Indian Standard Time: ದೇಶಾದ್ಯಂತ ಏಕರೀತಿಯ ಸಮಯ; ಐಎಸ್​​ಟಿ ಅಳವಡಿಕೆ ಕಡ್ಡಾಯ ಸಾಧ್ಯತೆ

ದೇಶಾದ್ಯಂತ ಎಲ್ಲಾ ನೆಟ್ವರ್ಕುಗಳು ಮತ್ತು ಕಂಪ್ಯೂಟರುಗಳು ಐಎಸ್ಟಿಗೆ ಸಮಯ ಹೊಂದಿಕೆ ಮಾಡಬೇಕಾಗುತ್ತದೆ. ಇಂಟರ್ನೆಟ್ ಸೇವಾ ಪೂರೈಕೆದಾರರು, ಟೆಲಿಕಾಂ ಸೇವಾ ಪೂರೈಕೆದಾರರು, ಪವರ್ ಗ್ರಿಡ್, ಬ್ಯಾಂಕ್, ಷೇರು ವಿನಿಮಯ ಕೇಂದ್ರ ಇತ್ಯಾದಿ ಎಲ್ಲಾ ರೀತಿಯ ನೆಟ್ವರ್ಕುಗಳು ಐಎಸ್ಟಿಯನ್ನು ಕಡ್ಡಾಯವಾಗಿ ಅಳವಡಿಕೆ ಮಾಡಬೇಕಾಗಬಹುದು.

Indian Standard Time: ದೇಶಾದ್ಯಂತ ಏಕರೀತಿಯ ಸಮಯ; ಐಎಸ್​​ಟಿ ಅಳವಡಿಕೆ ಕಡ್ಡಾಯ ಸಾಧ್ಯತೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on: Jan 06, 2023 | 2:28 PM

ನವದೆಹಲಿ: ದೇಶಾದ್ಯಂತ ಈಗ ಏಕ ಪ್ರಮಾಣದ ಸಮಯದ (Time sychronisation) ಅಳವಡಿಕೆಯಾಗಲಿದೆ. ಇಂಡಿಯನ್ ಸ್ಟ್ಯಾಂಡರ್ಡ್ ಟೈಮ್ (IST- Indian Standard Time) ಅನ್ನು ಎಲ್ಲೆಡೆಯೂ ಅಳವಡಿಸುವುದನ್ನು ಕಡ್ಡಾಯಪಡಿಸುವ ಸಮಗ್ರ ನೀತಿ ಜಾರಿಗೆ ಸರ್ಕಾರ ಮುಂದಾಗಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆಂದು ‘ಪಿಟಿಐ’ ಸುದ್ದಿ ಸಂಸ್ಥೆ ವರದಿ ಮಾಡಿದೆ. ದೇಶಾದ್ಯಂತ ಎಲ್ಲಾ ನೆಟ್ವರ್ಕುಗಳು ಮತ್ತು ಕಂಪ್ಯೂಟರುಗಳು ಐಎಸ್ಟಿಗೆ ಸಮಯ ಹೊಂದಿಕೆ ಮಾಡಬೇಕಾಗುತ್ತದೆ. ಇಂಟರ್ನೆಟ್ ಸೇವಾ ಪೂರೈಕೆದಾರರು, ಟೆಲಿಕಾಂ ಸೇವಾ ಪೂರೈಕೆದಾರರು, ಪವರ್ ಗ್ರಿಡ್, ಬ್ಯಾಂಕ್, ಷೇರು ವಿನಿಮಯ ಕೇಂದ್ರ ಇತ್ಯಾದಿ ಎಲ್ಲಾ ರೀತಿಯ ನೆಟ್ವರ್ಕುಗಳು ಐಎಸ್ಟಿಯನ್ನು ಕಡ್ಡಾಯವಾಗಿ ಅಳವಡಿಕೆ ಮಾಡಬೇಕಾಗಬಹುದು.

ಈ ಒಂದು ಕ್ರಮ ಜಾರಿಗೊಂಡರೆ ಸಾಮಾನ್ಯ ಜನರಿಂದ ಹಿಡಿದು ವೈಜ್ಞಾನಿಕ ಪ್ರಯೋಗಗಳವರೆಗೆ ಪ್ರಯೋಜನವಾಗಲಿದೆ. ದೇಶದ ಭದ್ರತೆಗೆ ಸಹಾಯಕವಾಗಲಿದೆ.

ಸದ್ಯ, ಎಲ್ಲಾ ಟೆಲಿಕಾಂ ಮತ್ತು ಇಂಟರ್ನೆಟ್ ಸರ್ವಿಸ್ ಪೂರೈಕೆದಾರರಿಗೆ ಐಎಸ್ಟಿ ಅಳವಡಿಕೆ ಕಡ್ಡಾಯವಿಲ್ಲ. ಜಾಗತಿಕ ಸಮಯ ಪಾಲಿಸುವ ಗ್ಲೋಬಲ್ ನ್ಯಾವಿಗೇಶನ್ ಸೆಟಿಲೈಟ್ ಸಿಸ್ಟಂ (GNSS) ಇತ್ಯಾದಿಗೆ ತಾಳೆಯಾಗುವ ಸರ್ವರ್ ಗಳನ್ನು ಈ ಸಂಸ್ಥೆಗಳು ಬಳಕೆ ಮಾಡುತ್ತಿವೆ. ಈಗ ಭಾರತೀಯ ಪ್ರಮಾಣ ಸಮಯ ಐಎಸ್ಟಿಯನ್ನು ಎಲ್ಲರೂ ಕಡ್ಡಾಯವಾಗಿ ಅಳವಡಿಸುವ ಕಾನೂನನ್ನು ಸರ್ಕಾರ ಜಾರಿಗೆ ತರುವ ಇರಾದೆಯಲ್ಲಿದೆ.

ಇದನ್ನೂ ಓದಿ: Top Performing Airports: ಅತ್ಯುತ್ತಮ ಕಾರ್ಯನಿರ್ವಹಣೆ; ವಿಶ್ವಮಟ್ಟದಲ್ಲಿ ಎರಡನೇ ಸ್ಥಾನದಲ್ಲಿ ಬೆಂಗಳೂರು ವಿಮಾನ ನಿಲ್ದಾಣ

ನ್ಯಾಷನಲ್ ಫಿಸಿಕಲ್ ಲ್ಯಾಬೊರೇಟರಿ (NPL) ಮತ್ತು ಇಸ್ರೋ ಸಂಸ್ಥೆಗಳ ಜೊತೆ ಗ್ರಾಹಕ ವ್ಯವಹಾರಗಳ ಇಲಾಖೆ (DoCA) ಈ ಸಂಬಂಧ ಒಂದು ಯೋಜನೆಯಲ್ಲಿ ತೊಡಗಿಸಿಕೊಂಡಿದೆ. ಐಎಸ್ಟಿಗೆ ನಿಖರ ಸಮಯ ರೂಪು ಕೊಡುವ ಯೋಜನೆ ಇದಾಗಿದೆ. ಬೆಂಗಳೂರು, ಅಹ್ಮದಾಬಾದ್, ಭುವನೇಶ್ವರ, ಫರೀದಾಬಾದ್ ಮತ್ತು ಗುವಾಹಟಿ, ಹೀಗೆ ದೇಶದ ಐದು ನಗರಗಳಲ್ಲಿರುವ ಲ್ಯಾಬೋರೇಟರಿಗಳಲ್ಲಿ ಸಂಶೋಧನೆಗಳಾಗುತ್ತಿವೆ. ನ್ಯಾನೋಸೆಕಂಡ್ನಷ್ಟು ನಿಖರತೆಯಿಂದ ಕೂಡಿದ ಐಎಸ್ಟಿಯನ್ನು ರೂಪಿಸುವುದು ಈ ಯೋಜನೆಯ ಉದ್ದೇಶ. ವೈಜ್ಞಾನಿಕ ಸಂಶೋಧನೆಗಳಿಗೆ ಇಷ್ಟು ನಿಖರ ಇರುವ ಸಮಯದ ಅವಶ್ಯಕತೆ ಇದೆ.

ಒಟ್ಟಾರೆ, ನಿಖರ ಮತ್ತು ಏಕರೀತಿಯ ಸಮಯದ ಅಳವಡಿಕೆಯಿಂದ ಸಂಚಾರ, ದೂರವಾಣಿ, ಅಂತರ್ಜಾಲ, ಬ್ಯಾಂಕಿಂಗ್ ವ್ಯವಸ್ಥೆ, ಡಿಜಿಟಲ್ ಗವರ್ನೆನ್ಸ್, ಸಾರಿಗೆ, ಹಣಕಾಸು ವಹಿವಾಟು, ರಕ್ಷಣಾ ವ್ಯವಸ್ಥೆ, ಸೈಬರ್ ವ್ಯವಸ್ಥೆಗಳಿಗೆ ಉಪಯೋಗವಾಗುತ್ತದೆ. ಅಲ್ಲದೇ ಭವಿಷ್ಯದ ತಂತ್ರಜ್ಞಾನವಾದ 5ಜಿ, ಕೃತಕ ಬುದ್ಧಿಮತ್ತೆ, ಇಂಟರ್ನೆಟ್ ಆಫ್ ಥಿಂಗ್ಸ್ ಇತ್ಯಾದಿಗೂ ಸಹಾಯವಾಗುತ್ತದೆ.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್