Hurun Global Unicorn Index 2023: ಬೈಜುಸ್, ಸ್ವಿಗ್ಗಿ, ಡ್ರೀಮ್11 ಅಗ್ರಮಾನ್ಯ ಭಾರತೀಯ ಯೂನಿಕಾರ್ನ್ಸ್; ಗ್ಯಾಜೆಲೆಸ್ ಸ್ಟಾರ್ಟಪ್​ಗಳೂ ಭಾರತದಲ್ಲಿ ಹೆಚ್ಚಿವೆ

|

Updated on: Apr 19, 2023 | 12:12 PM

Indian Unicorns and Gazelles Startups: ಭಾರತದಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿ ಯೂನಿಕಾರ್ನ್ ಕಂಪನಿಗಳಿವೆ. ಹುರೂನ್ಸ್ ಪಟ್ಟಿ ಪ್ರಕಾರ ವಿಶ್ವದಲ್ಲೇ ಅತಿಹೆಚ್ಚು ಯೂನಿಕಾರ್ನ್ ಕಂಪನಿಗಳಿರುವ ದೇಶಗಳಲ್ಲಿ ಭಾರತ 3ನೇ ಸ್ಥಾನ ಪಡೆದಿದೆ. ಅಮೆರಿಕ ಮತ್ತು ಚೀನಾದಲ್ಲಿ ಅತಿಹೆಚ್ಚು ಯೂನಿಕಾರ್ನ್ ಕಂಪನಿಗಳು ಸೃಷ್ಟಿಯಾಗಿವೆ.

Hurun Global Unicorn Index 2023: ಬೈಜುಸ್, ಸ್ವಿಗ್ಗಿ, ಡ್ರೀಮ್11 ಅಗ್ರಮಾನ್ಯ ಭಾರತೀಯ ಯೂನಿಕಾರ್ನ್ಸ್; ಗ್ಯಾಜೆಲೆಸ್ ಸ್ಟಾರ್ಟಪ್​ಗಳೂ ಭಾರತದಲ್ಲಿ ಹೆಚ್ಚಿವೆ
ಬೈಜುಸ್
Follow us on

ನವದೆಹಲಿ: ಸ್ವಿಗ್ಗಿ, ಡ್ರೀಮ್11 ಮತ್ತು ಬೈಜುಸ್ ಕಂಪನಿಗಳು ಭಾರತದ ಅಗ್ರಮಾನ್ಯ ಯೂನಿಕಾರ್ನ್​ಗಳೆನಿಸಿವೆ. ಹುರೂನ್ಸ್ ಯೂನಿಕಾರ್ನ್ ಪಟ್ಟಿಯಲ್ಲಿ ಈ 3 ಕಂಪನಿಗಳು ಸ್ಥಾನ ಪಡೆದಿವೆ. ಜಾಗತಿಕ ರೀಸರ್ಚ್ ಹಾಗು ಲಕ್ಷುರಿ ಪಬ್ಲಿಷಿಂಗ್ ಸಂಸ್ಥೆ ಹುರೂನ್ ರಿಪೋರ್ಟ್​ನ ಜಾಗತಿಕ ಯೂನಿಕಾರ್ನ್ ಇಂಡೆಕ್ಸ್ 2023 ಪಟ್ಟಿ (Hurun’s Global Unicorn Index 2023) ಬಿಡುಗಡೆ ಆಗಿದೆ. ಇದರ ಪ್ರಕಾರ ಆನ್​ಲೈನ್ ಫುಡ್ ಡೆಲಿವರಿ ಪ್ಲಾಟ್​ಫಾರ್ಮ್ ಸ್ವಿಗ್ಗಿ, ಫ್ಯಾಂಟಸಿ ಗೇಮಿಂಗ್​ನ ಡ್ರೀಮ್ ಇಲವೆನ್ ಹಾಗೂ ಶಿಕ್ಷಣ ತಂತ್ರಜ್ಞಾನ ಕ್ಷೇತ್ರದ ಬೈಜುಸ್ ಕಂಪನಿಗಳು ಭಾರತದ ಟಾಪ್ ಯೂನಿಕಾರ್ನ್​ಗಳಾಗಿವೆ.

ಭಾರತದಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿ ಯೂನಿಕಾರ್ನ್ ಕಂಪನಿಗಳಿವೆ. ಹುರೂನ್ಸ್ ಪಟ್ಟಿ ಪ್ರಕಾರ ವಿಶ್ವದಲ್ಲೇ ಅತಿಹೆಚ್ಚು ಯೂನಿಕಾರ್ನ್ ಕಂಪನಿಗಳಿರುವ (Unicorn Startups) ದೇಶಗಳಲ್ಲಿ ಭಾರತ 3ನೇ ಸ್ಥಾನ ಪಡೆದಿದೆ. ಅಮೆರಿಕ ಮತ್ತು ಚೀನಾದಲ್ಲಿ ಅತಿಹೆಚ್ಚು ಯೂನಿಕಾರ್ನ್ ಕಂಪನಿಗಳು ಸೃಷ್ಟಿಯಾಗಿವೆ.

ಜಾಗತಿಕ ಟಾಪ್10 ಯೂನಿಕಾರ್ನ್ ಸ್ಟಾರ್ಟಪ್​ಗಳ ಪೈಕಿ ಬೈಜುಸ್

ಹುರೂನ್ಸ್ ಪಟ್ಟಿ ಪ್ರಕಾರ, ವಿಶ್ವದ 10 ಅಗ್ರಮಾನ್ಯ ಯೂನಿಕಾರ್ನ್ ಸ್ಟಾರ್ಟಪ್​ಗಳಲ್ಲಿ ಬೈಜುಸ್ ಇದೆ. ಈ ಕಂಪನಿಯ ಮೌಲ್ಯ 22 ಬಿಲಿಯನ್ ಡಾಲರ್​ನಷ್ಟಾಗಿದೆ. ಅಂದರೆ, 1.81 ಲಕ್ಷ ಕೋಟಿ ರೂ ಮೌಲ್ಯದ ಕಂಪನಿಯಾಗಿ ಬೈಜುಸ್ ಬೆಳೆದಿದೆ.

ಇನ್ನು, ಸ್ವಿಗ್ಗಿ ಮತ್ತು ಡ್ರೀಮ್11 ಕಂಪನಿಗಳ ಮೌಲ್ಯ 8 ಬಿಲಿಯನ್ ಡಾಲರ್ (65,000 ಕೋಟಿ ರೂ) ಎಂದು ಹುರೂನ್ಸ್ ರಿಸರ್ಚ್ ಸಂಸ್ಥೆ ಅಂದಾಜು ಮಾಡಿದೆ.

ಇದನ್ನೂ ಓದಿWindfall Tax: ದೇಶೀಯ ಕಚ್ಛಾ ತೈಲಕ್ಕೆ 6,400 ರೂ ವಿಂಡ್​ಫಾಲ್ ಟ್ಯಾಕ್ಸ್ ಹೇರಿಕೆ; ಡೀಸೆಲ್ ರಫ್ತು ಸುಂಕ ರದ್ದು; ಸರ್ಕಾರದ ಈ ಕ್ರಮದಿಂದ ಪ್ರಯೋಜನಗಳೇನು?

ಭಾರತದ ಹೊರಗೆ ಮುಖ್ಯಕಚೇರಿ ಹೊಂದಿರುವ ಭಾರತೀಯ ಯೂನಿಕಾರ್ನ್​ಗಳ ಸಂಖ್ಯೆ ಹೆಚ್ಚು

ಹುರೂನ್ಸ್ ಪಟ್ಟಿಯಲ್ಲಿ ಒಂದು ಕುತೂಹಲಕಾರಿ ಸಂಗತಿಯನ್ನು ಗುರುತಿಸಬಹುದು. ಈ ಪಟ್ಟಿ ಪ್ರಕಾರ ಭಾರತೀಯ ಯೂನಿಕಾರ್ನ್ ಸ್ಟಾರ್ಟಪ್​ಗಳು ಬಹಳ ದೊಡ್ಡ ಸಂಖ್ಯೆಯಲ್ಲಿ ಬೆಳೆದಿವೆಯಾದರೂ ಇವುಗಳಲ್ಲಿ ಹೆಚ್ಚಿನವರು ಭಾರತದ ಹೊರಗೆ ನೆಲೆಗೊಂಡಿವೆ. ತೆರಿಗೆ, ಉದ್ಯಮಸ್ನೇಹ ವಾತಾವರಣ ಇತ್ಯಾದಿ ಕಾರಣಗಳಿಗೆ ಸಿಂಗಾಪುರ ಮೊದಲಾದ ಕಡೆ ಭಾರತೀಯ ಯೂನಿಕಾರ್ನ್​ಗಳು ವಲಸೆ ಹೋಗಿರಬಹುದು.

ಹುರೂನ್ಸ್ ಪಟ್ಟಿ ಪ್ರಕಾರ ಭಾರತದಲ್ಲಿ 138 ಯೂನಿಕಾರ್ನ್​ಗಳಿವೆ. ಇದರಲ್ಲಿ 70 ಯೂನಿಕಾರ್ನ್​​ಗಳು ಭಾರತದ ಹೊರಗೆ ಮುಖ್ಯಕಚೇರಿ ಹೊಂದಿದರೆ, 68 ಯೂನಿಕಾರ್ನ್​ಗಳು ಭಾರತದಲ್ಲೇ ನೆಲಸಿರುವುದು ತಿಳಿದುಬಂದಿದೆ.

ಯೂನಿಕಾರ್ನ್​ಗಳೆಂದರೆ ಏನು?

ಒಂದು ಸ್ಟಾರ್ಟಪ್ ಕಂಪನಿ ಷೇರುಪೇಟೆಯಲ್ಲಿ ಲಿಸ್ಟ್ ಆಗದೆಯೇ 1 ಬಿಲಿಯನ್ ಡಾಲರ್ (ಸುಮಾರು 800 ಕೋಟಿ ರುಪಾಯಿ) ವ್ಯಾಲ್ಯುಯೇಶನ್ ಪಡೆದರೆ ಅದು ಯೂನಿಕಾರ್ನ್ ಕಂಪನಿ ಎಂದು ಪರಿಗಣಿಸಬಹುದು. ಯೂನಿಕಾರ್ನ್ ಎನಿಸಿದ ಒಂದು ಕಂಪನಿ ಒಮ್ಮೆ ಷೇರುಪೇಟೆಗೆ ಲಿಸ್ಟ್ ಆಗಿಹೋದರೆ ಅದು ಯೂನಿಕಾರ್ನ್ ಎನಿಸುವುದಿಲ್ಲ.

ಇದನ್ನೂ ಓದಿSmart Investments: ಶೇ. 18ರಿಂದ 33ರವರೆಗೂ ರಿಟರ್ನ್ ಕೊಡಬಲ್ಲ 5 ಷೇರುಗಳು; ಈಗಲೇ ಖರೀದಿಸಿ ಎಂದು ಅನಾಲಿಸ್ಟ್​ಗಳ ಶಿಫಾರಸು

ಅಮೆರಿಕದಲ್ಲಿ 600ಕ್ಕೂ ಹೆಚ್ಚು ಯೂನಿಕಾರ್ನ್ ಕಂಪನಿಗಳಿವೆ. ಚೀನಾದಲ್ಲಿ ಇವುಗಳ ಸಂಖ್ಯೆ 300ಕ್ಕೂ ಹೆಚ್ಚಿದೆ. ಭಾರತದಲ್ಲಿ ಇಂಥ 138 ಯೂನಿಕಾರ್ನ್​ಗಳಿವೆ. ಸಿಂಗಾಪುರದಂಥ ದೇಶಗಳಲ್ಲಿ ಯೂನಿಕಾರ್ನ್​ಗಳು ಕಡಿಮೆ ಇವೆಯಾದರೂ ಬೇರೆ ದೇಶಗಳ ಯೂನಿಕಾರ್ನ್​ಗಳಿಗೆ ಅವು ವೇದಿಕೆ ಆಗಿರುವುದು ಗಮನಾರ್ಹ.

ಭಾರತದಲ್ಲಿ ಹೆಚ್ಚುತ್ತಿವೆ ಗ್ಯಾಜಿಲೆಸ್ ಸ್ಟಾರ್ಟಪ್​ಗಳು

ಇನ್ನು, ಯೂನಿಕಾರ್ನ್​​ನಂತೆ ಗ್ಯಾಜೆಲೆಸ್ (Gazelles Startups) ಎಂದೂ ಸ್ಟಾರ್ಟಪ್​ಗಳನ್ನು ವರ್ಗೀಕರಣ ಮಾಡಲಾಗುತ್ತದೆ. ಯೂನಿಕಾರ್ನ್ ಕನಿಷ್ಠ ವ್ಯಾಲ್ಯುಯೇಶ್ 1 ಬಿಲಿಯನ್ ಡಾಲರ್ ಇದ್ದರೆ, ಗ್ಯಾಜೆಲೆಸ್ ಅದರ ಅರ್ಧದಷ್ಟು ವ್ಯಾಲ್ಯುವೇಶನ್ ಇರಬೇಕು. ಅಂದರೆ 500 ಮಿಲಿಯನ್ ಡಾಲರ್ (4,000 ಕೋಟಿ ರೂ) ವ್ಯಾಲುವೇಶನ್ ಇರುವ ಹಾಗೂ ಷೇರುಪೇಟೆಗೆ ಇನ್ನೂ ಎಂಟ್ರಿ ಕೊಡದ ಕಂಪನಿಗಳನ್ನು ಗ್ಯಾಜೆಲೆಸ್ ಎಂದು ಪರಿಗಣಿಸಲಾಗುತ್ತದೆ.

ಅತಿಹೆಚ್ಚು ಗ್ಯಾಜೆಲೆಸ್ ಸ್ಟಾರ್ಟಪ್​ಗಳನ್ನು ಹೊಂದಿರುವ ದೇಶಗಳಲ್ಲಿ ಭಾರತ ಮೂರನೆ ಸ್ಥಾನದಲ್ಲಿದೆ. ಈ ಗ್ಯಾಜಿಲೆಸ್ ಕಂಪನಿಗಳಲ್ಲಿ ಹೆಚ್ಚಿನವು 3 ವರ್ಷಗಳಲ್ಲಿ ಯೂನಿಕಾರ್ನ್ ಹಂತಕ್ಕೆ ಬೆಳೆಯುವ ಸಾಧ್ಯತೆ ಇದೆ ಎಂದು ಹುರೂನ್ಸ್ ಪಟ್ಟಿಯಲ್ಲಿ ಅಭಿಪ್ರಾಯಪಡಲಾಗಿದೆ.

ಭಾರತದಲ್ಲಿ ಯೂನಿಕಾರ್ನ್ ಮತ್ತು ಗ್ಯಾಜೆಲೆಸ್ ಸ್ಟಾರ್ಟಪ್​ಗಳು ಹೆಚ್ಚು ಸಂಖ್ಯೆಯಲ್ಲಿರುವುದರಿಂದ ಮುಂದಿನ 5 ವರ್ಷಗಳಲ್ಲಿ ಹುರೂನ್ ಗ್ಲೋಬಲ್ 500 ಕಂಪನಿಗಳ ಪಟ್ಟಿಯಲ್ಲಿ ಭಾರತೀಯ ಕಂಪನಿಗಳ ಸಂಖ್ಯೆ ಹೆಚ್ಚುವ ಸಾಧ್ಯತೆಯನ್ನು ಹುರೂನ್ಸ್ ಗುರುತಿಸಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ