
ನವದೆಹಲಿ, ಮೇ 27: ರಫೇಲ್ನಂತಹ ನಾಲ್ಕನೇ ತಲೆಮಾರಿನ ಫೈಟರ್ ಜೆಟ್ ಹೊಂದಿರುವ ಭಾರತ ಈಗ ಇನ್ನೂ ಬಲಿಷ್ಠವಾದ ಯುದ್ಧವಿಮಾನಗಳನ್ನು ಸ್ವಂತವಾಗಿ ತಯಾರಿಸಲು ಹೆಜ್ಜೆ ಇಟ್ಟಿದೆ. ಮುಂದಿನ ವರ್ಷಗಳಲ್ಲಿ ಭಾರತವು ಐದನೇ ತಲೆಮಾರಿನ ಫೈಟರ್ ಜೆಟ್ (5th generation fighter jet) ಅಭಿವೃದ್ಧಿಪಡಿಸಲಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಎಎಂಸಿಎ ಪ್ರೋಗ್ರಾಮ್ ಎಕ್ಸಿಕ್ಯೂಶನ್ ಮಾಡಲ್ಗೆ ಇಂದು ಮಂಗಳವಾರ ಅನುಮೋದನೆ ನೀಡಿದ್ದಾರೆ. ಈ ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್ಕ್ರಾಫ್ಟ್ (Advanced Medium Combat Aircraft) ಯೋಜನೆ ಅಡಿಯಲ್ಲಿ ಭಾರತವು ಅತ್ಯಾಧುನಿಕ ರಕ್ಷಣಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲಿದೆ.
ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ (ಎಡಿಎ) ಈ ಎಎಂಸಿಎ ಯೋಜನೆಯನ್ನು ನಡೆಸಲಿದ್ದು, ವಿವಿಧ ಕಂಪನಿಗಳ ನೆರವನ್ನು ಬಳಸಿಕೊಳ್ಳಲಿದೆ. ಎಎಂಸಿಎ ಯೋಜನೆಯ ಅಭಿವೃದ್ಧಿ ಹಂತವನ್ನು ಕಾರ್ಯಗತಗೊಳಿಸಲು ಉದ್ಯಮ ವಲಯಕ್ಕೆ ಆಹ್ವಾನ (ಇಒಐ) ನೀಡಿದೆ. ಇದರಲ್ಲಿ ಸರ್ಕಾರಿ ಮತ್ತು ಖಾಸಗಿ ವಲಯದ ಕಂಪನಿಗಳಿಗೆ ಸಮಾನ ಅವಕಾಶ ನೀಡಲಾಗುತ್ತಿದೆ.
ಯಾವುದೇ ಕಂಪನಿಗಳು ಏಕಾಂಗಿಯಾಗಿ, ಅಥವಾ ಜಂಟಿಯಾಗಿ, ಅಥವಾ ಸಮೂಹವಾಗಿ ಈ ಯೋಜನೆಗೆ ಬಿಡ್ ಸಲ್ಲಿಸಬಹುದು. ಆದರೆ, ಎಲ್ಲಾ ಕಂಪನಿಗಳೂ ಕೂಡ ಭಾರತದವೇ ಆಗಿರಬೇಕು. ದೇಶದ ಕಾನೂನು ಮತ್ತು ನಿಯಮಗಳಿಗೆ ಬದ್ಧವಾಗಿರಬೇಕು ಎಂಬುದು ಪ್ರಮುಖ ಷರತ್ತು.
ಇದನ್ನೂ ಓದಿ: ಭಾರತದಿಂದ ಬಿಎಫ್ಎಸ್; ಇದು ವಿಶ್ವದಲ್ಲೇ ಅತ್ಯಂತ ಕರಾರುವಾಕ್ ಹವಾಮಾನ ಮುನ್ಸೂಚನೆ ವ್ಯವಸ್ಥೆ
ರಾಡಾರ್ ಕಣ್ಣಿಗೆ ಗೋಚರವಾಗದಂತೆ ಚಲಿಸುವ (ಸ್ಟೀಲ್ತ್), ಬಹಳ ವೇಗವಾಗಿ ಸಾಗಬಲ್ಲ, ಪ್ರಬಲ ಸೆನ್ಸಾರ್ ಫ್ಯೂಶನ್ ಇರುವ, ಸುಧಾರಿತ ಏವಿಯಾನಿಕ್ಸ್ ಹೊಂದಿರುವ ಹಾಗೂ ಇನ್ನೂ ಹಲವು ಸಾಮರ್ಥ್ಯಗಳನ್ನು ಹೊಂದಿರುವ ಮಲ್ಟಿರೋಲ್ ಫೈಟರ್ ಜೆಟ್ಗಳನ್ನು ತಯಾರಿಸುವುದು ಎಎಂಸಿಎ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇನ್ನು ಹತ್ತು ವರ್ಷದಲ್ಲಿ, ಅಂದರೆ 2035ರೊಳಗೆ ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್ಕ್ರಾಫ್ಟ್ ಯೋಜನೆ ಕಾರ್ಯಗತವಾಗುವ ನಿರೀಕ್ಷೆ ಇದೆ.
ಇದು ಸುಧಾರಿತ ಮಿಲಿಟರಿ ಸಾಮರ್ಥ್ಯ ಹೊಂದಿರುವ ಯುದ್ಧವಿಮಾನ. ಇದಕ್ಕೆ ನಿರ್ದಿಷ್ಟ ಮಾನದಂಡ ಇಲ್ಲ. ರಾಡಾರ್ನಿಂದ ತಪ್ಪಿಸಿಕೊಳ್ಳಬಲ್ಲ ಸಾಮರ್ಥ್ಯ ಇರಬೇಕು. ಶತ್ರುವಿನ ಕ್ಷಿಪಣಿ ಅಥವಾ ಜೆಟ್ ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವಂತೆ ತೀಕ್ಷ್ಣವಾಗಿ ತಿರುಗುವ ಸಾಮರ್ಥ್ಯ ಇರಬೇಕು. ಸೂಪರ್ ಸಾನಿಕ್ ಸ್ಪೀಡ್ನಲ್ಲಿ ಹೋಗಬೇಕು. ವಿವಿಧ ವಿಭಾಗಗಳ ನಡುವೆ ಡಾಟಾ ಫ್ಯೂಶನ್ ಮಾಡಿ ಸಮರ್ಥವಾಗಿ ದಾಳಿ ಮಾಡಬಲ್ಲಂತಿರಬೇಕು. ಕಮ್ಯಾಂಡ್, ಕಂಟ್ರೋಲ್, ಕಮ್ಯೂನಿಕೇಶನ್ ಇತ್ಯಾದಿ ಮಲ್ಟಿರೋಲ್ ಕೇಪಬಿಲಿಟಿ ಇರಬೇಕು ಎಂದು ಭಾವಿಸಲಾಗಿದೆ.
ಇದನ್ನೂ ಓದಿ: ಸೂಪರ್ ಫಾಸ್ಟ್ ಆಗಿ ಚಾರ್ಚ್ ಆಗುವ ಸೋಡಿಯಂ ಬ್ಯಾಟರಿ ತಯಾರಿಸಿದ ಬೆಂಗಳೂರಿನ ವಿಜ್ಞಾನಿಗಳು; ಸ್ವಾವಲಂಬನೆಯ ಹಾದಿ ಸುಗಮ
ಅಮೆರಿಕದ ಎಫ್-22 ರಾಪ್ಟರ್, ಎಫ್-35 ಲೈಟನಿಂಗ್, ಚೀನಾದ ಜೆ-20, ರಷ್ಯಾದ ಸುಖೋಯ್ ಎಸ್ಯು-57 ಅನ್ನು ಐದನೇ ತಲೆಮಾರಿನ ಫೈಟರ್ ಜೆಟ್ ಎಂದು ಪರಿಗಣಿಸಲಾಗಿದೆ. ಭಾರತ ಬಳಸುತ್ತಿರುವ ಫ್ರೆಂಚ್ ಆಮದಿತ ರಫೇಲ್ ಯುದ್ಧವಿಮಾನವು ನಾಲ್ಕನೇ ತಲೆಮಾರಿಗಿಂತ ತುಸು ಉಚ್ಚವಾಗಿರಬಹುದು (4.5 ಜನರೇಶನ್) ಎಂದು ಹೇಳಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ