ಚೀನೀ ಟೆಕ್ಕಿಗಳಿಗೆ ಮಣೆಹಾಕಲು ಭಾರತ ಸಜ್ಜು; ಚೀನೀಯರ ಆಗಮನದಿಂದ ಏನು ಪರಿಣಾಮ? ಇಲ್ಲಿದೆ ಡೀಟೇಲ್ಸ್

India-China relationship: ಚೀನೀಯರಿಗೆ ವೀಸಾ ನೀಡುವ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಭಾರತದ ಎಲೆಕ್ಟ್ರಾನಿಕ್ಸ್ ಉತ್ಪಾದನೆಯ ಉದ್ಯಮ ಎದುರು ನೋಡುತ್ತಿದೆ. 2020ರಿಂದ ಭಾರತ ಮತ್ತು ಚೀನಾ ನಡುವಿನ ಸಂಬಂಧ ಹಳಸಿದ ಪರಿಣಾಮ ಚೀನೀಯರಿಗೆ ಭಾರತಕ್ಕೆ ಬರಲು ವೀಸಾದ ತೊಡಕಿದೆ. ಇದರಿಂದ ಎಲೆಕ್ಟ್ರಾನಿಕ್ ಉದ್ಯಮಕ್ಕೆ ಬಹಳಷ್ಟು ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಒಂದು ವರದಿ...

ಚೀನೀ ಟೆಕ್ಕಿಗಳಿಗೆ ಮಣೆಹಾಕಲು ಭಾರತ ಸಜ್ಜು; ಚೀನೀಯರ ಆಗಮನದಿಂದ ಏನು ಪರಿಣಾಮ? ಇಲ್ಲಿದೆ ಡೀಟೇಲ್ಸ್
ಮ್ಯಾನುಫ್ಯಾಕ್ಚರಿಂಗ್ ವಲಯ
Follow us
|

Updated on: Jun 17, 2024 | 5:50 PM

ನವದೆಹಲಿ, ಜೂನ್ 17: ಪಿಎಲ್​ಐ ಸ್ಕೀಮ್ ಮೂಲಕ ಬೆಳವಣಿಗೆ ಹೊಂದುತ್ತಿರುವ ಭಾರತದ ತಯಾರಕಾ ವಲಯಕ್ಕೆ (manufacturing industry) ಈಗ ಪ್ರಮುಖ ತೊಡಕಾಗಿರುವುದು ನುರಿತ ತಂತ್ರಜ್ಞರ (tech workers) ಕೊರತೆ. ಕೆಲ ನಿರ್ದಿಷ್ಟ ಉತ್ಪನ್ನಗಳ ತಯಾರಿಕೆಯಲ್ಲಿ ಬಳಕೆಯಾಗುವ ಯಂತ್ರಗಳ ಅಳವಡಿಸುವಿಕೆ, ದುರಸ್ತಿ ಇತ್ಯಾದಿಯಲ್ಲಿ ಭಾರತದಲ್ಲಿ ತಜ್ಞ ಕಾರ್ಮಿಕರ ಕೊರತೆ ಇದೆ ಎನ್ನಲಾಗುತ್ತಿದೆ. ಚೀನಾದಿಂದ ಆಮದು ಮಾಡಿಕೊಳ್ಳುವ ಈ ಯಂತ್ರೋಪಕರಣಗಳ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಚೀನಾದಿಂದಲೇ ಟೆಕ್ಕಿಗಳು ಬರಬೇಕಾಗುತ್ತದೆ. ಹಾಗೆ ಬಂದು ಹೋಗಲು ವೀಸಾ ಸಮಸ್ಯೆ ಎದುರಾಗಿದೆ. 2020ರಲ್ಲಿ ನಡೆದ ಗಾಲ್ವನ್ ಸಂಘರ್ಷ ಘಟನೆ ಬಳಿಕ ಚೀನಾ ಮತ್ತು ಭಾರತದ ಸಂಬಂಧ ಅಷ್ಟಕಷ್ಟೆ ಎನ್ನುವಂತಾಗಿದೆ. ಚೀನೀ ನಾಗರಿಕರಿಗೆ ಭಾರತಕ್ಕೆ ಬರಲು ಅಷ್ಟು ಸುಲಭಕ್ಕೆ ವೀಸಾ ಸಿಗುವುದಿಲ್ಲ. ಇದು ಈಗ ಭಾರತದ ಮ್ಯಾನುಫ್ಯಾಕ್ಚರಿಂಗ್ ವಲಯಕ್ಕೆ ತುಸು ಸಮಸ್ಯೆಯಾಗಿದೆ. ಇದೀಗ ಸರ್ಕಾರವು ಚೀನೀ ನಾಗರಿಕರಿಗೆ ಭಾರತಕ್ಕೆ ಬರಲು ಅಗತ್ಯ ಇರುವ ವೀಸಾವನ್ನು ಕೊಡುವ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಯೋಜಿಸುತ್ತಿದೆ. ಇದರಿಂದ ಚೀನೀಯರಿಗೆ ಬೇಗ ವೀಸಾ ಸಿಗಬಹುದು.

ಚೀನೀ ಕಾರ್ಮಿಕರು ಯಾಕೆ ಬೇಕು?

ಭಾರತದ ಎಲೆಕ್ಟ್ರಾನಿಕ್ಸ್ ಉದ್ಯಮ ಚೀನಾದಿಂದ ಹೆಚ್ಚು ಆಮದು ಮಾಡಿಕೊಳ್ಳುತ್ತದೆ. ಚೀನಾ, ತೈವಾನ್ ದೇಶಗಳು ಎಲೆಕ್ಟ್ರಾನಿಕ್ಸ್ ವಲಯದಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿವೆ. ವಿವಿಧ ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳು ಹೆಚ್ಚಾಗಿ ಚೀನಾದಲ್ಲಿ ತಯಾರಾಗುತ್ತವೆ. ಭಾರತ ಈಗ ಎಲೆಕ್ಟ್ರಾನಿಕ್ಸ್ ತಯಾರಿಕೆ ಕ್ಷೇತ್ರದಲ್ಲಿ ಸ್ವಾವಂಬನೆ ಸಾಧಿಸಲು ಹೊರಟಿದೆಯಾದರೂ ಹೆಚ್ಚಿನ ಬಿಡಿಭಾಗಗಳು, ಪರಿಕರಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುವುದು ಅನಿವಾರ್ಯವಾಗಿದೆ.

ಇದನ್ನೂ ಓದಿ: ಚೀನಾ ಬೆಳವಣಿಗೆಗೆ ಸಹಾಯವಾಗಿದ್ದ ಮೂರಂಶಗಳು ಭಾರತಕ್ಕೆ ತೊಡಕಾಗಿವೆ: ಸಿಇಎ ಅನಂತನಾಗೇಶ್ವರನ್

ಈ ಬಿಡಿಭಾಗಗಳನ್ನು ಭಾರತದಲ್ಲೇ ತಯಾರಿಸುವ ಕೆಲಸ ಆಗುತ್ತಿದೆ. ಅದಕ್ಕೆ ಬೇಕಾದ ಯಂತ್ರೋಪಕರಣಗಳನ್ನು ಚೀನಾದಿಂದ ತರಿಸಲಾಗಿದೆಯಾದರೂ ಅದನ್ನು ನಿರ್ವಹಿಸಲು ಚೀನೀ ತಂತ್ರಜ್ಞರೇ ಬೇಕಾಗುತ್ತದೆ. ಅವರು ಬಂದು ಸ್ಥಳೀಯರಿಗೆ ಈ ಯಂತ್ರೋಪಕರಣ ಬಗ್ಗೆ ತರಬೇತಿ ನೀಡಬೇಕಾಗುತ್ತದೆ. ಅಥವಾ ಯಂತ್ರೋಪಕರಣಗಳ ಸರ್ವಿಸಿಂಗ್, ದುರಸ್ತಿ ಇತ್ಯಾದಿ ಮಾಡಬೇಕಾಗುತ್ತದೆ. ಅದನ್ನು ಮಾಡಲು ಅಲ್ಲಿಂದ ಭಾರತಕ್ಕೆ ಅವರು ಬರಲು ವೀಸಾ ಅಡ್ಡಿಯಾಗುತ್ತಿದೆ.

ಒಂದು ಅಂದಾಜು ಪ್ರಕಾರ 2020ರಲ್ಲಿ ಚೀನಾ ಜೊತೆ ಘರ್ಷಣೆ ಆದಾಗಿನಿಂದ ಭಾರತದ ಎಲೆಕ್ಟ್ರಾನಿಕ್ಸ್ ಉದ್ಯಮಕ್ಕೆ 15 ಬಿಲಿಯನ್ ಡಾಲರ್ ಉತ್ಪಾದನಾ ನಷ್ಟ ಆಗಿದೆ. ಒಂದು ಲಕ್ಷ ಉದ್ಯೋಗ ನಷ್ಟ ಆಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಅಮೆರಿಕ-ಸೌದಿ ಮಧ್ಯೆ ಇನ್ಮುಂದೆ ಇರಲ್ಲ ಪೆಟ್ರೋಡಾಲರ್; ಚೀನಾ ಕಡೆ ವಾಲುತ್ತಿದೆಯಾ ಗ್ಲೋಬಲ್ ಪವರ್?

ಒಂದು ವರದಿ ಪ್ರಕಾರ ಭಾರತಕ್ಕೆ ಬರಲು ಚೀನೀ ತಂತ್ರಜ್ಞರು ಸಲ್ಲಿಸಿರುವ ವೀಸಾ ಅರ್ಜಿಗಳ ಪೈಕಿ ಸುಮಾರು ನಾಲ್ಕರಿಂದ ಐದು ಸಾವಿರದಷ್ಟು ವೀಸಾ ಅರ್ಜಿಗಳು ಸರ್ಕಾರದ ಅನುಮೋದನೆಗೆ ಕಾಯುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಮುಸ್ಲಿಂ ವೋಟು ವನ್-ಸೈಡೆಡ್ ಆಗಿ ಸಾಗರ್ ಸಿಕ್ಕಿದ್ದು ಅಂತ ಹೇಳಿದ್ದು: ಜಮೀರ್
ಮುಸ್ಲಿಂ ವೋಟು ವನ್-ಸೈಡೆಡ್ ಆಗಿ ಸಾಗರ್ ಸಿಕ್ಕಿದ್ದು ಅಂತ ಹೇಳಿದ್ದು: ಜಮೀರ್
ಉಡುಪಿ: ಬಿರುಸುಗೊಂಡ ಮುಂಗಾರು ಮಳೆ; ಕಾಪು, ಮಲ್ಪೆ ಕಡಲ ಕಿನಾರೆ ಪ್ರಕ್ಷುಬ್ಧ
ಉಡುಪಿ: ಬಿರುಸುಗೊಂಡ ಮುಂಗಾರು ಮಳೆ; ಕಾಪು, ಮಲ್ಪೆ ಕಡಲ ಕಿನಾರೆ ಪ್ರಕ್ಷುಬ್ಧ
ಸಂಸತ್ ಭವನದಲ್ಲಿ ಪರಸ್ಪರ ಕೈ ಕುಲುಕಿದ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ
ಸಂಸತ್ ಭವನದಲ್ಲಿ ಪರಸ್ಪರ ಕೈ ಕುಲುಕಿದ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ
‘ದರ್ಶನ್ ಇರುವ ಫ್ಲೋರ್​ನಲ್ಲಿ ಹೆಣ್ಣು ಮಕ್ಕಳು ಇರುವಂತಿರಲಿಲ್ಲ’
‘ದರ್ಶನ್ ಇರುವ ಫ್ಲೋರ್​ನಲ್ಲಿ ಹೆಣ್ಣು ಮಕ್ಕಳು ಇರುವಂತಿರಲಿಲ್ಲ’
ವಿರೋಧ ಪಕ್ಷದ ನಾಯಕ ಆರ್ ಅಶೋಕರನ್ನು ತರಾಟೆಗೆ ತೆಗೆದುಕೊಂಡ ಹೆಚ್ ವಿಶ್ವನಾಥ್
ವಿರೋಧ ಪಕ್ಷದ ನಾಯಕ ಆರ್ ಅಶೋಕರನ್ನು ತರಾಟೆಗೆ ತೆಗೆದುಕೊಂಡ ಹೆಚ್ ವಿಶ್ವನಾಥ್
ರೈತರ ಮಕ್ಕಳಿಗೆ ಕನ್ಯೆ ಹುಡುಕಿ ಕೊಡಿ; ಜಿಲ್ಲಾಧಿಕಾರಿಗೆ ಮನವಿ ಮಾಡಿದ ಯುವಕ
ರೈತರ ಮಕ್ಕಳಿಗೆ ಕನ್ಯೆ ಹುಡುಕಿ ಕೊಡಿ; ಜಿಲ್ಲಾಧಿಕಾರಿಗೆ ಮನವಿ ಮಾಡಿದ ಯುವಕ
ಹಾಲಿನ ದರ ಹೆಚ್ಚಳ ಮಾಡಿದ್ದು ಸರ್ಕಾರವಲ್ಲ, ಕೆಎಂಎಫ್ ಎಂದಿದ್ದ ಸಿಎಂ ಉಲ್ಟಾ!
ಹಾಲಿನ ದರ ಹೆಚ್ಚಳ ಮಾಡಿದ್ದು ಸರ್ಕಾರವಲ್ಲ, ಕೆಎಂಎಫ್ ಎಂದಿದ್ದ ಸಿಎಂ ಉಲ್ಟಾ!
ಚುನಾಯಿತ ಜನಪ್ರತಿನಿಧಿ ಎಲ್ಲ ಸಮುದಾಯಳಿಗಾಗಿ ದುಡಿಯಬೇಕು: ಪ್ರಿಯಾಂಕ್ ಖರ್ಗೆ
ಚುನಾಯಿತ ಜನಪ್ರತಿನಿಧಿ ಎಲ್ಲ ಸಮುದಾಯಳಿಗಾಗಿ ದುಡಿಯಬೇಕು: ಪ್ರಿಯಾಂಕ್ ಖರ್ಗೆ
ಮೂರು ಡಿಸಿಎಂ ಬೇಡಿಕೆ ಈಗಿನ ಡಿಸಿಎಂಗೆ ಮೂಗುದಾರ ಹಾಕುವ ಹುನ್ನಾರ: ಸಿಟಿ ರವಿ
ಮೂರು ಡಿಸಿಎಂ ಬೇಡಿಕೆ ಈಗಿನ ಡಿಸಿಎಂಗೆ ಮೂಗುದಾರ ಹಾಕುವ ಹುನ್ನಾರ: ಸಿಟಿ ರವಿ
ಮೈಸೂರಲ್ಲಿಂದು ಬೆಳ್ಳಂಬೆಳಗ್ಗೆಯೇ ಮಳೆ, ಮಕ್ಕಳನ್ನು ಶಾಲೆಗೆ ಕಳಿಸಲು ತಾಪತ್ರಯ
ಮೈಸೂರಲ್ಲಿಂದು ಬೆಳ್ಳಂಬೆಳಗ್ಗೆಯೇ ಮಳೆ, ಮಕ್ಕಳನ್ನು ಶಾಲೆಗೆ ಕಳಿಸಲು ತಾಪತ್ರಯ