AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SBI: ಫ್ರೀ ಆಗಿ ಬಿಟ್ಟ ಎಸ್​ಬಿಐಗೆ ಮುಗಿಬಿದ್ದರಾ ಜನರು?; 17,000 ಕೋಟಿ ಮೌಲ್ಯದ 2,000 ರೂ ನೋಟುಗಳ ಸಂಗ್ರಹ

Rs 2,000 Notes In SBI: ಒಂದು ವಾರದಲ್ಲಿ ಒಟ್ಟು 17,000 ಕೋಟಿ ರೂ ಮೌಲ್ಯದ 2,000 ರೂ ನೋಟುಗಳು ಎಸ್​ಬಿಐ ಬ್ಯಾಂಕಿಗೆ ಬಂದಿವೆಯಂತೆ. ಇದರಲ್ಲಿ 3,000 ಕೋಟಿ ರೂ ಮೌಲ್ಯದ ನೋಟುಗಳು ವಿನಿಮಯವಾದರೆ, 14,000 ಕೋಟಿ ರೂ ಮೌಲ್ಯದಷ್ಟು ನೋಟುಗಳು ಖಾತೆಗಳಿಗೆ ಜಮೆಯಾಗಿವೆ.

SBI: ಫ್ರೀ ಆಗಿ ಬಿಟ್ಟ ಎಸ್​ಬಿಐಗೆ ಮುಗಿಬಿದ್ದರಾ ಜನರು?; 17,000 ಕೋಟಿ ಮೌಲ್ಯದ 2,000 ರೂ ನೋಟುಗಳ ಸಂಗ್ರಹ
ಎಸ್​ಬಿಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 30, 2023 | 12:54 PM

Share

ನವದೆಹಲಿ: ಕೇಂದ್ರ ಸರ್ಕಾರ 2,000 ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದ ಬಳಿಕ ಇದುವರೆಗೂ ಎಷ್ಟು ನೋಟು ವಾಪಸ್ ಬಂದಿವೆ ಎಂಬ ಮಾಹಿತಿ ಸರ್ಕಾರದಿಂದ ಇನ್ನೂ ಬಂದಿಲ್ಲ. ಆದರೆ, ಸ್ಟೇಟ್ ಬ್ಯಾಂಕ್ ಇಂಡಿಯಾದ ಛೇರ್ಮನ್ ದಿನೇಶ್ ಕುಮಾರ್ ಖಾರ (SBI Chairman Dinesh Kumar Khara) ನೀಡಿರುವ ಹೇಳಿಕೆ ಪ್ರಕಾರ ಒಂದು ವಾರದಲ್ಲಿ ಒಟ್ಟು 17,000 ಕೋಟಿ ರೂ ಮೌಲ್ಯದ 2,000 ರೂ ನೋಟುಗಳು ಬ್ಯಾಂಕಿಗೆ ಬಂದಿವೆಯಂತೆ. ಇದರಲ್ಲಿ 3,000 ಕೋಟಿ ರೂ ಮೌಲ್ಯದ ನೋಟುಗಳು ವಿನಿಮಯವಾದರೆ, 14,000 ಕೋಟಿ ರೂ ಮೌಲ್ಯದಷ್ಟು ಪ್ರಮಾಣದ ನೋಟುಗಳು ಎಸ್​ಬಿಐ ಗ್ರಾಹಕರ ಖಾತೆಗಳಿಗೆ ಜಮೆಯಾಗಿವೆ ಎಂಬಂತಹ ಮಾಹಿತಿಯನ್ನು ಎಸ್​ಬಿಐ ಛೇರ್ಮನ್ ನೀಡಿದ್ದಾರೆ.

ಅಂದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಒಟ್ಟು 17,000 ಕೋಟಿ ರೂ ಮೌಲ್ಯದ ನೋಟುಗಳು ಸಂಗ್ರಹವಾಗಿವೆ ಎಂದರೆ 2,000 ರೂ ಮುಖಬೆಲೆಯ 8.5ಕೋಟಿ ನೋಟುಗಳು ಬಂದಿವೆ ಎಂದಾಯಿತು. ಈ ಬಗ್ಗೆ ಎಸ್​ಬಿಐನಿಂದ ಅಧಿಕೃತ ಪ್ರಕಟಣೆ ನೀಡಿಲ್ಲ. ಆದರೆ, ಎಸ್​ಬಿಐ ಸೇರಿದಂತೆ ಪ್ರತಿಯೊಂದು ಬ್ಯಾಂಕು ಕೂಡ 2,000 ರೂ ನೋಟುಗಳು ಸಾರ್ವಜನಿಕರಿಂದ ಜಮೆ ಆದರೆ ಲೆಕ್ಕ ಇಟ್ಟುಕೊಂಡಿರಬೇಕು. ಆರ್​ಬಿಐ ಕೇಳಿದಾಗ ಈ ಲೆಕ್ಕ ಕೊಡಬೇಕು ಎಂದು ಸೂಚಿಸಲಾಗಿದೆ.

ಇದನ್ನೂ ಓದಿIndia Shines: ಜಗತ್ತಿನ ಅತಿದೊಡ್ಡ ಷೇರುಮಾರುಕಟ್ಟೆಗಳು: ಐದನೇ ಸ್ಥಾನಕ್ಕೇರಿದ ಭಾರತ; ಯಾವ ದೇಶಗಳಿದ್ದಾವೆ ಟಾಪ್​ನಲ್ಲಿ?

ಆರ್​ಬಿಐ ಮೇ 19ರಂದು 2,000 ರೂ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಿತು. ಮೇ 23ರಿಂದ ಎಲ್ಲಾ ಬ್ಯಾಂಕುಗಳಲ್ಲಿ 2,000 ರೂ ನೋಟು ಹೊಂದಿರುವ ಜನರು ಅದನ್ನು ಮರಳಿಸಲು ಅವಕಾಶ ಕೊಡಲಾಗಿದೆ. ಈ ನೋಟುಗಳನ್ನು ಜನರು ಬೇಕೆಂದರೆ ತಮ್ಮ ಖಾತೆಗೆ ಜಮೆ ಮಾಡಿಕೊಳ್ಳಬಹುದು. ಅಥವಾ 2,000 ರೂ ನೋಟು ಬದಲು ಬೇರೆ ಮುಖಬೆಲೆಯ ನೋಟುಗಳನ್ನು ಪಡೆಯಬಹುದು. ಕೆಲ ಬ್ಯಾಂಕುಗಳಲ್ಲಿ ನೋಟು ಬದಲಾವಣೆಗೆ ಪ್ರತ್ಯೇಕ ಸ್ಲಿಪ್ ಬರೆದುಕೊಡಬೇಕು. ಗುರುತಿನ ಚೀಟಿ, ಪ್ಯಾನ್ ಇತ್ಯಾದಿ ಮಾಹಿತಿಯನ್ನು ಜನರು ಒದಗಿಸಬೇಕು ಎಂದಿದೆ. ಆದರೆ ಎಸ್​ಬಿಐನಲ್ಲಿ ಇಂಥ ನಿಯಮಗಳು ಇಲ್ಲ. ಯಾರು ಬೇಕಾದರೂ ಯಾವುದೇ ದಾಖಲೆ ಸಲ್ಲಿಸದೆಯೇ 2,000 ರೂ ನೋಟು ವಿನಿಮಯ ಮಾಡಿಕೊಳ್ಳಬಹುದು ಎಂದು ಘೋಷಿಸಿತ್ತು. ಅದರಂತೆ ಹೆಚ್ಚಿನ ಜನರು ಎಸ್​ಬಿಐನ ಶಾಖೆಗಳಿಗೆ ಎಡತಾಕಿರುವ ಸಾಧ್ಯತೆ ಇದೆ.

ಸರ್ಕಾರದ ಅಂದಾಜು ಪ್ರಕಾರ, 2000 ರೂ ನೋಟು ಹಿಂಪಡೆದಾಗ ಚಲಾವಣೆಯಲ್ಲಿ ಸುಮಾರು 3.62 ಲಕ್ಷ ಕೋಟಿ ರೂ ಮೌಲ್ಯದಷ್ಟು 2,000 ರೂ ನೋಟುಗಳು ಇದ್ದವು ಎನ್ನಲಾಗಿದೆ. ಸೆಪ್ಟಂಬರ್ 30ರವರೆಗೂ 2,000 ರೂ ನೋಟು ಠೇವಣಿ ಇರಿಸಲು ಮತ್ತು ಬದಲಾವಣೆ ಮಾಡಿಕೊಳ್ಳಲು ಅವಕಾಶ ಇದೆ. ಅಷ್ಟರಲ್ಲಿ ಎಷ್ಟು ಮೊತ್ತದ ನೋಟುಗಳು ಆರ್​ಬಿಐಗೆ ಮರಳುತ್ತವೆ ಎಂಬುದು ಕುತೂಹಲದ ಸಂಗತಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!