AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಸೆಂಚರ್ ಆದಾಯದ ಮೇಲೆ ಕವಿದ ಮೋಡ; ಭಾರತದ ಷೇರುಮಾರುಕಟ್ಟೆಯಲ್ಲಿ ಐಟಿ ಕಂಪನಿಗಳಿಗೆ ಹಿನ್ನಡೆ

Accenture Effect on Indian IT stocks: ಜಾಗತಿಕ ಐಟಿ ಸರ್ವಿಸ್ ದೈತ್ಯವೆನಿಸಿರುವ ಅಕ್ಸೆಂಚರ್ ಕಂಪನಿಯ ಷೇರುಬೆಲೆ ಗಣನೀಯವಾಗಿ ಕುಸಿದಿದೆ. ತನ್ನ ವರ್ಷದ ಆದಾಯ ನಿರೀಕ್ಷೆಯನ್ನು ಶೇ. 5ರಿಂದ ಶೇ. 1ಕ್ಕೆ ಇಳಿಸಿದೆ. ಇದರ ಪರಿಣಾಮವಾಗಿ ಅಮೆರಿಕದ ಷೇರುಮಾರುಕಟ್ಟೆಲ್ಲಿ ಅಕ್ಸೆಂಚರ್​ಗೆ ಹಿನ್ನಡೆ ಆಗುತ್ತಿದೆ. ಇದೇ ಪರಿಣಾಮ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರತದ ಐಟಿ ಕಂಪನಿಗಳ ಮೇಲೆ ಆಗುತ್ತಿದೆ. ಎಚ್​ಸಿಎಲ್ ಟೆಕ್ನಾಲಜೀಸ್ ಮೊದಲಾದ ಷೇರುಗಳು ಇಂದು ಕುಸಿತ ಕಂಡಿವೆ.

ಅಕ್ಸೆಂಚರ್ ಆದಾಯದ ಮೇಲೆ ಕವಿದ ಮೋಡ; ಭಾರತದ ಷೇರುಮಾರುಕಟ್ಟೆಯಲ್ಲಿ ಐಟಿ ಕಂಪನಿಗಳಿಗೆ ಹಿನ್ನಡೆ
ಷೇರು ಮಾರುಕಟ್ಟೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 22, 2024 | 11:25 AM

Share

ನವದೆಹಲಿ, ಮಾರ್ಚ್ 22: ಷೇರುಮಾರುಕಟ್ಟೆಗೆ ವಾರಾಂತ್ಯವಾದ ಇಂದು ಶುಕ್ರವಾರ ಭಾರತೀಯ ಐಟಿ ಕಂಪನಿಗಳ ಷೇರುಗಳಿಗೆ ಹಿನ್ನಡೆ ಆಗುತ್ತಿದೆ. ನಿಫ್ಟಿ ಐಟಿ ಇಂಡೆಕ್ಸ್ ಶೇ. 3ರಷ್ಟು ಕುಸಿತ ಕಂಡಿದೆ. ಪ್ರಮುಖ ಸೂಚ್ಯಂಕಗಳಾದ ನಿಫ್ಟಿ50, ಸೆನ್ಸೆಕ್ಸ್ 30 ಮೊದಲಾದವು ಕೂಡ ಕಡಿಮೆ ಆಗಿವೆ. ಇದಕ್ಕೂ ಮುನ್ನ, ಅತ್ತ ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಜಾಗತಿಕ ಐಟಿ ದೈತ್ಯ ಅಕ್ಸೆಂಚರ್​ನ ಷೇರು ಬೆಲೆ (Accenture share price) ಇಳಿಕೆ ಆಗಿತ್ತು. ಅದರ ಬೆನ್ನಲ್ಲೇ ಅಮೆರಿಕದಲ್ಲಿರುವ ಭಾರತೀಯ ಕಂಪನಿಗಳ ಎಡಿಆರ್ ಷೇರುಗಳೂ ಕೂಡ ಮೌಲ್ಯ ನಷ್ಟ ಅನುಭವಿಸಿದವು.

ಅಕ್ಸೆಂಚರ್​ನ ಆದಾಯದ ಬಗ್ಗೆ ನಿರಾಸೆ

ಐರ್ಲೆಂಡ್ ಮೂಲದ ಅಕ್ಸೆಂಚರ್ ವಿಶ್ವದ ಅತಿದೊಡ್ಡ ಐಟಿ ಸರ್ವಿಸ್ ಕಂಪನಿಗಳಲ್ಲಿ ಒಂದು. 2024ರ ವರ್ಷಕ್ಕೆ ತನ್ನ ಆದಾಯದ ಬಗ್ಗೆ ಇದ್ದ ನಿರೀಕ್ಷೆಯನ್ನು ಕಡಿಮೆ ಮಾಡಿದೆ. ಶೇ. 3ರಿಂದ 5ರಷ್ಟು ಇದ್ದ ಆದಾಯದ ನಿರೀಕ್ಷೆ ಶೇ. 1ಕ್ಕೆ ಇಳಿದಿದೆ. ಹೀಗಾಗಿ, ಅಮೆರಿಕದ ನ್ಯೂಯಾರ್ಕ್ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ಅಕ್ಸೆಂಚರ್​ನ ಷೇರುಬೆಲೆ ಕಡಿಮೆ ಆಗಿದೆ.

ಅಕ್ಸೆಂಚರ್ ಆದಾಯ ಕಡಿಮೆಗೊಂಡರೆ ಮತ್ತು ಷೇರುಬೆಲೆ ಕಡಿಮೆಗೊಂಡರೆ ಭಾರತದ ಐಟಿ ಕಂಪನಿಗಳ ಮೇಲೆ ಸಹಜವಾಗಿಯೇ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಅಕ್ಸೆಂಚರ್ ಪ್ರಮುಖ ಐಟಿ ಕಂಪನಿಯಾಗಿದ್ದು, ಅದಕ್ಕೆ ಹಿನ್ನಡೆ ಎಂದರೆ ಒಟ್ಟಾರೆ ಐಟಿ ಕ್ಷೇತ್ರಕ್ಕೆ ಹಿನ್ನಡೆ ಎಂದು ತೋರಬಹುದು. ಈ ಕಾರಣಕ್ಕೆ ಒಟ್ಟಾರೆಯಾಗಿ ಐಟಿ ಸರ್ವಿಸ್ ಉದ್ಯಮದ ಬಗ್ಗೆ ಹೂಡಿಕೆದಾರರಿಗೆ ಅನುಮಾನ ಸುಳಿದಿದೆ. ಇದು ಭಾರತೀಯ ಷೇರು ಮಾರುಕಟ್ಟೆಯಲ್ಲಿ ಐಟಿ ಷೇರುಗಳಿಗೆ ಹಿನ್ನಡೆ ತಂದಿದೆ.

ಇದನ್ನೂ ಓದಿ: ಅಮೆರಿಕದ ರಾಬಿನ್​ಹುಡ್ ಮಾರ್ಕೆಟ್ಸ್​ನ ಸಹ-ಸಂಸ್ಥಾಪಕ ಬೈಜು ಭಟ್ ಚೀಫ್ ರಾಜೀನಾಮೆ

ಭಾರತೀಯ ಐಟಿ ಕಂಪನಿಗಳ ಪರಿಸ್ಥಿತಿ ಹೇಗೆ?

ಭಾರತೀಯ ಐಟಿ ಕ್ಷೇತ್ರದ ಪರಿಣಿತರ ಪ್ರಕಾರ ಇನ್ಫೋಸಿಸ್, ವಿಪ್ರೋ, ಟಿಸಿಎಸ್, ಎಚ್​ಸಿಎಲ್ ಟೆಕ್ನಾಲಜೀಸ್ ಮೊದಲಾದ ಪ್ರಮುಖ ಐಟಿ ಕಂಪನಿಗಳು ಉತ್ತಮ ಗುತ್ತಿಗೆಗಳನ್ನು ಪಡೆದಿವೆ. ಮುಂಬರುವ ದಿನಗಳಲ್ಲಿ ಅವುಗಳ ತ್ರೈಮಾಸಿಕ ಹಣಕಾಸು ಸಾಧನೆ ಉತ್ತಮವಾಗಿರುತ್ತದೆ. ಅವುಗಳ ಷೇರುಬೆಲೆ ಹೆಚ್ಚುವ ಸಾಧ್ಯತೆ ಇದೆ. ಇವತ್ತೇ ಈ ಕೆಲ ಪ್ರಮುಖ ಕಂಪನಿಗಳ ಷೇರುಗಳನ್ನು ಖರೀದಿಸಿದರೆ ಮಧ್ಯಮ ಮತ್ತು ದೀರ್ಘಾವಧಿಯಲ್ಲಿ ಉತ್ತಮ ಲಾಭ ಮಾಡಬಹುದು ಎಂಬ ಅಭಿಪ್ರಾಯ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ