ಹತ್ತಕ್ಕಿಂತ ಕಡಿಮೆ ಇದ್ದ ಭಾರತೀಯ ಸ್ಪೇಸ್ ಸ್ಟಾರ್ಟಪ್​ಗಳ ಸಂಖ್ಯೆ ನಾಲ್ಕೇ ವರ್ಷದಲ್ಲಿ 1,180ಕ್ಕೆ: ಸಚಿವ ಜಿತೇಂದ್ರ ಸಿಂಗ್

Indian Space Startups: ಭಾರತದ ನವೋದ್ದಿಮೆಗಳು ಈ ಹಣಕಾಸು ವರ್ಷದ 9 ತಿಂಗಳಲ್ಲಿ 1,000 ಕೋಟಿ ರೂಗೂ ಹೆಚ್ಚು ಮೊತ್ತದ ಖಾಸಗಿ ಬಂಡವಾಳ ಆಕರ್ಷಿಸಿವೆ. ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮಾಹಿತಿ ಪ್ರಕಾರ 4 ವರ್ಷದಲ್ಲಿ ಸ್ಟಾರ್ಟಪ್​ಗಳ ಸಂಖ್ಯೆ 10ಕ್ಕಿಂತ ಕಡಿಮೆ ಇದ್ದದು 1,180ಕ್ಕೆ ಏರಿದೆ. ಸದ್ಯ 8 ಬಿಲಿಯನ್ ಡಾಲರ್ ಗಾತ್ರ ಇರುವ ಭಾರತದ ಬಾಹ್ಯಾಕಾಶ ಉದ್ಯಮ 2040ರಲ್ಲಿ 100 ಬಿಲಿಯನ್ ಡಾಲರ್ ಮುಟ್ಟಬಹುದು.

ಹತ್ತಕ್ಕಿಂತ ಕಡಿಮೆ ಇದ್ದ ಭಾರತೀಯ ಸ್ಪೇಸ್ ಸ್ಟಾರ್ಟಪ್​ಗಳ ಸಂಖ್ಯೆ ನಾಲ್ಕೇ ವರ್ಷದಲ್ಲಿ 1,180ಕ್ಕೆ: ಸಚಿವ ಜಿತೇಂದ್ರ ಸಿಂಗ್
ಜಿತೇಂದ್ರ ಸಿಂಗ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 18, 2023 | 11:03 AM

ನವದೆಹಲಿ, ಡಿಸೆಂಬರ್ 18: ಭಾರತದಲ್ಲಿಇಸ್ರೋಗೆ ಸೀಮಿತವಾಗಿದ್ದ ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿಯವರಿಗೆ ತೆರೆದ ಬಳಿಕ ಸಾಕಷ್ಟು ಸ್ಟಾರ್ಟಪ್​ಗಳು ಆರಂಭಗೊಂಡಿವೆ. ವರದಿ ಪ್ರಕಾರ ಹಲವು ಸ್ಟಾರ್ಟಪ್​ಗಳಿಗೆ ಸುಲಭವಾಗಿ ಬಂಡವಾಳವೂ ಸಿಕ್ಕುತ್ತಿದೆ. ಕೇಂದ್ರ ಸಚಿವ ಜಿತೇಂದ್ರ ಸಿಂಗ್ (Union Minister Jitendra Singh) ನೀಡಿರುವ ಮಾಹಿತಿ ಪ್ರಕಾರ ಭಾರತದ ನವೋದ್ದಿಮೆಗಳು (ಸ್ಟಾರ್ಟಪ್) ಈ ಹಣಕಾಸು ವರ್ಷದ (2023-24ರಲ್ಲಿ) 9 ತಿಂಗಳಲ್ಲಿ 1,000 ಕೋಟಿ ರೂಗೂ ಹೆಚ್ಚು ಮೊತ್ತದ ಖಾಸಗಿ ಹೂಡಿಕೆಗಳನ್ನು ಆಕರ್ಷಿಸಿವೆಯಂತೆ.

ಭಾರತದ ಈಗಿನ ಸ್ಪೇಸ್ ಎಕನಾಮಿ ಅಥವಾ ಬಾಹ್ಯಾಕಾಶ ಕ್ಷೇತ್ರವು 8 ಬಿಲಿಯನ್ ಡಾಲರ್ ಬಲ ಮಾತ್ರ ಹೊಂದಿದೆ. ಆದರೆ, 2040ರಷ್ಟರಲ್ಲಿ ಆ ಆರ್ಥಿಕತೆಯ ಗಾತ್ರ ಹಲವು ಪಟ್ಟು ಹೆಚ್ಚಾಗಲಿದೆ. ಆರ್ಥರ್ ಡಿ ಲಿಟಲ್ ವರದಿ ಪ್ರಕಾರ ಭಾರತದ ಸ್ಪೇಸ್ ಎಕನಾಮಿ 2040ರಷ್ಟರಲ್ಲಿ 100 ಬಿಲಿಯನ್ ಡಾಲರ್ ಮುಟ್ಟಬಹುದು ಎಂದು ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.

ಇದನ್ನೂ ಓದಿ: ಇನ್ಫೋಸಿಸ್​ನಲ್ಲಿ ಸ್ಯಾಲರಿ ಹೈಕ್; ಸರಾಸರಿ ಹೆಚ್ಚಳ ಶೇ. 10ಕ್ಕಿಂತ ಕಡಿಮೆ; ಕೆಳಸ್ತರದವರಿಗೆ ಅದೂ ಇಲ್ಲ

ಇಸ್ರೋ ಈವರೆಗೂ 430ಕ್ಕೂ ಹೆಚ್ಚು ವಿದೇಶೀ ಸೆಟಿಲೈಟ್​ಗಳನ್ನು ಆಗಸಕ್ಕೆ ಹೊತ್ತೊಯ್ದಿದೆ. ಯೂರೋಪಿಯನ್ ಸೆಟಿಲೈಟ್ ಉಡಾವಣೆಯಿಂದ 290 ಮಿಲಿಯನ್ ಯೂರೋಗಿಂತಲೂ ಹೆಚ್ಚು ಹಣ ಗಳಿಸಿದೆ. ಅಮೆರಿಕನ್ ಸೆಟಿಲೈಟ್​ಗಳ ಉಡಾವಣೆ ಮೂಲಕ 170 ಮಿಲಿಯನ್ ಡಾಲರ್​ಗೂ ಹೆಚ್ಚು ಹಣ ಸಂಪಾದಿಸಿದೆ ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಬಾಹ್ಯಾಕಾಶ ಕ್ಷೇತ್ರದಲ್ಲಿ ಸುಧಾರಣೆ ತಂದಿದ್ದಾರೆ. ಖಾಸಗಿಯವರಿಗೂ ಈ ಕ್ಷೇತ್ರದಲ್ಲಿ ಅವಕಾಶ ಸಿಗುವಂತೆ ಮುಕ್ತಗೊಳಿಸಿದ್ದಾರೆ. ಇದಾದ ಬಳಿಕ ಭಾರತದಲ್ಲಿ ಸ್ಪೇಸ್ ಸ್ಟಾರ್ಟಪ್​ಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಕೇವಲ ನಾಲ್ಕು ವರ್ಷದಲ್ಲಿ ಬಾಹ್ಯಾಕಾಶ ಉದ್ದಿಮೆಗಳ ಸಂಖ್ಯೆ 1,180ಕ್ಕೆ ಹೆಚ್ಚಾಗಿದೆ ಎಂದು ಜಿತೇಂದ್ರ ಸಿಂಗ್ ವಿವರ ನೀಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ