
ನವದೆಹಲಿ, ಫೆಬ್ರುವರಿ 20: ಏಪ್ರಿಲ್ ತಿಂಗಳಲ್ಲಿ ಮೂರು ವ್ಯಾಪಾರ ಒಪ್ಪಂದಗಳು ಚಾಲನೆಗೆ ಬರುವ ಸಾಧ್ಯತೆ ಇದೆ. ವಾಣಿಜ್ಯ ಸಚಿವ ಪೀಯೂಶ್ ಗೋಯಲ್ ನೀಡಿರುವ ಮಾಹಿತಿ ಪ್ರಕಾರ, ಭಾರತ ಹಾಗೂ ಅಮೆರಿಕ ಮಧ್ಯೆ ಏರ್ಪಟ್ಟಿರುವ ಮಧ್ಯಂತರ ವ್ಯಾಪಾರ ಒಪ್ಪಂದ (India US Interim Trade Deal) ಏಪ್ರಿಲ್ನಲ್ಲಿ ಜಾರಿಗೆ ಬರಬಹುದು. ಬ್ರಿಟನ್ ಮತ್ತು ಓಮನ್ ಜೊತೆಗೆ ಏರ್ಪಟ್ಟಿರುವ ಭಾರತದ ಟ್ರೇಡ್ ಡೀಲ್ಗಳು ಕೂಡ ಏಪ್ರಿಲ್ ತಿಂಗಳಲ್ಲೇ ಚಾಲನೆಗೆ ಬರಬಹುದು. ಇನ್ನು, ನ್ಯೂಜಿಲೆಂಡ್ ಜೊತೆಗಿನ ವ್ಯಾಪಾರ ಒಪ್ಪಂದವು ಸೆಪ್ಟೆಂಬರ್ ತಿಂಗಳಲ್ಲಿ ಅನುಷ್ಠಾನಕ್ಕೆ ಬರಲಿದೆ ಎಂದು ಹೇಳಲಾಗುತ್ತಿದೆ.
ಭಾರತ ಮತ್ತು ಅಮೆರಿಕ ನಡುವೆ ಮಧ್ಯಂತರ ವ್ಯಾಪಾರ ಒಪ್ಪಂದಕ್ಕೆ ಫ್ರೇಮ್ವರ್ಕ್ (Framework for Interim Trade deal) ಅಂತಿಮಗೊಳಿಸಲಾಗಿದೆ ಎಂದು ಕೆಲ ವಾರಗಳ ಹಿಂದೆ ಜಂಟಿ ಹೇಳಿಕೆಯಲ್ಲಿ ಘೋಷಣೆ ಮಾಡಲಾಗಿದೆ. ಈ ಒಪ್ಪಂದದ ಕಾನೂನು ನಿಯಮಗಳನ್ನು ಅಂತಿಮಗೊಳಿಸಲು ಎರಡೂ ದೇಶಗಳ ತಂಡಗಳು ಮೂರು ದಿನಗಳ ಮಾತುಕತೆ ನಡೆಸಲಿವೆ. ಇದು ಫೆಬ್ರುವರಿ 23, ಸೋಮವಾರ ಆರಂಭವಾಗುತ್ತದೆ.
ಇದನ್ನೂ ಓದಿ: ಕರ್ನಾಟಕದ ಕೈತಪ್ಪಿತಾ ಏರೋಸ್ಪೇಸ್ ಘಟಕ ಯೋಜನೆ?; ಬೆಳಗಾವಿ ಮೂಲದ ಏಕಸ್ ಗ್ರೂಪ್ನಿಂದ ತಮಿಳುನಾಡಿನಲ್ಲಿ ಕ್ಲಸ್ಟರ್ ನಿರ್ಮಾಣ
ಒಪ್ಪಂದದ ಚೌಕಟ್ಟನ್ನು ಆಧಾರವಾಗಿಟ್ಟುಕೊಂಡು ಲೀಗಲ್ ಅಗ್ರೀಮೆಂಟ್ ಅನ್ನು ರೂಪಿಸಲಾಗುತ್ತಿದೆ. ಮಾರ್ಚ್ನಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಬಹುದು. ಹೊಸ ಹಣಕಾಸು ವರ್ಷದ ಆರಂಭವಾದ ಏಪ್ರಿಲ್ 1ರಿಂದ ಮಧ್ಯಂತರ ಒಪ್ಪಂದ ಅಧಿಕೃತವಾಗಿ ಜಾರಿಗೆ ಬರಬಹುದು.
ಭಾರತದ ಮೇಲೆ ಅಮೆರಿಕ ಶೇ. 25ರಷ್ಟು ಪ್ರತಿಸುಂಕ ವಿಧಿಸುತ್ತಿದೆ. ತೀರಾ ಇತ್ತೀಚಿನವರೆಗೂ ರಷ್ಯನ್ ತೈಲ ಖರೀದಿಗೆ ದಂಡವಾಗಿ ಹೆಚ್ಚುವರಿ ಶೇ. 25 ಟ್ಯಾರಿಫ್ ಹಾಕುತಿತ್ತು. ಒಟ್ಟು ಟ್ಯಾರಿಫ್ ಶೇ. 25 ಇತ್ತು. ಆದರೆ, ರಷ್ಯನ್ ತೈಲ ಖರೀದಿಗೆ ಹಾಕುತ್ತಿದ್ದ ಶೇ. 25 ಟ್ಯಾರಿಫ್ ದಂಡವನ್ನು ಹಿಂಪಡೆದುಕೊಂಡಿದೆ. ಈಗ ಶೇ. 25 ಟ್ಯಾರಿಫ್ ಮಾತ್ರವೇ ಜಾರಿಯಲ್ಲಿ ಇರುವುದು.
ಇದನ್ನೂ ಓದಿ: ಪ್ಯಾಕ್ಸ್ ಸಿಲಿಕಾಗೆ ಭಾರತ ಸೇರ್ಪಡೆ; ಅಮೆರಿಕ ಸಂತಸ; ಏನಿದು ಹೊಸ ಒಪ್ಪಂದ?
ಏಪ್ರಿಲ್ 1ರಿಂದ ಈ ಶೇ. 25 ಪ್ರತಿಸುಂಕವನ್ನು ಶೇ. 18ಕ್ಕೆ ಇಳಿಸಲಾಗುತ್ತದೆ. ಭಾರತವು ಅಮೆರಿಕದ ಕೃಷಿ, ಡೈರಿ ಮತ್ತಿತರ ಕೆಲ ಸೂಕ್ಷ್ಮ ಸೆಕ್ಟರ್ ಹೊರತುಪಡಿಸಿ ಉಳಿದ ಆಮದುಗಳ ಮೇಲೆ ಟ್ಯಾರಿಫ್ ಅನ್ನು ತೆಗೆದುಹಾಕಲಿದೆ ಅಥವಾ ಕಡಿಮೆ ಮಾಡಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ