ಭಾರತದೊಂದಿಗೆ ಟ್ರೇಡ್ ಡೀಲ್; ಯೂರೋಪ್ ಸಂತಸ ಪಡುತ್ತಿರುವುದ್ಯಾಕೆ?
India EU trade deal: ಭಾರತ ಮತ್ತು ಯೂರೋಪಿಯನ್ ಒಕ್ಕೂಟದ ನಡುವಿನ ವ್ಯಾಪಾರ ಒಪ್ಪಂದವು ಎಲ್ಲಾ ಒಪ್ಪಂದಗಳ ರಾಜ ಎಂದು ಬಣ್ಣಿಸಲಾಗುತ್ತಿದೆ. ಇಯು ಕಮಿಷನ್ ಅಧ್ಯಕ್ಷೆ ಉರ್ಸುಲಾ ಅವರು ಈ ಒಪ್ಪಂದದಿಂದ 200 ಬಿಲಿಯನ್ ಜನರ ಮಾರುಕಟ್ಟೆ ಸೃಷ್ಟಿಯಾಗುತ್ತದೆ ಎಂದಿದ್ದಾರೆ. ಒಪ್ಪಂದಕ್ಕಾಗಿ ಮಾತುಕತೆಗಳು ಬಹುತೇಕ ಅಂತ್ಯಗೊಂಡಿದ್ದು, ಅಂತಿಮ ಹಂತದಲ್ಲಿದೆ ಎನ್ನಲಾಗುತ್ತಿದೆ.

ನವದೆಹಲಿ, ಜನವರಿ 22: ಭಾರತ ಮತ್ತು ಐರೋಪ್ಯ ಒಕ್ಕೂಟದ (European Union) ಮಧ್ಯೆ ಮುಕ್ತ ವ್ಯಾಪಾರ ಒಪ್ಪಂದ ಏರ್ಪಡುತ್ತಿದೆ. ಸದ್ಯದಲ್ಲೇ ಟ್ರೇಡ್ ಡೀಲ್ಗೆ ಸಹಿ ಹಾಕಲಾಗಬಹುದು. 27 ದೇಶಗಳ ಒಕ್ಕೂಟವಾಗಿರುವ ಯೂರೋಪಿಯನ್ ಯೂನಿಯನ್ ಮತ್ತು ಭಾರತದ ನಡುವಿನ ಈ ಒಪ್ಪಂದವನ್ನು ಅತಿದೊಡ್ಡ ಡೀಲ್ ಎಂದು ಬಣ್ಣಿಸಲಾಗುತ್ತಿದೆ. ಅಮೆರಿಕದ ಇತ್ತೀಚಿನ ನಡವಳಿಕೆಯು ಯೂರೋಪ್ ಮತ್ತು ಭಾರತವನ್ನು ಮತ್ತಷ್ಟು ನಿಕಟಗೊಳಿಸಿದೆ. ಒಪ್ಪಂದ ಬೇಗ ಸಾಕಾರಗೊಳ್ಳುವಂತೆ ಮಾಡಿದೆ.
‘ನಾವು ಐತಿಹಾಸಿಕ ವ್ಯಾಪಾರ ಒಪ್ಪಂದದ ಅಂಚಿನಲ್ಲಿ ಇದ್ದೇವೆ. ಕೆಲವರು ಇದನ್ನು ಮದರ್ ಆಫ್ ಆಲ್ ಡೀಲ್ಸ್ ಎಂದು ಕರೆಯುತ್ತಿದ್ದಾರೆ. ಈ ಒಪ್ಪಂದದಿಂದ 200 ಕೋಟಿ ಜನರ ಮಾರುಕಟ್ಟೆ ಸೃಷ್ಟಿಯಾಗುತ್ತದೆ’ ಎಂದು ಯೂರೋಪಿಯನ್ ಯೂನಿಯನ್ ಕಮಿಷನ್ನ ಅಧ್ಯಕ್ಷೆ ಉರ್ಸುಲಾ ವಾನ್ ಡರ್ ಲೇಯೆನ್ (Ursula Von Der Leyen) ಅವರು ಹೇಳಿದ್ದಾರೆ.
ಇದನ್ನೂ ಓದಿ: ಎಟರ್ನಲ್ ಸಿಇಒ ಸ್ಥಾನಕ್ಕೆ ದೀಪಿಂದರ್ ಗೋಯಲ್ ರಾಜೀನಾಮೆ ಕೊಟ್ಟಿದ್ದು ಯಾಕೆ? ಮುಂದೇನು ಅವರ ದಾರಿ?
ಉರ್ಸುಲಾ ಅವರು ಜನವರಿ 25-27ಕ್ಕೆ ಭಾರತಕ್ಕೆ ಬರಲಿದ್ದಾರೆ. ಈ ವೇಳೆ, ಒಪ್ಪಂದಕ್ಕೆ ಅಂತಿಮ ಸ್ಪರ್ಶ ಸಿಗುವ ನಿರೀಕ್ಷೆ ಇದೆ.
‘ಡಾವೋಸ್ ಸಮಿಟ್ ಬಳಿಕ ಮುಂದಿನ ವಾರಾಂತ್ಯದಲ್ಲಿ ನಾನು ಭಾರತಕ್ಕೆ ಭೇಟಿ ನೀಡುತ್ತೇನೆ. ಇನ್ನೂ ಸ್ವಲ್ಪ ಕೆಲಸ ಬಾಕಿ ಇದೆ. ಆದರೆ, ಐತಿಹಾಸಿಕ ವ್ಯಾಪಾರ ಒಪ್ಪಂದದ ಅಂಚಿನಲ್ಲಿ ಇದ್ದೇವೆ. ಈ ಡೀಲ್ನಿಂದ 200 ಕೋಟಿ ಜನರ ಮಾರುಕಟ್ಟೆ ಸೃಷ್ಟಿಯಾಗುತ್ತದೆ. ಜಾಗತಿಕ ಆರ್ಥಿಕತೆಯ ಕಾಲುಭಾಗಕ್ಕಿಂತ ಹೆಚ್ಚು. ಬಹಳ ಮುಖ್ಯ ಸಂಗತಿ ಎಂದರೆ, ವಿಶ್ವದಲ್ಲೇ ಅತಿವೇಗವಾಗಿ ಬೆಳೆಯುತ್ತಿರುವ ಪ್ರದೇಶದೊಂದಿಗೆ ಮೊದಲ ಹೆಜ್ಜೆ ಇಡುವ ಅನುಕೂಲ ಯೂರೋಪ್ಗೆ ಸಿಗುತ್ತದೆ’ ಎಂದು ಡಾವೊಸ್ ಸಮಿಟ್ನಲ್ಲಿ ಉರ್ಸುಲಾ ಹೇಳಿದ್ದಾರೆ.
ಇಯು ಎಕ್ಸ್ ಪೋಸ್ಟ್
Fresh from #WEFDavos:
“we are on the cusp of a historic trade agreement. Some call it the mother of all deals. One that would create a market of 2 billion people..” President @vonderleyen
President @antoniocostapm & @vonderleyen will visit India Jan 25-27. 🇪🇺🤝🇮🇳#EUIndia pic.twitter.com/JeET60BwwS
— EU in India (@EU_in_India) January 20, 2026
‘ಲ್ಯಾಟಿನ್ ಅಮೆರಿಕದಿಂದ ಹಿಡಿದು ಹಿಂದೂ ಮಹಾಸಾಗರದವರೆಗೆ ಈ ಶತಮಾನದ ಆರ್ಥಿಕ ಶಕ್ತಿಕೇಂದ್ರಗಳು ಮತ್ತು ಅಭಿವೃದ್ಧಿ ಕೇಂದ್ರಗಳೊಂದಿಗೆ ಯೂರೋಪ್ ಬ್ಯುಸಿನೆಸ್ ಮಾಡಬಯಸುತ್ತದೆ. ಯೂರೋಪ್ ಯಾವತ್ತೂ ವಿಶ್ವವನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಈ ವಿಶ್ವವು ಯೂರೋಪ್ ಅನ್ನು ಆಯ್ಕೆ ಮಾಡಲು ಅಣಿಯಾಗಿದೆ’ ಎಂದು ಯೂರೋಪಿಯನ್ ಯೂನಿಯನ್ ಕಮಿಷನ್ ಅಧ್ಯಕ್ಷೆಯಾದ ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಜವಾಬ್ದಾರಿಯುತ ರಾಷ್ಟ್ರಗಳ ಸೂಚ್ಯಂಕ: ಜಾಗತಿಕ ಶಕ್ತಿಯ ಲೆಕ್ಕಾಚಾರವನ್ನೇ ಬದಲಿಸಿದ ಭಾರತ
ಯೂರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೋ ಲೂಯಿಸ್ ಸ್ಯಾಂಟೋಸ್ ಡಾ ಕೋಸ್ಟಾ ಹಾಗೂ ಉರ್ಸುಲಾ ವೋನ್ ಡರ್ ಲೆಯೆನ್ ಅವರು ಭಾರತದ ಗಣರಾಜ್ಯೋತ್ಸವ ಪೆರೇಡ್ನಲ್ಲಿ ಮುಖ್ಯ ಅತಿಥಿಗಳಾಗಿದ್ದಾರೆ. ಜನವರಿ 27ರಂದು ನಡೆಯುವ 16ನೇ ಭಾರತ ಯೂರೋಪಿಯನ್ ಯೂನಿಯನ್ ಶೃಂಗಸಭೆಯಲ್ಲೂ ಪಾಲ್ಗೊಳ್ಳಲಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




