AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Return Tickets: ರೈಲ್ವೆ ರಿಟರ್ನ್ ಟಿಕೆಟ್ ಖರೀದಿಸಿ, ಈ ಎರಡು ದಿನ ಉಚಿತವಾಗಿ ಪ್ರಯಾಣಿಸಿ; ಎಲ್ಲಿದೆ ಈ ಸೌಲಭ್ಯ?

Indian Railways Updates: ನೀವು ಒಂದು ನಿಲ್ದಾಣದಿಂದ ಗಮ್ಯಸ್ಥಾನಕ್ಕೆ ಹಿಂದಿರುಗುವ ಟಿಕೆಟ್ ಅನ್ನು ಬುಕ್ ಮಾಡಿದರೆ, ನೀವು ಗಮ್ಯಸ್ಥಾನಕ್ಕೆ ಹೋಗಿ ಅಲ್ಲಿಂದ ಒಂದೇ ಟಿಕೆಟ್‌ನಲ್ಲಿ ಹಿಂತಿರುಗಬಹುದು. ಆದರೆ ಮರುದಿನ ಭಾನುವಾರ ಅಥವಾ ರಜೆಯಾಗಿದ್ದರೆ, ರಿಟರ್ನ್ ಟಿಕೆಟ್ ಆ ದಿನದ ಮುಂದಿನ 'ಕೆಲಸದ ದಿನ' ವರೆಗೆ ಮಾನ್ಯವಾಗಿರುತ್ತದೆ.

Return Tickets: ರೈಲ್ವೆ ರಿಟರ್ನ್ ಟಿಕೆಟ್ ಖರೀದಿಸಿ, ಈ ಎರಡು ದಿನ ಉಚಿತವಾಗಿ ಪ್ರಯಾಣಿಸಿ; ಎಲ್ಲಿದೆ ಈ ಸೌಲಭ್ಯ?
ಭಾರತೀಯ ರೈಲ್ವೆ
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ|

Updated on: Nov 13, 2023 | 1:16 PM

Share

ಸ್ಥಳೀಯ ರೈಲುಗಳಲ್ಲಿ ಪ್ರಯಾಣಿಸುವ ಹೆಚ್ಚಿನ ಪ್ರಯಾಣಿಕರು ಸಮಯವನ್ನು ಉಳಿಸಲು ರಿಟರ್ನ್ ಟಿಕೆಟ್‌ಗಳನ್ನು (train return tickets) ಖರೀದಿಸುತ್ತಾರೆ. ಒಂದೆಡೆ, ಮತ್ತೆ ಮತ್ತೆ ಟಿಕೆಟ್ ಖರೀದಿಸಲು ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ, ಮತ್ತು ಒಂದೇ ದಿನದಲ್ಲಿ ಒಂದು ರಿಟರ್ನ್ ಟಿಕೆಟ್ ಅನ್ನು ಹಲವು ಬಾರಿ ಬಳಸಬಹುದು. ಆದರೆ ಒಮ್ಮೆ ರಿಟರ್ನ್ ಟಿಕೆಟ್ ಖರೀದಿಸಿದರೆ ಎರಡು ದಿನ ಪ್ರಯಾಣಿಸಬಹುದು ಎಂಬುದು ನಿಮಗೆ ತಿಳಿದಿದೆಯೇ? ನೀವು ಪ್ರತಿದಿನ ಸ್ಥಳೀಯ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ, ರಿಟರ್ನ್ ಟಿಕೆಟ್‌ಗಳ ಬಗ್ಗೆ ಈ ಮಾಹಿತಿಯನ್ನು ತಿಳಿಯಿರಿ. ಆದರೆ, ಇದು ಸೌತ್ ಈಸ್ಟರ್ನ್ ರೈಲ್ವೆಯಲ್ಲಿ ಇರುವ ಸೌಲಭ್ಯ. ಆದರೂ ತುಸು ಕುತೂಹಲ ಮೂಡಿಸುತ್ತದೆ ಈ ಮಾಹಿತಿ.

ಸೌತ್ ಈಸ್ಟರ್ನ್ ರೈಲ್ವೇ ಪ್ರಕಾರ, ನೀವು ಒಂದು ನಿಲ್ದಾಣದಿಂದ ಗಮ್ಯಸ್ಥಾನಕ್ಕೆ (destination) ಹೋಗಿ ಬರಲು ರಿಟರ್ನ್ ಟಿಕೆಟ್ ಅನ್ನು ಬುಕ್ ಮಾಡಿದರೆ, ನೀವು ಗಮ್ಯಸ್ಥಾನಕ್ಕೆ ಹೋಗಿ ಅಲ್ಲಿಂದ ಅದೇ ಟಿಕೆಟ್‌ನಲ್ಲಿ ಹಿಂತಿರುಗಬಹುದು. ಆದರೆ ಟಿಕೆಟ್ ಬುಕ್ ಮಾಡಿದ ಮರುದಿನವು ಭಾನುವಾರ ಅಥವಾ ರಜೆಯಾಗಿದ್ದರೆ, ರಿಟರ್ನ್ ಟಿಕೆಟ್ ಆ ದಿನದ ಮುಂದಿನ ‘ಕೆಲಸದ ದಿನ’ (working day) ದವರೆಗೆ ಮಾನ್ಯವಾಗಿರುತ್ತದೆ. ಅಂದರೆ, ಈ ಟಿಕೆಟ್ ಅನ್ನು ನೀವು ಶನಿವಾರ ಬುಕ್ ಮಾಡಿದ್ದರೆ, ಭಾನುವಾರ ರಜೆ ದಿನದ ಬಳಿಕ ವರ್ಕಿಂಡ್ ಡೇ ಆದ ಸೋಮವಾರದವರೆಗೂ ಅದು ಮಾನ್ಯ (valid) ವಾಗಿರುತ್ತದೆ. ರಜಾ ದಿನ ಭಾನುವಾರವೇ ಆಗಬೇಕಿಲ್ಲ. ಯಾವುದಾದರೂ ಘೋಷಿತ ಸಾರ್ವಜನಿಕ ರಜೆಯೂ ಆಗುತ್ತದೆ. ಉದಾಹರಣೆಗೆ ನೀವು ಇಂದು ಸೋಮವಾರ ಟಿಕೆಟ್ ಬುಕ್ ಮಾಡುತ್ತೀರಿ. ನಾಳೆ ಮಂಗಳವಾರ ದೀಪಾವಳಿಗೆ ಸಾರ್ವಜನಿಕ ರಜೆ ಇದೆ. ನೀವು ಸೋಮವಾರ ಖರೀದಿಸಿದ ರಿಟರ್ನ್ ಟಿಕೆಟ್, ಬುಧವಾರದವರೆಗೂ ಸಿಂಧುವಿರುತ್ತದೆ.

ಇದನ್ನೂ ಓದಿ: ಅದಾನಿ ಬಿಸಿನೆಸ್ ಸಾಮ್ರಾಜ್ಯ ವಿಸ್ತರಣೆ; ಬೇರೆ ಬೇರೆ ದೇಶಗಳಲ್ಲಿ ಉದ್ದಿಮೆ ಸ್ಥಾಪನೆಗೆ ಅದಾನಿ ಗ್ರೂಪ್ ಆಲೋಚನೆ

ಯಾವ ಮಾರ್ಗವು ಈ ಪ್ರಯೋಜನವನ್ನು ಪಡೆಯುತ್ತದೆ?

ಆಗ್ನೇಯ ರೈಲ್ವೆ ಪ್ರಕಾರ, ಈ ರಿಟರ್ನ್ ಟಿಕೆಟ್ ಸೌಲಭ್ಯವು ಎಲ್ಲಾ ರೈಲುಗಳಲ್ಲೂ ಇರುವುದಿಲ್ಲ. ಸೌತ್ ಈಸ್ಟರ್ನ್ ರೈಲ್ವೆಯ ಹೌರಾ-ಖರ್ಗ್‌ಪುರ-ಮೇದಿನಿಪುರ ಮಾರ್ಗದಲ್ಲಿ ಲಭ್ಯವಿರುತ್ತದೆ.

ಭಾನುವಾರ ಹೊರತುಪಡಿಸಿ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರವು ಘೋಷಿಸಿದ ರಜಾದಿನಗಳ ಮರುದಿನ ಮಧ್ಯರಾತ್ರಿಯವರೆಗೆ ರಿಟರ್ನ್ ಟಿಕೆಟ್‌ಗಳನ್ನು ಹಿಂತಿರುಗಿಸಬಹುದು.

ಇದನ್ನೂ ಓದಿ: ದೀಪಾವಳಿ ಹಿನ್ನೆಲೆ ರೈಲುಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ, ಎಲ್ಲಾ ವಲಯಗಳಲ್ಲಿ ಈ 3 ಕ್ರಮಗಳನ್ನು ಕೈಗೊಳ್ಳಲು ಆದೇಶ

ಈ ಸೌಲಭ್ಯವು ದೇಶದ ಬೇರೆ ರೈಲ್ವೆಗಳಲ್ಲಿ ಸದ್ಯಕ್ಕೆ ಇಲ್ಲ. ಬ್ರಿಟನ್ ದೇಶದಲ್ಲಿ ರಿಟರ್ನ್ ಟಿಕೆಟ್​ಗಳು ಖರೀದಿ ಮಾಡಿದ ಬಳಿಕ ಒಂದು ತಿಂಗಳವರೆಗೆ ಸಿಂಧು ಇರುತ್ತವೆ. ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ರೀತಿಯ ರೈಲ್ವೆ ಪಾಲಿಸಿಗಳಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ