ಸಗಟು ಬೆಲೆ ಹಣದುಬ್ಬರ ಸೆಪ್ಟೆಂಬರ್ನಲ್ಲಿ ತುಸು ಏರಿಕೆ; ಮೈನಸ್ 0.26 ಪ್ರತಿಶತದಲ್ಲಿ; ಆರು ತಿಂಗಳಿಂದ ಮೈನಸ್ನಲ್ಲಿ ಡಬ್ಲ್ಯುಪಿಐ ದರ
WPI inflation rate -0.26%: ಡಬ್ಲ್ಯುಪಿಐ ಹಣದುಬ್ಬರ ಸೆಪ್ಟೆಂಬರ್ನಲ್ಲಿ ಮೈನಸ್ 0.26 ಪ್ರತಿಶತದಷ್ಟು ಇದೆ. ಆಗಸ್ಟ್ ತಿಂಗಳಲ್ಲಿ ಮೈನಸ್ 0.52 ಪ್ರತಿಶತದಷ್ಟಿತ್ತು. ಅಂದರೆ ಹಣದುಬ್ಬರ ದ್ವಿಗುಣಗೊಂಡಿದೆ. ಕಳೆದ 6 ತಿಂಗಳಿಂದಲೂ ಸಗಟು ಬೆಲೆ ಸೂಚಿ ಮೈನಸ್ ಮಟ್ಟದಲ್ಲೇ ಇರುವುದು ವಿಶೇಷ. ರುಳ್ಳಿ ಬೆಲೆ ಸೆಪ್ಟೆಂಬರ್ ತಿಂಗಳಲ್ಲಿ ಶೇ. 55.05ರಷ್ಟು ಹೆಚ್ಚಾಗಿತ್ತು. ಆದರೆ, ಇತರ ತರಕಾರಿಗಳ ಸಗಟು ದರದಲ್ಲಿ ಭಾರೀ ಇಳಿಕೆ ಆಗಿದೆ.
ನವದೆಹಲಿ, ಅಕ್ಟೋಬರ್ 16: ಸೆಪ್ಟೆಂಬರ್ ತಿಂಗಳಲ್ಲಿ ಭಾರತದಲ್ಲಿ ಸಗಟು ಬೆಲೆ ಸೂಚಿ ಆಧಾರಿತ ಹಣದುಬ್ಬರ (WPI base inflation) ತುಸು ಮೇಲೇರಿದೆ. ಆದರೆ, ಸೊನ್ನೆಗಿಂತಲೂ ಕಡಿಮೆ ಮಟ್ಟದಲ್ಲಿ ಮುಂದುವರಿದಿದೆ. ಇಂದು ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಡಬ್ಲ್ಯುಪಿಐ ಹಣದುಬ್ಬರ ಸೆಪ್ಟೆಂಬರ್ನಲ್ಲಿ ಮೈನಸ್ 0.26 ಪ್ರತಿಶತದಷ್ಟು ಇದೆ. ಆಗಸ್ಟ್ ತಿಂಗಳಲ್ಲಿ ಮೈನಸ್ 0.52 ಪ್ರತಿಶತದಷ್ಟಿತ್ತು. ಅಂದರೆ ಹಣದುಬ್ಬರ ದ್ವಿಗುಣಗೊಂಡಿದೆ. ಕಳೆದ 6 ತಿಂಗಳಿಂದಲೂ ಸಗಟು ಬೆಲೆ ಸೂಚಿ ಮೈನಸ್ ಮಟ್ಟದಲ್ಲೇ ಇರುವುದು ವಿಶೇಷ.
ಈರುಳ್ಳಿ ಬೆಲೆ ಏರಿಕೆ ಆಗದೇ ಇದ್ದಿದ್ದರೆ ಡಬ್ಲ್ಯೂಪಿಐ ಆಧಾರಿತ ಹಣದುಬ್ಬರ ದರ ಶೂನ್ಯಕ್ಕಿಂತ ಮೇಲೇರುವ ಸಾಧ್ಯತೆ ಇತ್ತು. ಈರುಳ್ಳಿ ಬೆಲೆ ಸೆಪ್ಟೆಂಬರ್ ತಿಂಗಳಲ್ಲಿ ಶೇ. 55.05ರಷ್ಟು ಹೆಚ್ಚಾಗಿತ್ತು. ಆದರೆ, ಇತರ ತರಕಾರಿಗಳ ಸಗಟು ದರದಲ್ಲಿ ಭಾರೀ ಇಳಿಕೆ ಆಗಿದೆ. ಆಗಸ್ಟ್ ತಿಂಗಳಲ್ಲಿ ಶೇ. 48.39ರಷ್ಟು ಏರಿಕೆ ಆಗಿದ್ದ ತರಕಾರಿ ಬೆಲೆಗಳು ಸೆಪ್ಟೆಂಬರ್ನಲ್ಲಿ ಮೈನಸ್ 15 ಪ್ರತಿಶತದಷ್ಟು ಕುಸಿತ ಕಂಡಿವೆ.
ಆರ್ಟಿಕಲ್ ಇನ್ಫ್ಲೇಶನ್ ಆಗಸ್ಟ್ನಲ್ಲಿ ಶೇ. 6.34ರಷ್ಟು ಇದ್ದದ್ದು ಶೇ. 3.70ಗೆ ಇಳಿದಿದೆ. ಹಾಗೆಯೇ, ಇಂಧನ ಮತ್ತು ವಿದ್ಯುತ್ ಬೆಲೆಗಳು ಶೇ. 6.03 ಇದ್ದದ್ದು ಶೇ. 3.35ಕ್ಕೆ ಇಳಿದಿವೆ.
ಇದನ್ನೂ ಓದಿ: ‘ನಗ್ನ ಷೇರು ಮಾರಾಟ’- ಹಾಂಕಾಂಗ್ನ ಎರಡು ಬ್ಯಾಂಕುಗಳ ಮೇಲೆ ಸೌತ್ ಕೊರಿಯಾ ದಂಡ ಸಾಧ್ಯತೆ; ಏನಿದು ನೇಕೆಡ್ ಶಾರ್ಟ್ ಸೆಲ್ಲಿಂಗ್?
ಇನ್ನು, ಉತ್ಪಾದಿತ ವಸ್ತುಗಳ ಸಗಟು ಬೆಲೆಗಳು ಶೇ. 2.37ರಿಂದ ಮೈನಸ್ 1.34 ಪ್ರತಿಶತಕ್ಕೆ ಇಳಿದಿವೆ. ಮೀನು, ಮಾಂಸ ಮತ್ತು ಮೊಟ್ಟೆಗಳ ಬೆಲೆಯೂ ತುಸು ತಗ್ಗಿದೆ.
ಏನಿದು ಸಗಟು ಬೆಲೆ ಸೂಚ್ಯಂಕ?
ಹಣದುಬ್ಬರವನ್ನು ವಿವಿಧ ರೀತಿಯಲ್ಲಿ ಅಳೆಯಲಾಗುತ್ತದೆ. ಹೋಲ್ಸೇಲ್ ಬೆಲೆ ಆಧಾರಿತ ಹಣದುಬ್ಬರ, ರೀಟೇಲ್ ಬೆಲೆ ಆಧಾರಿತ ಹಣದುಬ್ಬರ ಇತ್ಯಾದಿ ಇವೆ. ಈಗ ಹಣದುಬ್ಬವನ್ನು ಅಧಿಕೃತವಾಗಿ ಪರಿಗಣಿಸಲಾಗುವುದು ರೀಟೇಲ್ ಹಣದುಬ್ಬರ. ಆದರೆ, ಸಗಟು ಬೆಲೆ ಸೂಚ್ಯಂಕ ಆಧಾರಿತವಾದ ಹಣದುಬ್ಬರವು ರೀಟೇಲ್ ಹಣದುಬ್ಬರ ಮೇಲೆ ಪರಿಣಾಮ ಬೀರಬಹುದು.
ಇದನ್ನೂ ಓದಿ: Oil Prices Down: ಇಸ್ರೇಲ್-ಹಮಾಸ್ ಸಂಘರ್ಷ; ಕಳೆದ ವಾರ ಭರ್ಜರಿ ಏರಿಕೆ ಆಗಿದ್ದ ತೈಲ ಬೆಲೆ ಇಂದು ಅಲ್ಪ ಇಳಿಕೆ
ಡಬ್ಲ್ಯುಪಿಐ ಹಣದುಬ್ಬರ ಎಂದರೆ ಉತ್ಪಾದಕರಿಂದ ವರ್ತಕರಿಗೆ ಮಾರಾಟವಾಗುವ ದರಗಳ ಆಧಾರದ ಮೇಲೆ ಅಳೆಯುವ ಹಣದುಬ್ಬರವಾಗಿದೆ. ಗ್ರಾಹಕ ಬೆಲೆ ಸೂಚಿ ಅಥವಾ ರೀಟೇಲ್ ದರ ಆಧಾರಿತ ಹಣದುಬ್ಬರದಲ್ಲಿ ರೀಟೇಲ್ ಮಾರಾಟ ಮಟ್ಟದಲ್ಲಿರುವ ಬೆಲೆಗಳ ಆಧಾರಿತವಾಗಿ ಲೆಕ್ಕ ಮಾಡಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ