ಮತ್ತು ಹೋಲ್ಡಿಂಗ್​ ಐಎಫ್​ಎಸ್​ಸಿ ಅಧಿಕಾರಿಗಳ ನಿಯಂತ್ರಕ ರಚನೆ ಅಡಿಯಲ್ಲೇ ಇರುತ್ತದೆ. ಹೂಡಿಕೆಯು ಅನ್​ಸ್ಪಾನ್ಸರ್ಡ್ ಡೆಪಾಸಿಟರಿ ರಸೀಟ್ಸ್ ಮಾದರಿಯಲ್ಲೇ ಭಾರತೀಯ ಹೂಡಿಕೆದಾರರಿಗೆ ಇರುತ್ತದೆ.ಹೂಡಿಕೆದಾರರು GIFT ಸಿಟಿಯಲ್ಲಿ ತೆರೆದ ತಮ್ಮ ಸ್ವಂತ ಡಿಮ್ಯಾಟ್ ಖಾತೆಯಲ್ಲಿ ಡೆಪಾಸಿಟರಿ ರಸೀಟ್ಸ್ ಇಟ್ಟುಕೊಳ್ಳಬಹುದು ಮತ್ತು ಈ ಸ್ಟಾಕ್​ಗಳಿಗೆ ಸಂಬಂಧಿಸಿದಂತೆ ನಡೆಯುವ ಕಾರ್ಪೊರೇಟ್ ಕಾರ್ಯಗಳ ಅನುಕೂಲ ಪಡೆಯುವುದಕ್ಕೆ ಅರ್ಹರಾಗಿರುತ್ತಾರೆ.
  4. ಒಂದು ಕಂಪೆನಿಯು ಒಂದು ದೇಶದ ವಿನಿಮಯ ಕೇಂದ್ರದಲ್ಲಿ ಲಿಸ್ಟ್​ ಆಗಿ, ಮತ್ತೊಂದು ದೇಶದ ಹೂಡಿಕೆದಾರರನ್ನು ವಹಿವಾಟಿಗೆ ಸೆಳೆಯಬೇಕು ಅಂದರೆ ಅದು ಡೆಪಾಸಿಟರಿ ರಸೀಟ್ಸ್​ (DRs) ಮೂಲಕ ಆಗಬೇಕು ಮತ್ತು ಒಂದು ವೇಳೆ ಕಂಪೆನಿಯು ಪಾಲ್ಗೊಂಡಿಲ್ಲ ಅಂತಾದರೆ ಇದನ್ನು ಅನ್​ಸ್ಪಾನ್ಸರ್ಡ್ ಡಿಆರ್ ಎನ್ನಲಾಗುತ್ತದೆ. ಭಾರತೀಯ ಕಂಪೆನಿಗಳಾದ ಇನ್ಫಿ, ಐಸಿಐಸಿಐ ಬ್ಯಾಂಕ್, ವಿಪ್ರೋ ಮತ್ತು ಇತರ ಸ್ಟಾಕ್​ಗಳು ಅಮೆರಿಕ ಸ್ಟಾಕ್​ ಎಕ್ಸ್​ಚೇಂಜ್​ನಲ್ಲಿ ಸ್ಪಾನ್ಸರ್ಡ್ ಡಿಆರ್​ಗಳಾಗಿ ವಹಿವಾಟು ನಡೆಸುತ್ತಿವೆ.
  5. ಟಿ+3 ದಿನ ವಿಲೇವಾರಿಗೆ ಬೇಕಾಗುತ್ತದೆ. ಅಂದರೆ ವಹಿವಾಟು+3 ದಿನ ಅಂತರ್ಥ. ಸ್ಟಾಕ್ಸ್ ಅಥವಾ ಡಿಆರ್​ಗಳನ್ನು ಖರೀದಿಸಿದ ಮೇಲೆ ಮೂರು ದಿನದ ನಂತರ ಡಿಮ್ಯಾಟ್ ಖಾತೆಗೆ ಜಮೆ ಆಗುತ್ತದೆ (ಭಾರತದಲ್ಲಿ ಇದು ಎರಡು ದಿಮ). ಅದೇ ರೀತಿ ಹಣ ಸಹ ಸ್ಟಾಕ್ ಮಾರಾಟವಾದ ಮೂರು ದಿನದ ನಂತರ ಜಮೆ ಆಗುತ್ತದೆ. ಭಾರತದಂತೆ ಅಲ್ಲದೆ, ಈ ವಿಲೇವಾರಿ ಆಗುವ ತನಕ ಬೇರೆ ವಹಿವಾಟಿಗೆ ಅವಕಾಶ ಇರುವುದಿಲ್ಲ.
  6. ಬ್ರೋಕರೇಜ್​ ಸಂಸ್ಥೆಗಳನ್ನು ಹೊರತುಪಡಿಸಿ ವಹಿವಾಟಿನ ಮೇಲೆ ಎನ್​ಎಸ್​ಇ ಐಎಫ್​ಎಸ್​ಸಿಯಿಂದ ಗ್ರಾಹಕರಿಗೆ ವಿಧಿಸಲಾಗುತ್ತದೆ. ವಿನಿಮಯ ಕೇಂದ್ರದಿಂದಲೇ ಪ್ರತಿ 100 ಯುಎಸ್​ಡಿಗೆ 12 ಸೆಂಟ್ಸ್​ ಅಥವಾ ಶೇ 0.12ರಷ್ಟು ವಿಧಿಸಲಾಗುತ್ತದೆ.
  7. ಅಂತಿಮವಾಗಿ, ಝೆರೋದಾದಿಂದ ಸದಸ್ಯತ್ವಕ್ಕಾಗಿ ಪ್ರಕ್ರಿಯೆ ನಡೆಯುತ್ತಿದೆ. ಭಾರತದ ವಿನಿಮಯ ಕೇಂದ್ರಗಳು ಮತ್ತು ಸೆಬಿಯಿಂದ ಅಗತ್ಯ ಅನುಮತಿಗಳು ಪಡೆದ ಮೇಲೆ ಇನ್ನು ಕೆಲವು ತಿಂಗಳಲ್ಲಿ ವಹಿವಾಟು ಆರಂಭಿಸುವುದಾಗಿ ಹೇಳಿದೆ.

ಇದನ್ನೂ ಓದಿ: ಅಮೆರಿಕದ ಗೂಗಲ್, ಆಪಲ್​ ಕಂಪೆನಿ ಷೇರುಗಳನ್ನು ಭಾರತದಿಂದ ಖರೀದಿ ಮಾಡುವುದು ಹೇಗೆ?

ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ