AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಿಂಚಿನ ಸಂಚಾರ; ಸ್ಟಾರ್ಟಪ್​ಗಳ ಸಂಖ್ಯೆ 450ಕ್ಕೂ ಅಧಿಕ; IN-SPACe ಬೆಂಬಲಕ್ಕೆ ಭರ್ಜರಿ ಸ್ಪಂದನೆ

IN-SPACe Program Management and Authorisation Directorate director P.K. Jain speaks: ಬಾಹ್ಯಾಕಾಶ ಕ್ಷೇತ್ರಕ್ಕೆ ಖಾಸಗಿಯನ್ನು ಹುರಿದುಂಬಿಸಲು ಸರ್ಕಾರ ರಚಿಸಿದ IN-SPACe ಕೇಂದ್ರಕ್ಕೆ ಭರ್ಜರಿ ಸ್ಪಂದನೆ ಸಿಕ್ಕಿದೆ. 800ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು 130ಕ್ಕೆ ಅನುಮೋದನೆ ಸಿಕ್ಕಿದೆ. ಭಾರತದಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಸ್ಟಾರ್ಟಪ್​ಗಳ ಸಂಖ್ಯೆ 450 ದಾಟಿದೆ ಎಂದು IN-SPACe ನಿರ್ದೇಶಕ ಪಿ.ಕೆ. ಜೈನ್ ತಿಳಿಸಿದ್ದಾರೆ.

ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಿಂಚಿನ ಸಂಚಾರ; ಸ್ಟಾರ್ಟಪ್​ಗಳ ಸಂಖ್ಯೆ 450ಕ್ಕೂ ಅಧಿಕ; IN-SPACe ಬೆಂಬಲಕ್ಕೆ ಭರ್ಜರಿ ಸ್ಪಂದನೆ
ಸ್ಕೈರೂಟ್​ನ ವಿಕ್ರಮ್ ರಾಕೆಟ್ ಉಡಾವಣೆImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 23, 2026 | 1:18 PM

Share

ಮುಖ್ಯಾಂಶಗಳು

  • ಬಾಹ್ಯಾಕಾಶ ಕ್ಷೇತ್ರ ಹುರಿದುಂಬಿಸಲು ರಚಿಸಿದ IN-SPACe ಗೆ ಭರ್ಜರಿ ಸ್ಪಂದನೆ ಸಿಕ್ಕಿದೆ.
  • 800ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು 130ಕ್ಕೆ ಅನುಮೋದನೆ ಸಿಕ್ಕಿದೆ.
  • ಬಾಹ್ಯಾಕಾಶ ಕ್ಷೇತ್ರದಲ್ಲಿ ಸ್ಟಾರ್ಟಪ್​ಗಳ ಸಂಖ್ಯೆ 450 ದಾಟಿದೆ ಎಂದು IN-SPACe ನಿರ್ದೇಶಕರು ತಿಳಿಸಿದ್ದಾರೆ.

ನವದೆಹಲಿ, ಜುಲೈ 23: ಭಾರತೀಯ ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿ ಹೂಡಿಕೆಗೆ ಮುಕ್ತಗೊಳಿಸಿದ ನಂತರ ದೇಶದಲ್ಲಿ ಬಾಹ್ಯಾಕಾಶ ನವೋದ್ಯಮಗಳ (Space Startups) ಕ್ರಾಂತಿಯೇ ಸಂಭವಿಸಿದೆ. ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರದ (IN-SPACe – Indian National Space Promotion and Authorisation Centre) ಮಾಹಿತಿಯಂತೆ, ಕಳೆದ ನಾಲ್ಕು ವರ್ಷಗಳಲ್ಲಿ ಖಾಸಗಿ ವಲಯದಿಂದ 800ಕ್ಕೂ ಹೆಚ್ಚು ಅರ್ಜಿಗಳು ಸ್ವೀಕೃತವಾಗಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಐಎಎಫ್​ಐನ ಬಾಹ್ಯಾಕಾಶ ನೀತಿ ಸಮ್ಮೇಳನ 2026 ಅನ್ನು (AIFI space policy conference) ಉದ್ದೇಶಿಸಿ ಮಾತನಾಡುತ್ತಿದ್ದ IN-SPACe ನ ಪ್ರೋಗ್ರಾಮ್ ಮ್ಯಾನೇಜ್ಮೆಂಟ್ ಮತ್ತು ಆಥರೈಸೇಶನ್ ಡೈರೆಕ್ಟೋರೇಟ್​ನ ನಿರ್ದೇಶಕ ಪಿ.ಕೆ. ಜೈನ್ ಅವರು ಸರ್ಕಾರದಿಂದ ಕೈಗೊಳ್ಳಲಾದ ಸುಧಾರಣೆಗಳು ಹಾಗೂ ಇತರ ಉಪಕ್ರಮಗಳು ಈ ಕ್ಷೇತ್ರಕ್ಕೆ ಒಂದು ನಿರ್ದಿಷ್ಟತೆ ತಂದುಕೊಟ್ಟಿದೆ ಎಂದಿದ್ದಾರೆ. ಜೈನ್ ಅವರು ಈ ಕಾನ್ಫೆರೆನ್ಸ್​ನಲ್ಲಿ ನೀಡಿದ ಕೆಲ ಕುತೂಹಲಕಾರಿ ಮಾಹಿತಿ ಈ ಕೆಳಕಂಡಂತಿದೆ:

ಇದನ್ನೂ ಓದಿ:ಸೈಲೆಂಟಾಗಿ ನಿಮ್ಮ ಕ್ರೆಡಿಟ್ ಲಿಮಿಟ್​ಗೆ ಕತ್ತರಿ ಬೀಳಬಹುದು; ಬ್ಯಾಂಕುಗಳು ಯಾಕೆ ಈ ಕೆಲಸ ಮಾಡುತ್ತವೆ ಗೊತ್ತಾ?

  • ಸ್ಟಾರ್ಟಪ್​ಗಳ ಏರಿಕೆ: 6 ವರ್ಷಗಳ ಹಿಂದೆ ಒಂದಂಕಿಯಲ್ಲಿದ್ದ ಬಾಹ್ಯಾಕಾಶ ಸ್ಟಾರ್ಟ್‌ಅಪ್‌ಗಳ ಸಂಖ್ಯೆ ಇಂದು 450ರ ಗಡಿ ದಾಟಿದೆ.
  • ಬಹಳಷ್ಟು ಅನುಮೋದನೆ: ಸ್ವೀಕೃತವಾದ 800ಕ್ಕೂ ಅಧಿಕ ಅರ್ಜಿಗಳಲ್ಲಿ IN-SPACe ಸಂಸ್ಥೆಯು ಈಗಾಗಲೇ 130ಕ್ಕೂ ಹೆಚ್ಚು ಯೋಜನೆಗಳಿಗೆ ಅಧಿಕೃತ ಅನುಮೋದನೆ ನೀಡಿದೆ.
  • ತಂತ್ರಜ್ಞಾನ ಹಸ್ತಾಂತರ: ಇಸ್ರೋ (ISRO) ಅಭಿವೃದ್ಧಿಪಡಿಸಿದ 100ಕ್ಕೂ ಹೆಚ್ಚು ತಂತ್ರಜ್ಞಾನಗಳನ್ನು ಖಾಸಗಿ ಉದ್ದಿಮೆಗಳಿಗೆ ಹಸ್ತಾಂತರಿಸಲಾಗಿದೆ.
  • ಹೂಡಿಕೆ ಹರಿವು: ಕಳೆದ ಮೂರು ವರ್ಷಗಳಲ್ಲಿ ಭಾರತೀಯ ಬಾಹ್ಯಾಕಾಶ ಸ್ಟಾರ್ಟ್‌ಅಪ್‌ಗಳು ಸುಮಾರು $390 ಮಿಲಿಯನ್ (ಸುಮಾರು ₹3,750 ಕೋಟಿ) ಹೂಡಿಕೆಯನ್ನು ಆಕರ್ಷಿಸಿವೆ.

‘ಇಸ್ರೋ’ ಸೌಲಭ್ಯಗಳ ಬಳಕೆ ಮತ್ತು ಸಿಂಗಲ್-ವಿಂಡೋ ವ್ಯವಸ್ಥೆ

“ಖಾಸಗಿ ಕಂಪನಿಗಳಿಗೆ ಇಸ್ರೋದ ಟೆಸ್ಟಿಂಗ್ ಸೆಂಟರ್​ಗಳು, ತಾಂತ್ರಿಕ ಬೆಂಬಲ ಮತ್ತು ತಂತ್ರಜ್ಞಾನ ಹಸ್ತಾಂತರದ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ” ಎಂದು IN-SPACe ನಿರ್ದೇಶಕ ಪಿ. ಕೆ. ಜೈನ್ ಅವರು ತಿಳಿಸಿದ್ದಾರೆ.

ಅಲ್ಲದೆ, ಉದ್ಯಮಿಗಳು ವಿವಿಧ ಸರ್ಕಾರಿ ಇಲಾಖೆಗಳಿಗೆ ಅಲೆಯುವುದನ್ನು ತಪ್ಪಿಸಲು, ‘ಒಂದೇ ಕಿಟಕಿ ವ್ಯವಸ್ಥೆ’ (Single-window interface) ಜಾರಿಗೆ ತರಲು ಟೆಲಿಕಾಂ ಮತ್ತು ವಾರ್ತಾ ಹಾಗೂ ಪ್ರಸಾರ ಸಚಿವಾಲಯಗಳೊಂದಿಗೆ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಪಿಎಫ್ ಸದಸ್ಯರಿಗೆ ಪೆನ್ಷನ್; ಕನಿಷ್ಠ ಪಿಂಚಣಿಯನ್ನು 3,000 ಅಲ್ಲ, 7,500 ರೂಗೆ ಏರಿಸಬೇಕೆಂದು ಒತ್ತಾಯ; ಸರ್ಕಾರದ ಪ್ರತಿಕ್ರಿಯೆಯೇನು?

ಸ್ಕೈರೂಟ್ ಸಾಧನೆಯನ್ನು ಮೆಚ್ಚಿದ ಜೈನ್

ಸ್ಕೈರೂಟ್ ಸಾಧನೆಯನ್ನು ಉಲ್ಲೇಖಿಸಿದ IN-SPACe ನಿರ್ದೇಶಕರು, ಸ್ಕೈರೂಟ್ ಏರೋಸ್ಪೇಸ್ (Skyroot Aerospace) ಭಾರತದ ಮೊದಲ ಸ್ಪೇಸ್ ಯೂನಿಕಾರ್ನ್ ಆಗಿ ಹೊರಹೊಮ್ಮಿದ್ದು, ವಿಕ್ರಮ್-1 ರಾಕೆಟ್ ಉಡಾವಣೆಯ ಮೂಲಕ ಖಾಸಗಿ ಕ್ಷೇತ್ರದಲ್ಲಿ ಹೊಸ ಇತಿಹಾಸ ನಿರ್ಮಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:17 pm, Thu, 23 July 26

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More