Cairn Energy: ಕೇರ್ನ್ ಎನರ್ಜಿಗೆ ಭಾರತ ಸರ್ಕಾರ 100 ಕೋಟಿ ಯುಎಸ್​ಡಿ ಹಿಂತಿರುಗಿಸುವ ನಿರೀಕ್ಷೆ

ಭಾರತ ಸರ್ಕಾರವು ಈಚೆಗೆ ಲೋಕಸಭೆಯಲ್ಲಿ ತೆರಿಗೆ ಕಾನೂನು ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದೆ. ಅದರ ಪ್ರಕಾರ ಕೇರ್ನ್​ ಎನರ್ಜಿಯ 100 ಕೋಟಿ ಡಾಲರ್ ತೆರಿಗೆ ಮರುಪಾವತಿಸುವ ಸಾಧ್ಯತೆ ಇದೆ.

Cairn Energy: ಕೇರ್ನ್ ಎನರ್ಜಿಗೆ ಭಾರತ ಸರ್ಕಾರ 100 ಕೋಟಿ ಯುಎಸ್​ಡಿ ಹಿಂತಿರುಗಿಸುವ ನಿರೀಕ್ಷೆ
ಅಫ್ಘಾನಿಸ್ತಾನದ ಕರೆನ್ಸಿ ಅಮೆರಿಕದ ಡಾಲರ್ ವಿರುದ್ಧ 86 ಅಫ್ಘನಿ
Follow us
TV9 Web
| Updated By: Srinivas Mata

Updated on: Aug 07, 2021 | 11:18 PM

ಭಾರತವು ಯು.ಕೆ. ಮೂಲದ ಕೇರ್ನ್ ಎನರ್ಜಿ ಕಂಪೆನಿಗೆ 100 ಕೋಟಿ ಅಮೆರಿಕನ್ ಡಾಲರ್ ಹಿಂತಿರುಗಿಸುವ ನಿರೀಕ್ಷೆ ಇದೆ. ತೆರಿಗೆ ಕಾನೂನು (Retrospective Tax) ತಿದ್ದುಪಡಿ ತಂದ ಮೇಲೆ ಈ ಬೆಳವಣಿಗೆ ಸಾಧ್ಯತೆ ಇದೆ ಎಂದು ಫೈನಾನ್ಷಿಯಲ್ ಟೈಮ್ಸ್ ವರದಿ ಮಾಡಿದೆ. ಕಳೆದ ಶುಕ್ರವಾರ ಸಂಸತ್​ನಲ್ಲಿ ತೆರಿಗೆ ನಿಯಮದಲ್ಲಿ ತಿದ್ದುಪಡಿ ತರುವುದಕ್ಕೂ ಅನುಮೋದನೆ ದೊರೆತಿದೆ. ಮುಂದಿನ ವಾರ ಮೇಲ್ಮನೆಯಲ್ಲಿ ಅದಕ್ಕೆ ಮಂಜೂರಾತಿ ದೊರೆಯುವ ಸಾಧ್ಯತೆ ಇದೆ. ಟೆಲಿಕಾಮ್ಸ್ ಸಮೂಹ ವೊಡಾಫೋನ್, ಫಾರ್ಮಾಸ್ಯುಟಿಕಲ್ಸ್ ಕಂಪೆನಿ ಸನೋಫಿ ಮತ್ತು SABಮಿಲ್ಲರ್, ಈಗ AB InBev ಮಾಲೀಕತ್ವದಲ್ಲಿದೆ. ಹೂಡಿಕೆ ಸ್ಥಳವಾಗಿ ಭಾರತಕ್ಕೆ ಆಗಿರುವ ವರ್ಚಸ್ಸಿನ ಹಾನಿಯನ್ನು ಸರಿಪಡಿಸುವ ಹಾದಿಯಲ್ಲಿದೆ.

ವಿಶ್ಲೇಷಕರು ಹೇಳುವಂತೆ, ಈ ಕಾನೂನು ಪ್ರಕ್ರಿಯೆಯು ಕೇರ್ನ್ ಜತೆಗಿನ ಅಂತರರಾಷ್ಟ್ರೀಯ ತೆರಿಗೆ ಕದನವನ್ನು ಇತ್ಯರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ತೆರಿಗೆ ವ್ಯಾಜ್ಯದಲ್ಲಿ ಭಾರತಕ್ಕೆ ಮುಜುಗರ ತಂದಿದೆ. ವಿದೇಶದಲ್ಲಿ ಇರುವ ಭಾರತ ಸರ್ಕಾರಕ್ಕೆ ಸೇರಿದ ಅಂದಾಜು 7000 ಕೋಟಿ ಅಮೆರಿಕನ್ ಡಾಲರ್ ಆಸ್ತಿಯನ್ನು ವಶಪಡಿಸಿಕೊಳ್ಳಲು ಕೇಳಿತ್ತು. ಕಾನೂನುಬದ್ಧವಾಗಿ ತೆರಿಗೆ ವ್ಯಾಜ್ಯ ಪರಿಹಾರಕ್ಕೆ ಇದು ಮಾರ್ಗ ಎಂದು ತಮ್ಮ ಗುರುತು ಬಹಿರಂಗ ಮಾಡಲು ಇಚ್ಛಿಸದ ವಿದೇಶೀ ಬಿಜಿನೆಸ್ ಅನಲಿಸ್ಟ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈಗಿನ ತೆರಿಗೆ ವ್ಯಾಜ್ಯ ಬಗೆಹರಿಸಿಕೊಳ್ಳುವುದರಿಂದ ವಿದೇಶೀ ಕಂಪೆನಿಗಳಲ್ಲಿ ವರ್ಚಸ್ಸು ವೃದ್ಧಿಸಿಕೊಳ್ಳಲು ಸಹಾಯ ಮಾಡುತ್ತದೆ. ಕೊವಿಡ್-19 ಬಾಧಿತ ಭಾರತದ ಆರ್ಥಿಕತೆಗೆ ಈಗಿನ ಬೆಳವಣಿಗೆಯಿಂದ ಬಹಳ ಅನುಕೂಲ ಆಗುತ್ತದೆ. “ನಾವು ಹೂಡಿಕೆದಾರರಿಗೆ ಸಂದೇಶ ನೀಡಲು ಬಯಸುತ್ತೇವೆ. ನಾವು ಸ್ಥಿರತೆ ಹಾಗೂ ತೆರಿಗೆಯಲ್ಲಿ ನಿಶ್ಚಿತತೆ ತರುವುದನ್ನು ಬಯಸುತ್ತೇವೆ,” ಎಂದು ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ಮಾಧ್ಯಮದವರಿಗೆ ತಿಳಿಸಿದ್ದಾರೆ. ತೆರಿಗೆಯು ಸಾರ್ವಭೌಮತ್ವ ಹಕ್ಕು. ಅದನ್ನು ಕಸಿಯುವ ಸಾಧ್ಯವಿಲ್ಲ. ಇದನ್ನು ನಾವು ಪ್ರತ್ಯೇಕವಾಗಿ, ನ್ಯಾಯಾಂಗ ರೀತಿ ಬಳಸುತ್ತೇವೆ.

ತರುಣ್ ಬಜಾಜ್ ಹೇಳಿದಂತೆ, 120 ಕೋಟಿ ಡಾಲರ್​ ಅನ್ನು ಕಂಪೆನಿಗಳಿಂದ ಈಗ ರದ್ದು ಮಾಡಿರುವ ತೆರಿಗೆ ನಿಯಮಗಳಿಂದ ವಸೂಲಿ ಮಾಡಲಾಗಿದೆ. ಬಾಕಿ ಇರುವ ವ್ಯಾಜ್ಯವನ್ನು ಕೈ ಬಿಡುವುದಕ್ಕೆ ಒಪ್ಪಿಕೊಂಡಲ್ಲಿ, ಜತೆಗೆ ಬಡ್ಡಿ ಮತ್ತು ದಂಡವನ್ನು ಬಿಟ್ಟಲ್ಲಿ ತೆರಿಗೆ ಪ್ರಾವಿಷನ್ ಮರುಪಾವತಿಸಲಾಗುತ್ತದೆ. 100 ಕೋಟಿ ಡಾಲರ್​ನಷ್ಟು ಕೇರ್ನ್​ಗೆ ಮತ್ತು 270 ಮಿಲಿಯನ್ ಡಾಲರ್ ವೊಡಾಫೋನ್ ಸೇರಿದಂತೆ ಇತರ ಕಂಪೆನಿಗಳಿಗೆ ಹೋಗುತ್ತದೆ.

ಇದನ್ನೂ ಓದಿ: Retrospective Tax: ವಿವಿಧ ಕಂಪೆನಿಗಳ ಜತೆಗಿನ ತೆರಿಗೆ ವ್ಯಾಜ್ಯ ಬಗೆಹರಿಸಿಕೊಳ್ಳುವ ತಿದ್ದುಪಡಿ ಮಸೂದೆಗೆ ಲೋಕಸಭೆ ಅಸ್ತು

(India Expected To Offer Cairn Energy 1 Billion USD Tax Refund)

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ