ಐಸಿಐಸಿಐ ಬ್ಯಾಂಕ್​ನಿಂದ iDelights Summer Bonanza; ಗ್ರಾಹಕರಿಗೆ ಬೇಸಿಗೆಯಲ್ಲಿ ಆಫರ್​ಗಳ ಸುರಿಮಳೆ

|

Updated on: Apr 10, 2021 | 6:43 PM

ದೇಶದ ಪ್ರಮುಖ ಖಾಸಗಿ ಬ್ಯಾಂಕ್ ಆದ ಐಸಿಐಸಿಐ ಬ್ಯಾಂಕ್​ನಿಂದ iDelights Summer Bonanzaದ ಅಫರ್​ಗಳು ಘೋಷಣೆ ಮಾಡಲಾಗಿದೆ. ಏನಿದು ಆಫರ್​​ಗಳ ಎಂಬ ಬಗ್ಗೆ ವಿವರಗಳು ಇಲ್ಲಿವೆ.

ಐಸಿಐಸಿಐ ಬ್ಯಾಂಕ್​ನಿಂದ iDelights Summer Bonanza; ಗ್ರಾಹಕರಿಗೆ ಬೇಸಿಗೆಯಲ್ಲಿ ಆಫರ್​ಗಳ ಸುರಿಮಳೆ
ಐಸಿಐಸಿಐ ಬ್ಯಾಂಕ್ ಐಸಿಐಸಿಐ ಬ್ಯಾಂಕ್ ಎರಡು ಖಾತೆಗಳನ್ನು ನೀಡುತ್ತದೆ - ಯಂಗ್ ಸ್ಟಾರ್ಸ್ ಅಕೌಂಟ್ ಮತ್ತು ಯಂಗ್ ಸ್ಟಾರ್ಸ್ ಮತ್ತು ಸ್ಮಾರ್ಟ್ ಸ್ಟಾರ್ ಖಾತೆ ವಿಶೇಷವಾಗಿ ಮಕ್ಕಳಿಗಾಗಿ ವಿನ್ಯಾಸಗೊಳಿಸಲಾಗಿದೆ. 18 ವರ್ಷದೊಳಗಿನ ಯಾವುದೇ ಮಗುವಿಗಾಗಿ ಯಂಗ್ ಸ್ಟಾರ್ಸ್ ಖಾತೆ ತೆರೆಯಬಹುದು. ಆದರೆ ಈ ಸೌಲಭ್ಯವನ್ನು ಪಡೆಯಲು ಪಾಲಕರು ಐಸಿಐಸಿಐ ಬ್ಯಾಂಕ್​ನಲ್ಲಿ ಉಳಿತಾಯ ಖಾತೆಯನ್ನು ಹೊಂದಿರಬೇಕು. ಯಂಗ್ ಸ್ಟಾರ್ಸ್ ಮತ್ತು ಸ್ಮಾರ್ಟ್ ಸ್ಟಾರ್ ಖಾತೆಯನ್ನು 10 ವರ್ಷಕ್ಕಿಂತ ಮೇಲ್ಪಟ್ಟ ಮಗುವಿಗಾಗಿ ತೆರೆಯಬಹುದು. ಆದರೆ ಯಂಗ್ ಸ್ಟಾರ್ಸ್ ಸೇವಿಂಗ್ಸ್ ಖಾತೆಯಲ್ಲಿ ಕನಿಷ್ಠ ಮಾಸಿಕ ಸರಾಸರಿ ಬ್ಯಾಲೆನ್ಸ್ (MAB) 3,000 ರೂಪಾಯಿ. ಎಟಿಎಂ ಮತ್ತು ಇಂಟರ್‌ನೆಟ್ ಬ್ಯಾಂಕಿಂಗ್ ಸೌಲಭ್ಯದ ಜತೆಗೆ ಆರ್‌ಡಿ, ಎಫ್‌ಡಿ, ಎಸ್‌ಐಪಿ ಇತ್ಯಾದಿ ವಿವಿಧ ಮೂಲಭೂತ ಹೂಡಿಕೆ ಆಯ್ಕೆಗಳೊಂದಿಗೆ ಇವೆ.
Follow us on

ನವದೆಹಲಿ: ಖಾಸಗಿ ಬ್ಯಾಂಕ್ ಆದ ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗೆ “iDelights Summer Bonanza” ಪರಿಚಯಿಸಿದೆ. ಈ ಮೂಲಕ 2021ರ ಬೇಸಿಗೆಗೆ ಗ್ರಾಹಕರಿಗೆ ಹಲವಾರು ಆಫರ್​ಗಳನ್ನು ನೀಡುತ್ತಿದೆ. ವರ್ಕ್-ಫ್ರಮ್-ಹೋಮ್ ಅಗತ್ಯಗಳಿಂದ ಮೊದಲುಗೊಂಡು ದೈನಂದಿನ ವಸ್ತುಗಳು, ಆರೋಗ್ಯ ಮತ್ತು ಲೈಫ್​​ಸ್ಟೈಲ್ ಅಗತ್ಯಗಳ ತನಕ ಆಫರ್​ಗಳು ದೊರೆಯುತ್ತವೆ. ಈ ಬೇಸಿಗೆ ವಿಶೇಷ ಆಫರ್​ನಲ್ಲಿ ಗ್ರಾಹಕರಿಗೆ ಹೆಚ್ಚುವರಿ ಕ್ಯಾಶ್​​ಬ್ಯಾಕ್ ಮತ್ತು ರಿಯಾಯಿತಿಗಳು ದೊರೆಯುತ್ತವೆ. ಬ್ಯಾಂಕ್​ನ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್​ಗಳು, ಇಂಟರ್​ನೆಟ್ ಬ್ಯಾಂಕಿಂಗ್, ಪಾಕೆಟ್​ಗಳು ಮತ್ತು ಗ್ರಾಹಕ ವಸ್ತುಗಳ ಫೈನಾನ್ಸ್ ಬಳಸಿ, ಈ ಅನುಕೂಲಗಳನ್ನು ಪಡೆದುಕೊಳ್ಳಬಹುದು.

iDelights Summer Bonanzaದ ಅಫರ್​ಗಳು ಇಂತಿವೆ:
1. ಜೀವನಶೈಲಿ ಮತ್ತು ಐಷಾರಾಮಿ ಬ್ರಾಂಡ್‌ಗಳು
– ವಿವಿಧ ಐಷಾರಾಮಿ ಬ್ರಾಂಡ್‌ಗಳಾದ ಬ್ರೂಕ್ಸ್ ಬ್ರದರ್ಸ್, ಕೋಚ್, ಡೀಸೆಲ್, ಕೇಟ್ ಸ್ಪೇಡ್, ಮೈಕೆಲ್ ಕಾರ್ಸ್, ಪಾಲ್ ಸ್ಮಿತ್, ಬ್ಯಾಲಿ, ಬೊಟ್ಟೆಗಾ ವೆನೆಟಾ, ಕೆನಾಲಿ, ಎಂಪೋರಿಯೊ ಅರ್ಮಾನಿ, ಜಾರ್ಜಿಯೊ ಅರ್ಮಾನಿ, ಹ್ಯೂಗೋ ಬಾಸ್, ಜಿಮ್ಮಿ ಚೂ, ಲಕ್ಸ್ ಬ್ರಿಡ್ಜ್, ಟಿಫಾನಿ, ಅರ್ಮಾನಿ ಎಕ್ಸ್​ಚೇಂಜ್, ಡಿಸಿ, ಡ್ಯೂನ್, ಜಿ ಸ್ಟಾರ್, ಗ್ಯಾಸ್, ಹ್ಯಾಮ್ಲೀಸ್, ಹಂಕೆಮೊಲ್ಲರ್, ಮದರ್‌ಕೇರ್, ಮುಜಿ, ರಿಪ್ಲೇ, ಸತ್ಯ ಪಾಲ್, ಸತ್ಯ ಪಾಲ್ ಪರಿಕರಗಳು, ಸ್ಕಾಚ್ ಮತ್ತು ಸೋಡಾ, ಸ್ಟೀವ್ ಮ್ಯಾಡೆನ್, ಸೂಪರ್‌ಡ್ರೈ, ದಿ ಟ್ಯಾಂಕ್ ಮತ್ತು ವಿಷನ್ ಎಕ್ಸ್‌ಪ್ರೆಸ್ ಮತ್ತಿತರಕ್ಕೆ ಕ್ರೆಡಿಟ್ ಕಾರ್ಡ್‌ಗಳ ಮೇಲೆ ಬ್ಯಾಂಕ್ ಶೇಕಡಾ 10ರಷ್ಟು ಕ್ಯಾಶ್‌ಬ್ಯಾಕ್ ನೀಡುತ್ತಿದೆ.
– ಟಾಟಾ ಕ್ಲಿಕ್ ಲಕ್ಷುರಿ ಮೂಲಕ ಪ್ರತಿ ಶನಿವಾರ ಮತ್ತು ಭಾನುವಾರ ಕನಿಷ್ಠ 3,000 ರೂಪಾಯಿಗಳ ಖರೀದಿಗೆ 1,500 ರೂಪಾಯಿಗಳ ತನಕ ಶೇಕಡಾ 10ರಷ್ಟು ರಿಯಾಯಿತಿ ಪಡೆಯಿರಿ
– ಈಸಿ ಮೈ ಟ್ರಿಪ್‌ನಿಂದ ಚಾರ್ಟರ್ ವಿಮಾನಗಳಲ್ಲಿ ಶೇಕಡಾ 5ರಷ್ಟು, 1,25,000 ರೂ. ತನಕ ರಿಯಾಯಿತಿ ಪಡೆಯಿರಿ.
– ತಾಜ್, ವಿವಾಂತ, ಸೆಲೆಕ್ಷನ್ಸ್​ನಲ್ಲಿ 4 ದಿನದ ಪ್ರಯಾಣದ ಅನುಭವಗಳಿಗೆ ಹೆಚ್ಚುವರಿ ಶೇಕಡಾ 10ರಷ್ಟು ರಿಯಾಯಿತಿ ಪಡೆಯಿರಿ; ಅಮಾ ಸ್ಟೇಸ್ ಮತ್ತು ಟ್ರೇಲ್ಸ್ ಹಾಗೂ ಸೆಲೆಕ್ಷನ್ಸ್ ಹೋಟೆಲ್‌ಗಳಲ್ಲಿ ಬೆಳಗಿನ ಉಪಾಹಾರವನ್ನು ಒಳಗೊಂಡ ದರ, ಒಂದು ಪ್ರಮುಖ ಊಟ ಮತ್ತು ವಿಶೇಷ ಸೆಲೆಕ್ಷನ್ಸ್ ಅನುಭವದ ಮೇಲೆ ಸೆಲೆಕ್ಷನ್ಸ್ ಹೋಟೆಲ್​ನಲ್ಲಿ ಶೇಕಡಾ 20 ರಿಯಾಯಿತಿ ಪಡೆಯಿರಿ.
– ತಾಜ್, ಸೆಲೆಕ್ಷನ್ಸ್ ಮತ್ತು ವಿವಾಂತಾ ಹೋಟೆಲ್‌ಗಳ ಕ್ಯುರೇಟೆಡ್ ರೆಸ್ಟೋರೆಂಟ್‌ಗಳಿಂದ ಕ್ಯೂಮಿನ್ ಅಪ್ಲಿಕೇಷನ್‌ನಲ್ಲಿ ತರುವ 1,500 ರೂಪಾಯಿಗಿಂತ ಹೆಚ್ಚಿನ ಆಹಾರ ಪದಾರ್ಥದ ಆರ್ಡರ್​ಗಳಿಗೆ ಶೇಕಡಾ 25ರಷ್ಟು ರಿಯಾಯಿತಿ ಪಡೆಯಿರಿ.
– ಕಲ್ಯಾಣ್ ಜ್ಯುವೆಲ್ಲರ್ಸ್‌ನಿಂದ ಕನಿಷ್ಠ 80,000 ರೂಪಾಯಿಗಳ ವಜ್ರಾಭರಣಗಳ ಖರೀದಿಗೆ 10,000 ರೂಪಾಯಿ ತನಕ ಮತ್ತು ಕನಿಷ್ಠ 60,000 ರೂಪಾಯಿಗಳ ಚಿನ್ನದ ಆಭರಣಗಳ ಖರೀದಿ ಮೇಲೆ ರೂ. 10,000 ತನಕ ರಿಯಾಯಿತಿ ಇದೆ.
– ಪಿಸಿ ಜ್ಯುವೆಲ್ಲರ್ಸ್‌ ರೀಟೇಲ್ ಮಳಿಗೆ ಅಥವಾ ವೆಬ್‌ಸೈಟ್‌ನಲ್ಲಿ ಕನಿಷ್ಠ 45,000 ರೂಪಾಯಿಯಷ್ಟು ಖರೀದಿಗೆ ಶೇ 7.5ರಷ್ಟು ಅಥವಾ ರೂ. 7500 ಪಡೆಯಿರಿ.

2. ದಿನಸಿ
– ಡಿಮಾರ್ಟ್‌ ರೀಟೇಲ್ ಮಳಿಗೆ ಅಥವಾ ವೆಬ್‌ಸೈಟ್‌ನಲ್ಲಿ ಕನಿಷ್ಠ 3,000 ರೂಪಾಯಿಯಷ್ಟು ದಿನಸಿ ಖರೀದಿಸುವಾಗ ಶೇಕಡಾ 5 ಕ್ಯಾಶ್‌ಬ್ಯಾಕ್, 400 ರೂಪಾಯಿ ತನಕ ಪಡೆಯಿರಿ ಮತ್ತು ವಾರಾಂತ್ಯದಲ್ಲಿ ಕನಿಷ್ಠ ಖರೀದಿಗೆ ಶೇಕಡಾ 5- 400 ರೂಪಾಯಿಯಷ್ಟು ಕ್ಯಾಶ್​ಬ್ಯಾಕ್ ದೊರೆಯುತ್ತದೆ.
– ಅಮೆಜಾನ್ ಸೂಪರ್ ವ್ಯಾಲ್ಯೂ ಡೇಸ್‌ನಿಂದ ಕನಿಷ್ಠ 2,000 ರೂಪಾಯಿ ವಹಿವಾಟು ಮಾಡಿದಾಗ ಶೇ 10ರಷ್ಟು, ರೂಪಾಯಿ 300 ಉಳಿತಾಯ ಮಾಡಿರಿ
– ಫ್ಲಿಪ್‌ಕಾರ್ಟ್‌ನಿಂದ ಕನಿಷ್ಠ ದಿನಸಿ ಖರೀದಿ 2,000 ರೂಪಾಯಿಗೆ ಶೇಕಡಾ 10ರಷ್ಟು, ರೂ. 250ರ ತನಕ ರಿಯಾಯಿತಿ.

3. ಎಲೆಕ್ಟ್ರಾನಿಕ್ಸ್, ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗಳು
-ಏಸಿ, ರೆಫ್ರಿಜರೇಟರ್ ಮತ್ತು ಕೂಲರ್‌ಗಳ ಮೇಲೆ ಶೇಕಡಾ 10, ರೂ. 2000ತನಕ ಕ್ಯಾಶ್‌ಬ್ಯಾಕ್. ರಿಲಯನ್ಸ್ ಡಿಜಿಟಲ್‌ನಿಂದ ಖರೀದಿಸಿದ ಇತರ ಕನಿಷ್ಠ 10,000ರೂ. ಉತ್ಪನ್ನಗಳ ಮೇಲೆ ಶೇಕಡಾ 5ರ ತನಕ 1,500 ರೂಪಾಯಿಗಳವರೆಗೆ ಕ್ಯಾಶ್‌ಬ್ಯಾಕ್ ಪಡೆಯಿರಿ.
– ಪ್ರತಿ ಗುರುವಾರ ಕ್ರೋಮಾ ರೀಟೇಲ್ ಸ್ಟೋರ್ ಅಥವಾ ವೆಬ್​ಸೈಟ್​ನಲ್ಲಿ ರೂ. 2500 ತನಕ ರಿಯಾಯಿತಿ.
– ಫ್ಲಿಪ್‌ಕಾರ್ಟ್‌ನಿಂದ ಕನಿಷ್ಠ 4,999 ರೂಪಾಯಿಗೆ ಲ್ಯಾಪ್‌ಟಾಪ್‌ಗಳು, ಐಟಿ ಮತ್ತು ಐಟಿ ಪರಿಕರಗಳ ಖರೀದಿಸಿದಾಗ ಕನಿಷ್ಠ ರೂ. 1500 ತನಕ ರಿಯಾಯಿತಿ ಸಿಗುತ್ತದೆ. ಏಸಿಗಳು, ಟಿವಿಗಳು, ರೆಫ್ರಿಜರೇಟರ್‌ಗಳು, ಮೈಕ್ರೊವೇವ್ ಮತ್ತು ವಾಷಿಂಗ್ ಮೆಷಿನ್‌ಗಳಿಗೆ ಶೇಕಡಾ 10ರ ತನಕ ರಿಯಾಯಿತಿ ಪಡೆಯಿರಿ.

4. ಕಾರ್ಡ್ ಇಎಂಐ ಒಳಗೊಂಡಂತೆ ಎಲೆಕ್ಟ್ರಾನಿಕ್ ಮೇಲಿನ ಆಫರ್​ಗಳು
– ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಮೇಲೆ ಶೇ 22.5ರ ತನಕ ಕ್ಯಾಶ್​​ಬ್ಯಾಕ್ (ಗರಿಷ್ಠ 20,000 ರೂ.)
– ಎಲ್​.ಜಿ. ಕನಿಷ್ಠ ರೂ. 20,000 ವಹಿವಾಟಿಗೆ ಶೇಕಡಾ 17.5 ಕ್ಯಾಶ್​ಬ್ಯಾಕ್ (ಗರಿಷ್ಠ 15,000 ರೂ.)
– ವೊಲ್ಟಾಸ್ ಕನಿಷ್ಠ ಕನಿಷ್ಠ ರೂ. 15,000 ವಹಿವಾಟಿನ ಮೇಲೆ ಶೇ 12.5ರ ತನಕ ಕ್ಯಾಶ್​ಬ್ಯಾಕ್ (ಗರಿಷ್ಠ ರೂ. 10,000)
– ವರ್ಲ್​ಪೂಲ್ ಕನಿಷ್ಠ ರೂ. 15,000 ವಹಿವಾಟಿನ ಮೇಲೆ ಶೇ 10ರ ತನಕ ಕ್ಯಾಶ್​ಬ್ಯಾಕ್ (ಗರಿಷ್ಠ ರೂ. 5000)
– ಐಎಫ್​ಬಿ ಉಪಕರಣಗಳ ಕನಿಷ್ಠ ರೂ. 15,000 ವಹಿವಾಟಿನ ಮೇಲೆ ಶೇ 10ರ ಕ್ಯಾಶ್​ಬ್ಯಾಕ್ ರೂ. 3000 ತನಕ
– ಕನಿಷ್ಠ ರೂ. 20,000 ವಹಿವಾಟಿನ ಮೇಲೆ ಶೇ 5ರ ತನಕ ಕ್ಯಾಶ್​ಬ್ಯಾಕ್ ರೂ. 2000 ತನಕ
– ಸೀಮನ್ಸ್ ಮೇಲೆ ಶೇ 12ರ ತನಕ ಕ್ಯಾಶ್​ಬ್ಯಾಕ್ ಗರಿಷ್ಠ ರೂ. 6000 ತನಕ
– ಬಾಷ್ ಮೇಲೆ ಶೇ 12ರ ತನಕ ಕ್ಯಾಶ್​ಬ್ಯಾಕ್ ಗರಿಷ್ಠ ರೂ. 6000 ತನಕ
– ಪ್ಯಾನಾಸೋನಿಕ್ ಕನಿಷ್ಠ ರೂ. 8,000 ವಹಿವಾಟಿನ ಮೇಲೆ ಶೇ 10ರ ತನಕ ಕ್ಯಾಶ್​ಬ್ಯಾಕ್ (ಗರಿಷ್ಠ ರೂ. 3000)
– ಸ್ಯಾಮ್ಸಂಗ್ ಗ್ಯಾಲಕ್ಸಿ M12 ಮೇಲೆ ರೂ. 1000 ರಿಯಾಯಿತಿ ಮತ್ತು ಅಮೆಜಾನ್ ಮತ್ತು ಸ್ಯಾಮ್ಸಂಗ್ ಇ-ಸ್ಟೋರ್​ನಲ್ಲಿ ಕ್ರೆಡಿಟ್ ಕಾರ್ಡ್​ಗಳು ಮತ್ತು ಇಎಂಐ ವಹಿವಾಟುಗಳಿಗೆ ಸ್ಯಾಮ್ಸಂಗ್ ಗ್ಯಾಲಕ್ಸಿ M51ಗೆ ರೂ. 1500 ರಿಯಾಯಿತಿ
– ಫ್ಲಿಪ್​ಕಾರ್ಟ್​ನಲ್ಲಿ POCO X3 pro ಅನ್ನು ಕ್ರೆಡಿಟ್ ಕಾರ್ಡ್​ಗಳು ಅಥವಾ ಇಎಂಐ ವಹಿವಾಟಿನ ಮೂಲಕ ಖರೀದಿಸಿದರೆ ರೂ. 1000 ರಿಯಾಯಿತಿ.
– ಒಪ್ಪೋದ ಆಯ್ದ ಮಾಡೆಲ್​ಗಳ ಮೇಲೆ ಶೇ 10ರ ತನಕ ರಿಯಾಯಿತಿ ಮತ್ತು ರೆಡ್ಮಿ ನೋಟ್ 10 ಪ್ರೊ ಮತ್ತು ರೆಡ್ಮಿ ನೋಟ್ 10 ಪ್ರೊ ಮ್ಯಾಕ್ಸ್ ಮೇಲೆ ರೂ. 1500 ರಿಯಾಯಿತಿ. ಆದರೆ ಕ್ರೆಡಿಟ್ ಕಾರ್ಡ್​ಗಳು ಮತ್ತು ಇಎಂಐ ವಹಿವಾಟುಗಳಿಗೆ.
– ಲೆನೊವೊ ಲ್ಯಾಪ್​ಟಾಪ್​ಗಳ ಕನಿಷ್ಠ ರೂ. 40,000 ಮೇಲೆ ವಹಿವಾಟು ನಡೆಸಿದರೆ ಶೇ 10ರಷ್ಟು, ರೂ. 5000 ತನಕ ಕ್ಯಾಶ್​ಬ್ಯಾಕ್
– ಪೈನ್​ಲ್ಯಾಬ್ಸ್​ನ ಸ್ಟೋರ್​ಗಳ ಎಲ್ಲ ಉತ್ಪನ್ನಗಳಿಗೆ ಪಿಒಎಸ್ ಟರ್ಮಿನಲ್​ಗಳಲ್ಲಿ ಕಾರ್ಡ್​ಲೆಸ್ ಇಎಂಐ ವಹಿವಾಟುಗಳಿಗೆ ಶೇ 5ರಷ್ಟು, ರೂ. 1000 ಕ್ಯಾಶ್​ಬ್ಯಾಕ್.

5. ಗ್ರಾಹಕ ಬಳಕೆ ವಸ್ತುಗಳ ಸಾಲದ ಮೇಲಿನ ವಿಶೇಷ ಆಫರ್​ಗಳು
– ಹೈಯರ್, ಎಲ್​ಜಿ, ಸ್ಯಾಮ್ಸಂಗ್, ಪ್ಯಾನಾಸೋನಿಕ್, ಹಿಟಾಚಿ, ವೊಲ್ಟಾಸ್, ಐಎಫ್​ಬಿ, ಬ್ಲ್ಯೂಸ್ಟಾರ್ ಉತ್ಪನ್ನಗಳ ಮೇಲೆ ಗ್ರಾಹಕರಿಗೆ ಶೇಕಡಾ 5ರ ತನಕ ಕ್ಯಾಶ್​ಬ್ಯಾಕ್.
– ರಿಲಯನ್ಸ್ ಡಿಜಿಟಲ್​ನಲ್ಲಿ ಎಲ್ಲ ಬ್ರ್ಯಾಂಡ್​ಗಳ ಏಸಿಗಳು, ರೆಫ್ರಿಜರೇಟರ್, ಕೂಲರ್​ಗಳ ಮೇಲೆ ಶೇ 10ರಷ್ಟು, ರೂ. 2000 ತನಕ ಕ್ಯಾಶ್​ಬ್ಯಾಕ್.

6. ಫ್ಯಾಷನ್
– ಫ್ಯಾಷನ್ ವಿಭಾಗದಲ್ಲಿ ಕನಿಷ್ಠ ರೂ. 1750 ವಹಿವಾಟನ್ನು ಪ್ರತಿ ಬುಧವಾರ ಫ್ಲಿಪ್​ಕಾರ್ಟ್​ನಲ್ಲಿ ಮಾಡಿದಲ್ಲಿ ಶೇ 10ರಷ್ಟು, 300 ರೂಪಾಯಿ ತನಕ ರಿಯಾಯಿತಿ.
– Seiko ವೆಬ್​ಸೈಟ್​ನಲ್ಲಿ ಎಲ್ಲ ಉತ್ಪನ್ನಗಳ ಮೇಲೆ ಶೇ 10ರ ತನಕ ರಿಯಾಯಿತಿ
– gasjeans.inನಲ್ಲಿ ಹೆಚ್ಚುವರಿಯಾಗಿ ಶೇಕಡಾ 15ರಷ್ಟು ರಿಯಾಯಿತಿ
– Elitifyನಿಂದ ಕನಿಷ್ಠ ರೂ. 4999ರಷ್ಟು ಖರೀದಿ ಮಾಡಿದಲ್ಲಿ ಶೇಕಡಾ 15ರಷ್ಟು, ರೂ. 7500ರ ತನಕ ರಿಯಾಯಿತಿ.

7. ಪ್ರವಾಸ
– ಮೇಕ್ ಮೈ ಟ್ರಿಪ್ ಮೂಲಕ ಪ್ರತಿ ಸೋಮವಾರದಂದು ಮಾಡಿದ ದೇಶೀ ವಿಮಾನ ಯಾನ ಬುಕ್ಕಿಂಗ್​ಗೆ ರೂ. 1250ರ ತನಕ ಕ್ಯಾಶ್​ಬ್ಯಾಕ್.
– ಪ್ರತಿ ಮಂಗಳವಾರದ ದೇಶೀ ವಿಮಾನಯಾನದ ಕನಿಷ್ಠ ಬುಕ್ಕಿಂಗ್ ರೂ. 3000ಕ್ಕೆ ಶೇಕಡಾ 12ರಷ್ಟು ಫ್ಲ್ಯಾಟ್ ರಿಯಾಯಿತಿ, ರೂ. 2000 ತನಕ ದೊರೆಯಲಿದೆ.

ಇದನ್ನೂ ಓದಿ: Business loan: ಉದ್ಯಮಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸುವ ಟಾಪ್ 10 ಬ್ಯಾಂಕ್​ಗಳಿವು

(India’s major private bank ICICI Bank announced iDelights summer bonanza offers to customers. Here are the details.)