India Shines: ಜಗತ್ತಿನ ಅತಿದೊಡ್ಡ ಷೇರುಮಾರುಕಟ್ಟೆಗಳು: ಐದನೇ ಸ್ಥಾನಕ್ಕೇರಿದ ಭಾರತ; ಯಾವ ದೇಶಗಳಿದ್ದಾವೆ ಟಾಪ್​ನಲ್ಲಿ?

India at 5th Spot In Total Market Cap: 274 ಲಕ್ಷ ಕೋಟಿ ರುಪಾಯಿಯಷ್ಟು ಷೇರುಸಂಪತ್ತು ಭಾರತದಲ್ಲಿದೆ. ಜಾಗತಿಕವಾಗಿ ಅತಿಹೆಚ್ಚು ಷೇರುಸಂಪತ್ತು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ 5ನೇ ಸ್ಥಾನಕ್ಕೇರಿದೆ.

India Shines: ಜಗತ್ತಿನ ಅತಿದೊಡ್ಡ ಷೇರುಮಾರುಕಟ್ಟೆಗಳು: ಐದನೇ ಸ್ಥಾನಕ್ಕೇರಿದ ಭಾರತ; ಯಾವ ದೇಶಗಳಿದ್ದಾವೆ ಟಾಪ್​ನಲ್ಲಿ?
ಷೇರುಮಾರುಕಟ್ಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 30, 2023 | 11:35 AM

ಕಳೆದ ಕೆಲ ತಿಂಗಳಿಂದ ಭಾರತದ ಷೇರುಮಾರುಕಟ್ಟೆ (Share Market) ಹಿರಿಹಿರಿ ಹಿಗ್ಗುತ್ತಿದೆ. ಜಿಗಿಜಿಗಿದು ಕುಪ್ಪಳಿಸುತ್ತಿದೆ. ಜನವರಿಯ ಬಳಿಕ ಒಂದೆರಡು ತಿಂಗಳು ಮಂಕು ಬಡಿದಿದ್ದ ಷೇರುಪೇಟೆಯಲ್ಲಿ ಈಗ ಕಲರವ ಹೆಚ್ಚುತ್ತಿದೆ. ಬಿಎಸ್​ಇ, ಎನ್​ಸಿಇ ಮಾರುಕಟ್ಟೆಗಳು ಹೂಡಿಕೆದಾರರನ್ನು ಆಕರ್ಷಿಸುತ್ತಿವೆ. ಪರಿಣಾಮವಾಗಿ, ಭಾರತದ ಷೇರುಮಾರುಕಟ್ಟೆಯ ಒಟ್ಟು ಬಂಡವಾಳ ಅಥವಾ ಷೇರುಸಂಪತ್ತು 3.31 ಟ್ರಿಲಿಯನ್ ಡಾಲರ್ ಮುಟ್ಟಿದೆ. ಅಂದರೆ 274 ಲಕ್ಷ ಕೋಟಿ ರುಪಾಯಿಯಷ್ಟು ಷೇರುಸಂಪತ್ತು ಭಾರತದಲ್ಲಿದೆ. ಜನವರಿಯಿಂದೀಚೆಗೆ 27,000 ಕೋಟಿ ರೂನಷ್ಟು ಸಂಪತ್ತು ಹೆಚ್ಚಾಗಿದೆ. ಇದರ ಪರಿಣಾಮವಾಗಿ, ಜಾಗತಿಕವಾಗಿ ಅತಿಹೆಚ್ಚು ಷೇರುಸಂಪತ್ತು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ 5ನೇ ಸ್ಥಾನಕ್ಕೇರಿದೆ.

ಭಾರತದ ಹಿನ್ನಡೆ, ಮುನ್ನಡೆ ಎರಡರಲ್ಲೂ ಅದಾನಿ ನಡೆ

ಅತಿದೊಡ್ಡ ಷೇರುಮಾರುಕಟ್ಟೆಗಳ ಪಟ್ಟಿಯಲ್ಲಿ ಫ್ರಾನ್ಸ್ ದೇಶ ಜನವರಿ ತಿಂಗಳಲ್ಲಿ ಭಾರತವನ್ನು ಹಿಂದಿಕ್ಕಿತ್ತು. ಹಿಂಡನ್ಬರ್ಗ್ ರಿಸರ್ಚ್ ವರದಿ ಪ್ರಕಟವಾಗುತ್ತಲೇ ಅದಾನಿ ಗ್ರೂಪ್​ನ ಕಂಪನಿಗಳ ಷೇರುಗಳು ಭಯಂಕರವಾಗಿ ಕುಸಿದವು. ಹೂಡಿಕೆದಾರರ ಹಲವು ಲಕ್ಷ ಕೋಟಿ ರೂ ಸಂಪತ್ತು ಹಾಗೇ ಕರಗಿಹೋದವು. ಅದೇ ವೇಳೆ ಫ್ರಾನ್ಸ್ ದೇಶದ ಲೂಯಿಸ್ ವೂಟನ್ ಸಂಸ್ಥೆಯ ಷೇರುಗಳು ಭರ್ಜರಿಯಾಗಿ ಬೇಡಿಕೆ ಪಡೆವು. ಒಂದು ಕಡೆ ಭಾರತದ ಷೇರುಸಂಪತ್ತು ಕರಗಿದರೆ, ಅತ್ತ ಫ್ರಾನ್ಸ್​ನಲ್ಲಿ ಹೆಚ್ಚಿತ್ತು. ಅದರ ಪರಿಣಾಮವಾಗಿ ಷೇರುಸಂಪತ್ತಿನಲ್ಲಿ ಭಾರತವನ್ನು ಹಿಂದಿಕ್ಕಿ ಫ್ರಾನ್ಸ್ 5ನೇ ಸ್ಥಾನಕ್ಕೇರಿತು.

ಇದನ್ನೂ ಓದಿUPI Frauds: ಭಾರತದಲ್ಲಿ ಒಂದೇ ವರ್ಷದಲ್ಲಿ ಯುಪಿಐ ಸಂಬಂಧ 1 ಲಕ್ಷ ಸಮೀಪ ವಂಚನೆ ಪ್ರಕರಣಗಳು; ಹೇಗೆಲ್ಲಾ ವಂಚಿಸುತ್ತಾರೆ ನೋಡಿ

ಈಗ ಕೆಲ ತಿಂಗಳಿಂದ ಭಾರತದ ಷೇರುಪೇಟೆ ಕಂಗೊಳಿಸುತ್ತಿದೆ. ಅದಾನಿ ಗ್ರೂಪ್​ನ ಕಂಪನಿಗಳು ಮತ್ತೆ ಸಿಡಿದೇಳುತ್ತಿವೆ. ಬೇರೆ ಹಲವು ಷೇರುಗಳು ಬೇಡಿಕೆ ಪಡೆಯುತ್ತಿವೆ. ವಿದೇಶೀ ಹೂಡಿಕೆದಾರರ ಹಣ ಭಾರತದ ಷೇರುಪೇಟೆಗೆ ಹರಿದುಬರುವುದು ದಿನೇದಿನೇ ಹೆಚ್ಚುತ್ತಿದೆ. ಬಿಎಸ್​ಇ ಮತ್ತು ಎನ್​ಎಸ್​ಇ ಎರಡೂ ಕೂಡ ಶೇ. 10ರಷ್ಟು ಹೆಚ್ಚಳ ಕಂಡಿವೆ. ಇದರ ಫಲವಾಗಿ ಭಾರತ ಮತ್ತೊಮ್ಮೆ 5ನೇ ಸ್ಥಾನ ಆಕ್ರಮಿಸಿಕೊಂಡಿದೆ.

ವಿಶ್ವದಲ್ಲಿ ಅತಿದೊಡ್ಡ ಷೇರುಮಾರುಕಟ್ಟೆ ಇರುವ ದೇಶಗಳು

  1. ಅಮೆರಿಕ: 44.54 ಟ್ರಿಲಿಯನ್ ಡಾಲರ್ (3685 ಲಕ್ಷ ಕೋಟಿ ರೂ)
  2. ಚೀನಾ: 10.26 ಟ್ರಿಲಿಯನ್ ಡಾಲರ್
  3. ಜಪಾನ್: 5.68 ಟ್ರಿಲಿಯನ್ ಡಾಲರ್
  4. ಹಾಂಕಾಂಗ್: 5.14 ಟ್ರಿಲಿಯನ್ ಡಾಲರ್
  5. ಭಾರತ: 3.31 ಟ್ರಿಲಿಯನ್ ಡಾಲರ್
  6. ಫ್ರಾನ್ಸ್: 3.24 ಟ್ರಿಲಿಯನ್ ಡಾಲರ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ