AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ, ಯುಕೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಮತ್ತೆ ಮಾತುಕತೆ ಆರಂಭಿಸಲು ನಿರ್ಧಾರ

India UK Free Trade Agreement negotiations: ಭಾರತ ಮತ್ತು ಯುನೈಟೆಡ್ ಕಿಂಗ್ಡಂ ಮಧ್ಯೆ ಒಂದು ವರ್ಷದಿಂದ ಸ್ಥಗಿತಗೊಂಡಿರುವ ಎಫ್​ಟಿಎ ಮಾತುಕತೆ ಪುನಾರಂಭಗೊಳ್ಳಲಿವೆ. ಸಂಧಾನ ಮತ್ತೆ ಆರಂಭಿಸಲು ಎರಡೂ ದೇಶಗಳು ನಿರ್ಧರಿಸಿವೆ ಎಂದು ಕೇಂದ್ರ ವಾಣಿಜ್ಯ ಸಚಿವ ಪೀಯೂಶ್ ಗೋಯಲ್ ತಿಳಿಸಿದ್ದಾರೆ. 2022ರಿಂದ ಭಾರತ ಮತ್ತು ಬ್ರಿಟನ್ ಮಧ್ಯೆ ಎಫ್​ಟಿಎ ಅಂತಿಮಗೊಳಿಸಲು 14 ಸುತ್ತು ಮಾತುಕತೆಗಳು ನಡೆದಿವೆ.

ಭಾರತ, ಯುಕೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಮತ್ತೆ ಮಾತುಕತೆ ಆರಂಭಿಸಲು ನಿರ್ಧಾರ
ಭಾರತ ಯುಕೆ ಮುಕ್ತ ವ್ಯಾಪಾರ ಒಪ್ಪಂದ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 24, 2025 | 6:28 PM

Share

ನವದೆಹಲಿ, ಫೆಬ್ರುವರಿ 24: ಭಾರತ ಹಾಗೂ ಬ್ರಿಟನ್ ಮಧ್ಯೆ ಮುಕ್ತ ವ್ಯಾಪಾರ ಒಪ್ಪಂದ ಏರ್ಪಡುವ ಸಾಧ್ಯತೆಗೆ ಮತ್ತೆ ಜೀವ ಬಂದಿದೆ. ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವ ಪೀಯುಶ್ ಗೋಯಲ್ ಅವರು ಭಾರತ ಮತ್ತು ಬ್ರಿಟನ್ ಮಧ್ಯೆ ಎಫ್​ಟಿಎಗಾಗಿ ಮತ್ತೆ ಮಾತುಕತೆಗಳು ಆರಂಭವಾಗಲಿವೆ. ಮಾತುಕತೆಗೆ ಎರಡೂ ದೇಶಗಳು ಒಪ್ಪಿವೆ ಎಂದಿದ್ದಾರೆ. ವರ್ಷಕ್ಕೂ ಹಿಂದೆ ಭಾರತ ಮತ್ತು ಯುಕೆ ಮಧ್ಯೆ ಮಾತುಕತೆಗಳು ಚಾಲನೆಯಲ್ಲಿದ್ದುವು. ಆದರೆ, ಬ್ರಿಟನ್ ಚುನಾವಣೆ ಹಿನ್ನೆಲೆಯಲ್ಲಿ 2024ರ ಮೇ ತಿಂಗಳಲ್ಲಿ ಮಾತುಕತೆ ಪ್ರಕ್ರಿಯೆ ನಿಂತಿತ್ತು. ಒಂದು ವರ್ಷದ ಬಳಿಕ ಈಗ ಸಂಧಾನ ಪುನಾರಂಭಗೊಳ್ಳುವ ಸಾಧ್ಯತೆ ಇದೆ.

ಯುನೈಟೆಡ್ ಕಿಂಗ್ಡಂನ ಉದ್ಯಮ ಕಾರ್ಯದರ್ಶಿ ಜೋನೇತನ್ ರೇನಾಲ್ಸ್ ಅವರು ಭಾರತಕ್ಕೆ ಮೂರು ದಿನಗಳ ಭೇಟಿಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಅವರು ಮತ್ತು ಪೀಯುಶ್ ಗೋಯಲ್ ಭೇಟಿಯಾಗಿದ್ಧಾರೆ. ಇದಾದ ಬಳಿಕ ಗೋಯಲ್ ಅವರು ಮಾಧ್ಯಮಗಳಿಗೆ ಭಾರತ ಮತ್ತು ಯುಕೆ ದೇಶಗಳು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಂಧಾನ ಮತ್ತೆ ಆರಂಭಗೊಳಿಸುವ ನಿರ್ಧಾರ ಮಾಡಿರುವುದನ್ನು ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತೀಯ ಕಂಪನಿಗಳಿಗೆ ಪ್ರಸಕ್ತ ಕ್ವಾರ್ಟರ್​ನಲ್ಲಿ ಶೇ. 7-8ರಷ್ಟು ಆದಾಯವೃದ್ಧಿ ನಿರೀಕ್ಷೆ: ಐಸಿಆರ್​ಎ

2022ರ ಜನವರಿಯಲ್ಲಿ ಭಾರತ ಮತ್ತು ಬ್ರಿಟನ್ ಮಧ್ಯೆ ಎಫ್​ಟಿಎಗೆ ಮಾತುಕತೆಗಳು ಆರಂಭಗೊಂಡಿದ್ದವು. 2024ರ ಮೇವರೆಗೆ 14 ಸುತ್ತುಗಳ ಸಂಧಾನಗಳು ನಡೆದಿವೆ. ಈ ವರ್ಷ 15ನೇ ಸುತ್ತಿನ ಮಾತುಕತೆ ನಡೆಯಬಹುದು.

ಏನಿದು ಎಫ್​ಟಿಎ?

ಎಫ್​ಟಿಎ ಅಥವಾ ಮುಕ್ತ ವ್ಯಾಪಾರ ಒಪ್ಪಂದವು ಎರಡು ದೇಶಗಳ ಮಧ್ಯೆ ಅಥವಾ ಹೆಚ್ಚಿನ ದೇಶಗಳ ನಡುವೆ ನಡುವೆ ನಡೆಯುವ ಒಪ್ಪಂದ. ಎರಡು ದೇಶಗಳ ಮಧ್ಯೆ ಮುಕ್ತವಾಗಿ ವ್ಯಾಪಾರ ನಡೆಯಲು ಆಸ್ಪದ ಮಾಡಿಕೊಡುತ್ತದೆ ಈ ಒಪ್ಪಂದ. ಆಮದು ಸುಂಕದಲ್ಲಿ ವಿನಾಯಿತಿ ಅಥವಾ ರಿಯಾಯಿತಿ ನೀಡಲಾಗುವುದು ಈ ಎಫ್​ಟಿಎಯ ಮೂಲ ಆಶಯ.

ಇದನ್ನೂ ಓದಿ: ಅತಿವೇಗದ ಆರ್ಥಿಕತೆ; ಮುಂಬರುವ ವರ್ಷಗಳಲ್ಲೂ ಭಾರತ ಮುಂಚೂಣಿಯಲ್ಲಿ: ಮಧ್ಯಪ್ರದೇಶದಲ್ಲಿ ಪ್ರಧಾನಿ ಹೇಳಿಕೆ

ಭಾರತ ಮತ್ತು ಯುಕೆ ಮಧ್ಯೆ ಸಿದ್ಧವಾಗಿರುವ ಮುಕ್ತ ವ್ಯಾಪಾರ ಒಪ್ಪಂದದಲ್ಲಿ 26 ಅಧ್ಯಾಯಗಳಿವೆ. ಇವುಗಳ ಬಗ್ಗೆ ಮಾತುಕತೆಗಳು ನಡೆಯುತ್ತಿವೆ. ಎರಡೂ ದೇಶಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ, ಎರಡೂ ಕಡೆ ಸಮ್ಮತವಾಗುವ ಅಂಶಗಳನ್ನು ಒಪ್ಪಂದದಲ್ಲಿ ಉಳಿಸಿಕೊಳ್ಳಲಾಗುತ್ತದೆ.

ಪೀಯೂಶ್ ಗೋಯಲ್ ನೀಡಿದ ಮಾಹಿತಿ ಪ್ರಕಾರ ಈ ವರ್ಷವೇ ಭಾರತ ಮತ್ತ ಬ್ರಿಟನ್ ನಡುವೆ ಮುಕ್ತ ವ್ಯಾಪಾರ ಒಪ್ಪಂದ ಜಾರಿಗೆ ಬರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ