AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Stock Market: ಅಕ್ರಮ ವಹಿವಾಟು ನಡೆಸಿರುವುದು ಸಾಬೀತು: 19 ಮಂದಿಗೆ ದಂಡ ವಿಧಿಸಿದ ಸೆಬಿ

Illegal trading in stock market: ಷೇರು ಮಾರುಕಟ್ಟೆಯಲ್ಲಿ ಅಕ್ರಮ ವಹಿವಾಟು ನಡೆಸಿ ಶೇರುಗಳನ್ನು ನಕಲಿ ಮಾಡಿರುವುದು ತನಿಖೆಯಿಂದ ಸಾಬೀತಾದ ಹಿನ್ನೆಲೆ ಮಾರುಕಟ್ಟೆ ನಿಯಂತ್ರಕ ಸೆಬಿ 19 ಮಂದಿಗೆ ದಂಡ ವಿಧಿಸಿದೆ.

Stock Market: ಅಕ್ರಮ ವಹಿವಾಟು ನಡೆಸಿರುವುದು ಸಾಬೀತು: 19 ಮಂದಿಗೆ ದಂಡ ವಿಧಿಸಿದ ಸೆಬಿ
ಷೇರುಪೇಟೆಯಲ್ಲಿ ಅಕ್ರಮ ವಹಿವಾಟು ನಡೆಸಿದ 19 ಮಂದಿಗೆ ದಂಡ ವಿಧಿಸಿದ ಸೆಬಿ
TV9 Web
| Edited By: |

Updated on:Sep 27, 2022 | 5:25 PM

Share

ಷೇರು ಮಾರುಕಟ್ಟೆಯಲ್ಲಿ (Stock Market) ಅಕ್ರಮ ವಹಿವಾಟು ನಡೆಸಿ ಶೇರುಗಳನ್ನು ನಕಲಿ ಮಾಡಿದ್ದಕ್ಕಾಗಿ ಬಂಡವಾಳ ಮಾರುಕಟ್ಟೆ ನಿಯಂತ್ರಕ ಸೆಬಿ 19 ಮಂದಿಗೆ ಒಟ್ಟು 95 ಲಕ್ಷ ರೂಪಾಯಿ ದಂಡ ವಿಧಿಸಿದೆ. ಸೆಬಿ ತನಿಖೆ ನಡೆಸಿದಾಗ 19 ಜನರು ಗ್ಲೋಬಲ್ ಇನ್ಫ್ರಾಟೆಕ್ ಮತ್ತು ಫೈನಾನ್ಸ್ ಲಿಮಿಟೆಡ್ ಷೇರುಗಳನ್ನು ದುರ್ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣದ ನಂತರ ಸೆಬಿ ತಪ್ಪಿತಸ್ಥರಿಗೆ 95 ಲಕ್ಷ ರೂಪಾಯಿ ದಂಡ ವಿಧಿಸಿದ್ದು, ಆದೇಶ ನೀಡಿದ ದಿನದಿಂದ ದಂಡದ ಮೊತ್ತವನ್ನು 45 ದಿನಗಳಲ್ಲಿ ಪಾವತಿಸಬೇಕಾಗುತ್ತದೆ. ಷೇರುಪೇಟೆಯಲ್ಲಿ ಅಕ್ರಮ ವಹಿವಾಟು ನಡೆಸಿರುವ ಪ್ರಕರಣದ ತನಿಖೆಯನ್ನು 2017-18 ರಲ್ಲಿ ನಡೆಸಲಾಗಿತ್ತು. ಇದೀಗ 19 ಮಂದಿ ಅಕ್ರಮದಲ್ಲಿ ಭಾಗಿಯಾಗಿರುವುದು ತಿಳಿದುಬಂದ ಹಿನ್ನೆಲೆ ದಂಡ ವಿಧಿಸಲಾಗಿದೆ.

ಗ್ಲೋಬಲ್ ಇನ್‌ಫ್ರಾಟೆಕ್ ಮತ್ತು ಫೈನಾನ್ಸ್ ಲಿಮಿಟೆಡ್ (GIFL) ಷೇರುಗಳಲ್ಲಿ ಪಿಎಫ್‌ಯುಟಿಪಿ (ವಂಚನೆಯ ಮತ್ತು ಅನ್ಯಾಯದ ವ್ಯಾಪಾರ ಅಭ್ಯಾಸಗಳ ನಿಷೇಧ) ನಿಗದಿಪಡಿಸಿದ ನಿಯಮಗಳ ಉಲ್ಲಂಘನೆಯನ್ನು ಕಂಡುಹಿಡಿಯಲು ಮಾರುಕಟ್ಟೆ ನಿಯಂತ್ರಕ ಸೆಬಿ ಡಿಸೆಂಬರ್ 2017 ಮತ್ತು ಫೆಬ್ರವರಿ 2018 ರ ನಡುವೆ ವಿಚಾರಣೆ ನಡೆಸಿತ್ತು. ಅದರಂತೆ 19 ವ್ಯಕ್ತಿಗಳು ಗಣನೀಯ ಪ್ರಮಾಣದ ಷೇರುಗಳಲ್ಲಿ 3,266 ವಹಿವಾಟುಗಳನ್ನು ಕಾರ್ಯಗತಗೊಳಿಸುವ ಅದೇ ತಂತ್ರವನ್ನು ಅಳವಡಿಸಿಕೊಂಡಿದ್ದಾರೆ ಎಂದು ಕಂಡುಹಿಡಿಯಲಾಗಿದೆ. ಇದು 39 ದಿನಗಳವರೆಗೆ ಹೆಚ್ಚಿನ ಸಂಖ್ಯೆಯ ವಹಿವಾಟುಗಳ ಮೂಲಕ 87 ರಿಂದ 458 ವಹಿವಾಟುಗಳವರೆಗಿನ ಒಟ್ಟು ಮಾರುಕಟ್ಟೆ ಪರಿಮಾಣದ 12.86 ಪ್ರತಿಶತವಾಗಿದೆ.

ಪ್ರಕರಣದ ತನಿಖೆಯಂತೆ ಸೆಬಿಯು, ಹರೀಶ್‌ಕುಮಾರ್ ಕಾಂತಿಲಾಲ್ ಪಟೇಲ್, ವಿಶಾಲಕುಮಾರ್ ಕೃಷ್ಣಕಾಂತ್ ಬೋರಿಶಾ, ಪಾರ್ಧಿ ಧೀರೂಭಾಯ್ ಖಾನಾಭಾಯಿ, ಭಾವಿನ್ ನಟ್ವರ್‌ಲಾಲ್ ಪಾಂಚಾಲ್, ಅಂಕಿತ್ ಜಗದೀಶ್‌ಭಾಯ್ ಪಿಥ್ವಾ, ಕೇತನ್ ಪ್ರವೀಣ್‌ಭಾಯ್ ಪಾಂಚಾಲ್, ಪ್ರವೀಣ್ ಕುಮಾರ್ ಮತ್ತು ರಮೇಶ್‌ಚಂದ್ರ ಚಿತುಭಾಯಿ ಸೇರಿದಂತೆ ಒಟ್ಟು 19 ಜನರ ವಿರುದ್ಧ ಕ್ರಮ ಕೈಗೊಂಡಿದ್ದು, ಒಬ್ಬೊಬ್ಬರಿಗೆ ತಲಾ 5 ಲಕ್ಷದಂತೆ ಒಟ್ಟು 95 ಲಕ್ಷ ರೂ. ದಂಡ ವಿಧಿಸಿದೆ.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:25 pm, Tue, 27 September 22

ಲಕ್ಕುಂಡಿಯಲ್ಲಿ ನಿಧಿ ರಹಸ್ಯ: ಬಸವಣ್ಣ ದೇವಸ್ಥಾನದಲ್ಲಿ ಸರ್ಪದ ಪೊರೆ ಪತ್ತೆ
ಲಕ್ಕುಂಡಿಯಲ್ಲಿ ನಿಧಿ ರಹಸ್ಯ: ಬಸವಣ್ಣ ದೇವಸ್ಥಾನದಲ್ಲಿ ಸರ್ಪದ ಪೊರೆ ಪತ್ತೆ
ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್​​ನಲ್ಲಿ ಗೊಂದಲ: ಆಗಿದ್ದೇನು?
ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್​​ನಲ್ಲಿ ಗೊಂದಲ: ಆಗಿದ್ದೇನು?
ಕಾಂಗ್ರೆಸ್ ಭವನಕ್ಕೆ ಕೋಟಿ ಕೋಟಿ ಮೌಲ್ಯದ ಸಿಎ ಸೈಟ್ ಮೂರ್ಕಾಸಿಗೆ
ಕಾಂಗ್ರೆಸ್ ಭವನಕ್ಕೆ ಕೋಟಿ ಕೋಟಿ ಮೌಲ್ಯದ ಸಿಎ ಸೈಟ್ ಮೂರ್ಕಾಸಿಗೆ
ಮಲ್ಲನ ಮ್ಯಾಜಿಕ್​ಗೆ ಕರಗಿದ ಸಾಲ್ಟ್
ಮಲ್ಲನ ಮ್ಯಾಜಿಕ್​ಗೆ ಕರಗಿದ ಸಾಲ್ಟ್
ಎರಡನೇ ಮದುವೆ ಮಾಡಿಕೊಳ್ಳುತ್ತಿದ್ದ ಪತಿಗೆ ಮೊದಲ ಪತ್ನಿ ಶಾಕ್: ವಿಡಿಯೋ ನೋಡಿ
ಎರಡನೇ ಮದುವೆ ಮಾಡಿಕೊಳ್ಳುತ್ತಿದ್ದ ಪತಿಗೆ ಮೊದಲ ಪತ್ನಿ ಶಾಕ್: ವಿಡಿಯೋ ನೋಡಿ
ಹಾಸನ: ಮಹಿಳೆ ರೂಮ್​ಗೆ ನುಗ್ಗಿ ಪತಿ ಸಂಬಂಧಿಕರ ಗಲಾಟೆ!
ಹಾಸನ: ಮಹಿಳೆ ರೂಮ್​ಗೆ ನುಗ್ಗಿ ಪತಿ ಸಂಬಂಧಿಕರ ಗಲಾಟೆ!
ಜಿಟಿಡಿ ವಿರುದ್ಧ ಹೆಚ್​​ಡಿಕೆ ಗರಂ: ಅವರು ನಮ್ಮೊಂದಿಗಿಲ್ಲ ಎಂದ ಕೇಂದ್ರ ಸಚಿವ
ಜಿಟಿಡಿ ವಿರುದ್ಧ ಹೆಚ್​​ಡಿಕೆ ಗರಂ: ಅವರು ನಮ್ಮೊಂದಿಗಿಲ್ಲ ಎಂದ ಕೇಂದ್ರ ಸಚಿವ
ಮನೆ ಮುಂದೆ ಸೈಕಲ್ ಓಡಿಸುತ್ತಿದ್ದ ಬಾಲಕನ ಮೇಲೆ ಹರೀತು ಕಾರು!
ಮನೆ ಮುಂದೆ ಸೈಕಲ್ ಓಡಿಸುತ್ತಿದ್ದ ಬಾಲಕನ ಮೇಲೆ ಹರೀತು ಕಾರು!
ವಿಶ್ವಕಪ್​ ಇತಿಹಾಸದಲ್ಲೇ ಅತ್ಯಂತ ಹೀನಾಯ ದಾಖಲೆ ಬರೆದ ಸೌರಭ್
ವಿಶ್ವಕಪ್​ ಇತಿಹಾಸದಲ್ಲೇ ಅತ್ಯಂತ ಹೀನಾಯ ದಾಖಲೆ ಬರೆದ ಸೌರಭ್
ನೆರವಿಗಾಗಿ ಕರೆ ಮಾಡಿದ್ದ ಮಹಿಳೆ ಮೇಲೆ ಪೊಲೀಸಪ್ಪ ಗರಂ: ವಿಡಿಯೋ ವೈರಲ್​​
ನೆರವಿಗಾಗಿ ಕರೆ ಮಾಡಿದ್ದ ಮಹಿಳೆ ಮೇಲೆ ಪೊಲೀಸಪ್ಪ ಗರಂ: ವಿಡಿಯೋ ವೈರಲ್​​