Petrol and Diesel prices: ಪೆಟ್ರೋಲ್ ಮತ್ತು ಡೀಸಲ್ ಮೇಲೆ ಅತಿ ಹೆಚ್ಚು ತೆರಿಗೆಗಳನ್ನು (taxes on petrol) ಹಾಕಲಾಗುವ ದೇಶಗಳಲ್ಲಿ ಭಾರತ ಒಂದು. ಇಲ್ಲಿ ಕೇಂದ್ರದಿಂದ ಅಬಕಾರಿ ಸುಂಕಗಳು (Central Excise Tax) ಒಂದೆಡೆಯಾದರೆ, ರಾಜ್ಯ ಸರ್ಕಾರಗಳೂ ಕೂಡ ಪ್ರತ್ಯೇಕವಾಗಿ ವ್ಯಾಟ್ ಮತ್ತಿತರ ವಿವಿಧ ಟ್ಯಾಕ್ಸ್ಗಳನ್ನು ಹಾಕುತ್ತವೆ. ದಕ್ಷಿಣ ರಾಜ್ಯಗಳು ಅತಿಹೆಚ್ಚು ತೆರಿಗೆಗಳನ್ನು ಹಾಕುತ್ತವೆ. ಟಾಪ್-5 ಪಟ್ಟಿ ತೆಗೆದರೆ ಮಹಾರಾಷ್ಟ್ರ ಹೊರತುಪಡಿಸಿ ಉಳಿದ ರಾಜ್ಯಗಳೆಲ್ಲವೂ ದಕ್ಷಿಣದವೇ. ಇದರಲ್ಲಿ ಕರ್ನಾಟಕವೂ ಇದೆ. ಗುಜರಾತ್, ಗೋವಾ, ಹಾಗೂ ಈಶಾನ್ಯ ರಾಜ್ಯಗಳು ಪೆಟ್ರೋಲ್ ಮತ್ತು ಡೀಸಲ್ ಮೇಲೆ ಕಡಿಮೆ ಟ್ಯಾಕ್ಸ್ ಹೇರುತ್ತಿವೆ.
ಭಾರತದಲ್ಲಿ ಒಂದು ಲೀಟರ್ ಪೆಟ್ರೋಲ್ ಮೇಲೆ ಕೇಂದ್ರ ಸರ್ಕಾರ 32.90 ರೂನಷ್ಟು ಅಬಕಾರಿ ಸುಂಕ ವಿಧಿಸುತ್ತದೆ. ಡೀಸಲ್ ಮೇಲೆ 31.80 ರೂ ಟ್ಯಾಕ್ಸ್ ಹೇರುತ್ತದೆ.
ಇದಕ್ಕೆ ಹೆಚ್ಚುವರಿಯಾಗಿ ರಾಜ್ಯಗಳೂ ಕೂಡ ಪ್ರತ್ಯೇಕವಾದ ತೆರಿಗೆಗಳನ್ನು ವಿಧಿಸುತ್ತವೆ. ಇತ್ತೀಚಿನವರೆಗೂ ಕರ್ನಾಟಕ ಶೇ. 35ರಷ್ಟು ತೆರಿಗೆ ವಿಧಿಸುತ್ತಿತ್ತು. ನಂತರ ಶೇ. 25.92ಕ್ಕೆ ಟ್ಯಾಕ್ಸ್ ಇಳಿಸಿತ್ತು. ಕೆಲ ತಿಂಗಳ ಹಿಂದೆ ಅದನ್ನು 29.84ಕ್ಕೆ ಹೆಚ್ಚಿಸಿದೆ. ಪೆಟ್ರೋಲ್ ಮೇಲೆ ಅತಿಹೆಚ್ಚು ಟ್ಯಾಕ್ಸ್ ವಿಧಿಸುವ ರಾಜ್ಯಗಳ ಪಟ್ಟಿಯಲ್ಲಿ ಭಾರತ 5ನೇ ಸ್ಥಾನದಲ್ಲಿದೆ.
ಇದನ್ನೂ ಓದಿ: ಪೆಟ್ರೋಲ್ ಪಂಪ್ ಬಿಸಿನೆಸ್ ಹೊಂದಬೇಕಾ? ಆರಂಭಿಕ ಬಂಡವಾಳ, ಲೈಸೆನ್ಸ್, ಲಾಭ ಇತ್ಯಾದಿ ವಿವರ
ಎಸ್ಬಿಐ ವರದಿ ಪ್ರಕಾರ, ತೆಲಂಗಾಣ ರಾಜ್ಯ ಪೆಟ್ರೋಲ್ ಮೇಲೆ ಅತಿಹೆಚ್ಚು ತೆರಿಗೆ ವಿಧಿಸುತ್ತದೆ. ಇದು ಶೇ. 35.20ರಷ್ಟು ಟ್ಯಾಕ್ಸ್ ಹಾಕುತ್ತದೆ. ಕೇರಳ, ಆಂಧ್ರ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳು ನಂತರದ ಸ್ಥಾನದಲ್ಲಿವೆ. ಆದರೆ, ದಕ್ಷಿಣ ರಾಜ್ಯಗಳ ಪೈಕಿ ತಮಿಳುನಾಡು ತುಸು ಭಿನ್ನವಾಗಿ ತೆರಿಗೆ ವಿಧಿಸುತ್ತದೆ. ಇಲ್ಲಿ ಶೇ. 13ರಷ್ಟು ಮಾತ್ರವೇ ವ್ಯಾಟ್ ಇದೆಯಾದರೂ, ಒಂದು ಲೀಟರ್ ಪೆಟ್ರೋಲ್ ಮೇಲೆ ಹೆಚ್ಚುವರಿಯಾಗಿ 11.52 ರೂ ಸೆಸ್ ವಿಧಿಸುತ್ತದೆ.
ಗುಜರಾತ್‌ನಲ್ಲಿ ಅತಿ ಕಡಿಮೆ ತೆರಿಗೆ ಇದ್ದು, ಅಲ್ಲಿ ಪೆಟ್ರೋಲ್ ಮೇಲೆ ಶೇ. 13.7 ರಷ್ಟು ವ್ಯಾಟ್ ಮತ್ತು ಡೀಸೆಲ್ ಮೇಲೆ ಶೇ. 13.9 ರಷ್ಟು ವ್ಯಾಟ್ ವಿಧಿಸಲಾಗುತ್ತದೆ. ಇದರ ನಂತರ ಗೋವಾ ಬರುತ್ತದೆ, ಅಲ್ಲಿ ಪೆಟ್ರೋಲ್ ಮೇಲೆ 21.5 ಪ್ರತಿಶತ ವ್ಯಾಟ್ ಜೊತೆಗೆ, 0.5 ಪ್ರತಿಶತ ಗ್ರೀನ್ ಸೆಸ್ ವಿಧಿಸಲಾಗುತ್ತದೆ ಮತ್ತು ಡೀಸೆಲ್ ಮೇಲೆ 17.5 ಪ್ರತಿಶತ ತೆರಿಗೆಯ ಜೊತೆಗೆ, 0.5 ಪ್ರತಿಶತ ಹಸಿರು ಸೆಸ್ ವಿಧಿಸಲಾಗುತ್ತದೆ.
ಕರ್ನಾಟಕದಲ್ಲಿ ಇವತ್ತಿನ ಪೆಟ್ರೋಲ್ ಬೆಲೆ ಒಂದು ಲೀಟರ್ಗೆ 102.86 ರೂ ಇದೆ. ಇದರಲ್ಲಿ ಕೇಂದ್ರ ಅಬಕಾರಿ ಸುಂಕ 32.90 ರೂ ಇದೆ. ಹಾಗೆಯೇ, ಡೀಲರ್ ಕಮಿಷನ್ 3-4 ರೂ ಇದೆ. ರಾಜ್ಯ ಸರ್ಕಾರ ಶೇ. 29.84ರಷ್ಟು ವ್ಯಾಟ್ ಹಾಕುತ್ತದೆ.
ಇದನ್ನೂ ಓದಿ: ಫ್ಯಾಮಿಲಿ ಪೆನ್ಷನ್ ನೀತಿಯಲ್ಲಿ ಸುಧಾರಣೆ; ವಿಚ್ಛೇದಿತೆಯರು, ವಿಧವೆಯರು, ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ
ಮೂಲ ಪೆಟ್ರೋಲ್ ಬೆಲೆ, ಅಬಕಾರಿ ಸುಂಕ ಹಾಗೂ ಡೀಲರ್ ಕಮಿಷನ್ ಸೇರಿ ಆಗುವ ಮೊತ್ತಕ್ಕೆ ರಾಜ್ಯ ಸರ್ಕಾರ ವ್ಯಾಟ್ ಹಾಕುತ್ತದೆ. ಇಲ್ಲಿ ಮೂಲ ಪೆಟ್ರೋಲ್ ಬೆಲೆ ಎಷ್ಟೆಂಬ ಮಾಹಿತಿ ಸಾರ್ವಜನಿಕವಾಗಿ ಲಭ್ಯ ಇಲ್ಲ. ಒಂದು ಅಂದಾಜು ಪ್ರಕಾರ 40-41 ರೂನಷ್ಟು ಇರಬಹುದು.
ಪೆಟ್ರೋಲ್ನ ರೀಟೇಲ್ ಬೆಲೆ ಒಂದು ಲೀಟರ್ಗೆ 102.86 ರೂ
ಪೆಟ್ರೋಲ್ನ ಮೂಲ ಬೆಲೆ ಅಂದಾಜು 40-41 ರೂ ಇರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ