
ನವದೆಹಲಿ, ಆಗಸ್ಟ್ 21: ಒಡಿಶಾದ ಚಂಡೀಪುರದಲ್ಲಿ ನಿನ್ನೆ ಭಾರತ ಅಗ್ನಿ-5 ಕ್ಷಿಪಣಿಯ (Agni-5 Missile) ಯಶಸ್ವಿ ಪರೀಕ್ಷೆ ನಡೆಸಿದೆ. ಇದು ಎಲ್ಲಾ ತಾಂತ್ರಿಕ ಮತ್ತು ಕಾರ್ಯಾತ್ಮಕ ಗುರಿ ಮತ್ತು ಮಾನದಂಡಗಳನ್ನು ಯಶಸ್ವಿಯಾಗಿ ಪೂರೈಸಿದೆ. ಇದರೊಂದಿಗೆ ಭಾರತದ ಮಿಲಿಟರಿ ಬತ್ತಳಿಕೆಗೆ ಮಹೋನ್ನತ ಅಸ್ತ್ರವೊಂದು ಜೋಡಿತಗೊಳ್ಳುವುದು ನಿಶ್ಚಿತವಾಗಿದೆ. ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯುವ ಈ ಕ್ಷಿಪಣಿ ಭಾರತದ ಪಾಲಿಗೆ ಅತಿದೊಡ್ಡ ರಕ್ಷಣಾಸ್ತ್ರವೆನಿಸಿದೆ.
ಡಿಅರ್ಡಿಒ ಅಭಿವೃದ್ಧಿಪಡಿಸಿರುವ ಅಗ್ನಿ ಸರಣಿಯ ಐದನೇ ಕ್ಷಿಪಣಿಯಾದ ಇದು 5,000 ಕಿಮೀ ದೂರದ ಶ್ರೇಣಿ ಹೊಂದಿದೆ. ಇದೇ ಕ್ಷಿಪಣಿಯನ್ನು 8,000 ಕಿಮೀ ಶ್ರೇಣಿವರೆಗೆ ಹೋಗುವಂತೆ ಅಭಿವೃದ್ಧಪಡಿಸಲು ಅವಕಾಶ ಇದೆ.
ಇದನ್ನೂ ಓದಿ: ಭಾರತದಿಂದ ಒಡಿಶಾದಲ್ಲಿ ಅಗ್ನಿ 5 ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆ ಪರೀಕ್ಷೆ ಯಶಸ್ವಿ
ಅಗ್ನಿ-5 ಕ್ಷಿಪಣಿಯನ್ನು ಎಂಐಆರ್ವಿ ತಂತ್ರಜ್ಞಾನದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಒಮ್ಮೆ ಮಿಸೈಲ್ ಹಾರಿ ಬಿಟ್ಟರೆ ಇದು ತನ್ನಲ್ಲಿರುವ ವಿವಿಧ ಸಿಡಿತಲೆಗಳನ್ನು ಬಳಸಿ ಒಂದಕ್ಕಿಂತ ಹೆಚ್ಚು ಗುರಿಗಳನ್ನು ಹೊಡೆದುರುಳಿಸಬಲ್ಲುದು. ಅಗ್ನಿ-5 ಕ್ಷಿಪಣಿಯು ಒಟ್ಟು 1.5 ಟನ್ ತೂಕದ ಮೂರು ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲುದು. ಮಿಸೈಲ್ನಲ್ಲಿರುವ ಒಂದೊಂದು ಸಿಡಿತಲೆಯೂ ಕೂಡ ಬೇರ್ಪಟ್ಟು ಪ್ರತ್ಯೇಕ ಟಾರ್ಗೆಟ್ ಅನ್ನು ಅಪ್ಪಳಿಸಬಲ್ಲುದು.
ಭಾರತದ ನ್ಯಾವಿಗೇಶನ್ ಪರಿಕರವಾದ ನ್ಯಾವ್ಐಸಿ ಹಾಗೂ ಅಮೆರಿಕದ ಜಿಪಿಎಸ್ ನೆಟ್ವರ್ಕ್ ಅನ್ನು ಇದು ಬಳಸುತ್ತದೆ. ಜೊತೆಗೆ ಗೈರೋಸ್ಕೋಪ್ ಆಧಾರಿತ ಸೆನ್ಸಾರ್ಗಳನ್ನೂ ಇದು ಬಳಸುತ್ತದೆ. ಹೀಗಾಗಿ, ಇದು ನಿಖರವಾಗಿ ತನ್ನ ಗುರಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.
ಇದನ್ನೂ ಓದಿ: ಭಾರತದ ವಿರುದ್ಧ ಟ್ರಂಪ್ ಕಿವಿಯೂದುತ್ತಿರುವವರು ಯಾರು? ಟ್ರಂಪ್ಗೆ ಇವರು ಟ್ಯಾರಿಫ್ ಗುರು
ಈ ಮೇಲಿನ ಎಲ್ಲವೂ ಕೂಡ ಎಂಐಆರ್ವಿ ಟೆಕ್ನಾಲಜಿ ಹೊಂದಿವೆ. ಅಂದರೆ, ಒಂದಕ್ಕಿಂತ ಹೆಚ್ಚು ಟಾರ್ಗೆಟ್ಗಳನ್ನು ಹೊಡೆಯಬಲ್ಲುವು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ