ಭಾರತ ಶ್ರೀಮಂತ ಗಣ್ಯರನ್ನು ಹೊಂದಿರುವ ಬಡ ಮತ್ತು ಅಸಮಾನತೆಯ ರಾಷ್ಟ್ರ: ಶೇ.57ರಷ್ಟು ಆದಾಯ ಕೇವಲ10 ಪ್ರತಿಶತ ಜನರ ಬಳಿ

| Updated By: Pavitra Bhat Jigalemane

Updated on: Dec 08, 2021 | 6:08 PM

ಇತ್ತೀಚಿಗೆ ವಿಶ್ವ ಅಸಮಾನತೆಯ ಸಮೀಕ್ಷೆಯ ವರದಿಯು ಭಾರತವನ್ನು ಶ್ರೀಮಂತ ಗಣ್ಯರನ್ನು ಹೊಂದಿರುವ ಬಡ ಮತ್ತು ಅಸಮನಾನತೆಯ ರಾಷ್ಟ್ರ ಎಂದು ಹೆಸರಿಸಿದೆ. ದೇಶದಲ್ಲಿನ ಶೇ.20ರಷ್ಟು ಸಂಪತ್ತು ಕೇವಲ ಶೇ.1ರಷ್ಟು ಜನರ ಬಳಿಯಿದೆ. ಅಲ್ಲದೇ ಶೇ.10ರಷ್ಟು ಜನರು 57 ಪ್ರತಿಶತದಷ್ಟು ಆದಾಯವನ್ನು ಗಳಿಸುತ್ತಾರೆ ಎಂದು ತಿಳಿಸಿದೆ.

ಭಾರತ ಶ್ರೀಮಂತ ಗಣ್ಯರನ್ನು ಹೊಂದಿರುವ ಬಡ ಮತ್ತು ಅಸಮಾನತೆಯ ರಾಷ್ಟ್ರ: ಶೇ.57ರಷ್ಟು ಆದಾಯ ಕೇವಲ10 ಪ್ರತಿಶತ ಜನರ ಬಳಿ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ:  ಭಾರತವನ್ನು ಅಭಿವೃದ್ಧಿಶೀಲ ರಾಷ್ಟ್ರ ಎಂದು ಕರೆಯುತ್ತೇವೆ. ಆದರೆ ಇತ್ತೀಚಿಗೆ ವಿಶ್ವ ಅಸಮಾನತೆಯ ಸಮೀಕ್ಷೆಯ ವರದಿಯು, ಭಾರತವನ್ನು ಶ್ರೀಮಂತ ಗಣ್ಯರನ್ನು ಹೊಂದಿರುವ ಬಡ ಮತ್ತು ಅಸಮಾನತೆಯ ರಾಷ್ಟ್ರ ಎಂದು ಹೆಸರಿಸಿದೆ. ದೇಶದಲ್ಲಿನ ಶೇ.20ರಷ್ಟು ಸಂಪತ್ತು ಕೇವಲ ಶೇ.1ರಷ್ಟು ಜನರ ಬಳಿಯಿದೆ. ಅಲ್ಲದೇ ಶೇ.10ರಷ್ಟು ಜನರು 57 ಪ್ರತಿಶತದಷ್ಟು ಆದಾಯವನ್ನು ಗಳಿಸುತ್ತಾರೆ. ಹಾಗೂ ಶೇ50ರಷ್ಟು ಜನರು 13 ಪ್ರತಿಶತದಷ್ಟು ಆದಾಯಗಳಿಸುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಅರ್ಥಶಾಸ್ತ್ರಜ್ಞ ಮತ್ತು ವಿಶ್ವ ಅಸಮಾನತೆ ಪ್ರಯೋಗಾಲಯದ ಸಹ ನಿರ್ದೇಶಕ ಲ್ಯೂಕಾಸ್​ ಚಾನ್ಸೆಲ್​ , ಇಮ್ಯಾನುವಲ್ ಸಾಯೆಜ್​ ಮತ್ತು ಗೇಬ್ರಿಯಲ್​ ಝುಕ್ಮನ್​ ಅವರು ಬಿಡುಗಡೆ ಮಾಡಿದ ವರದಿಯಲ್ಲಿ ಭಾರತ ಆರ್ಥಿಕತೆಯಲ್ಲಿ ಹಿಂದುಳಿದಿದೆ ಎನ್ನುವುದು ಸಾಬೀತಾಗಿದೆ.

ಸಮೀಕ್ಷೆಯ ಪ್ರಕಾರ ದೇಶದ ಮಧ್ಯಮ ವರ್ಗದ ಜನರು ಬಡವರಾಗಿಯೇ ಇದ್ದು ಒಟ್ಟು ರಾಷ್ಟ್ರೀಯ ಆದಾಯದ 29.5 ಪ್ರತಿಶತದಷ್ಟು ಆದಾಯವನ್ನು ಗಳಿಸುತ್ತಿದ್ದಾರೆ. 65 ಪ್ರತಿಶತದಷ್ಟು ಆದಾಯ ಗಳಿಸುವವರಿಗೆ ಹೋಲಿಸಿದರೆ ಮಧ್ಯಮ ವರ್ಗದ ಜನರು ಶೇ 33 ರಷ್ಟು ರಾಷ್ಟ್ರೀಯ ಆದಾಯವನ್ನು ವಾರ್ಷಿಕವಾಗಿ ಗಳಿಸುತ್ತಿದ್ದಾರೆ ಎಂದು ಹೇಳಲಾಗಿದೆ.

2021ರಲ್ಲಿ ಭಾರತೀಯ ವಯಸ್ಕ ಜನಸಂಖ್ಯೆಯ ಸರಾಸರಿ ವಾರ್ಷಿಕ ರಾಷ್ಟ್ರೀಯ ಆದಾಯ 2,04,200 ಆಗಿದೆ. ಅದರಲ್ಲಿ ಶೇ 50ರಷ್ಟು ಜನರು ಗಳಿಸಿದ್ದು ಕೇವಲ 53,610 ರೂ. ಆಗಿದೆ. 10 ಪ್ರತಿಶತದಷ್ಟು ಶ್ರೀಮಂತರು ಮಾತ್ರ20 ಪಟ್ಟು ಹೆಚ್ಚು ಆದಾಯವನ್ನು ಗಳಿಸಿದ್ದಾರೆ. ಹೀಗಾಗಿ ಆರ್ಥಿಕವಾಗಿ ಈಗಾಗಲೇ ಕೆಳಮಟ್ಟದಲ್ಲಿರುವ ಜನರಿಗೆ ಆದಾಯವೇ ಇಲ್ಲದಂತಾಗಿದೆ. ಹೀಗಾಗಿ ವರದಿಯಲ್ಲಿ ಭಾರತ ಶ್ರೀಮಂತ ಗಣ್ಯರನ್ನು ಹೊಂದಿರುವ ಬಡ ಮತ್ತು ಅಸಮನಾನತೆಯ ರಾಷ್ಟ್ರ ಎಂದು ಕರೆಯಲಾಗಿದೆ.

ಇನ್ನೊಂದು ಮುಖ್ಯ ವಿಚಾರವೆಂದರೆ 20ನೇ ಶತಮಾನದ ಆರಂಭದಲ್ಲಿದ್ದ ಪಾಶ್ಚಿಮಾತ್ಯ ಸಾಮ್ರಾಜ್ಯಶಾಹಿ ಪದ್ಧತಿಯು ಈಗ ಉತ್ತುಂಗಕ್ಕೇರಿದಂತೆ ಕಾಣುತ್ತಿದೆ. ಹೀಗಾಗಿ ಭಾರತದಲ್ಲಿ ಬಡತನದ ರೇಖೆ ಹೆಚ್ಚುತ್ತಲೇ ಇದೆ. ಅಲ್ಲದೇ ಜಾಗತಿಕ ಜನಸಂಖ್ಯೆಯಲ್ಲಿ ಭಾರತದ ಅರ್ಧದಷ್ಟು ಜನರು ಯಾವುದೇ ಸಂಪತ್ತನ್ನು ಹೊಂದಿಲ್ಲ. ಜಾಗತಿಕ ಜನಸಂಖ್ಯೆಯ ಶೇ10ರಷ್ಟು ಜನರು 76 ಪ್ರತಿಶತದಷ್ಟು ಸಂಪತ್ತನ್ನು ಗಳಿಸುತ್ತಿದ್ದಾರೆ ಎನ್ನುವ ಅಂಶ ಬಹಿರಂಗವಾಗಿದೆ. ವಿಶ್ವದಲ್ಲಿ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ದೇಶಗಳು ಅತಿ ಹೆಚ್ಚು ಅಸಮಾನತೆಯನ್ನು ಹೊಂದಿದ ರಾಷ್ಟ್ರಗಳಾಗೆದ್ದು ಯುರೋಪ್​ ಅತೀ ಕಡಿಮೆ ಆರ್ಥಿಕ ಅಸಮಾನತೆಯನ್ನು ಹೊಂದಿದ ರಾಷ್ಟ್ರವಾಗಿದೆ.

ಇದನ್ನೂ ಓದಿ:

Viral Video: ಚಿಪ್ಸ್ ತಿಂದ ಪ್ಯಾಕೆಟ್​ಗೆ ಉಗುಳಿ ಮತ್ತೆ ಅಂಗಡಿಯಲ್ಲಿಟ್ಟ ಯುವತಿ; ವಿಡಿಯೋ ಕಂಡು ಹಿಗ್ಗಾಮುಗ್ಗಾ ಜಾಲಾಡಿದ ನೆಟ್ಟಿಗರು

ಮಂಗಳೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು

 

Published On - 5:42 pm, Wed, 8 December 21