Retail Price Index: ಆರ್ಬಿಐ ಗುರಿಯ ಮಿತಿಯನ್ನು ಮೀರಿ ಮೇ ತಿಂಗಳ ಚಿಲ್ಲರೆ ಹಣದುಬ್ಬರ ದರ ಶೇ 6.3ಕ್ಕೆ
ಭಾರತದಲ್ಲಿ ಚಿಲ್ಲರೆ ಹಣದುಬ್ಬರ ದರವು (Retail Price Index) 2021ರ ಮೇ ತಿಂಗಳಲ್ಲಿ ಶೇ 6.3ಕ್ಕೆ ಏರಿಕೆ ಆಗಿದೆ. ಆಹಾರ ಪದಾರ್ಥಗಳ ಬೆಲೆಯಲ್ಲಿ ಹೆಚ್ಚಳ ಆಗಿದ್ದರಿಂದ ಈ ಬೆಳವಣಿಗೆ ಆಗಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಾಕಿಕೊಂಡಿದ್ದ ಗುರಿಯ ಮಿತಿಯನ್ನೂ ಮೀರಿ ಚಿಲ್ಲರೆ ಹಣದುಬ್ಬರ ದರವು (Retail Price Index) 2021ರ ಮೇ ತಿಂಗಳಲ್ಲಿ ಶೇ 6.3ಕ್ಕೆ ಏರಿಕೆ ಆಗಿದೆ. ಏಪ್ರಿಲ್ನಲ್ಲಿ ಈ ಪ್ರಮಾಣ ಶೇ 4.23 ಇತ್ತು. ಈ ಬಗ್ಗೆ ಸೋಮವಾರದಂದು ಸರ್ಕಾರ ದತ್ತಾಂಶ ಬಿಡುಗಡೆ ಮಾಡಿದೆ. ಕಳೆದ ಆರು ತಿಂಗಳಲ್ಲಿ ಇದೇ ಮೊದಲ ಬಾರಿಗೆ, ಆರ್ಬಿಐ ಹಾಕಿಕೊಂಡಿದ್ದ ಗುರಿಯ ಮಿತಿಯನ್ನು ಮೀರಿದೆ. ಇನ್ನು ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರ ದರವು (WPI) ಮೇ ತಿಂಗಳಲ್ಲಿ ಶೇ 12.94 ತಲುಪಿದೆ. ಹೆಚ್ಚುತ್ತಿರುವ ಕಚ್ಚಾ ತೈಲ ದರ, ಉತ್ಪಾದನಾ ವಸ್ತುಗಳು ಮತ್ತು ಕಳೆದ ವರ್ಷದ ಕಡಿಮೆ ಬೇಸ್ ಈ ಎಲ್ಲ ಅಂಶಗಳು ಸೇರಿಕೊಂಡು ಇಂಥ ಬೆಳವಣಿಗೆ ಆಗಿದೆ. ಸತತವಾಗಿ ಐದನೇ ತಿಂಗಳು WPI ಆಧಾರಿತ ಹಣದುಬ್ಬರ ದರವು ಏರಿಕೆ ದಾಖಲಿಸಿದೆ. ಹಣದುಬ್ಬರ ದರವು ಏರಿಕೆ ಆಗುತ್ತಿದ್ದಂತೆ ರಿಸರ್ವ್ ಬ್ಯಾಂಕ್ ಮೇಲೆ ಒತ್ತಡ ಹೆಚ್ಚಾಗುವಂತೆ ಮಾಡಿದೆ. ಆರ್ಥಿಕ ಚೇತರಿಕೆಗೆ ದರವನ್ನು ನಿಯಂತ್ರಿಸುವುದು ಬಹಳ ಅಗತ್ಯವಾಗಿದೆ.
ಈ ತಿಂಗಳ ಆರಂಭದಲ್ಲಿ ಆರ್ಬಿಐ ಎಚ್ಚರಿಸಿದ ಪ್ರಕಾರ, ಎನರ್ಜಿ ದರದ ಏರಿಕೆಯು ಹಣದುಬ್ಬರ ದರವನ್ನು ಹೆಚ್ಚು ಮಾಡಲಿದ್ದು, ಏಪ್ರಿಲ್ನ ಆರಂಭದಲ್ಲಿ ಬೆಳವಣಿಗೆ ಅಂದಾಜನ್ನು ಶೇ 10.5ರಿಂದ ಶೇ 9.5ಕ್ಕೆ ಇಳಿಕೆ ಅಗಿದೆ. ವಾರ್ಷಿಕ ಚಿಲ್ಲರೆ ಹಣದುಬ್ಬರ ದರವು ವರ್ಷದಿಂದ ವರ್ಷಕ್ಕೆ ಶೇ 6.30ಕ್ಕೆ ಏರಿಕೆ ಆಗಿದೆ. ಏಪ್ರಿಲ್ನಲ್ಲಿ ಶೇ 4.29ರಷ್ಟು ಇದ್ದದ್ದು ಏರಿಕೆ ಆಗಿದೆ. ವಿಶ್ಲೇಷಕರು ಅಂದಾಜು ಮಾಡುವಂತೆ ರೀಟೇಲ್ ಹಣದುಬ್ಬರ ದರವು ಶೇ 5.30 ಆಗಬಹುದು ಎಂದು ರಾಯಿಟರ್ಸ್ ಅಭಿಮತದಲ್ಲಿ ಅಭಿಪ್ರಾಯ ವ್ಯಕ್ತವಾಗಿತ್ತು. ರಿಸರ್ವ್ ಬ್ಯಾಂಕ್ನಿಂದ ಚಿಲ್ಲರೆ ಹಣದುಬ್ಬರ ಶೇ 2ರಿಂದ ಶೇ 6ರೊಳಗೆ ನಿಯಂತ್ರಿಸುವ ಗುರಿ ಇರಿಸಿಕೊಳ್ಳಲಾಗಿದೆ.
ಆಹಾರ ದರದ ಹಣದುಬ್ಬರವೇ ಒಟ್ಟು ಲೆಕ್ಕಾಚಾರದ ಅರ್ಧದಷ್ಟಿದೆ ಎಂದು ಸಾಂಖ್ಯಿಕ ಇಲಾಖೆ ಸಚಿವಾಲಯದಿಂದ ತಿಳಿಸಲಾಗಿದೆ. ವರ್ಷದಿಂದ ವರ್ಷಕ್ಕೆ ಲೆಕ್ಕಾಚಾರದಲ್ಲಿ ಶೇ 5.01ಕ್ಕೆ ಹೆಚ್ಚಳವಾಗಿದೆ ಕಳೆದ ತಿಂಗಳು ಏಪ್ರಿಲ್ನಲ್ಲಿ ಶೇ 3.15ರಷ್ಟಿತ್ತು. ಮೇ ತಿಂಗಳ ಮುಖ್ಯ ಹಣದುಬ್ಬರ, ಆಹಾರ ಹಾಗೂ ತೈಲ ವೆಚ್ಚವನ್ನು ಹೊರತುಪಡಿಸಿದಂತೆ ಶೇ 6.54ರಿಂದ ಶೇ 6.56 ಇರಲಿದೆ ಎಂದು ಮೂವರು ಅರ್ಥಶಾಸ್ತ್ರಜ್ಞರು ಡೇಟಾ ಬಿಡುಗಡೆ ನಂತರ ಅಂದಾಜು ಮಾಡಿದ್ದಾರೆ.
ಇದನ್ನೂ ಓದಿ: Wholesale price-based inflation: ಮೇನಲ್ಲಿ ಸಾರ್ವಕಾಲಿಕ ಗರಿಷ್ಠ ಶೇ 12.94 ತಲುಪಿದ ಸಗಟು ದರ ಸೂಚ್ಯಂಕ ಹಣದುಬ್ಬರ
(India retail price index reach more than RBI tolerance level of 6% in 2021 May)
Published On - 8:05 pm, Mon, 14 June 21




